ಮಂತ್ರಿ ಸಂಸ್ಥೆ ವಿರುದ್ಧ ಲುಕ್ ಔಟ್ ನೋಟೀಸ್; ಸ್ನೇಹಲ್ ಮಂತ್ರಿಗೆ ಏರ್​ಪೋರ್ಟ್​ನಲ್ಲಿ ತಡೆ

ಮಂತ್ರಿ ಡೆವಲಪರ್ಸ್ ಸಂಸ್ಥೆ ವಿರುದ್ಧ ಹಲವು ವಂಚನೆ ಪ್ರಕರಣಗಳು ದಾಖಲಾಗಿವೆ. ಒಂದು ಪ್ರಕರಣದಲ್ಲಿ ಮಂತ್ರಿ ಮಾಲೀಕರು ಮತ್ತವರ ಕುಟುಂಬ ಸದಸ್ಯರು ಹಾಗೂ ಸಂಸ್ಥೆಯ ಕೆಲ ಅಧಿಕಾರಿಗಳ ವಿರುದ್ಧ ಲುಕ್ ಔಟ್ ನೋಟೀಸ್ ಜಾರಿಯಲ್ಲಿದೆ.

news18-kannada
Updated:October 16, 2019, 2:33 PM IST
  • Share this:
ಬೆಂಗಳೂರು(ಅ. 16): ಬೆಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿ ಮಂತ್ರಿ ಸಂಸ್ಥೆಯ ನಿರ್ದೇಶಕಿ ಸ್ನೇಹಲ್ ಮಂತ್ರಿ ಅವರನ್ನ ವಿದೇಶಕ್ಕೆ ಪ್ರಯಾಣಿಸದಂತೆ ಏರ್​ಪೋರ್ಟ್​ನಲ್ಲೇ ತಡೆ ಹಿಡಿದ ಘಟನೆ ನಡೆದಿದೆ. ನಿನ್ನೆ ಸಂಜೆ ಸ್ನೇಹಲ್ ಮಂತ್ರಿ ಅವರು ಸಿಂಗಾಪುರಕ್ಕೆ ಹೋಗಲು ದೆಹಲಿಯ ಇಂದಿರಾ ಗಾಂಧಿ ಏರ್​ಪೋರ್ಟ್​ಗೆ ಹೋದಾಗ ಅವರನ್ನು ಪೊಲೀಸರು ತಡೆದಿದ್ದಾರೆ. ಸ್ನೇಹಲ್ ಸೇರಿದಂತೆ ವಿವಿಧ ಮಂದಿಯ ವಿರುದ್ಧ ಲುಕ್ ಔಟ್ ನೋಟೀಸ್ ಇದ್ದ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಜರುಗಿಸಿರುವುದು ತಿಳಿದುಬಂದಿದೆ.

ಹೆಣ್ಣೂರಿನಲ್ಲಿರುವ ಮಂತ್ರಿ ವೆಬ್​ಸಿಟಿ ಅಪಾರ್ಟ್​ಮೆಂಟ್​ನಲ್ಲಿ ಫ್ಲಾಟ್ ನೀಡದೇ ಮೋಸ ಮಾಡಿದ್ದಾರೆಂದು ಜುಲೈ ತಿಂಗಳಲ್ಲಿ ಒಂದು ದೂರು ದಾಖಲಾಗಿದೆ. ಬೋಗಸ್ ಸ್ಕೀಮ್​ಗಳ ಮೂಲಕ ಗ್ರಾಹಕರನ್ನು ವಂಚಿಸಲಾಗುತ್ತಿದೆ ಎಂಬ ದೂರಿದೆ. 2016ರಲ್ಲಿ ಹಣ ಪಾವತಿ ಮಾಡಿದರೂ ತಮಗೆ ಫ್ಲಾಟ್ ಕೊಟ್ಟಿಲ್ಲ ಎಂಬುದು ದೂರುದಾರರ ಆರೋಪ. ಹಾಗೆಯೇ, ಮಂತ್ರಿ ಸಂಸ್ಥೆಯ ಅಧಿಕಾರಿಗಳು ದೇಶವನ್ನು ತೊರೆಯುವ ಸಾಧ್ಯತೆ ಇರುವುದರಿಂದ ಲುಕ್ ಔಟ್ ನೋಟೀಸ್ ನೀಡಬೇಕೆಂದು ಕೋರಿದ್ದರು. ಅದರಂತೆ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಮಂತ್ರಿ ಸಂಸ್ಥೆಯ ಮಾಲೀಕ ಸುಶೀಲ್ ಮಂತ್ರಿ, ಅವರ ಪತ್ನಿ ಸ್ನೇಹಲ್, ಮಗ ಪ್ರತೀಕ್ ಸೇರಿದಂತೆ ಒಟ್ಟು 9 ಮಂದಿಯ ವಿರುದ್ಧ ಲುಕ್ ಔಟ್ ನೋಟೀಸ್ ನೀಡಲಾಗಿದೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್​ನಲ್ಲಿ ಸಿಲುಕಿದವರಿಗೆ ಮೂತ್ರ ಮಾಡಲು ಬಾಟಲಿ ಕೊಡ್ತಾರಾ?; ಹರಿದಾಡ್ತಿದೆ ಹೀಗೊಂದು ಸುದ್ದಿ

ಈ ಹಿನ್ನೆಲೆಯಲ್ಲಿ ಸಿಂಗಾಪುರಕ್ಕೆ ತೆರಳಲೆಂದು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಸ್ನೇಹಲ್ ಮಂತ್ರಿ ಅವರ ದಾಖಲೆಗಳನ್ನು ವಲಸೆ ಅಧಿಕಾರಿಗಳು ಪರಿಶೀಲಿಸಿದಾಗ ಲುಕ್ ಔಟ್ ನೋಟೀಸ್ ವಿಚಾರ ಬೆಳಕಿಗೆ ಬಂದಿದೆ. ಅಲ್ಲಿಯ ಪೊಲೀಸರು ತಡೆದು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರಿಗೆ ಈ ಮಾಹಿತಿ ನೀಡಿದ್ದಾರೆ. ಆದರೆ, ಈಗಾಗಲೇ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟೀಸ್ ನೀಡಿದ್ದೇವೆ. ಹೀಗಾಗಿ, ಸದ್ಯಕ್ಕೆ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳುವ ಅಗತ್ಯ ಇಲ್ಲ ಎಂದು ಬೆಂಗಳೂರಿನ ಪೊಲೀಸರು ತಿಳಿಸಿದ್ದಾರೆ. ಆ ಬಳಿಕ ದೆಹಲಿ ಏರ್​ಪೋರ್ಟ್ ಅಧಿಕಾರಿಗಳು ಸ್ನೇಹಲ್ ಮಂತ್ರಿ ಅವರನ್ನು ವಾಪಸ್ ಕಳುಹಿಸಿದ್ದಾರೆ.

ಬೆಂಗಳೂರಿನ ಮಂತ್ರಿ ಡೆವಲಪರ್ಸ್ ಸಂಸ್ಥೆ ವಿರುದ್ಧ ಏಳೆಂಟು ಪ್ರಕರಣಗಳು ದಾಖಲಾಗಿವೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading