news18-kannada Updated:August 10, 2020, 6:01 PM IST
625 ಅಂಕ ಪಡೆದ ಚಿಕ್ಕಮಗಳೂರಿನ ಐಪಿ ತನ್ಮಯಿ ಮತ್ತು ಶಿರಸಿಯ ಸನ್ನಿಧಿ.
ಬೆಂಗಳೂರು; ಕೊರೋನಾ ಆತಂಕದ ನಡುವೆ ನಡೆಸಲಾಗಿದ್ದ 2019-20ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಫಲಿತಾಂಶ ಬಿಡುಗಡೆ ಮಾಡಿದ್ದು, ಈ ಬಾರಿ ಒಟ್ಟು ಶೇ.71.80 ಫಲಿತಾಂಶ ಬಂದಿದೆ. ಈ ಬಾರಿ ಆರು ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆಯುವ ಮೂಲಕ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಭ ಪಿಯು ಕಾಲೇಜ್ ಸರ್ಕಾರಿ ಶಾಲೆಯ ಸನ್ನಿಧಿ ಮಹಾಬಲೇಶ್ವರ ಹೆಗ್ಡೆ 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಬೆಂಗಳೂರಿನ ನಾಗಸಂಧ್ರದ ಸೆಂಟ್ ಮೇರಿಸ್ ಹೈಸ್ಕೂಲ್ನ ಚಿರಾಯು ಕೆ.ಎಸ್. ಅವರು 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಪೂರ್ಣಪ್ರಜ್ಞಾ ಎಜುಕೇಷನ್ ಸೆಂಟರ್ನ ನಿಖಿಲೇಶ್ ಎನ್ ಮರಲಿ ಅವರು 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಹಾಗೆಯೇ ಮಂಡ್ಯ ಜಿಲ್ಲೆಯ ಮಾರದೇವನಹಳ್ಳಿಯ ಶ್ರೀ ಸತ್ಯಸಾಯಿ ಸರಸ್ವತಿ ಇಂಗ್ಲಿಷ್ ಮೀಡಿಯಂ ಬಾಯ್ಸ್ ಹೈಸ್ಕೂಲ್ನ ಧೀರಜ್ ರೆಡ್ಡಿ ಎಂಪಿ ಅವರು 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯಾ ತಾಲೂಕಿನ ಸುಬ್ರಹ್ಮಣ್ಯ ಪೋಸ್ಟ್ನ ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ನ ಅನುಷಾ ಎ.ಎಲ್ ಅವರು 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಹಾಗೂ ಚಿಕ್ಕಮಗಳೂರಿನ ಸೆಂಟ್ ಜೋಸೆಫ್ ಕಾನ್ವೆಂಟ್ ಗರ್ಲ್ಸ್ ಹೈಸ್ಕೂಲ್ನ ತನ್ಮಯಿ ಐಪಿ ಅವರು 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ.
ಇದನ್ನು ಓದಿ: Karnataka KSEEB SSLC Result 2020: ಅತಿಹೆಚ್ಚು ಅಂಕ ಗಳಿಸಿದ, ವಿಷಯವಾರು ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ವಿವರ
ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾದ ಬಳಿಕ ಫಲಿತಾಂಶವನ್ನು ನೀವು kseeb.kar.nic.in ಅಥವಾ
karresults.nic.in. ವೆಬ್ಸೈಟ್ನಲ್ಲಿ ವೀಕ್ಷಿಸಬಹುದು. ಇದಷ್ಟೇ ಅಲ್ಲದೆ,
examresults.net ಮತ್ತು
indiaresults.com ವೆಬ್ಸೈಟ್ನಲ್ಲಿ ಕೂಡ ರಿಸಲ್ಟ್ ನೋಡಬಹುದು.
Published by:
HR Ramesh
First published:
August 10, 2020, 6:01 PM IST