ಅಂತರ್ಜಾತಿ ಮದುವೆ ಆಗಿದ್ದಕ್ಕೆ ಸಾಮಾಜಿಕ ಬಹಿಷ್ಕಾರ; ಸಚಿವ ಮಾಧುಸ್ವಾಮಿ ಕ್ಷೇತ್ರದಲ್ಲೊಂದು ಅಮಾನವೀಯ ಘಟನೆ

ಹತ್ತು ವರ್ಷದ ಹಿಂದೆ  ಬಹಿಷ್ಕಾರ ಶಿಕ್ಷೆ ಹೇರಲಾಗಿದೆ. ಅಂದಿನಿಂದ ಇಂದಿನವರೆಗೂ ಕೂಡ ಈ ದಂಪತಿಗಳು ಬಹಿಷ್ಕಾರದ ಶಿಕ್ಷೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ

ನಾಗರಾಜು ಮತ್ತು ಶಶಿಕಲಾ

ನಾಗರಾಜು ಮತ್ತು ಶಶಿಕಲಾ

  • Share this:
ತುಮಕೂರು (ಆ. 28):  ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದಕ್ಕೆ (Inter cast Marriage) ಪ್ರಣಯ ಪಕ್ಷಿಗಳಿಗೆ ಗ್ರಾಮದಿಂದ ಬಹಿಷ್ಕಾರ ಹಾಕಲಾಗಿದೆ. ಹತ್ತು ವರ್ಷಗಳಿಂದ ನಿರಂತರವಾಗಿ ಬಹಿಷ್ಕಾರದ (Social exclusion) ಶಿಕ್ಷೆ ಅನುಭವಿಸಿಕೊಂಡು ಬಂದಿದ್ದಾರೆ ಈ ಈ ದಂಪತಿಗಳು. ಗ್ರಾಮದಲ್ಲಿ ಯಾರನ್ನು ಮಾತನಾಡಿಸದಂತೆ ಹೇರಿರುವ ನಿರ್ಬಂಧಕ್ಕೆ ನಲುಗಿದ ದಂಪತಿಗಳು ಇದೀಗ ನ್ಯಾಯ ಕೇಳಲು ಹೊರಟಿದ್ದಾರೆ.  ಅಂದ ಹಾಗೇ ಈ ಅಮಾನವೀಯ ಘಟನೆ ನಡೆದಿದ್ದು ಕಾನೂನು ಸಚಿವ ಮಾಧುಸ್ವಾಮಿ ಅವರ ಸ್ವಕೇತ್ರ ಚಿಕ್ಕ ನಾಯಕನಹಳ್ಳಿಯಲ್ಲಿ.. ಈ ಅಮಾಯಕ ದಂಪತಿಯ ಹೆಸರು ನಾಗರಾಜು ಮತ್ತು ಶಶಿಕಲಾ. ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ಕೋರಗೆರೆ ಗ್ರಾಮದವರು. ಅವರಿವರ ಮನೆ, ತೋಟದ ಕೆಲಸ ಮಾಡಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುತಿದ್ದಾರೆ.   

ದಂಪತಿಗಳು ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದೆ ತಪ್ಪಾಗಿದೆ. ಗ್ರಾಮದಲ್ಲಿ ಜಾತಿಗೆಟ್ಟು ಹೋಯ್ತು ಅಂತ ಗ್ರಾಮದಿಂದ ಇವರಿಗೆ ಬಹಿಷ್ಕಾರ ಹಾಕಲಾಗಿದೆ. ಯಾರೂ ಊರಿನಲ್ಲಿ ಮಾತನಾಡಿಸುತ್ತಿಲ್ಲ. ಅಂಗಡಿಗಳಲ್ಲಿ ದಿನಸಿ ವಸ್ತುಕೊಡುತ್ತಿಲ್ಲ. ನಲ್ಲಿ ನೀರನ್ನೂ ಹಿಡಿಯಲು ಬಿಡುತ್ತಿಲ್ಲವಂತೆ. ಅಂಗಡಿಯಲ್ಲಿ ಯಾವುದೇ ವಸ್ತು ಖರೀಸುವಂತಿಲ್ಲ. ಹೀಗೆ ಸಾಲು ಸಾಲು ನಿರ್ಬಂಧ ಹೇರಲಾಗಿದೆ.  ಒಂದೇ ಗ್ರಾಮದ ಶಶಿಕಲಾ ಹಾಗೂ ನಾಗರಾಜು 10 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು, ಇವರ ಪ್ರೀತಿಗೆ ಶಶಿಕಲಾ, ನಾಗರಾಜು ಮನೆಯವರ ಜೊತೆಗೆ ಊರಿನವರ ವಿರೋಧವನ್ನು ಈ ಪ್ರೇಮಿಗಳು ಎದುರಿಸಬೇಕಾಯ್ತು.

ಹತ್ತು ವರ್ಷದ ಹಿಂದೆ  ಬಹಿಷ್ಕಾರ ಶಿಕ್ಷೆ ಹೇರಲಾಗಿದೆ. ಅಂದಿನಿಂದ ಇಂದಿನವರೆಗೂ ಕೂಡ ಈ ದಂಪತಿಗಳು ಬಹಿಷ್ಕಾರದ ಶಿಕ್ಷೆಯನ್ನು ಅನುಭವಿಸಿಕೊಂಡು ಬಂದಿದ್ದಾರೆ.  ಇದೀಗ ಕಳೆದ ತಿಂಗಳು 21 ರಂದು  ಮತ್ತೆ ಊರಿನಲ್ಲಿ ಡಂಗೂರ ಹೊರಡಿಸಿ ಈ ಪ್ರೇಮಿಗಳ ಬಹಿಷ್ಕಾರವನ್ನು ಮತ್ತೆ ಮುಂದುವರೆಸಿದ್ದಾರೆ. ಊರಿನ ಕಿರುಕುಳದ ಕುರಿತು ಹುಳಿಯಾರು ಠಾಣೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲವಂತೆ. ಹಾಗಾಗಿ ನ್ಯಾಯ ಕೇಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಬಂದಿದ್ದಾರೆ.

ಇದನ್ನು ಓದಿ: ಮೈಸೂರು ಅತ್ಯಾಚಾರ ಪ್ರಕರಣ ಬೇಧಿಸಿದ ಪೊಲೀಸರಿಗೆ 1 ಲಕ್ಷ ರೂ ಚೆಕ್​​ ನೀಡಿದ ನಟ ಜಗ್ಗೇಶ್​​

ನಾಗರಾಜು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಬಹಿಷ್ಕಾರದಿಂದಾಗಿ ಊರು ಬಿಟ್ಟಿದರಿಂದ ಮಕ್ಕಳ ವಿದ್ಯಾಭ್ಯಾಸ ತೊಂದರೆಯಾಗಿದೆ. ತಮಗೆ ರಕ್ಷಣೆ ಕೊಡುವಂತೆ ಪೊಲೀಸರ ಮೊರೆ ಹೋದರೆ, ಇನ್ನೊಂದು ಕಡೆ ತಮಗೆ ನ್ಯಾಯ ಕೊಡಿಸುವಂತೆ ಜನಪ್ರತಿನಿಧಿಗಳ ಬಳಿ ಅಂಗಲಾಚುತಿದ್ದಾರೆ.  ಆದರೂ ಯಾರೂ ಕೂಡ ತಮ್ಮ  ದೂರಿಗೆ ಸ್ಪಂಧಿಸುತ್ತಿಲ್ಲವಾಗಿದ್ದರಿಂದ ಆತ್ಮಹತ್ಯೆಯೊಂದೇ ತಮಗೆ ಉಳಿದಿರುವ ದಾರಿ ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಯವರ ತವರು ಕ್ಷೇತ್ರವಾಗಿರೋ‌‌‌‌ ಚಿಕ್ಕನಾಯಕನಹಳ್ಳಿಯಲ್ಲೇ ಇಂಥಾ ಕೀಳುಮಟ್ಟದ ವ್ಯವಸ್ಥೆ ಜಾರಿಯಲ್ಲಿರೋದು ನಾಚಿಕೆಗೇಡಿನ ಸಂಗತಿಯಾಗಿದೆ.‌ ಸದ್ಯ ಊರಿಗೆ ಹೋಗಲು ಅವಕಾಶ ಇಲ್ಲದೇ ಇರುವುದರಿಂದ ಈ ದಂಪತಿಗಳು ಊರ ಹೊರಗೆ, ಹೋಟೆಲ್, ಸಂಬಂಧಿಕರ ಮನೆಯಲ್ಲಿ ಜೀವನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಪ್ರತಿನಿತ್ಯ ನ್ಯಾಯಕ್ಕಾಗಿ ಎಸ್ಪಿ ಕಚೇರಿಗೆ ಚಪ್ಪಲಿ ಸವೆಸುತ್ತಿರುವ ದಂಪತಿಗಳು ನಮ್ಮನ್ನ ಊರೊಳಕ್ಕೆ ಬಿಟ್ಟುಕೊಂಡರೆ ಸಾಕಪ್ಪ ಎಂದು ಅಂಗಲಾಚುತ್ತಿದ್ದಾರೆ. ದಲಿತರ‌ ರಕ್ಷಣೆಗೆಂದೇ ನೂರಾರು ಕಾನೂನುಗಳಿದ್ರೂ ಈಗಲೂ ಇಂಥಾ ಕೆಟ್ಟ ಬಹಿಷ್ಕಾರ ಇರೋದು ದುರಂತವೇ ಸರಿ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Seema R
First published: