King cobra: 8 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ ಮಾಡಿದ ಪುತ್ತೂರಿನ ಯುವಕ!

King Cobra rescued: ಸಂಕಷ್ಟದಲ್ಲಿರುವ ಹಾವುಗಳಿಗೆ ಇವರು ಪ್ರಾಣದಾತರಾಗಿದ್ದು, ಕಳೆದ ಹತ್ತು ವರ್ಷಗಳಲ್ಲಿ ತೇಜಸ್ ಸಾವಿರಾರು‌  ಹಾವುಗಳನ್ನು ಸಂಕಷ್ಟಗಳಿಂದ, ಪೋಷಿಸಿ, ರಕ್ಷಿಸಿ ಮತ್ತೆ ಕಾಡಿಗೆ ಸೇರಿಸಿದ್ದಾರೆ. ಆಕಸ್ಮಿಕವಾಗಿ ಹಾವನ್ನು ಹಿಡಿಯುವಂತಹ ಸಂದರ್ಭ ಬಂದಾಗಿನಿಂದ ಹಾವುಗಳ ಮೇಲೆ ಪ್ರೀತಿ ಹೆಚ್ಚಿದೆ. ಆ ಬಳಿಕ ಯಾವ ಜನವಸತಿ ಪ್ರದೇಶ?

ತೇಜಸ್

ತೇಜಸ್

  • Share this:
ಬಾವಿಗೋ, ಕೆರೆಗೋ, ಹೊಂಡಕ್ಕೋ ಬಿದ್ದು ಸಾವಿನ ಅಂಚಿನಲ್ಲಿರುವ ಸರೀಸೃಪಗಳನ್ನು (Reptile)  ಅವುಗಳು ಅಲ್ಲೇ ಸಾಯಲಿ ಎಂದು ನೋಡಿಯೂ ನೋಡದಂತೆ ಮಾಡುವವರೇ  ಹೆಚ್ಚು. ಆದರೆ ಪುತ್ತೂರಿನ (Puttur) ಈ  ಯುವಕ ಮಾತ್ರ ಈ ವರ್ತನೆಯ ಜನರಿಗಿಂತ ಸಂಪೂರ್ಣ ವಿಭಿನ್ನ. ಎಲ್ಲಿ ಉರಗಗಳಿಗೆ (Snakes) ತೊಂದರೆಯಾಗುತ್ತಿದೆಯೋ ಅಲ್ಲಿ ಈ ಯುವಕ ಹಾಜರು. ತನ್ನ ಪ್ರಾಣವನ್ನೂ ಲಕ್ಷಿಸದೆ  ಉರಗಗಳನ್ನು ರಕ್ಷಿಸುವ (Rescue) , ಪೆಟ್ಟಾದ ಉರಗಗಳಿಗೆ ಚಿಕಿತ್ಸೆ (Treatment)  ನೀಡಿ ಅವುಗಳನ್ನು ಮತ್ತೆ ಕಾಡಿಗೆ ಬಿಡುವ ಈ ಯುವಕನ ಸಾಹಸ ಎಲ್ಲರೂ ಮೆಚ್ಚುವಂತದ್ದೇ. ಬನ್ನಿ ಹಾಗಾದರೆ ಈ ಯುವಕ ಯಾರು, ಏನು ಈತನ ಆಸಕ್ತಿ  ಮಾಡುತ್ತಾರೆ ಎನ್ನುವುದರ ಮಾಹಿತಿ ಇಲ್ಲಿದೆ.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕರ್ಮಲದ (Karmala) ನಿವಾಸಿಯಾದ ತೇಜಸ್ ಗಾಣಿಗ (Tejas Ganiga) ಈ ರೀತಿ ಸರೀಸೃಪಗಳ ಆರೈಕೆದಾತ. ಡಿಪ್ಲೊಮಾ ಪದವೀಧರರಾಗಿರುವ ತೇಜಸ್ ತನ್ನ  ವಿದ್ಯಾಭ್ಯಾಸದ ಮಾಡುವ ಸಂದರ್ಭದಿಂದಲೂ  ಇವರು ನೆಚ್ಚಿಕೊಂಡು ಬಂದದ್ದು ವಿಷದ  ಹಾವು ಹಿಡಿಯುವುದು ಹಾಗೂ ಅವುಗಳನ್ನು ಮತ್ತೆ ಅವುಗಳ ವಾಸಸ್ಥಾನಕ್ಕೇ ಬಿಡುವ ಕೆಲಸವನ್ನು. ನಾಗರಹಾವು, ಹೆಬ್ಬಾವುಗಳು, ಕಾಳಿಂಗ ಸರ್ಪ ಹಾಗೂ ಇತರ ವಿಷಪೂರಿತ ಹಾವುಗಳನ್ನು ಕಂಡರೆ ಮಾರು ದೂರ ಹೋಗುವ ಜನರಿರುವ ಈ ಕಾಲದಲ್ಲಿ ಈ ಹಾವುಗಳು ಕೆರೆಗೋ, ಬಾವಿಗೋ ಅಥವಾ ಹೊಂಡಕ್ಕೋ ಬಿದ್ದು ಸಾವಿನ ದವಡೆಯಲ್ಲಿ ಸಿಲುಕಿದ್ದರೆ ಅವುಗಳನ್ನು ರಕ್ಷಿಸುವ ಬದಲು ಅಲ್ಲೇ ಸಾಯಲಿ ಎಂದು ಬಿಟ್ಟು ಹೋಗುವವರೇ ಹೆಚ್ಚು. ಆದರೆ ಈ ಯುವಕ ಹೀಗೆ ಹಾವುಗಳನ್ನು ಸಾಯಲು ಬಿಟ್ಟವನಲ್ಲ. ಸಂಕಷ್ಟದಲ್ಲಿರುವ ಹಾವುಗಳಿಗೆ ಇವರು ಪ್ರಾಣದಾತರಾಗಿದ್ದು, ಕಳೆದ ಹತ್ತು ವರ್ಷಗಳಲ್ಲಿ ತೇಜಸ್ ಸಾವಿರಾರು‌  ಹಾವುಗಳನ್ನು ಸಂಕಷ್ಟಗಳಿಂದ, ಪೋಷಿಸಿ, ರಕ್ಷಿಸಿ ಮತ್ತೆ ಕಾಡಿಗೆ ಸೇರಿಸಿದ್ದಾರೆ. ಆಕಸ್ಮಿಕವಾಗಿ ಹಾವನ್ನು ಹಿಡಿಯುವಂತಹ ಸಂದರ್ಭ ಬಂದಾಗಿನಿಂದ ಹಾವುಗಳ ಮೇಲೆ ಪ್ರೀತಿ ಹೆಚ್ಚಿದೆ. ಆ ಬಳಿಕ ಯಾವ ಜನವಸತಿ ಪ್ರದೇಶಗಳಲ್ಲಿ ಹಾವುಗಳು ಕಾಣಿಸಿಕೊಳ್ಳತ್ತದೋ ಅಲ್ಲಿಗೆ ಹೋಗಿ ಹಾವುಗಳಿಗೆ ಯಾವುದೇ ತೊಂದರೆಯಾಗದಂತೆ ಮತ್ತೆ ಅವುಗಳನ್ನು ಕಾಡಿಗೆ ಸೇರಿಸುವ ಕಾಯಕ ಯೋಗಿಗಳಾಗಿದ್ದಾರೆ ತೇಜಸ್. ಹಾವುಗಳಿಂದ ರಕ್ಷಿಸುವಂತೆ ಎಲ್ಲಿಂದ ಕರೆ ಬಂದರೂ , ಸಮಯ ಸಂದರ್ಭ ನೋಡದೆ ಅಲ್ಲಿಗೆ ತಲುಪುವ ತೇಜಸ್ ವಿಷಜಂತುಗಳ ಕಾಟದಿಂದ ಸಾಕಷ್ಟು ಜನರಿಗೆ ಮುಕ್ತಿಯನ್ನೂ ನೀಡಿದವರು.

ಇದನ್ನೂ ಓದಿ: Kollywood: ಇದಪ್ಪಾ ವರಸೆ ಅಂದ್ರೆ, ಈ ಸ್ಟಾರ್ ನಟನನ್ನೇ ಮದ್ವೆಯಾಗ್ಬೇಕು ಅಂತ ಗಲಾಟೆ ಮಾಡಿದ ನಟಿ!ಜನವಸತಿ ಪ್ರದೇಶಗಳಿಗೆ ವಿಷಜಂತುಗಳು ಬಂದು ಮನೆಯೊಳಗೆ ಕುಳಿತುಕೊಂಡಾಗ ಇಡೀ ಮನೆಯವರೇ ಭಯದಿಂದಲೇ ಇರಬೇಕಾದಂತಹ ಸ್ಥಿತಿ ನಿರ್ಮಾಣಗೊಳ್ಳುವುದು ಸಾಮಾನ್ಯ. ಇಂಥ ಸಂದರ್ಭಗಳಲ್ಲಿ ಕರೆ ಬಂದಲ್ಲಿಗೆ ಸೂಕ್ತ ಸಮಯದಲ್ಲಿ ತಲುಪುವ ತೇಜಸ್ ಗೆ ಇದೀಗ ಅರಣ್ಯ ಇಲಾಖೆಯೂ ಸಹಕಾರವನ್ನು ನೀಡುತ್ತಿದೆ. ಮನೆಯಂಗಳದಲ್ಲಿ ಮಕ್ಕಳು ಆಟವಾಡುವ ಸಮಯದಲ್ಲಿ ಹೆಚ್ಚಾಗಿ ಬರುವ ಹಾವುಗಳಿಂದ ಮನೆ ಮಂದಿ ಭಯಭೀತರಾಗಿರುವ ಸಂದರ್ಬದಲ್ಲಿ ತೇಜಸ್ ಹಾವುಗಳನ್ನು ಸುರಕ್ಷಿತ ಜಾಗಕ್ಕೆ ಬಿಡುವ ಮೂಲಕ ಮನೆ ಮಂದಿಗೆ ನೆಮ್ಮದಿಯನ್ನೂ ತಂದುಕೊಟ್ಟಿದ್ದಾರೆ. ಹತ್ತಕ್ಕೂ ಮಿಕ್ಕಿದ ಅತೀ ಅಪಾಯಕಾರಿ ಕಾಳಿಂಗ ಸರ್ಪವನ್ನು ರಕ್ಷಿಸಿ,ಕಾಡಿಗೆ ಬಿಟ್ಟಿರುವ ತೇಜಸ್, ಅನಾಥವಾಗಿ ಬಿದ್ದಿರುವ ಹಾವಿನ ಮೊಟ್ಟೆಗಳಿಗೆ ಕೃತಕ ಕಾವು ಕೊಟ್ಟು,‌ಹಾವುಗಳ ಸಂತತಿಯನ್ನೂ ಉಳಿಸುವ ಕೈಕಂರ್ಯದಲ್ಲಿ  ತೊಡಗಿದ್ದಾರೆ. ಅಂದಹಾಗೆಯೇ ಇತ್ತೀಚೆಗೆ ಬೆಳ್ತಂಗಡಿಯ ಮೊಗ್ರು ಗ್ರಾಮದ ಮುಗೇರಡ್ಕ ಸಮೀಪ ಬಚ್ಚಲು ಮನೆಯಲ್ಲಿದ್ದ 8 ಅಡಿ ಉದ್ದದ ಕಾಳಿಂಗ ಸರ್ಪದ ರಕ್ಷಣೆಯನ್ನು ಮಾಡಿದ್ದಾರೆ.ಇದನ್ನೂ ಓದಿ: Knowledge Story: ಹೊಳೆಯುವ ಸ್ಟಿಕರ್ ಹಾಕಿದ್ದೆಲ್ಲಾ ಫ್ರೆಶ್ ಹಣ್ಣಲ್ಲ, ತಿನ್ನೋ ಮುಂಚೆ ಇದನ್ನ ಮೊದ್ಲು ತಿಳ್ಕೊಳಿ

ವಿಷಜಂತುಗಳು ಇದೆ ಎನ್ನುವ ಕರೆ ಬಂದ ತಕ್ಷಣ ಈ ಯುವಕ ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಿಡಿಯಲು ಸಮ್ಮತಿ ಸೂಚಿಸಿದ ಬಳಿಕವೇ ಕರೆ ಬಂದ ಸ್ಥಳಕ್ಕೆ ತೆರಳುತ್ತಾರೆ. ಹಾವು ಹಿಡಿಯುವ ತಜ್ಞ ಸಿಬ್ಬಂದಿಗಳಿರುವ ಅರಣ್ಯ ಇಲಾಖೆಯ ಕೊರತೆಯನ್ನು ತೇಜಸ್ ಭರ್ತಿಮಾಡಿದ್ದಾರೆ. ಮೂಕಪ್ರಾಣಿಗಳ ಬಗ್ಗೆ ಇವರಿಗಿರುವ ಕಾಳಜಿಗೆ ನಿಜಕ್ಕೂ ಹಾಟ್ಸ್ಅಫ್ ಎನ್ನಲೇ ಬೇಕು.
Published by:Harshith AS
First published: