ಆನ್​ಲೈನ್ ಶಿಕ್ಷಣದಿಂದಾಗಿ ಪಾಲಕರ ಹೆಗಲಿಗೆ ಬಿತ್ತು ಸ್ಮಾರ್ಟ್​ಫೋನ್ ಖರೀದಿಯ ಹೊರೆ 

ತರಗತಿಯಲ್ಲಿ ಪಾಲ್ಗೊಳ್ಳಲು ಮಕ್ಕಳಿಗೆ ಮೊಬೈಲ್ ಬೇಕಿದೆ. ಮನೆಯಲ್ಲಿ ಹೊಸ ಫೋನ್ ತರುವಂತೆ ಒಂದೇ ಸಮನೆ ಒತ್ತಡ ತರುತ್ತಿದ್ದಾರೆ. ಸ್ಮಾರ್ಟ್​​ ಫೋನ್​ ಬಳಕೆ ಬಗ್ಗೆ ನಮಗೆ ಅಷ್ಟಾಗಿ ಮಾಹಿತಿಯಿಲ್ಲ. ಆದರೆ ಫೋನ್ ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಮೊದಲೇ ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಕಂಗೆಟ್ಟು ಕುಳಿತಿದ್ದೇವೆ. ಇಂತಹ ಸಂದರ್ಭದಲ್ಲಿ ಹತ್ತಾರು ಸಾವಿರ ವ್ಯಯಿಸಿ ಫೋನ್ ಕೊಡಿಸುವುದು ಕಷ್ಟವಾಗುತ್ತಿದೆ. ಸಾಲ ಕೊಡಲೂ ಯಾರೂ ಒಪ್ಪುತ್ತಿಲ್ಲ ಎಂದು ಗ್ರಾಮೀಣ ಭಾಗದ ಪಾಲಕರೋರ್ವರು ಸಮಸ್ಯೆ ಹೇಳಿಕೊಂಡರು.

news18-kannada
Updated:July 26, 2020, 6:19 PM IST
ಆನ್​ಲೈನ್ ಶಿಕ್ಷಣದಿಂದಾಗಿ ಪಾಲಕರ ಹೆಗಲಿಗೆ ಬಿತ್ತು ಸ್ಮಾರ್ಟ್​ಫೋನ್ ಖರೀದಿಯ ಹೊರೆ 
ಸಾಂದರ್ಭಿಕ ಚಿತ್ರ
  • Share this:
ಕಾರವಾರ(ಜು.26): ಕೊರೋನಾ ಹಿನ್ನೆಲೆಯಲ್ಲಿ ಶಾಲೆಗಳು ಮುಚ್ಚಿದ್ದರೂ ವಿದ್ಯಾರ್ಥಿಗಳಿಗೆ ಆರಂಭಿಸಲಾದ ಆನ್‌ಲೈನ್ ಶಿಕ್ಷಣದ ಪರಿಣಾಮ ಪಾಲಕರು ಸ್ಮಾರ್ಟ್ ಫೋನ್ ಖರೀದಿಗೆ ಮುಗಿಬೀಳುವಂತೆ ಮಾಡಿದೆ. ಲಾಕ್ ಡೌನ್​ನಲ್ಲಿ ಎದುರಿಸಿದ ಹತ್ತಾರು ಆರ್ಥಿಕ ಸಮಸ್ಯೆ ನಡುವೆ ಈಗ ಸ್ಮಾರ್ಟ್​​ಪೋನ್ ಖರೀದಿಯ ಹೊರೆ ಪಾಲಕರ ಮೇಲೆ ಬಿದ್ದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಸೇಲ್ ಆಗ್ತಿವೆ ಸ್ಮಾರ್ಟ್​​ ಪೋನ್​ಗಳು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಮಾರ್ಟ್ ಫೋನ್‌ಗಳು ನೀರಿನಂತೆ ಖರ್ಚಾಗ ತೊಡಗಿವೆ. ಕೆಲ ಖಾಸಗಿ ಶಾಲೆಗಳು ಒಂದನೇ ತರಗತಿಯಿಂದಲೂ ಆನ್‌ಲೈನ್ ತರಗತಿಗಳನ್ನು ಆರಂಭಿಸಿದ್ದು, ವಾಟ್ಸಾಪ್  ಗುಂಪು ರಚಿಸಿಕೊಂಡು ಆಯಾ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯಕ್ರಮಗಳನ್ನು ನೀಡುತ್ತಿವೆ. ಶಾಲೆಗಳು ತಿಳಿಸುವ ವೆಬ್‌ಸೈಟ್‌ಗಳ ಮೂಲಕ ಪಾಠ ಅಭ್ಯಸಿಸುವ ಕೆಲಸಗಳನ್ನು ವಿದ್ಯಾರ್ಥಿಗಳು ಮಾಡಬೇಕಿದೆ. ಬಹುತೇಕ ಪಾಲಕರ ಬಳಿ ಸ್ಮಾರ್ಟ್ ಫೋನ್‌ಗಳಿದ್ದರೂ ಆನ್‌ಲೈನ್ ತರಗತಿಗೆ ಪ್ರತ್ಯೇಕ ಫೋನ್ ಕೊಡಿಸಲು ಸ್ಥಿತಿವಂತ ಪಾಲಕರು ಮೊಬೈಲ್ ಖರೀದಿಸುತ್ತಿದ್ದಾರೆ. ಆದರೆ ಬಡ ಕುಟುಂಬದ ಅದರಲ್ಲೂ ಗ್ರಾಮೀಣ ಪ್ರದೇಶದ ಪಾಲಕರ ಸ್ಥಿತಿ ಅಯೋಮಯವಾದಂತಾಗಿದೆ. ಇಂತ ಆರ್ಥಿಕ ಸಮಸ್ಯೆ ನಡುವೆಯೇ ಬೇರೆ ದಾರಿ ಇಲ್ಲದೇ ಪೋನ್ ‌ಖರೀದಿ ಮಾಡುತ್ತಿದ್ದಾರೆ.

ತರಗತಿಯಲ್ಲಿ ಪಾಲ್ಗೊಳ್ಳಲು ಮಕ್ಕಳಿಗೆ ಮೊಬೈಲ್ ಬೇಕಿದೆ. ಮನೆಯಲ್ಲಿ ಹೊಸ ಫೋನ್ ತರುವಂತೆ ಒಂದೇ ಸಮನೆ ಒತ್ತಡ ತರುತ್ತಿದ್ದಾರೆ. ಸ್ಮಾರ್ಟ್​​ ಫೋನ್​ ಬಳಕೆ ಬಗ್ಗೆ ನಮಗೆ ಅಷ್ಟಾಗಿ ಮಾಹಿತಿಯಿಲ್ಲ. ಆದರೆ ಫೋನ್ ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಮೊದಲೇ ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಕಂಗೆಟ್ಟು ಕುಳಿತಿದ್ದೇವೆ. ಇಂತಹ ಸಂದರ್ಭದಲ್ಲಿ ಹತ್ತಾರು ಸಾವಿರ ವ್ಯಯಿಸಿ ಫೋನ್ ಕೊಡಿಸುವುದು ಕಷ್ಟವಾಗುತ್ತಿದೆ. ಸಾಲ ಕೊಡಲೂ ಯಾರೂ ಒಪ್ಪುತ್ತಿಲ್ಲ ಎಂದು ಗ್ರಾಮೀಣ ಭಾಗದ ಪಾಲಕರೋರ್ವರು ಸಮಸ್ಯೆ ಹೇಳಿಕೊಂಡರು.

ಶಿವಮೊಗ್ಗದಲ್ಲಿ ಚುರುಕುಗೊಂಡ ಕೃಷಿ ಚಟುವಟಿಕೆ; ಭತ್ತ ನಾಟಿ ಮಾಡುವ ಕಾರ್ಯದಲ್ಲಿ ನಿರತರಾಗಿರುವ ರೈತರು

ದುಬಾರಿ ಶುಲ್ಕ ಮತ್ತು ಫೋನ್ ಖರೀದಿ ತಂದ ಫಜೀತಿ

ಖಾಸಗಿ ಶಾಲೆಗಳು ಶುಲ್ಕಗಳನ್ನು ಒತ್ತಾಯಪೂರ್ವಕವಾಗಿ ಪಡೆಯದಂತೆ ಸರ್ಕಾರ ಸೂಚಿಸಿದ್ದರೂ ಕೆಲ ಶಾಲೆಗಳು ಆನ್‌ಲೈನ್ ಕ್ಲಾಸ್ ನೆಪವೊಡ್ಡಿ ಶುಲ್ಕ ವಸೂಲಿಸುವ ಪ್ರಯತ್ನ ನಡೆಸುತ್ತಿರುವ ದೂರುಗಳಿವೆ. ಈಗಾಗಲೇ ಅನೇಕ ಪಾಲಕರು ಒಂದೇ ಕಂತಿನಲ್ಲಿ ಪೂರ್ತಿ ಶುಲ್ಕವನ್ನೂ ಭರಿಸಿದ್ದಾರೆ. ಕೆಲವರು ವಿನಾಯಿತಿ ಕೋರಿ ದಿನದೂಡುತ್ತಿದ್ದಾರೆ. ಆದಾಗ್ಯೂ ಈ ಪಾಲಕರ ಮೇಲೆ ಶುಲ್ಕ ಭರಿಸುವ ಒತ್ತಡ ಬರುತ್ತಿದೆ ಎಂಬ ಆರೋಪಗಳಿವೆ. ಶುಲ್ಕದ ಹೊರೆ ಹೆಗಲೇರಿದ್ದು ಒಂದೆಡೆಯಾದರೆ, ಆನ್‌ಲೈನ್ ಕ್ಲಾಸ್‌ಗೋಸ್ಕರ ಹೊಸ ಸ್ಮಾರ್ಟ್ ಫೋನ್ ಖರೀದಿಸುವದು ಪಾಲಕರಿಗೆ ಸವಾಲಿನ ಕೆಲಸವಾಗಿದೆ.

ಮೊಬೈಲ್​ ವ್ಯಾಪಾರಿಗಳಿಗೆ ಸಿಕ್ಕಾಪಟ್ಟೆ ವ್ಯಾಪಾರಆನ್‌ಲೈನ್ ಕ್ಲಾಸಿನ ಭರಾಟೆ ಮೊಬೈಲ್ ವ್ಯಾಪಾರಿಗಳಿಗೆ ಶುಕ್ರದೆಸೆ ತಂದುಕೊಡುತ್ತಿದೆ. ಇಲ್ಲಿನ ಬಹುತೇಕ ಮಳಿಗೆಗಳಲ್ಲಿ ಕಡಿಮೆ ದರದ ಮೊಬೈಲ್ ಸಿಗುತ್ತಿಲ್ಲ. ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ಕಡಿಮೆ ದರದಲ್ಲಿ ಗುಣಮಟ್ಟದ ಕ್ಯಾಮೆರಾ ಹೊಂದಿರುವ ಸ್ಮಾರ್ಟ್ಫೋನ್‌ಗಳಿಗೆ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಇವುಗಳನ್ನೇ ಗ್ರಾಹಕರು ಹೆಚ್ಚು ಕೊಂಡುಕೊಳ್ಳುತ್ತಿದ್ದಾರೆ. ಲಾಕ್‌ಡೌನ್ ಪರಿಣಾಮ ಹೊಸ ಮೊಬೈಲ್ ದಾಸ್ತಾನುಗಳು ಬರುವುದು ಕಡಿಮೆಯಾಗಿದೆ. ಇದ್ದ ದಾಸ್ತಾನುಗಳೆಲ್ಲ ಖಾಲಿಯಾಗುತ್ತಿದೆ ಎಂದು ಅಂಗಡಿ ಮಾಲೀಕರೋರ್ವರು ಪ್ರತಿಕ್ರಿಯಿಸಿದರು.

ಏನಂತಾರೆ ಪಾಲಕರು?

ಮಕ್ಕಳ ಆನ್‌ಲೈನ್ ಶಿಕ್ಷಣಕ್ಕೆ ಒಂದೇ ಸಮನೆ ಹೊಸ ಸ್ಮಾರ್ಟ್​​​ ಫೋನ್ ಕೊಡಿಸುವಂತೆ ಒತ್ತಡ ಹೇರುತ್ತಿದ್ದಾರೆ. ಲಾಕ್‌ಡೌನ್ ಪರಿಣಾಮ ಕೆಲಸವಿಲ್ಲದೆ, ಆದಾಯವಿಲ್ಲದೆ ಕಂಗೆಟ್ಟಿದ್ದೇವೆ. ಇಂತಹ ಹೊತ್ತಲ್ಲಿ ಹತ್ತಾರು ಸಾವಿರ ವ್ಯಯಿಸಿ ಮೊಬೈಲ್ ಖರೀದಿಸುವುದು ಕಷ್ಟಸಾಧ್ಯವಾಗಿದೆ. ಆದರೂ ಮನೆಯಲ್ಲಿ ಇದ್ದ ವಸ್ತುಗಳನ್ನಾದರೂ ಮಾರಿ ಅಥವಾ ಸಾಲಸೋಲ ಮಾಡಿ ಮೊಬೈಲ್ ಖರೀದಿಸುವ ಅನಿವಾರ್ಯತೆ ಬಂದಿದೆ.
Published by: Latha CG
First published: July 26, 2020, 6:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading