Accident: ಕೆರೆಗೆ ಕಾರು ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವು; ಲಾರಿ ಡಿಕ್ಕಿಯಾಗಿ ದಂಪತಿ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ‌ ದೊಡ್ಡಬಳ್ಳಾಪುರದ ಕತ್ತೀಹೊಸಹಳ್ಳಿ ಬಳಿ ಲಾರಿ ಮತ್ತು ಬೈಕ್‌ನ‌ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ದಂಪತಿಗಳ ಸಾವನ್ನಪ್ಪಿದ್ದಾರೆ. 

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ರಸ್ತೆ ಅವಘಡ (Road Accident) ಸಂಭವಿಸಿ ಆರು ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ (Bengaluru South Taluk) ಕೆರೆಗೆ ಕಾರು ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಅಸುನೀಗಿದ್ದಾರೆ. ದೊಡ್ಡಬಳ್ಳಾಪುರದಲ್ಲಿ (Doddaballapura) ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ದಂಪತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ಚಿಕ್ಕಮಗಳೂರಿನಲ್ಲಿ ಸ್ಕೂಟಿಯಲ್ಲಿ ಹೋಗುವಾಗ ನೀರಿನಲ್ಲಿ ವ್ಯಕ್ತಿಯೊಬ್ಬ ಕೊಚ್ಚಿಹೋದ ಘಟನೆ ನಡೆದಿದೆ.

  ಕೆರೆಗೆ ಪಲ್ಟಿಯಾದ ಕಾರು

  ನಿನ್ನೆ ರಾತ್ರಿ ಐವರು ಯುವಕರು ಪ್ರಯಾಣಿಸುತ್ತಿದ್ದ ಕಾರು ಬೆಂಗಳೂರು ದಕ್ಷಿಣ ತಾಲೂಕಿನ ನೆಲಗುಳಿ ಬಳಿಯ ಕೆರೆಗೆ ಪಲ್ಟಿಯಾಗಿದ್ದು, ಸ್ಥಳದಲ್ಲೇ ಮೂವರು ಯುವಕರು ದುರ್ಮರಣ ಅಪ್ಪಿದ್ದಾರೆ. ಕಳೆದ 1 ವಾರದಿಂದ ಸುರಿಯುತ್ತಿರುವ ಮಳೆಯಿಂದ ಕೆರೆ ಸಂಪೂರ್ಣ ಭರ್ತಿಗೊಂಡಿತ್ತು. ರಸ್ತೆ ಪಕ್ಕದಲ್ಲೇ ಇದ್ದ ಕೆರೆಗೆ ಕಾರು ಪಲ್ಟಿ ಹೊಡೆದಿದೆ. ಕೆರೆಗೆ ತಡೆಗೋಡೆ ಇಲ್ಲದ ಪರಿಣಾಮ ಕಾರು ಪಲ್ಟಿಯಾಗಿದೆ. ಐವರು ಯುವಕರ ಪೈಕಿ 3 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುಂಡಲೀಕ್, ಕಲ್ಲಪ್ಪ,‌ ಕಿರಣ್ ಮೃತ ಯುವಕರು ಎಂದು ಗುರುತಿಸಲಾಗಿದೆ. Ugcl ಎಂಬ ಖಾಸಗಿ ಎಂಬ ಖಾಸಗಿ ಕಂಪನಿಯಲ್ಲಿ ಈ ಯುವಕರು ಕೆಲಸ ಮಾಡುತ್ತಿದ್ದರು. ಸ್ಥಳಕ್ಕೆ ಅಗ್ನಿಶಾಮಕ ಅಧಿಕಾರಿಗಳು ಭೇಟಿ ನೀಡಿ ಕಾರ್ಯಾಚರಣೆ ನಡೆಸಿ, ಮೃತದೇಹಗಳನ್ನು ನೀರಿನಿಂದ ಹೊರಗೆ ತೆಗೆದಿದ್ದಾರೆ. ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  ದಂಪತಿಗಳ ಸಾವು

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ‌ ದೊಡ್ಡಬಳ್ಳಾಪುರದ ಕತ್ತೀಹೊಸಹಳ್ಳಿ ಬಳಿ ಲಾರಿ ಮತ್ತು ಬೈಕ್‌ನ‌ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ದಂಪತಿಗಳ ಸಾವನ್ನಪ್ಪಿದ್ದಾರೆ. ಶ್ಯಾಮನಾಯಕ್(55) ಮತ್ತು ಶಾರದಮ್ಮ(45) ಮೃತ ದುರ್ದೈವಿಗಳು. ಮೃತರು ದೊಡ್ಡಬೆಳವಂಗಲದ ಶಾಂತಿ ನಗರ ನಿವಾಸಿಗಳಾಗಿದ್ದಾರೆ. ದಂಪತಿ ಬೈಕಿನಲ್ಲಿ ದಾಬಸ್ ಪೇಟೆ ಕಡೆ ಪ್ರಯಾಣ ಬೆಳೆಸುವಾಗ ಘಟನೆ ನಡೆದಿದೆ. ದೊಡ್ಡಬೆಳವಂಗಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

  ಹಳ್ಳದಲ್ಲಿ ಕೊಚ್ಚಿ ಹೋದ ವ್ಯಕ್ತಿ

  ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರ ಗ್ರಾಮದ ಬಳಿ ವ್ಯಕ್ತಿಯೊರ್ವ ಸ್ಕೂಟಿಯಲ್ಲಿ ಹಳ್ಳಿಗೆ ಹೋಗುವಾಗ ಹಳ್ಳದಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ಪೊನ್ನಸ್ವಾಮಿ (45) ಕೊಚ್ಚಿ ಹೋಗಿ ಸಾವನ್ನಪ್ಪಿದ ವ್ಯಕ್ತಿ. ಹುಲಿತಿಮ್ಮಾಪುರದ ಹಳ್ಳದ ಕಿರು ಸೇತುವೆ ಮೇಲೆ ಹೋಗುತ್ತಿದ್ದಾಗ ಘಟನೆ ನಡೆದಿದೆ. ಕಿರುಸೇತುವೆಯ ಮೇಲೆ ಭಾರೀ ಪ್ರಮಾಣದ ನೀರು ಹರಿಯುತ್ತಿದೆ. ಲಿಂಗದಹಳ್ಳಿಯಿಂದ ಸಿದ್ದರಹಳ್ಳಿಗೆ ಹೋಗುತ್ತಿದ್ದ ಪೊನ್ನಸ್ವಾಮಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಕೊಚ್ಚಿ ಹೋದ ಸ್ಥಳದಿಂದ ನೂರು ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿದರು. ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಅಪಘಾತದ ಭಯಾನಕ ಸೀನ್ ಸಿಸಿಟಿವಿಯಲ್ಲಿ ಸೆರೆ

  ಯಲಗೂಡ ಶ್ರೀಗಳ ಕಾರು ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಲಬುರಗಿಯ ಕೂಡಿ ಕ್ರಾಸ್ ಬಳಿ ನಡೆದಿದ್ದ ಅಪಘಾತದಲ್ಲಿ ಇಬ್ಬರು ಪಾದಚಾರಿಗಳು ಬಲಿಯಾಗಿದ್ದರು. ಅಪಘಾತದಿಂದ ದಂಪತಿಗಳು 30 ಅಡಿ ದೂರದವರೆಗೂ ಕಾರಿನಡಿ ಸಿಲುಕಿದ್ದರು. ಗುರುಲಿಂಗ ಶ್ರೀಗಳಿಗೆ ಸೇರಿರೋ ಕಾರು ಇದಾಗಿದೆ.

  ಇದನ್ನು ಓದಿ: Rain Effect: ಮಳೆಯಿಂದ 7.31 ಲಕ್ಷ ಹೆಕ್ಟೇರ್‌ ಪ್ರದೇಶದ ಬೆಳೆ ನಾಶ; ಪ್ರಚಾರ ಬಿಟ್ಟು ರೈತರ ನೆರವಿಗೆ ಧಾವಿಸಲು ಸರ್ಕಾರಕ್ಕೆ HDK ಆಗ್ರಹ

  ಕರೆಂಟ್ ಕಂಬಕ್ಕೆ ಕಾರು ಡಿಕ್ಕಿ

  ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ನೀರ್ ಗಂಡಿ ಬಳಿ ಭಾರಿ ಮಳೆಗೆ ದಾರಿ ಕಾಣದೇ ಕರೆಂಟ್ ಕಂಬಕ್ಕೆ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದೆ. ಹಾಸನದಿಂದ ಧರ್ಮಸ್ಥಳದ ಕಡೆ ಹೊರಟಿದ್ದ ನಾಲ್ವರು ಯುವಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
  Published by:HR Ramesh
  First published: