Gunaranjan Shetty: ನಟಿ ಅನುಷ್ಕಾ ಶೆಟ್ಟಿ ಸಹೋದರನ ಹತ್ಯೆಗೆ ಸ್ಕೆಚ್! ಸಂಚು ರೂಪಿಸಿದ್ದು ಯಾರು ಗೊತ್ತಾ?

ಮಾಜಿ ಡಾನ್ ದಿವಂಗತ ಮುತ್ತಪ್ಪ ರೈ ಆಪ್ತವಲಯದಲ್ಲಿದ್ದ ಇಬ್ಬರು ಘಟಾನುಘಟಿಗಳ ನಡುವಿನ ಸೇಡು ಮತ್ತೆ ಸ್ಫೋಟಗೊಂಡಿದೆ. ರೈ ಗೆ ಬಲಗೈ ಎಡಗೈ ಬಂಟರಂತಿದ್ದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಮತ್ತು ಮನ್ಮಿತ್ ರೈ ಮಧ್ಯೆ ಜಗಳ ಶುರುವಾಗಿದ್ದು, ಕೊಲೆಗೆ ಸಂಚು ರೂಪಿಸೋ ಮಟ್ಟಕ್ಕೆ ತಿರುಗಿದೆ ಎನ್ನಲಾಗ್ತಿದೆ.

ಗುಣರಂಜನ್​ ಹತ್ಯೆಗೆ ಸಂಚು

ಗುಣರಂಜನ್​ ಹತ್ಯೆಗೆ ಸಂಚು

  • Share this:
 ಬೆಂಗಳೂರು (ಜೂ 6): ಆತ ಖ್ಯಾತ ನಟಿ ಅನುಷ್ಕಾ ಶೆಟ್ಟಿ (Anushka Shetty), ಸಹೋದರ (Brother). ಮುತ್ತಪ್ಪ ರೈ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದವನು. ಜಯ ಕರ್ನಾಟಕ ಜನಪರ ವೇದಿಕೆಯ ಗುಣರಂಜನ್ ಶೆಟ್ಟಿ (Gunaranjan Shetty ) ಕೊಲೆಗೆ ಸಂಚು ರೂಪಿಸಿದ್ದಾರೆ ಎಂಬ ವದಂತಿ ಹರಿದಾಡುತ್ತಿದ್ದು, ಗುಣರಂಜನ್ ಶೆಟ್ಟಿ ಈ ಕುರಿತು ಪತ್ರಿಕಾ ಪ್ರಕಟಣೆ (Press Note) ಹೊರಡಿಸಿದ್ದಾರೆ. ಹಿರಿಯ ಪೊಲೀಸರ ಮಾಹಿತಿ ಪ್ರಕಾರ, ಜೈಲಿನಲ್ಲಿ ಗುಣರಂಜನ್ ಶೆಟ್ಟಿ ಹತ್ಯೆಗೆ ಸಂಚು ರೂಪಿಸಲಾಗಿದೆ. ಮುತ್ತಪ್ಪ ರೈ ಸಂಬಂಧಿ ಮನ್ಮಿತ್ ರೈನಿಂದ ಕೊಲೆಗೆ ಸ್ಕೆಚ್ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಮನ್ವಿತ್ ರೈ ವಿದೇಶದಲ್ಲಿರುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಕೊಲೆಗೆ ಸ್ಕೆಚ್ ರೂಪಿಸಿದ್ದವರ್ಯಾರು.? ಯಾಕಾಗಿ ಮುಗಿಸಲು ಸಂಚು ರೂಪಿಸಲಾಗಿತ್ತು, ಅನ್ನೋ ಮಾಹಿತಿ ಇಲ್ಲಿದೆ

ಮತ್ತೆ ಘಟಾನುಘಟಿಗಳ ನಡುವಿನ ಸೇಡು ಸ್ಫೋಟ

ಮಾಜಿ ಡಾನ್ ದಿವಂಗತ ಮುತ್ತಪ್ಪ ರೈ ಆಪ್ತವಲಯದಲ್ಲಿದ್ದ ಇಬ್ಬರು ಘಟಾನುಘಟಿಗಳ ನಡುವಿನ ಸೇಡು ಮತ್ತೆ ಸ್ಫೋಟಗೊಂಡಿದೆ. ರೈ ಗೆ ಬಲಗೈ ಎಡಗೈ ಬಂಟರಂತಿದ್ದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಮತ್ತು ಮನ್ಮಿತ್ ರೈ ಮಧ್ಯೆ ಜಗಳ ಶುರುವಾಗಿದೆ. ಅದು ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್ ರೂಪಿಸುವ ಹಂತಕ್ಕೆ ಹೋಗಿದೆ ಎನ್ನಲಾಗ್ತಿದ್ದು, ಜಯ ಕರ್ನಾಟಕ ಸಂಘಟನೆಯಿಂದ ಗೃಹ ಸಚಿವ ಆರಗ ಜ್ಞಾನೇಂದ್ರಗೆ ದೂರು ಸಲ್ಲಿಸಲಾಗಿದ್ದು, ಕೊಲೆಗೆ ಸಂಚು ರೂಪಿಸಿರೋ ವ್ಯಕ್ತಿಯನ್ನು ಬಂಧನ ಮಾಡುವಂತೆ ಮನವಿ ಮಾಡಿದ್ದಾರೆ.

ಮನ್ಮಿತ್ ರೈ ನಿಂದ ಗುಣರಂಜನ್​ ಶೆಟ್ಟಿ ಹತ್ಯೆಗೆ ಸ್ಕೆಚ್?

ಗುಣರಂಜನ್ ಶೆಟ್ಟಿ ಮತ್ತು ಮನ್ಮಿತ್ ರೈ ಆ ಕಾಲದ ಸ್ನೇಹಿತರು. ಮುತ್ತಪ್ಪ ರೈ ಜೊತೆಗಿದ್ದವರು. ಮುತ್ತಪ್ಪ ರೈ ಬಳಿ ತುಂಬಾ ನಂಬಿಕೆ ಗಿಟ್ಟಿಸಿಕೊಂಡಿದ್ದವರು. ನಂತರದ ದಿನದಲ್ಲೆ ಏನಾಯ್ತೋ ಏನೋ ಗೊತ್ತಿಲ್ಲ, ಮನ್ಮಿತ್ ರೈ ಮುತ್ತಪ್ಪ‌ ರೈ ಗ್ಯಾಂಗ್ ನಿಂದ ಹೊರ ನಡೆದಿದ್ರು‌.ಈ ವೇಳೆ ವೈಯಕ್ತಿಕ ಕಾರಣದಿಂದ ಅಂತ ದೂರವಾಗಿದ್ರು. ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಉದ್ಯಮದಲ್ಲಿ ತೊಡಗಿಸಿಕೊಂಡಿದ್ರು.

ಇದನ್ನೂ ಓದಿ:  Mysuru Yoga Politics: ಮೈಲೇಜ್ ಪಾಲಿಟಿಕ್ಸ್;  ಪ್ರತಾಪ್ ಸಿಂಹ, ರಾಮದಾಸ್ ನಡುವೆ ಪೈಪೋಟಿ

ಗೃಹ ಸಚಿವ ಆರಗ ಜ್ಙಾನೇಂದ್ರಗೆ ದೂರು

ಇತ್ತ ಗುಣರಂಜನ್ ಶೆಟ್ಟಿ ಮಾತ್ರ ಜಯಕರ್ನಾಟಕ ಸಂಘಟನೆ ಕಟ್ಟೊ ಕೆಲಸದಲ್ಲಿ ತೊಡಗಿದ್ರು. ಇಲ್ಲಿವರೆಗೂ ನಾರ್ಮಲ್ ಆಗಿಯೇ ಇತ್ತು. ಆದ್ರೆ ಈ ಮಧ್ಯೆ ಇಬ್ಬರ ವಿಚಾರ ಮತ್ತೆ ಸದ್ದು ಮಾಡ್ತಿದೆ.  ಮನ್ಮಿತ್ ರೈ ಮತ್ತು ಸಹಚರರು ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್ ರೂಪಿಸಿದ್ದಾರೆ ಎನ್ನಲಾಗ್ತಿದೆ. ಅದೇ ಈ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಜಯಕರ್ನಾಟಕ ಸಂಘಟನೆ ಸದಸ್ಯರು ಗೃಹ ಸಚಿವ ಆರಗ ಜ್ಙಾನೇಂದ್ರ ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.

ಸಂಚಿಗೂ ನನಗೂ ಸಂಬಂಧವಿಲ್ಲ- ಮನ್ಮಿತ್ ರೈ

ಸದ್ಯ ತನ್ನ ಮೇಲೆ ಬಂದಿರುವ ಆರೋಪ ಅಲ್ಲಗೆಳೆದಿರುವ ಮನ್ಮಿತ್ ರೈ ಹತ್ಯೆ ಸಂಚಿನ ವದಂತಿಗೂ ನನಗೂ ಯಾವುದೇ ಸಂಬಂಧ ಇಲ್ಲ. ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್ ಎಂಬ ವದಂತಿಗಳು ಬರ್ತಾ ಇವೆ.ಇದು ಎಷ್ಟು ಸತ್ಯ ಎಂಬುದನ್ನ ಪೊಲೀಸರು ತನಿಖೆ ಮಾಡ್ತಾರೆ.ಆದರೆ ಈ ವಿಚಾರದಲ್ಲಿ ನನ್ನ ಹೆಸರು ಯಾಕೆ ಬರ್ತಾ ಇದೆ ಗೊತ್ತಿಲ್ಲ.ನಾನು ವ್ಯವಹಾರದ ಕಾರಣ ವಿದೇಶಕ್ಕೆ ಬಂದಿದ್ದೇ‌ನೆ.ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಆಡಿಯೊ ರಿಲೀಸ್ ಮಾಡಿದ್ದಾರೆ.

ಇದನ್ನೂ ಓದಿ:  Karnataka Politics: ಕರ್ನಾಟಕ ಕಾಂಗ್ರೆಸ್‌ನ ಪಾದದಡಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಇದೆ; ಹೆಚ್.ಡಿ.ರೇವಣ್ಣ ವಾಗ್ದಾಳಿ

ವದಂತಿ ಹಿನ್ನೆಲೆಯಲ್ಲಿ ಬಂಟ್ವಾಳದ ಮುತ್ತಪ್ಪ ರೈ ಆಪ್ತ ರಾಕೇಶ್ ಮಲ್ಲಿಯನ್ನು ಮಂಗಳೂರು ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ. ರಾಕೇಶ್ ಮಲ್ಲಿ ಹಾಗೂ ಮನ್ವಿತ್ ಆಪ್ತರಾಗಿದ್ದು, ಇದೇ ವಿಚಾರಕ್ಕೆ ಪೊಲೀಸರು ‌ಕರೆಸಿ ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
Published by:Pavana HS
First published: