ಕುಡಿದ ಅಮನಲ್ಲಿ ಹಾವನ್ನೇ ಕಚ್ಚಿ ಮೂರು ಭಾಗವಾಗಿ ತುಂಡರಿಸಿದ ಕುಡುಕ

ಇಲ್ಲಿನ ಇಟಾ ಎಂಬ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಾವಿನಿಂದ ಕಡಿತಕ್ಕೊಳಗಾದ ವ್ಯಕ್ತಿಯನ್ನು ರಾಜ್ ಕುಮಾರ್ ಎಂದು ಗುರುತಿಸಲಾಗಿದೆ.

news18
Updated:July 29, 2019, 8:09 PM IST
ಕುಡಿದ ಅಮನಲ್ಲಿ ಹಾವನ್ನೇ ಕಚ್ಚಿ ಮೂರು ಭಾಗವಾಗಿ ತುಂಡರಿಸಿದ ಕುಡುಕ
ಹಾವು
  • News18
  • Last Updated: July 29, 2019, 8:09 PM IST
  • Share this:
ನವದೆಹಲಿ(ಜುಲೈ.29): ಕುಡುಕನೋರ್ವ ಹಾವೊಂದನ್ನು ಕಚ್ಚಿ ಮೂರು ಭಾಗವಾಗಿ ತುಂಡರಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಂಠಪೂರ್ತಿ ಕುಡಿದು ತೂರಾಡುತ್ತಿದ್ದ ವ್ಯಕ್ತಿಯೋರ್ವನಿಗೆ ಮೊದಲು ಹಾವು ಕಚ್ಚಿದೆ. ಇದರಿಂದ ಆಕ್ರೊಶಗೊಂಡ ಈತ ತನ್ನ ಬಾಯಿಂದಲೇ ಹಾವನ್ನು ಕಚ್ಚಿ ತುಂಡು ತುಂಡಾಗಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಇಲ್ಲಿನ ಇಟಾ ಎಂಬ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಾವಿನಿಂದ ಕಡಿತಕ್ಕೊಳಗಾದ ವ್ಯಕ್ತಿಯನ್ನು ರಾಜ್ ಕುಮಾರ್ ಎಂದು ಗುರುತಿಸಲಾಗಿದೆ. ಸದ್ಯ ಈತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಆರೋಗ್ಯ ಚಿಂತಾಜನಕವಾಗಿದೆ ಎನ್ನುತ್ತಿದ್ದಾರೆ ವೈದ್ಯರು.

ಇದನ್ನೂ ಓದಿ: ಮುಖ್ಯಮಂತ್ರಿ ಸಲಹೆಗಾರರಾಗಿ ನಿವೃತ್ತ ಐಎಎಸ್ ಅಧಿಕಾರಿ ಎಂ ಲಕ್ಷ್ಮೀನಾರಾಯಣ ನೇಮಕ

ಈ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ರಾಜ್ ಕುಮಾರ್ ತಂದೆ ಬಾಬು ರಾಮ್, "ನಮ್ಮ ಮನೆಗೆ ಹಾವು ಬಂದಿತ್ತು. ನನ್ನ ಮಗ ಕುಡಿದ ಮತ್ತಿನಲ್ಲಿದ್ದ. ಈ ವೇಳೆ ಆತನಿಗೆ ಹಾವು ಕಚ್ಚಿತ್ತು. ಕುಡಿತದ ಅಮಲಿನಲ್ಲಿದ್ದ ಮಗ ಹಾವನ್ನೇ ಕಚ್ಚಿ ತುಂಡು ಮಾಡಿದ. ಇದೀಗ ಆತನ ಆರೋಗ್ಯ ಚಿಂತಾಜನಕವಾಗಿದೆ. ನನ್ನ ಮಗನಿಗೆ ಚಿಕಿತ್ಸೆ ಕೊಡಿಸುವಷ್ಟು ಹಣವೂ ನಮ್ಮಲ್ಲಿಲ್ಲ" ಎಂದರು.
-------------
First published:July 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading