ವಿಧಾನಸೌಧದ ಸಿಎಂ ಎಚ್​ಡಿಕೆ, ಬಿಎಸ್​ವೈ ಕೊಠಡಿಗಳನ್ನು ಬಾಡಿಗೆ ಕೇಳಿ ಸ್ಪೀಕರ್​ಗೆ ಪತ್ರ ಬರೆದ ಸಾಮಾಜಿಕ ಕಾರ್ಯಕರ್ತ

ಜನರ ಆಡಳಿತದ ಚಟುವಟಿಕೆ ತಾಣವಾದ ವಿಧಾನಸೌಧ ಶಾಸಕರು, ಮುಖ್ಯಮಂತ್ರಿ, ವಿಪಕ್ಷ ನಾಯಕರಿಲ್ಲದೆ ಬಣಗುಡುತ್ತಿದೆ. ಈ ಬೆಳವಣಿಗೆ ಗಮನಿಸಿದ ಸಾಮಾಜಿಕ ಕಾರ್ಯಕರ್ತ  ಬಿಎಸ್​ ಗೌಡ ವಿಧಾನಸೌಧ ಕೊಠಡಿಯನ್ನು ಬಾಡಿಗೆ ನೀಡುವಂತೆ ಸ್ಪೀಕರ್​ ರಮೇಶ್​ ಕುಮಾರ್​ ಅವರಿಗೆ ಪತ್ರ ಬರೆದಿದ್ದಾರೆ. 

Seema.R | news18
Updated:January 24, 2019, 2:07 PM IST
ವಿಧಾನಸೌಧದ ಸಿಎಂ ಎಚ್​ಡಿಕೆ, ಬಿಎಸ್​ವೈ ಕೊಠಡಿಗಳನ್ನು ಬಾಡಿಗೆ ಕೇಳಿ ಸ್ಪೀಕರ್​ಗೆ ಪತ್ರ ಬರೆದ ಸಾಮಾಜಿಕ ಕಾರ್ಯಕರ್ತ
ಎಚ್​​ಡಿಕೆ, ಬಿಎಸ್​ವೈ
  • News18
  • Last Updated: January 24, 2019, 2:07 PM IST
  • Share this:
ಬೆಂಗಳೂರು (ಜ.24): ರಾಜ್ಯದಲ್ಲಿ ಈಗ ಆಡಳಿತ ಕಾರ್ಯಗಳಿಗಿಂತ ಹೆಚ್ಚಾಗಿ ಕೇಳಿ ಬರುತ್ತಿರುವುದು ರೆಸಾರ್ಟ್​ ರಾಜಕಾರಣದ ಸದ್ದು. ಮೈತ್ರಿ ಸರ್ಕಾರವನ್ನು ಕೆಡವಲು ಬಿಜೆಪಿ ರಾಜ್ಯಾಧ್ಯಕ್ಷರು ದೂರದ ಗುರುಗ್ರಾಮದಲ್ಲಿ ತಮ್ಮ ಶಾಸಕರನ್ನು  ಹಿಡಿದಿಟ್ಟುಕೊಂಡರೆ, ಇತ್ತ ಕಾಂಗ್ರೆಸ್​ ಕೂಡ ನಾವೇನು ಕಡಿಮೆ ಇಲ್ಲ ಎಂದು ಬಿಡದಿ ರೆಸಾರ್ಟ್​ ಮೊರೆ ಹೋಗಿದ್ದಾರೆ. ಇದರ ನಡುವೆ ಸಿಎಂ ಕೂಡ ವಿಧಾನಸೌಧದತ್ತ ಕಾಲಿಡದೇ , ಇಡೀ ಆಡಳಿತ ಸೌಧ  ಬಣಗುಡುತ್ತಿದೆ. ಈ ಬೆಳವಣಿಗೆಯನ್ನು ಗಮನಿಸಿದ ಸಾಮಾಜಿಕ ಕಾರ್ಯರ್ತರೊಬ್ಬರು ಖಾಲಿ ಇರುವ ವಿಪಕ್ಷ ನಾಯಕ ಹಾಗೂ ಸಿಎಂ ಕೊಠಡಿಯನ್ನು ಬಾಡಿಗೆ ನೀಡುವಂತೆ ಸ್ಪೀಕರ್​ಗೆ ಪತ್ರ ಬರೆದಿರುವ ಘಟನೆ ಬೆಳಕಿಗೆ ಬಂದಿದೆ.

ರಾಜ್ಯಾಡಳಿತದ ಸದ್ಯ ಪ್ರತಿಯೊಬ್ಬ ಮತದಾರರಲ್ಲಿಯೂ ಜಿಗುಪ್ಸೆ ಮೂಡಿಸಿದೆ. ಇವರನ್ನೆಲ್ಲಾ ಶಾಸಕರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಇದನ್ನೆಲ್ಲಾ ಸಹಿಸಿಕೊಳ್ಳಲೇ ಬೇಕು ಎಂಬಂತೆ ಶಾಸಕರ, ಮೂರು ಪಕ್ಷದ ನಾಯಕರ ದೊಂಬರಾಟವನ್ನು ವೀಕ್ಷಿಸುತ್ತಿದ್ದಾರೆ. ಜನರ ಆಡಳಿತದ ಚಟುವಟಿಕೆ ತಾಣವಾದ ವಿಧಾನಸೌಧ ಶಾಸಕರು, ಮುಖ್ಯಮಂತ್ರಿ, ವಿಪಕ್ಷ ನಾಯಕರಿಲ್ಲದೆ ಬಣಗುಡುತ್ತಿದೆ. ಈ ಬೆಳವಣಿಗೆ ಗಮನಿಸಿದ ಸಾಮಾಜಿಕ ಕಾರ್ಯಕರ್ತ  ಬಿಎಸ್​ ಗೌಡ ವಿಧಾನಸೌಧ ಕೊಠಡಿಯನ್ನು ಬಾಡಿಗೆ ನೀಡುವಂತೆ ಸ್ಪೀಕರ್​ ರಮೇಶ್​ ಕುಮಾರ್​ ಅವರಿಗೆ ಪತ್ರ ಬರೆದಿದ್ದಾರೆ.   ರೆಸಾರ್ಟ್ ರಾಜಕಾರಣದಲ್ಲಿ ಕಾಂಗ್ರೆಸ್​- ಬಿಜೆಪಿ ನಾಯಕರು ಮುಳುಗಿದ್ದು, ಶಾಸಕರು, ಸಚಿವರು, ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕರು ಕೊಠಡಿ ಖಾಲಿ ಇರುವುದಾಗಿ ಮಾಧ್ಯಮಗಳ ಮೂಲಕ ತಿಳಿದುಬಂದಿದೆ.  ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಗನ ಸಿನಿಮಾಗಾಗಿ ಊರು, ದೇಶ ಸುತ್ತುತ್ತಾ ಅವರು ಇತ್ತ ಸುಳಿದಿಲ್ಲ. ಈ ಹಿನ್ನೆಲೆಯಲ್ಲಿ ನನಗೊಂದು ಕೊಠಡಿ ಅವಶ್ಯಕವಾಗಿದ್ದು, ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರ ಕೊಠಡಿಯನ್ನು ಕೆಲವು ದಿನದ ಮಟ್ಟಿಗೆ ಬಾಡಿಗೆ ಕೊಡಿ ಎಂದಿದ್ದಾರೆ.

ಇದನ್ನು ಓದಿ: ಮಹಾಘಟ್​ಬಂಧನ್​ನಿಂದ ರಾಹುಲ್​ ಗಾಂಧಿ ಪ್ರಧಾನಿಯಾಗಲು ನಮ್ಮ ಸಂಪೂರ್ಣ ಬೆಂಬಲವಿದೆ; ಸಿಎಂ ಎಚ್.ಡಿ.ಕುಮಾರಸ್ವಾಮಿ

ಅಲ್ಲದೇ, ಈ ಕೊಠಡಿಗಳಿಗೆ ತಾವು ಬಾಡಿಗೆಯನ್ನು ನೀಡುವುದಾಗಿ ತಿಳಿಸಿದ್ದರು. ಈ ಹಣದ ಮೂಲಕ ನಮ್ಮ ರೈತರ ಸಾಲಮನ್ನಾ ಮಾಡುಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ

.
First published: January 24, 2019, 1:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading