Spelling Mistakes: ಬೊಮ್ಮಾಯಿ ಸರ್ಕಾರಕ್ಕೆ ಸರಿಯಾಗಿ ಕನ್ನಡ ಬರಲ್ವಾ? ನಮ್ಮ ಭಾಷೆಗೆ ಇದೆಂಥಾ ಅವಮಾನ!

ಸರ್ಕಾರದ ಸುತ್ತೋಲೆಯಲ್ಲಿ ಅನೇಕ ತಪ್ಪುಗಳಿವೆ. ಬೊಮ್ಮಾಯಿ ಸರ್ಕಾರದಿಂದ ಕರ್ನಾಟಕದ ಹೆಸರಿಗೇ ಅಪಮಾನ ಮಾಡಲಾಗಿದೆ. ಸರ್ಕಾರಿ ಅಧಿಕಾರಿಗಳೇ ಕನ್ನಡದ ಕಗ್ಗೊಲೆ ಮಾಡಿದ್ದಾರೆ. ಸರ್ಕಾರದಿಂದ ಕನ್ನಡ ಕೊಲೆ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದೇಶ ಪ್ರತಿ

ಆದೇಶ ಪ್ರತಿ

  • Share this:
ನಿನ್ನೆಯಿಂದ ಹರಿದಾಡುತ್ತಿದ್ದ ಸುದ್ದಿ ಎಂದರೆ ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ (Photo), ವಿಡಿಯೋ (Video) ತಗೆಯಬಾರದು ಅಂತ. ಈ ರೀತಿಯ ಆದೇಶವನ್ನು ಸರ್ಕಾರ ಹೊರಡಿಸಿತ್ತು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ಕೇಳಿ ಬಂದಿತ್ತು. ಭ್ರಷ್ಟ ಅಧಿಕಾರಿಗಳಿಗೆ ಸರ್ಕಾರವೇ ಭದ್ರತೆ ನೀಡುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ ಸರ್ಕಾರ (Government) ಹೊರಡಿಸಿದ್ದ ಆದೇಶವನ್ನು ಹಿಂಪಡೆದು ಇಂದು ಮತ್ತೊಂದು ಸುತ್ತೋಲೆಯನ್ನು ಹೊರಡಿದೆ. ಆದ್ರೆ ಸರ್ಕಾರದ ಸುತ್ತೋಲೆಯಲ್ಲಿ (Order copy) ಅನೇಕ ತಪ್ಪುಗಳಿವೆ. ಬೊಮ್ಮಾಯಿ ಸರ್ಕಾರದಿಂದ ಕನ್ನಡಕ್ಕೆ ಅಪಮಾನ ಮಾಡಲಾಗಿದೆ. ಸರ್ಕಾರಿ ಅಧಿಕಾರಿಗಳೇ ಕನ್ನಡದ ಕಗ್ಗೊಲೆ ಮಾಡಿದ್ದಾರೆ. ನಿನ್ನೆ ಒಂದು ರೀತಿಯ ವಿವಾದವಾಗಿದ್ರೆ, ಇವತ್ತು ಮತ್ತೆ ಸರ್ಕಾರದಿಂದ ಕನ್ನಡ ಕೊಲೆ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡದ ನೆಲದಲ್ಲಿ ಕನ್ನಡಕ್ಕೆ ಅವಮಾನ!
ಹಲವು ವಿರೋಧಗಳ ನಂತರ ಸರ್ಕಾರ, ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ, ವಿಡಿಯೋ ತಗೆಯಬಾರದು ಎಂಬ ಆದೇಶವನ್ನು ಹಿಂಪಡೆದಿದೆ. ಆದ್ರೆ ಆದೇಶ ಹಿಂಪಡೆದ ಸುತ್ತೋಲೆಯಲ್ಲಿ ಅನೇಕ ಕನ್ನಡದ ಪದಗಳು ತಪ್ಪಾಗಿವೆ. ಕನ್ನಡದ ನೆಲದಲ್ಲಿ ಕನ್ನಡಕ್ಕೆ ಅಪಮಾನ ಎಂದು  ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಕರ್ನಾಟಕ ಹೆಸರನ್ನೇ ತಪ್ಪು ಬರೆದಿದ್ದಾರೆ. ಬೊಮ್ಮಾಯಿ ಸರ್ಕಾರದಿಂದ ಕನ್ನಡದ ಕಗ್ಗೊಲೆ ಎಂದು ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.

ಹಾಗಾದ್ರೆ ಸುತ್ತೋಲೆಯಲ್ಲಿ ಆಗಿರುವ ತಪ್ಪುಗಳೇನು?
'ಕರ್ನಾಟಕ' ಎಂಬ ಪದಕ್ಕೆ 'ಕರ್ನಾಟ' ಎಂದು ತಪ್ಪು ಪದ ಬಳಕೆ ಮಾಡಿದ್ದಾರೆ. 'ನಡಾವಳಿಗಳು' ಎಂಬುದಕ್ಕೆ 'ನಡವಳಿ' ಎಂದು ತಪ್ಪು ಹಾಕಿದ್ದಾರೆ. 'ಪ್ರಸ್ತಾವನೆ'ಗೆ, 'ಪ್ರಸತ್ತಾವನೆ' ಎಂದು ತಪ್ಪಾಗಿ ಬರೆದಿದ್ದಾರೆ.  'ಮೇಲೆ' ಎಂಬ ಪದಕ್ಕೆ 'ಮೇಲೇ' ಎಂದು ಬಳಸಿದ್ದಾರೆ. 'ಭಾಗ-1' ಎಂಬ ಕಡೆ 'ಬಾಗ-1' ಎಂದು ಬಳಸಿದ್ದಾರೆ. 'ಕರ್ತವ್ಯ' ಎಂಬ ಕಡೆ 'ಕತವ' ಎಂದು ತಪ್ಪು ತಪ್ಪಾಗಿ ಟೈಪಿಸಿದ್ದಾರೆ.

ಇದನ್ನೂ ಓದಿ: Karnataka Government: ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ನಿಷೇಧ ಆದೇಶ ಹಿಂಪಡೆದ ಬೊಮ್ಮಾಯಿ ಸರ್ಕಾರ

ಒಂದು ಸಣ್ಣ ಆದೇಶದಲ್ಲೇ ಇಷ್ಟೊಂದು ತಪ್ಪುಗಳು!
ಸರ್ಕಾರವೂ ಹೊರಡಿಸಿರುವ ಸಣ್ಣ ಆದೇಶ ಪ್ರತಿಯಲ್ಲಿ ಇಷ್ಟೊಂದು ತಪ್ಪುಗಳು ಸರಿಯೇ ಎಂದು ಜನ ಕೇಳುತ್ತಿದ್ದಾರೆ. ಜನ ಸಾಮಾನ್ಯ ತಪ್ಪು ಮಾಡಿದ್ರೆ ತಿದ್ದಬಹುದು. ಎಲ್ಲ ಬಲ್ಲ ಸರ್ಕಾರಿ ಅಧಿಕಾರಿಗಳೇ ಈ ರೀತಿ ಭಾಷೆ ಬಳಕೆಯಲ್ಲಿ ತಪ್ಪು ಮಾಡಿದ್ದಾರೆ. ಇವರಿಂದ ಕನ್ನಡ ಉದ್ಧಾರ ಮಾಡೋದು ಸಾಧ್ಯನಾ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿದೆ.

ಇದನ್ನೂ ಓದಿ: Karnataka Government: ಸರ್ಕಾರಿ ಆಫೀಸ್​ಗಳಲ್ಲಿ ಫೋಟೋ-ವಿಡಿಯೋ ತೆಗೆಯೋದು ಬ್ಯಾನ್!

ಸಿಎಂ ಸರ್ ನಿಮ್ಮ ಅಧಿಕಾರಿಗಳ ಕೆಲಸದ ಬಗ್ಗೆಯೂ ಗಮನ ಕೊಡಿ
ಆದೇಶ ಪ್ರತಿಯಲ್ಲಿ ಇಷ್ಟೊಂದು ತಪ್ಪುಗಳಾಗಿವೆ. ಸಿಎಂ ಸರ್ ನಿಮ್ಮ ಅಧಿಕಾರಿಗಳ ಕೆಲಸದ ಬಗ್ಗೆ ಸ್ಪಲ್ಪ ಗಮನ ಕೊಡಿ. ನಿಮ್ಮ ಅಧಿಕಾರಿಗಳಿಗೆ ಕನ್ನಡ ಪಾಠ ಮಾಡಿ. ಇಲ್ಲವಾದ್ರೆ ಕನ್ನಡ ನೆಲದಲ್ಲಿ ಕನ್ನಡದ ಕಗ್ಗೊಲೆ ಸಹಿಸಲ್ಲ ಎಂದು ಕನ್ನಡ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ಮಾಹಿತಿ ಇರಲಿಲ್ವಂತೆ!
ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ, ವಿಡಿಯೋ ತಗೆಯಬಾರದು ಎಂಬ ಆದೇಶ ಹೊರಡಿಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ತಿಳಿದಿರಲಿಲ್ವಂತೆ. ಆ ಆದೇಶ ನನ್ನ ಗಮನಕ್ಕೆ ಬಂದಿರಲಿಲ್ಲ. ಯಾವುದೇ ರೀತಿಯ ನಿಷೇಧ ಆಗಬಾರದು. ಮಾದಲು ಹೇಗೆ ಇತ್ತೋ ಹಾಗೆ ಇರಲಿ ಎಂದು ಆದೇಶ ವಾಪಸ್ ಪಡೆದಿದ್ದೇವೆ ಎಂದು ಹೇಳಿದ್ದಾರೆ. ಸರ್ಕಾರಿ ಆದೇಶಗಳೇ ಸಿಎಂ ಗಮನಕ್ಕೆ ಬಾರದಿದ್ದರೆ ಹೇಗೆ? ಸರ್ಕಾರಿ ಅಧಿಕಾರಿಗಳು ಹಾಗಾದ್ರೆ ಎಲ್ಲಾ ಆದೇಶಗಳನ್ನು ಬೊಮ್ಮಾಯಿ ಅವರ ಗಮನಕ್ಕೆ ತರಲ್ವಾ ಎಂದು ಜನ ಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ.
Published by:Savitha Savitha
First published: