• Home
  • »
  • News
  • »
  • state
  • »
  • Hubballi: ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬಕ್ಕೆ ಸಿಎಂ ಬೊಮ್ಮಾಯಿ ಸಿಡಿಮಿಡಿ; ವೇದಿಕೆ ಮೇಲೆಯೇ ಅಧಿಕಾರಿಗೆ ತರಾಟೆ

Hubballi: ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬಕ್ಕೆ ಸಿಎಂ ಬೊಮ್ಮಾಯಿ ಸಿಡಿಮಿಡಿ; ವೇದಿಕೆ ಮೇಲೆಯೇ ಅಧಿಕಾರಿಗೆ ತರಾಟೆ

ಅಧಿಕಾರಿಗೆ ಸಿಎಂ ತರಾಟೆ

ಅಧಿಕಾರಿಗೆ ಸಿಎಂ ತರಾಟೆ

ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬಕ್ಕೆ ಸಿಡಿಮಿಡಿಗೊಂಡ ಬೊಮ್ಮಾಯಿ, ವೇದಿಕೆಯ ಮೇಲೆಯೇ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸದೇ ಇದ್ದಲ್ಲಿ ನಿನ್ನನ್ನೇ ಹೊಣೆ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.

  • Share this:

ಹುಬ್ಬಳ್ಳಿ  (ಜೂ 26): ಸ್ಮಾರ್ಟ್ ಸಿಟಿ ಯೋಜನೆ (Smart City Planning) ಕಾಲಮಿತಿ ಒಳಗೆ ಪೂರ್ಣಗೊಳ್ಳದೇ ಇರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸಿಡಿಮಿಡಿಗೊಂಡಿದ್ದಾರೆ. ವೇದಿಕೆಯ ಮೇಲೆಯೇ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ (Hubballi) ಘಂಟಿಕೇರಿ ಕಾಲೋನಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳ ವಿವಿಧ ಕಾಮಗಾರಿಗಳ (Construction) ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ಭಾಗವಹಿಸಿ ಸಿಎಂ ಅಧಿಕಾರಿಗಳ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದರು.


ಸ್ಮಾರ್ಟ್ ಸಿಟಿ ಯೋಜನೆಯ ವಿವಿಧ ಕಾಮಗಾರಿ ಉದ್ಘಾಟನೆ 


ಹುಬ್ಬಳ್ಳಿ - ಧಾರವಾಡ ಪೂರ್ವ ಕ್ಷೇತ್ರದ ವ್ಯಾಪ್ತಿಯ ಘಂಟಿಕೇರಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ವಿವಿಧ ಕಾಮಗಾರಿಗಳನ್ನು ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಘಂಟಿಕೇರಿಯಲ್ಲಿರೋ ಶಾಸಕರ ಮಾದರಿ ಶಾಲೆ ಮೇಲ್ದರ್ಜೆ ಕಾಮಗಾರಿ, ವಿದ್ಯುತ್ ಚಿತಾಗಾರ ಉದ್ಘಾಟನೆ ಸೇರಿದಂತೆ ಸುಮಾರು 34 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದರು.


ಮುಗಿಯದ ಕಾಮಗಾರಿ- ಸಿಎಂ ಸಿಟ್ಟು


ನಂತರ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆ ಎರಡು ವರ್ಷ ಮುಂಚಿತವಾಗಿಯೇ ಮುಗಿಯಬೇಕಿತ್ತು. ಹುಬ್ಬಳ್ಳಿ - ಧಾರವಾಡ ಸೇರಿ ರಾಜ್ಯದಲ್ಲಿ 7 ನಗರಗಳು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆ ಮಾಡಲಾಗಿತ್ತು. ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ 555 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈ ಪೈಕಿ 150 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಹುಬ್ಬಳ್ಳಿ - ಧಾರವಾಡ ಪೂರ್ವ ಕ್ಷೇತ್ರದಲ್ಲಿ ಖರ್ಚು ಮಾಡಲಾಗಿದೆ. ಆದರೆ ಅವಳಿ ನಗರದಲ್ಲಿ ಇನ್ನೂ ಹಲವಾರು ಕಾಮಗಾರಿಗಳು ಬಾಕಿ ಉಳಿದಿವೆ. ಸ್ಮಾರ್ಟ್ ಸಿಟಿ ಯೋಜನೆ ಈಗಾಗಲೇ ಮುಗಿಯಬೇಕಿತ್ತು.


ಇದನ್ನೂ ಓದಿ: IKEA Bengaluru: ಐಕಿಯ ಫರ್ನಿಚರ್ ಸ್ಟೋರ್​ಗೆ ಹರಿದು ಬರ್ತಿದೆ ಜನಸಾಗರ; ನಾಗಸಂದ್ರ ಬಳಿ ಫುಲ್ ಟ್ರಾಫಿಕ್, ಸ್ಥಳೀಯರಿಗೆ ಕಿರಿಕಿರಿ


ಮಂದಗತಿಯಲ್ಲಿ ಸಾಗಿದ ಕಾಮಗಾರಿ


2014-15 ನೇ ಸಾಲಿನಲ್ಲಿ ಯೋಜನೆ ಆರಂಭಗೊಂಡಿತ್ತು. 2020 ಕ್ಕೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. 2022 ರಲ್ಲಿ ಅರ್ಧ ವರ್ಷ ಮುಗಿದರೂ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿವೆ. ಮೊದಲ ಎರಡು ವರ್ಷ ಅಧಿಕಾರಿಗಳು ಯೋಜನೆ ಜಾರಿಗೆ ಹಿಂದೇಟು ಹಾಕಿದ್ದರಿಂದ ಈ ಸಮಸ್ಯೆಯಾಗಿದೆ. ಆದರೆ ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಇದೇ ರೀತಿಯ ವಿಳಂಬ ಸಹಿಸಲಾಗೋದಿಲ್ಲ. ಮುಂದಿನ ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಮೂಲಭೂತ ಸೌಕರ್ಯಗಳನ್ನು ತ್ವರಿತಗತಿಯಲ್ಲಿ ಮುಗಿಸಬೇಕು ಎಂದರು.


ವೇದಿಕೆಯ ಮೇಲೆಯೇ ಎಂಡಿಗೆ ತರಾಟೆ


ಸ್ಮಾರ್ಟ್ ಸಿಟಿ ಎಂ.ಡಿ.ಯನ್ನು ವೇದಿಕೆಯ ಮೇಲೆಯೇ ಕರೆದ ಸಿಎಂ, ಯೋಜನೆ ಜಾರಿಯಲ್ಲಿ ನಿರ್ಲಕ್ಷ್ಯ ತೋರುವಂತಿಲ್ಲ ಎಂದರು. ಕಾಮಗಾರಿ ವಿಳಂಬಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಸಿಎಂ, ಗುಣಮಟ್ಟವನ್ನು ಕಾಪಾಡಿಕೊಂಡು ಕಾಲಮಿತಿಯಲ್ಲಿ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ನಿನ್ನನ್ನೇ ಹೊಣೆ ಮಾಡೋದಾಗಿ ಎಚ್ಚರಿಸಿದರು.


ಹುಬ್ಬಳ್ಳಿ - ಬೆಳಗಾವಿ ರೈಲ್ವೇ ಯೋಜನೆ


ಹುಬ್ಬಳ್ಳಿ - ಬೆಳಗಾವಿ ನಡುವೆ ರೈಲು ಮಾರ್ಗದ ಅಂತರ ಕಡಿಮೆ ಮಾಡಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಲೋಂಡಾ ಮಾರ್ಗದಲ್ಲಿ ಹೋಗುವುದರಿಂದ ಸಾಕಷ್ಟು ಸಮಯ ಹಿಡಿಯುತ್ತಿದೆ. ಇದನ್ನು ತಪ್ಪಿಸೋಕೆ ಧಾರವಾಡ ಮಾರ್ಗದಲ್ಲಿ ಬೆಳಗಾವಿಗೆ ಹೋಗೋಕೆ ಪ್ರತ್ಯೇಕ ಯೋಜನೆ ರೂಪಿಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗಿದೆ.


ಇದನ್ನೂ ಓದಿ: Mysore Palace: ಮೈಸೂರು ಪ್ಯಾಲೇಸ್‌ ಮೇಲೆ ಹೆಚ್ಚಾಯ್ತು ಪ್ರವಾಸಿಗರ ಆಸಕ್ತಿ! ಇದು ಮೋದಿ ಭೇಟಿ ಇಂಪ್ಯಾಕ್ಟ್


‘4 ಗಂಟೆಯಲ್ಲಿ ಬೆಂಗಳೂರು - ಹುಬ್ಬಳ್ಳಿ  ಸಂಚಾರ’


ಹುಬ್ಬಳ್ಳಿ - ಅಂಕೋಲ ರೈಲು ಯೋಜನೆಗೂ ಆದಷ್ಟು ಬೇಕ ಕಾಯಕಲ್ಪ ನೀಡಲಾಗುವುದು. ಬೆಂಗಳೂರು - ಹುಬ್ಬಳ್ಳಿ ನಡುವೆ ಕೇವಲ ನಾಲ್ಕು ತಾಸುಗಳಲ್ಲಿ ಸಂಚರಿಸಲು ಸಹ ವ್ಯವಸ್ಥೆ ಮಾಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಶಾಸಕ ಪ್ರಸಾದ್ ಅಬ್ಬಯ್ಯ ಮತ್ತಿತರರ ಉಪಸ್ಥಿತರಿದ್ದರು.

Published by:Pavana HS
First published: