• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Yadagiri: ಬಸ್ ನಿಲ್ದಾಣದಲ್ಲಿ ಆರು ತಿಂಗಳ ಹೆಣ್ಣು ಮಗು ಪತ್ತೆ; ಹೆತ್ತಮ್ಮನಿಗಾಗಿ ಅಳುತ್ತಿರುವ ಕಂದಮ್ಮ

Yadagiri: ಬಸ್ ನಿಲ್ದಾಣದಲ್ಲಿ ಆರು ತಿಂಗಳ ಹೆಣ್ಣು ಮಗು ಪತ್ತೆ; ಹೆತ್ತಮ್ಮನಿಗಾಗಿ ಅಳುತ್ತಿರುವ ಕಂದಮ್ಮ

ಬಸ್ ನಿಲ್ದಾಣದಲ್ಲಿ ಮಗು ಪತ್ತೆ

ಬಸ್ ನಿಲ್ದಾಣದಲ್ಲಿ ಮಗು ಪತ್ತೆ

ಇನ್ನು ಈ ಸಂಬಂಧ ಶಹಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಗುವಿನ ತಾಯಿಯ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

  • Share this:

ಯಾದಗಿರಿ: ಆ ಮಗು (Baby) ಹೆತ್ತಮ್ಮಳ ಮಡಿಲಲ್ಲಿ ಸೇರಲು ಹಂಬಲಿಸುತಿತ್ತು. ಮಗುವಿನ ರೋಧನೆ ಹೃದಯ ಕಲುಕುವಂತಿತ್ತು. ನೌಕರೊಬ್ಬರ ಸಮಯ ಪ್ರಜ್ಞೆಯಿಂದ ಮಗು ರಕ್ಷಣೆ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಹೊಸ ಬಸ್ ನಿಲ್ದಾಣದಲ್ಲಿ (Bus Stand, Shahapura) ಹೆಣ್ಣು ಮಗು (Baby Girl) ಪತ್ತೆಯಾಗಿದೆ. ಸುಮಾರು‌ ಆರು ತಿಂಗಳ ಹೆಣ್ಣು ಮಗುವನ್ನು ಹೆತ್ತ ತಾಯಿಯೇ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿರುವ ಅನುಮಾನಗಳು ವ್ಯಕ್ತವಾಗಿವೆ. ಮಧ್ಯಾಹ್ನ ಬಸ್ ನಿಲ್ದಾಣದಲ್ಲಿ ಕಸ ಗುಡಿಸುವ ವೇಳೆ‌ ಕುರ್ಚಿಯ ಕೆಳಗೆ ಮಗು ಅಳುವ ಶಬ್ಧ ಕೇಳಿ ಬಂದಿದೆ. ಕೂಡಲೇ ಕೆಲಸದಾಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಮಹಿಳಾ‌ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ ಅಧಿಕಾರಿ ಗುರುರಾಜ್ ಹಾಗೂ ವಿಶೇಷ ದತ್ತು ಕೇಂದ್ರದ ಸಂಯೋಜಕಿ ಭಾಗ್ಯಶ್ರೀ ಪಾಟೀಲ್ ಅವರು  ಭೇಟಿ ನೀಡಿ ಹೆಣ್ಣು ‌ಮಗುವನ್ನು ರಕ್ಷಣೆ ಮಾಡಿದ್ದಾರೆ.


ಮಗುವನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸದ್ಯ  ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಮಗು ಚಿಕಿತ್ಸೆ ಪಡೆಯುತ್ತಿದ್ದು, ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗಿದೆ.


ಹಲವು ಅನುಮಾನಗಳು


ತಾಯಿಯನ್ನು ಸೇರಲು ಮಗು ಹಂಬಲಿಸುತ್ತಿದ್ದು, ಮಗುವಿನ ಗೋಳಾಟದ ದೃಶ್ಯ ಮನ ಕಲುಕುವಂತಿತ್ತು. ಮಗುವನ್ನು ತಾಯಿಯೇ ಬಿಟ್ಟು ಹೋಗಿರಬಹುದು ಅಥವಾ ಯಾರೋ ದುಷ್ಕರ್ಮಿಗಳು ಮಗುವನ್ನು ಕಳ್ಳತನ‌ ಮಾಡಿಕೊಂಡು ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.


ಇದನ್ನೂ ಓದಿ:  Karwar: ನಾಲ್ಕು ವರ್ಷ ಪ್ರವಾಹದಿಂದ ಕೈ ಸುಟ್ಟುಕೊಂಡ ಕಾರವಾರದ ರೈತರು; ಈ‌ ಬಾರಿ ಕೃಷಿ ಚಟುವಟಿಕೆ ಆರಂಭಿಸಲು ಮೀನಮೇಷ


ಶಹಾಪುರ ಬಸ್ ನಿಲ್ದಾಣದಲ್ಲಿ ಪತ್ತೆಯಾದ ಹೆಣ್ಣು ಮಗುವಿನ ಬಗ್ಗೆ ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಹೆತ್ತವರು ಹೆಣ್ಣು ಮಗುವೆಂದು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದರಾ? ಹೆತ್ತ ತಾಯಿಯಿಂದ ಮಗು ಅದು ಹೇಗೆ ಮಿಸ್ ಆಗಿದೆ? ಮಗು ಯಾರಾದರೂ ಕಳ್ಳತನ ಮಾಡಿ ತಂದು ಬಿಟ್ಟು ಹೋದರಾ ಅಥವಾ ಯಾವ ಉದ್ದೇಶಕ್ಕೆ ಮಗು ಬಿಟ್ಟು ಹೋಗಿದ್ದಾರೆ ಎಂಬ ಹಲವಾರು ಪ್ರಶ್ನೆಗೆ ಎಡೆ ಮಾಡಿಕೊಟ್ಟಿದೆ‌.


ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ


ಈ ಬಗ್ಗೆ ವಿಶೇಷ ದತ್ತು ಕೇಂದ್ರದ ಸಂಯೋಜಕಿ ಭಾಗ್ಯಶ್ರೀ ಪಾಟೀಲ್ ಅವರು ಮಾತನಾಡಿ, ನಮಗೆ ಶಹಾಪುರ ಬಸ್ ನಿಲ್ದಾಣದಲ್ಲಿ ಹೆಣ್ಣು ಮಗು ಅಳುತ್ತಿದೆ ಎಂದು ‌ಮೇಲಾಧಿಕಾರಿಗಳು ಗಮನಕ್ಕೆ ತಂದರು. ನಂತರ ಮೇಲಾಧಿಕಾರಿಗಳ ಸೂಚನೆಯಂತೆ ಮಗುವನ್ನು ರಕ್ಷಣೆ ಮಾಡಲಾಗಿದೆ.


ಶಹಾಪುರ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೇಲಾಧಿಕಾರಿಗಳ ಸೂಚನೆಯಂತೆ ಮುಂದಿನ ಕ್ರಮವಹಿಸಲಾಗುತ್ತದೆ.ಈ ಬಗ್ಗೆ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದರು.


ಕಾರ್ಯನಿರ್ವಹಿಸದ ಸಿಸಿಟಿವಿ ಕ್ಯಾಮೆರಾ


ಇನ್ನು ಈ ಸಂಬಂಧ ಶಹಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಗುವಿನ ತಾಯಿಯ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಇತ್ತ ಬಸ್ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾಗಳು ಸಹ ಕಾರ್ಯನಿರ್ವಹಿಸದೆ ಇದ್ದಿದ್ದು ಪೊಲೀಸರಿಗೆ ಮಗುವಿನ ತಾಯಿಯ ಪತ್ತೆ ತಲೆಬಿಸಿಯಾಗಿ ಪರಿಣಮಿಸಿದೆ.


ಪತ್ತೆ ಹಚ್ಚಿ ಕ್ರಮಕೈಗೊಳ್ಳಿ


ಯಾವ ಉದ್ದೇಶಕ್ಕಾಗಿ ಹೆಣ್ಣು ಮಗು ಬಿಟ್ಟು ಹೋಗಿದ್ದಾರೆ? ಯಾರು ತಪ್ಪಿತಸ್ಥರೆಂಬುದು ಪೊಲೀಸರು ಪತ್ತೆ ಹಚ್ಚಿ ಮತ್ತೆ ಇಂತಹ ಘಟನೆ ನಡೆಯದಂತೆ ಕಠಿಣ ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿ ಉಮೇಶ್ ಮುದ್ನಾಳ್ ಆಗ್ರಹಿಸಿದ್ದಾರೆ.


ಬೆಳಗಾವಿಯಲ್ಲಿ ಏಳು ಭ್ರೂಣಗಳ ಮೃತದೇಹ ಪತ್ತೆ


ಮೂಡಲಗಿ ಪಟ್ಟಣದ ಹಳ್ಳದಲ್ಲಿ7  ಭ್ರೂಣಗಳ ಮೃತದೇಹ (Neonatal Babies) ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಡಿಎಚ್​ಒ ಮಹೇಶ (DHO Mahesh) ಕೋಣಿ ಅವರು ಪೊಲೀಸರ (Police) ನೇತೃತ್ವದಲ್ಲಿ ಮೂಡಲಗಿಯ ಸ್ಕ್ಯಾನಿಂಗ್​,  6 ಮೆಟರ್ನಿಟಿ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ರು.


ಇದನ್ನೂ ಓದಿ:  Mantri Group ನಿರ್ದೇಶಕ ಸುಶೀಲ್ ಪಾಂಡುರಂಗ ಅರೆಸ್ಟ್; ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆ ಆರೋಪ


ವೆಂಕಟೇಶ ಮೆಟರ್ನಿಟಿ ಆಸ್ಪತ್ರೆಯನ್ನು (Venkatesha Maternity Hospital) ಸೀಜ್ ಮಾಡಿದ್ದಾರೆ.  ಮೂರು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ಏಳು ಭ್ರೂಣಗಳ ಲಿಂಗ ಪತ್ತೆ ಮಾಡಿ ಹತ್ಯೆ ಮಾಡಿದ ಅನುಮಾನವಿದೆ. ಹೀಗಾಗಿ ಅಸ್ಪತ್ರೆ ಬಂದ್ ಮಾಡಿ ಇನ್ನಷ್ಟು ತನಿಖೆ (Investigation) ನಡೆಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು (Officer) ತಿಳಿಸಿದ್ದಾರೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು