ಹಾಸನದಲ್ಲಿ ಜೀತಪದ್ದತಿ ಇನ್ನೂ ಜೀವಂತ; ಮಕ್ಕಳು ಸೇರಿ 16 ಮಂದಿಯ ರಕ್ಷಣೆ

ಬಡ ಕಾರ್ಮಿಕರನ್ನು ಭದ್ರಾವತಿ ಮತ್ತು ತಮಿಳುನಾಡು  ಮೂಲದವರು ಎನ್ನಲಾಗಿದೆ. ತಾಲೂಕು ಆಡಳಿತ ಮಾನವ ಕಳ್ಳಸಾಗಣೆ ಜಾಲ ಪತ್ತೆ ಮಾಡಿದ್ದು, ಅಮಾಯಕ ಜೀವಗಳನ್ನು ರಕ್ಷಿಸಿದ್ದಾರೆ. ಸದ್ಯ ಸಂತ್ರಸ್ತರಿಗೆ ತಾಲೂಕು  ಸರ್ಕಾರಿ  ಹಾಸ್ಟೆಲ್​​​ನಲ್ಲಿ ವಾಸ್ತವ್ಯ ಇರಲು ವ್ಯವಸ್ಥೆ ಮಾಡಲಾಗಿದೆ.

news18-kannada
Updated:December 11, 2019, 3:02 PM IST
ಹಾಸನದಲ್ಲಿ ಜೀತಪದ್ದತಿ ಇನ್ನೂ ಜೀವಂತ; ಮಕ್ಕಳು ಸೇರಿ 16 ಮಂದಿಯ ರಕ್ಷಣೆ
ರಕ್ಷಿಸಿದ ಕಾರ್ಮಿಕರು
  • Share this:
ಹಾಸನ(ಡಿ.11): ದೇಶ ಆಧುನಿಕತೆಯತ್ತ ಸಾಗುತ್ತಿದ್ದರೂ ಸಹ ಕೆಲವೆಡೆ ಜೀತಪದ್ದತಿ ಇನ್ನೂ ಜೀವಂತವಾಗಿದೆ. ಈ ಕೆಟ್ಟ, ಅನಿಷ್ಟ ಪದ್ದತಿಯನ್ನು ತೊಡೆದು ಹಾಕಲು ಎಷ್ಟೇ ಪ್ರಯತ್ನಿಸಿದರೂ ಕೆಲವು ಕಡೆ ಇನ್ನೂ ಜೀವಂತವಾಗಿಯೇ ಇರುತ್ತದೆ. ಮಾಜಿ ಪ್ರಧಾನಿ ದೇವೇಗೌಡರ ತವರೂರು ಹಾಸನ ಜಿಲ್ಲೆಯಲ್ಲಿ ಜೀತಪದ್ದತಿ ಜೀವಂತವಾಗಿದೆ.  ಪೊಲೀಸರು ನಾಲ್ವರು ಮಕ್ಕಳು, ನಾಲ್ವರು ಮಹಿಳೆಯರು ಹಾಗೂ 8 ಮಂದಿ ಪುರುಷರನ್ನು ರಕ್ಷಿಸಿದ್ದಾರೆ. 

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಬಾಲಕಾರ್ಮಿಕರು ಸೇರಿ ಒಟ್ಟು 16 ಮಂದಿಯನ್ನು ರಕ್ಷಿಸಲಾಗಿದೆ. ಮಾನವ ಕಳ್ಳ ಸಾಗಣೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 16 ಜನರನ್ನು ಜೀತ ಪದ್ದತಿಯಿಂದ ಮುಕ್ತಗೊಳಿಸಲಾಗಿದೆ.

Note Ban: 2,000 ಮುಖಬೆಲೆಯ ನೋಟ್ ನಿಜಕ್ಕೂ​ ಬ್ಯಾನ್​ ಆಗಲಿದೆಯಾ?; ಇಲ್ಲಿದೆ ಉತ್ತರಕಾರ್ಮಿಕರು ಹೊಳೆನರಸೀಪುರ ತಾಲೂಕಿನ ಮುಂಡನಹಳ್ಳಿಯ ಸೋಮಶೇಖರ್ ಎಂಬುವರ ಜಮೀನಿನಲ್ಲಿ ಜೀತಪದ್ದತಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ಧಾರೆ. ಅವರ ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುವಂತೆ ಮಾಲೀಕ ಸೋಮಶೇಖರ್​ ಹೇಳಿದ್ದ. ಮಾಲೀಕ ಕಾರ್ಮಿಕರಿಗೆ ಅಲ್ಪ ಹಣ ನೀಡಿ ದಿನಕ್ಕೆ 15 ಗಂಟೆ ದುಡಿಸಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ. ಸದ್ಯ ಜಮೀನು ಮಾಲೀಕ ಸೋಮಶೇಖರ್ ಮತ್ತು ಬದ್ಯಾನಾಯಕ್ ಎಂಬ ಇಬ್ಬರನ್ನು ಬಂಧಿಸಲಾಗಿದೆ.

ಬಡ ಕಾರ್ಮಿಕರನ್ನು ಭದ್ರಾವತಿ ಮತ್ತು ತಮಿಳುನಾಡು  ಮೂಲದವರು ಎನ್ನಲಾಗಿದೆ. ತಾಲೂಕು ಆಡಳಿತ ಮಾನವ ಕಳ್ಳಸಾಗಣೆ ಜಾಲ ಪತ್ತೆ ಮಾಡಿದ್ದು, ಅಮಾಯಕ ಜೀವಗಳನ್ನು ರಕ್ಷಿಸಿದ್ದಾರೆ. ಸದ್ಯ ಸಂತ್ರಸ್ತರಿಗೆ ತಾಲೂಕು  ಸರ್ಕಾರಿ  ಹಾಸ್ಟೆಲ್​​​ನಲ್ಲಿ ವಾಸ್ತವ್ಯ ಇರಲು ವ್ಯವಸ್ಥೆ ಮಾಡಲಾಗಿದೆ.

ರಾಜ್ಯಸಭೆಯಲ್ಲೂ ಅಂಗೀಕಾರವಾಗಲಿದೆಯೇ ಪೌರತ್ವ ತಿದ್ದುಪಡಿ ಮಸೂದೆ?; ಶಿವಸೇನೆ, ಜೆಡಿಯು ಉಲ್ಟಾ ಹೊಡೆಯುವ ಸಾಧ್ಯತೆ?
First published: December 11, 2019, 2:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading