• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Rohini Sindhuri: ರೋಹಿಣಿ ಸಿಂಧೂರಿಗೆ ಶಾಕ್​; ಐಎಎಸ್​​ ಅಧಿಕಾರಿ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ ಸಾಮಾಜಿಕ ಕಾರ್ಯಕರ್ತ

Rohini Sindhuri: ರೋಹಿಣಿ ಸಿಂಧೂರಿಗೆ ಶಾಕ್​; ಐಎಎಸ್​​ ಅಧಿಕಾರಿ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದ ಸಾಮಾಜಿಕ ಕಾರ್ಯಕರ್ತ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ

ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಐಪಿಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಪತ್ರ ಬರೆದು ದೂರು ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ದಿನೇಶ್​ ಕಲ್ಲಹಳ್ಳಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಸುದೀರ್ಘ ದೂರು ನೀಡಿದ್ದೆನೆ ಎಂದು ತಿಳಿಸಿದ್ದಾರೆ.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri) ಅವರು ಶಾಸಕ ಸಾ.ರಾ ಮಹೇಶ್ (MLA Sa Ra Mahesh) ಅವರೊಂದಿಗೆ ಸಂಧಾನಕ್ಕೆ ಮುಂದಾಗಿದ್ದಾರೆ ಎಂಬ ಫೋಟೋ ವೈರಲ್ (Photo) ಆಗುತ್ತಿದ್ದಂತೆ ಹಿರಿಯ ಐಪಿಎಸ್ ಅಧಿಕಾರಿ ಡಿ ರೂಪಾ (IPS Officer D Roopa) ಅವರು ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ಇದು ಉನ್ನತ ಮಟ್ಟದಲ್ಲಿರುವ ಮಹಿಳಾ ಅಧಿಕಾರಿಗಳ (Lady Officers) ನಡುವೆ ಜಟಾಪಟಿಗೆ ಕಾರಣವಾಗಿತ್ತು. ಇದರ ನಡುವೆ ಇಂದು ರೋಹಿಣಿ ಸಿಂಧೂರಿ ಅವರು ರೂಪಾ ಅವರ ವಿರುದ್ಧ ದೂರು ದಾಖಲು (Complaint ) ಮಾಡಿದ್ದಾರೆ. ಇತ್ತ ರೋಹಿಣಿ ಸಿಂಧೂರಿ ಅವರ ವಿರುದ್ಧವೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ (Chief Secretary) ದೂರು ನೀಡಲಾಗಿದೆ.


ದಿನೇಶ್​ ಕಲ್ಲಹಳ್ಳಿಯಿಂದ ರೋಹಿಣಿ ಸಿಂಧೂರಿ ವಿರುದ್ಧ ದೂರು


ಹೌದು, ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಪತ್ರ ಬರೆದು ದೂರು ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ದಿನೇಶ್​ ಕಲ್ಲಹಳ್ಳಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಸುದೀರ್ಘ ದೂರು ನೀಡಿದ್ದೆನೆ.


ಹಿರಿಯ ಐಪಿಎಸ್​ ಅಧಿಕಾರಿ ಡಿ ರೂಪಾ ಅವರು ಫೇಸ್​​ಬುಕ್​​ನಲ್ಲಿ ಮಾಡಿರುವ ಆರೋಪಗಳು ಬಹಳ ಗಂಭೀರವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಪತ್ರ ಬರೆದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ದೂರು ನೀಡಿದ್ದೇನೆ. ಈ ಪ್ರಕರಣ ಉನ್ನತ ಮಟ್ಟದ ಅಧಿಕಾರಿಗಳ ಮೇಲೆ ಜನ ಸಾಮಾನ್ಯರಿಗೆ ಇರುವ ನಂಬಿಕೆಯನ್ನು ಕಡಿಮೆ ಮಾಡುವ ಅಪಾಯವಿದೆ, ಜನರು ಅಧಿಕಾರಿಗಳ ವಿರುದ್ಧ ಸಂಶಯ ಪಡುವ ಸಾಧ್ಯತೆ ಇದೆ. ಆದ್ದರಿಂದ ಪತ್ರ ಬರೆದು ಇ-ಮೇಲ್​ ಮೂಲಕ ಸಿಎಸ್​ ಅವರಿಗೆ ಕಳುಹಿಸಿದ್ದೆನೆ ಎಂದು ಹೇಳಿದ್ದಾರೆ.




ಇದನ್ನೂ ಓದಿ: DK Ravi Mother: ನಿಮ್ಮಿಬ್ಬರ ಜಗಳದಲ್ಲಿ ನನ್ನ ಮಗನ ಹೆಸರನ್ನ ತರಬೇಡಿ; ಡಿಕೆ ರವಿ ತಾಯಿ ಗೌರಮ್ಮ


ಡಿ ರೂಪಾ ವಿರುದ್ಧ ದೂರು ದಾಖಲು


ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಡಿ ರೂಪಾ ವಿರುದ್ಧ ಕಾನೂನು ಸಮರ ನಡೆಸುತ್ತೇವೆ ಎಂದು ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ಹೇಳಿದ್ದರು. ತಮ್ಮ ಹೇಳಿಕೆಯಂತೆ ಬಾಗಲಗುಂಟೆ ಪೊಲೀಸ್ ಠಾಣೆಗೆ ತೆರಳಿ ಸುಧೀರ್ ರೆಡ್ಡಿ ದೂರು ಸಲ್ಲಿಸಿದ್ದಾರೆ.


ಇತ್ತ ಇಂದು ಕಚೇರಿಗೂ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ, ಮಾಧ್ಯಮದವರು ಮನೆ ಮುಂದೆ ಬಂದು ಪ್ರಶ್ನೆಗಳನ್ನು ಕೇಳಿದರೆ ಉತ್ತರ ಹೇಳಲು ಆಗಲ್ಲ. ಎಲ್ಲೆಂದರಲ್ಲಿ ಆ ಬಗ್ಗೆ ಮಾತನಾಡೋದು ಬೇಡ. ಶೀಘ್ರದಲ್ಲಿಯೇ ಇದಕ್ಕೆಲ್ಲಾ ಉತ್ತರ ಕೊಡುವೆ ಎಂದಿದ್ದಾರೆ.


ಅಲ್ಲದೆ, ಈ ರೀತಿ ಮಾತನಾಡೋದು ಸರಿಯಲ್ಲ. ಈ ಎಲ್ಲಾ ವಿಷಯಗಳನ್ನು ಸರ್ಕಾರದ ಮುಂದೆ ತರಬೇಕು. ಮಾತನಾಡುವ ವೇದಿಕೆಯೂ ಇದಲ್ಲ. ಈ ರೀತಿ ವೈಯಕ್ತಿಕ ತೇಜೋವಧೆ ಮಾಡೋದು ತಪ್ಪು. ಕೆಲಸದ ಬಗ್ಗೆ ಏನಾದರೂ ಮಾತನಾಡಿಲ್ಲ. ಇದನ್ನೆಲ್ಲಾ ಸುಮ್ನೆ ಬಿಡಲ್ಲ ಎಂದು ಡಿ ರೂಪಾ ಅವರಿಗೆ ಎಚ್ಚರಿಕೆ ನೀಡಿದರು.


ದಿನೇಶ್​ ಕಲ್ಲಹಳ್ಳಿ, ಸಾಮಾಜಿಕ ಕಾರ್ಯಕರ್ತ


ಇದನ್ನೂ ಓದಿ: Rohini Sindhuri Vs D Roopa: ನಾನು ಕನ್ನಡಿಗ, ಡಿ ರೂಪಾಗೆ ಹೊಟ್ಟೆಕಿಚ್ಚು; ರೋಹಿಣಿ ಸಿಂಧೂರಿ ಪತಿ ಕೆಂಡ


ಇನ್ನೂ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರೋಹಿಣಿ ಸಿಂಧೂರಿ ದೂರು ನೀಡಿರುವ ಹಿನ್ನೆಲೆಯಲ್ಲಿ ಸಿಎಸ್​ ವಂದಿತಾ ಶರ್ಮಾ ಅವರು ಡಿ ರೂಪಾ ಅವರಿಗೆ ಬುಲಾವ್​ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತಮ್ಮ ವಿರುದ್ಧ ರೋಹಿಣಿ ಅವರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ವಿಧಾನ ಸೌಧಕ್ಕೆ ಆಗಮಿಸಿ ದೂರಿನ ಬಗ್ಗೆ ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಸ್ಪಷ್ಟನೆ ನೀಡಲಿದ್ದಾರೆ ಎನ್ನಲಾಗಿದೆ.

Published by:Sumanth SN
First published: