ಆಹಾರ ಅರಸಿ ಬಂದ ಅಳಿಲು; ಯಾರಿಗೆ ಆಹಾರವಾಯಿತು ಗೊತ್ತಾ?

news18
Updated:August 4, 2018, 3:35 PM IST
ಆಹಾರ ಅರಸಿ ಬಂದ ಅಳಿಲು; ಯಾರಿಗೆ ಆಹಾರವಾಯಿತು ಗೊತ್ತಾ?
news18
Updated: August 4, 2018, 3:35 PM IST
 - ಶರಣು ಹಂಪಿ,  ನ್ಯೂಸ್ 18 ಕನ್ನಡ 

ಬಳ್ಳಾರಿ (ಜು.4) :  ವಿಶ್ವಪ್ರಸಿದ್ದ ಹಂಪಿಯ ಸ್ಮಾರಕಗಳ ಸಮೀಪ ಆಹಾರ ಅರಸಿ ಓಡಾಡುತ್ತಿದ್ದ ಅಳಿಲನ್ನು ಹಾವು ಬೇಟೆಯಾಡಿದೆ. ಇಂದು ಬೆಳಗ್ಗೆ ಹಂಪಿಯ ಮಹಾನವಮಿ ದಿಬ್ಬದ ಬಳಿ ವಿಹರಿಸುತ್ತಿದ್ದ ಅಳಿಲನ್ನು ಹಿಡಿದ ಕೊಳಕು ಮಂಡಲ ಹಾವು ನಿಧಾನವಾಗಿ ಸಂಪೂರ್ಣವಾಗಿ ನುಂಗಿದೆ.

ಎಷ್ಟೇ ಪ್ರಯತ್ನ ಮಾಡಿದರೂ ಅಳಿಲು ಹಾವಿನ ಬಾಯಿಂದ ತಪ್ಪಿಸಿಕೊಳ್ಳಲಿ ಸಾಧ್ಯವಾಗಲೇ ಇಲ್ಲ. ರಸೆಲ್ ವೈಪರ್ ಎಂದು ಕರೆಯುವ ಹಾವು ನಾಗರ ಹಾವಿಗಿಂತ ವಿಷಕಾರಿಯಂತೆ. ಇಂಥ ಹಾವು ಕಂಡರೆ ಮನುಷ್ಯರು ಅತ್ತ ಕಡೆ ಸುಳಿಯಲ್ಲ. ಕಚ್ಚಿದರೆ ಮೈಯೆಲ್ಲ ಕೊಳತು ಹೋಗುತ್ತದೆ ಎಂಬ ಭಯವಿದೆ.

ಇಂಥ ವಿಷಕಾರಿ ಹಾವು ಆಹಾರಕ್ಕಾಗಿ ಅಳಿಲನ್ನು ನುಂಗಿದ ದೃಶ್ಯವನ್ನು ಸ್ಥಳೀಯ ಸೆಕ್ಯುರಟಿ ಗಾರ್ಡ್ ಹುಸೇನಿ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಅಳಿಲನ್ನು ನುಂಗಿ ಬೇಟೆಯಾಡಿ ಮಹಾನವಮಿ ದಿಬ್ಬದ ಸ್ಮಾರಕದ ಹೊರಗಿನ‌ ಪೊದೆಯಲ್ಲಿ ಮರೆಯಾಗಿದೆ‌.   
First published:August 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...