HOME » NEWS » State » SOCIAL REFORMER SR HIREMATH WARNS TO ANAND SINGH ABOUT KAPPATAGUDDA LG

ಕಪ್ಪತ್ತ ಗುಡ್ಡದ ತಂಟೆಗೆ ಬಂದ್ರೆ ಮತ್ತೆ ಹೋರಾಟ; ಎಸ್.​ಆರ್.​ಹಿರೇಮಠ ಎಚ್ಚರಿಕೆ..!

ಈ ಹಿಂದೆ ಕಪ್ಪತ್ತಗುಡ್ಡಕ್ಕೆ ಅಕ್ರಮ ಗಣಿಗಾರಿಕೆ ನಡೆಸಲು ಕಂಪನಿಗಳು ಮುಂದೆ ಬಂದಿದ್ದವು.  ಬಲ್ಡೋಟಾ ಹಾಗೂ ಪೋಸ್ಕೋ ಕಂಪನಿಗಳು ಹುನ್ನಾರ‌ ನಡೆಸಿದ್ದವು.  ತೋಂಟದಾರ್ಯ ಸ್ವಾಮೀಜಿ ಹಾಗೂ ಹೋರಾಟಗಾರರು ನಡೆಸಿದ ಪ್ರತಿಫಲವಾಗಿ ಈ ಕಂಪನಿಗಳು ದೂರ ಸರಿದವು. 

news18-kannada
Updated:February 12, 2020, 3:17 PM IST
ಕಪ್ಪತ್ತ ಗುಡ್ಡದ ತಂಟೆಗೆ ಬಂದ್ರೆ ಮತ್ತೆ ಹೋರಾಟ; ಎಸ್.​ಆರ್.​ಹಿರೇಮಠ ಎಚ್ಚರಿಕೆ..!
ಎಸ್​ ಆರ್​ ಹಿರೇಮಠ
  • Share this:
ಗದಗ(ಫೆ.12): ಕಪ್ಪತ್ತಗುಡ್ಡಕ್ಕೆ ಏನಾದರೂ ಕಂಟಕ ಬಂದರೆ ಮತ್ತೆ ಹೋರಾಟ ನಡೆಸುತ್ತೇವೆ ಎಂದು ಸಾಮಾಜಿಕ ಹೋರಾಟಗಾರ ಎಸ್​.ಆರ್.ಹಿರೇಮಠ ಎಚ್ಚರಿಕೆ ನೀಡಿದ್ದಾರೆ. 

ಗದಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೂತನ ಸಚಿವ ಆನಂದ್​ ಸಿಂಗ್​​ಗೆ ಎಚ್ಚರಿಕೆ ನೀಡಿದರು. ಬಿಎಸ್​ವೈ ಸಂಪುಟದಲ್ಲಿ ಅರಣ್ಯ ಸಚಿವರಾಗಿರುವ ಆನಂದ್​ ಸಿಂಗ್​ ಕಪ್ಪತ್ತಗುಡ್ಡದ ಮೇಲೆ ಕಣ್ಣು ಹಾಕಿದ್ದಾರೆ. ಒಂದು ವೇಳೆ ಕಪ್ಪತ್ತಗುಡ್ಡದ ತಂಟೆಗೆ ಬಂದರೆ ಮತ್ತೆ ನಾವು ಹೋರಾಟ ಮಾಡುತ್ತೇವೆ ಎಂದರು.

ಈ ಹಿಂದೆ ಕಪ್ಪತ್ತಗುಡ್ಡಕ್ಕೆ ಅಕ್ರಮ ಗಣಿಗಾರಿಕೆ ನಡೆಸಲು ಕಂಪನಿಗಳು ಮುಂದೆ ಬಂದಿದ್ದವು.  ಬಲ್ಡೋಟಾ ಹಾಗೂ ಪೋಸ್ಕೋ ಕಂಪನಿಗಳು ಹುನ್ನಾರ‌ ನಡೆಸಿದ್ದವು.  ತೋಂಟದಾರ್ಯ ಸ್ವಾಮೀಜಿ ಹಾಗೂ ಹೋರಾಟಗಾರರು ನಡೆಸಿದ ಪ್ರತಿಫಲವಾಗಿ ಈ ಕಂಪನಿಗಳು ದೂರ ಸರಿದವು. ಬಲ್ಡೋಟಾ ಕಂಪನಿ ಪಿಐಎಎಲ್ ಸೋಗಿನಲ್ಲಿ ಬಹಳಷ್ಟು ಪ್ರಯತ್ನ ನಡೆಸಿತು. ಆದರೆ ಅದೆಲ್ಲವೂ ವಿಫಲವಾಯಿತು ಹಿರೇಮಠ ಎಂದು ಹೇಳಿದರು.

LPG Cylinder Price: ಗ್ರಾಹಕರಿಗೆ ಕಹಿಸುದ್ದಿ; ಇಂದಿನಿಂದ ಎಲ್​ಪಿಜಿ ಸಿಲಿಂಡರ್ ಬೆಲೆ ಭಾರೀ ಹೆಚ್ಚಳ

ಆದರೆ ಈಗ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಪ್ರಯತ್ನ ಮುಂದುವರೆಸಿವೆ. ನೂತನ ಸಚಿವ ಆನಂದ ಸಿಂಗ್ ಕಪ್ಪತ್ತಗುಡ್ಡದ ಮೇಲೆ ಕಣ್ಣು ಹಾಕಿದ್ದಾರೆ. ಕಪ್ಪತ್ತಗುಡ್ಡದ ತಂಟೆಗೆ ಬಂದರೆ ಮತ್ತೆ ನಾವು ಹೋರಾಟದ ಹಾದಿ ತುಳಿಯುತ್ತೇವೆ ಎಂದರು.

ದೇವೇಗೌಡ ಕುಟುಂಬದ ವಿರುದ್ಧ ಭೂಕಬಳಿಕೆ ಆರೋಪ

ರಾಜ್ಯದ ಪ್ರಮುಖ ಮನೆತನ ಹಾಗೂ ಒಂದು ಪಕ್ಷದ ಪ್ರಮುಖರು ಭ್ರಷ್ಟಾಚಾರ ಮಾಡಿದ್ದಾರೆ. ಅವರು ಬಡವರ ಭೂಮಿಯನ್ನು ಕಬಳಿಸಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್​.ಆರ್.ಹಿರೇಮಠ ಮಾಜಿ ಪ್ರಧಾನಿ ಎಚ್​. ಡಿ.ದೇವೇಗೌಡ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ಜೆಡಿಸ್​ ವರಿಷ್ಠ ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ವಿರುದ್ಧ ಹಿರೇಮಠ ಗಂಭೀರ ಆರೋಪ ಮಾಡಿದರು. ರಾಮನಗರ ತಾಲೂಕಿನ ಬಿಡದಿ ಹೋಬಳಿ ಕೇತಿಗಾನಹಳ್ಳಿ ಗ್ರಾಮದ 110 ಎಕರೆ ಗೋಮಾಳ ಸೇರಿದಂತೆ 200 ಎಕರೆ ಜಮೀನನ್ನು ಕಬಳಿಸಿದ್ದಾರೆ, ಅತಿಕ್ರಮಣ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಎಂದು ಹಿರೇಮಠ ಒತ್ತಾಯಿಸಿದರು.

ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಬಂದ್; ಇಷ್ಟಕ್ಕೂ ವರದಿಯಲ್ಲಿನ ಶಿಫಾರಸ್ಸುಗಳೇನು? ಕನ್ನಡಿಗರಿಗೇನು ಲಾಭ?

 
First published: February 12, 2020, 3:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading