News18 India World Cup 2019

ಹುಚ್ಚನಂತೆ ತಿರುಗಾಡುತ್ತಿದ್ದ ವ್ಯಕ್ತಿಗೆ ಹೊಸಬಾಳು ನೀಡಿದ ಸಮಾಜ ಸೇವಕರು

news18
Updated:June 7, 2018, 7:38 PM IST
ಹುಚ್ಚನಂತೆ ತಿರುಗಾಡುತ್ತಿದ್ದ ವ್ಯಕ್ತಿಗೆ ಹೊಸಬಾಳು ನೀಡಿದ ಸಮಾಜ ಸೇವಕರು
news18
Updated: June 7, 2018, 7:38 PM IST
- ಲೋಹಿತ್ ಶಿರೋಳ, ನ್ಯೂಸ್18 ಕನ್ನಡ.

ಚಿಕ್ಕೋಡಿ  ( ಜೂನ್.07) :  ರಸ್ತೆ ಬದಿಯಲ್ಲಿ ದಶಕಗಳಿಂದ ಕುಳಿತಿದ್ದ ಮಾನಸಿಕ ಅಸ್ವಸ್ಥನಿಗೆ ಸಮಾಜ ಸೇವಕರಿಬ್ಬರು ಸಾರ್ವಜನಿಕರ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಘಟನೆ ಬೆಳಗಾವಿ ಜಿಲ್ಲೆಯೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕಳೆದ ಹಲವು ವರ್ಷಗಳಿಂದ ಹುಕ್ಕೇರಿ ಪಟ್ಟಣದ ಅಂದಾಜು 50 ವರ್ಷದ ದಾವಲ ಎಂಬ ಮಾನಸಿಕ ಅಸ್ವಸ್ಥ ಹುಕ್ಕೇರಿ ಪಟ್ಟಣದಲ್ಲಿ ಮಳೆ ಗಾಳಿ ಬಿಸಿಲು ಲೆಕ್ಕಿಸಿದೆ ರಸ್ತೆ ಪಕ್ಕದಲ್ಲಿಯೇ ಕುಳುತಿದ್ದ.

ಸಂಸಾರಿಕ ಖಿನ್ನತೆಗೆ ಒಳಗಾಗಿದ್ದ ದಾವಲನನ್ನ ಸಮಾಜ ಸೇವಕರಾದ ಮಾಹಾಂತೇಶ ಚೌಗಲಾ ಹಾಗೂ ಸಂತೋಷ ಚೌಗಲಾ ಎಂಬುವರು ಆರೋಗ್ಯ ಇಲಾಖೆ ಹಾಗೂ ಪೊಲೀಸರ ಸಹಕಾರದಿಂದ ಹುಕ್ಕೇರಿ ತಾಲೂಕಾ ಆಸ್ಪತ್ರೆಗೆ ಕರೆ ತಂದು ಆಕಾರ ವಿಕಾರ ಆಗಿದ್ದ ಈ ವ್ಯಕ್ತಿಯ ಕುದಲುಗಳನ್ನ ಕತ್ತಿರಿಸಿ ಸ್ನಾನ ಮಾಡಿಸಿ ಒಂದು ಆಕಾರಕ್ಕೆ ತಂದಿದ್ದು ಸಾರ್ವಜನಿಕ ಶ್ಲಾಘನೆ ಪಾತ್ರವಾಗಿದೆ.

ಇನ್ನೂ ಮಾನಸಿಕ ಅಸ್ವಸ್ಥ ವಾಗಿರುವ ದಾವಲನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಧಾರವಾಡ ಮಾನಸಿಕ ಆಸ್ಪತ್ರೆಗೆ ದಾಖಲಿಸಲು ಸಮಾಜ ಸೇವಕರು ಮುಂದಾಗಿದ್ದಾರೆ. ಇನ್ನೂ ಕೆಲವು ದಿನಗಳ ಹಿಂದೆ ಇದೇ ಸಮಾಜ ಸೇವಕರು ಹುಕ್ಕೇರಿ ತಾಲೂಕಿನ ಕಮತನೂರು ಗ್ರಾಮದ ರಸ್ತೆ ಮೇಲೆ ಕುಳಿತಿದ್ದ ಅನಾಥ ಮಹಿಳೆಗೆ ಚಿಕಿತ್ಸೆ ನೀಡಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳಿಸಿದ್ದಾರೆ.
First published:June 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...