• Home
  • »
  • News
  • »
  • state
  • »
  • Navyasri R: ಅತೃಪ್ತ ಶಾಸಕರು ಮುಂಬೈಗೆ ಹೋದಾಗ ಸೀಕ್ರೆಟ್ ಟಾಸ್ಕ್, ಇದರ ಸೂತ್ರಧಾರಿ ಮಹಾನಾಯಕ; ನವ್ಯಶ್ರೀ ಸ್ಪೋಟಕ ಹೇಳಿಕೆ

Navyasri R: ಅತೃಪ್ತ ಶಾಸಕರು ಮುಂಬೈಗೆ ಹೋದಾಗ ಸೀಕ್ರೆಟ್ ಟಾಸ್ಕ್, ಇದರ ಸೂತ್ರಧಾರಿ ಮಹಾನಾಯಕ; ನವ್ಯಶ್ರೀ ಸ್ಪೋಟಕ ಹೇಳಿಕೆ

ನವ್ಯಶ್ರೀ ಆರ್

ನವ್ಯಶ್ರೀ ಆರ್

ಅತೃಪ್ತ ಶಾಸಕರು ಮುಂಬೈನಲ್ಲಿ ಹೋಗಿದ್ದ ಸಂದರ್ಭದಲ್ಲಿ ನಮಗೆ ಸೀಕ್ರೆಟ್ ಟಾಸ್ಕ್ ನೀಡಿದ್ದು ನಿಜ. ಯಾರು ಕೊಟ್ಟಿದ್ರು ಅಂತ ನಾನು ಹೇಳಲ್ಲ.

  • Share this:

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ, ಫೋಟೋ ವೈರಲ್ ಆಗಿರುವ  ಕುರಿತು ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ಆರ್.(Social Activist Navyasri R) ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ನಾನು ಭಾರತದಲ್ಲಿ ಇಲ್ಲದೇ ಇರೋ ಸಂದರ್ಭದಲ್ಲಿ ಕೃತ್ಯ ನಡೆದಿದ ಮೊದಲಿಗೆ ನಾನು ಕಂಪ್ಲೇಂಟ್ (Complaint) ಕೊಡಬೇಕಿತ್ತು. ಆದ್ರೆ ರಾಜಕುಮಾರ ಟಾಕಳೆ (Rajkumar Takale) ನನ್ನ ವಿರುದ್ಧ ದೂರು ನೀಡಿದ್ದರು. ಇದುವರೆಗೂ ಯಾರೂ ನನ್ನನ್ನು ಪೊಲೀಸರು (Police) ಸಂಪರ್ಕಿಸಿಲ್ಲ. ನವ್ಯಶ್ರೀ ಹನಿಟ್ರ್ಯಾಪ್ (Honeytrap) ಮಾಡಿದ್ದಾರೆ ಎಂದು ದೂರು ನೀಡಿರುವ ಮಾಹಿತಿ ನನಗಿದೆ. ನಾನು ಸಹ ದೂರು ನೀಡಲು ಬೆಳಗಾವಿಗೆ (Belagavi) ಸೋಮವಾರವೇ ಬಂದಿದ್ದೇನೆ. ನನ್ನ ಮೇಲೆ ಒತ್ತಡ ಬಂದ ಹಿನ್ನೆಲೆ ದೂರು ನೀಡಲು ಆಗುತ್ತಿಲ್ಲ. ಯಾರು ಒತ್ತಡ  ಹಾಕಿದ್ದು ಎಂದು ಈಗ ಹೇಳಲ್ಲ ಎಂದು ನವ್ಯಶ್ರೀ ಹೇಳಿದರು.


ನಾನು ಒಂದು ಪಕ್ಷದ ಜವಾಬ್ದಾರಿ ಸ್ಥಾನದಲ್ಲಿ ಇದ್ದೇನೆ.ಸಿದ್ದರಾಮಯ್ಯ, ‌ಡಿಕೆ ಶಿವಕುಮಾರ್ ಜೊತೆಗೆ ಇರುವ ಫೋಟೋವನ್ನು ಟ್ರೋಲ್ ಮಾಡಿದ್ದು, ಮಾಧ್ಯಮಗಳಲ್ಲಿ ಅಪಪ್ರಚಾರ ಉಂಟಾಗಿದೆ. ನನ್ನನ್ನು ಮದುವೆಯಾಗಿದ್ದ ರಾಜಕುಮಾರ ಟಾಕಳೆ ಈ ವಿಡಿಯೋ ಮಾಡಿದ್ದಾನೆ ಎಂದು ಆರೋಪಿಸಿದರು.


ನಾನು ದೂರು ನೀಡುತ್ತೇನೆ


ರಾಜಕೀಯ ಭವಿಷ್ಯಕ್ಕಾಗಿ ನಾನು ನೋವು ತಡೆದುಕೊಂಡಿದ್ದೇನೆ. ರಾಜಕುಮಾರ ಟಾಕಳೆ ವಿರುದ್ಧ ದೂರು ನೀಡುತ್ತೇನೆ. ಮೊದಲು ಪತ್ನಿ ಇದ್ದರೂ ನನ್ನನ್ನ ಎರಡನೇ ಮದುವೆ ಮಾಡಿಕೊಂಡಿದ್ದಾನೆ. ಮೋಸ, ಕಿಡ್ನಾಪ್, ಚಾರಿತ್ರ್ಯ ಹಗರಣ, ಬೆದರಿಕೆ ಹಾಕಿ ಹಣ ಪಡೆದಿರುವ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಲಿದ್ದೇನೆ ಎಂದರು.


ನನ್ನ ಅಶ್ಲೀಲ ‌ವಿಡಿಯೋ ವೆಬ್ ಸೈಟ್ ಗೆ ಮಾರಾಟ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಆತನಿಂದಲೇ ನನಗೆ ಹನಿಟ್ರ್ಯಾಪ್ ಆಗಿದೆ. ಈ ವಿಡಿಯೋದಿಂದ ನನ್ನ ಮರ್ಯಾದೆ ಹಾಳಾಗಿದೆ. ಸುಳ್ಳು ದೂರನ್ನು ವಜಾಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳುತ್ತೇನೆ.


ಇದನ್ನೂ ಓದಿ:  Belagavi: ‘ರಾಜಕುಮಾರ ಟಾಕಳೆ ನನ್ನ ಗಂಡ’, ಆಕೆಯಿಂದಲೇ ಅತ್ಯಾಚಾರದ ಕೇಸ್ ಹಾಕೋ ಬೆದರಿಕೆ; ಅಧಿಕಾರಿ ದೂರು


ಪೊಲೀಸ್ ಆಯುಕ್ತರನ್ನ ಭೇಟಿಯಾಗಿದ್ದೇನೆ


ಕುಮಾರ ಕೃಪ ಸರ್ಕಾರಿ ಅತಿಥಿ ಗೃಹದಲ್ಲಿ ವಿಡಿಯೋ ಮಾಡಲಾಗಿದೆ. ಸರ್ಕಾರಿ ಅತಿಥಿ ಗೃಹ ದುರುಪಯೋಗ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ ಕೇಸ್ ದಾಖಲಿಸುವೆ. ನಿನ್ನೆ ಸಂಜೆ ಪೊಲೀಸ್ ಆಯುಕ್ತರನ್ನು ಭೇಟಿಯಾಗಿದ್ದೇನೆ. ಡಿಸಿಪಿ ಸ್ನೇಹಾ ಮೇಡಮ್ ಬಳಿ ನನಗೆ ಅನ್ಯಾಯ ಬಗ್ಗೆ ಹೇಳಿದ್ದೀನಿ ಎಂದರು.


2021ರ‌ ಮೇ ಬೆಂಗಳೂರಿನಲ್ಲಿ ನನ್ನ ರಾಜಕುಮಾರ ಮದುವೆಯಾಗಿದೆ. ನಂತರ ಮೊಬೈಲ್ ‌ಕಿತ್ತುಕೊಂಡು ದಾಖಲೆಯನ್ನು ನಾಶ ಮಾಡಿದ್ದಾನೆ.ಮದುವೆ ಆಗಿಲ್ಲ ಎಂದು ನಾನೇನು ಪೊಲೀಸ ಠಾಣೆಗೆ ಬರೆದುಕೊಟ್ಟಿಲ್ಲ ಎಂದರು.


ಯಾವುದೇ ಹಣಕ್ಕೆ ಬೇಡಿಕೆ ಇರಿಸಿಲ್ಲ


50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿರುವ ರಾಜಕುಮಾರ ಆರೋಪಕ್ಕೆ ಪ್ರತಿಕ್ರಿಯಿಸಿದ ನವ್ಯಶ್ರೀ, ಮನೆಗೆ ಹೋದ ಸಂದರ್ಭಗಳಲ್ಲಿ ಮೊದಲ ಪತ್ನಿ ಗಲಾಟೆ ಮಾಡಿದರು. ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ರಾಜೀ ಪಂಚಾಯಿತಿ ನಡೆದಿದೆ. ನನ್ನ ಸಂಪೂರ್ಣ ಜವಾಬ್ದಾರಿ ವಹಿಸುವ ಭರವಸೆ ನೀಡಿದ್ದರು. ರಾಜಕುಮಾರ ಗ್ರೂಪ್ ಬಿ ನೌಕರ, ನಾನು ದುಡ್ಡು ಕೇಳಿದ್ದು ಸಂಪೂರ್ಣ ಸುಳ್ಳು ಎಂದು ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದರು.


Rajkumar takale is my husband social worker navya sree pvn
ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ


ಕಾಂಗ್ರೆಸ್ ಮಹಾ ನಾಯಕ ಇದಕ್ಕೆ ಸೂತ್ರಧಾರಿ


ಚನ್ನಪಟ್ಟಣ ಮುಂದಿನ ಕಾಂಗ್ರೆಸ್ ನಾಯಕರಿಂದ ಈ ಕೃತ್ಯ ನಡೆದಿದೆ. ಕಾಂಗ್ರೆಸ್ ನಾಯಕ, ಪತ್ರಿಕಾ ಸಂಪಾದಕ  ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಗಂಡ ಎನ್ನುವ ಮುಖವಾಡ ಧರಿಸಿ ನನಗೆ ಅನ್ಯಾಯ ಮಾಡಲಾಗಿದೆ. ರಾಜಕುಮಾರ ಕಾನೂನಿನ ಮ‌ೂಲಕ ಶಿಕ್ಷೆ ಕೊಡಿಸುತ್ತೇನೆ. ಅನೇಕ ಮಹಿಳೆಯರನ್ನು ಆತ ಬಳಿಸಿಕೊಂಡ ಬಗ್ಗೆ ಪತ್ನಿಯೆ‌ ಹೇಳಿದ್ದಾಳೆ. ಚನ್ನಪಟ್ಟಣ ಕಾಂಗ್ರೆಸ್ ಮಹಾ ನಾಯಕ ಇದಕ್ಕೆ ಸೂತ್ರದಾರಿ. 2023ರಲ್ಲಿ ಕಾಂಗ್ರೆಸ್ ನಾಯಕರಾಗೋ ವ್ಯಕ್ತಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.


ದೆಹಲಿ ಮಟ್ಟದ ನಾಯಕರ ಜತೆಗೆ ಸಂಪರ್ಕ ಇರೋ ನಿಜ. ಬೆಳಗಾವಿ ಕ್ಷೇತ್ರವೊಂದರ ಅಭ್ಯರ್ಥಿಯಾಗುವ ನಿರೀಕ್ಷೆಯಲ್ಲಿದ್ದೆ. ನಾನು ಮುಂದೆ ಹೋಗದನ್ನು ಸಹಿಸದೇ ಈ ಕೆಲಸ ಮಾಡಲಾಗಿದೆ. ನಾನು ಕಾಂಗ್ರೆಸ್ ಪಕ್ಷದಲ್ಲಿ ಈಗಲೂ ಇದ್ದೇನೆ.


ಇದನ್ನೂ ಓದಿ:  Transgenders Love: ಆಕೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದವ ಹುಡುಗನೇ ಅಲ್ವಂತೆ! 4 ವರ್ಷದ ಲವ್‌ಗೆ 'ಮಂಗಳ' ಹಾಡಿದ ಯುವತಿ


ಸೀಕ್ರೆಟ್ ಟಾಸ್ಕ್ ನೀಡಿದ್ದು ನಿಜ


ಅತೃಪ್ತ ಶಾಸಕರು ಮುಂಬೈನಲ್ಲಿ ಹೋಗಿದ್ದ ಸಂದರ್ಭದಲ್ಲಿ ನಮಗೆ ಸೀಕ್ರೆಟ್ ಟಾಸ್ಕ್ ನೀಡಿದ್ದು ನಿಜ. ಯಾರು ಕೊಟ್ಟಿದ್ರು ಅಂತ ನಾನು ಹೇಳಲ್ಲ. ಶಾಸಕರ ಚಲನವಲಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಕುರಿತು ನನಗೆ ಸೀಕ್ರೆಟ್ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ನಲ್ಲಿ ನನ್ನ ಜೊತೆ ಮೂವರಿದ್ದರು. ಸೀಕ್ರೆಟ್ ಟಾಸ್ಕ್ ಅಂದ್ರೆ ಹನಿಟ್ರ್ಯಾಪ್ ಅಲ್ಲ ಎಂದು ಸ್ಪಷ್ಟನೆ ನೀಡಿದರು.


ನಾನು ಯಾರ ಬಳಿಯೂ ಹಣಕ್ಕೆ ಡಿಮ್ಯಾಂಡ್ ಮಾಡಿಲ್ಲ. ತನಿಖೆಯಲ್ಲಿ ಮಹಾನಾಯಕರನ್ನು ಬಯಲಿಗೆ ಎಳೆಯಲಿದ್ದೇನೆ ಎಂದು ಸ್ಫೋಟಕ ಹೇಳಿ ನೀಡಿದರು.

Published by:Mahmadrafik K
First published: