ಸಿ.ಡಿ ಸ್ಫೋಟ; ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ಆರು ಸಚಿವರಿಂದ ಕೋರ್ಟ್​ಗೆ ಅರ್ಜಿ, ಯಾರು ಆ ಸಚಿವರು?

ಆರು ಸಚಿವರು ತಮ್ಮ ಮಾನಹಾನಿಯಾಗುವಂತಹ ಯಾವುದೇ ಸುದ್ದಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಕೋರ್ಟ್ ಮೆಟ್ಟಿಲೇರಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹಾಗಾದರೆ ಈ ಸಚಿವರ ಸಿಡಿಗಳು ಇವೆಯಾ? ಇದ್ದರೆ ಅವುಗಳ ಯಾರ ಬಳಿ ಇವೆ. ಇವುಗಳನ್ನು ಮಾಡಿಸಿದವರು ಯಾರು? ಇದರ ಹಿಂದೆ ಇರುವವರು ಯಾರು ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ವಿಧಾನಸೌಧ

ವಿಧಾನಸೌಧ

 • Share this:
  ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರ ಸಿಡಿ ಬಹಿರಂಗಗೊಂಡ ಬೆನ್ನಲ್ಲೇ ಹಾಲಿ ಕೆಲ ಸಚಿವರಿಗೆ ಭೀತಿ ಶುರುವಾಗಿದೆ. ತಮ್ಮ ವಿರುದ್ಧದ ಯಾವುದೇ ಸುದ್ದಿಯನ್ನು ಮಾಧ್ಯಮದಲ್ಲಿ ಪ್ರಸಾರ ಮಾಡದಂತೆ ತಡೆ ನೀಡಬೇಕು ಎಂದು ಕೋರಿ ಮುಂಚೆಯೇ ಆರು ಮಂದಿ ಸಚಿವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಚಿವರ ನಡೆ ಈಗ ಅಚ್ಚರಿ ಹಾಗೂ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

  ಸಿಟಿ ಸಿವಿಲ್ ಕೋರ್ಟ್ ನಲ್ಲಿ ಆರು ಸಚಿವರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ತಮ್ಮ ವಿರುದ್ಧ ಮಾಧ್ಯಮಗಳು ವರದಿ ಪ್ರಸಾರ ಮಾಡದಂತೆ, ಮಾನಹಾನಿ ಉಂಟಾಗುವತಂಹ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವಂತೆ ಕೋರಿ ಆರು ಮಂದಿ ಸಚಿವರು ಅರ್ಜಿ ಸಲ್ಲಿಸಿದ್ದಾರೆ. ಸಚಿವರಾದ ಶಿವರಾಮ್ ಹೆಬ್ಬಾರ್, ಬಿ.ಸಿ. ಪಾಟೀಲ್ ಹೆಚ್.ಟಿ. ಸೋಮಶೇಖರ್, ಕೆ. ಸುಧಾಕರ್, ನಾರಾಯಣಗೌಡ ಹಾಗೂ ಭೈರತಿ ಬಸವರಾಜ್ ಅರ್ಜಿ‌‌ಸಲ್ಲಿಸಿರುವ ಸಚಿವರು. ಅಚ್ಚರಿ ಅಂದರೆ ಇವರೆಲ್ಲಾ ಮೈತ್ರಿ ಸರ್ಕಾರ ಬೀಳಿಸಿ, ಬಿಜೆಪಿ ಸರ್ಕಾರ ರಚನೆಗೆ ನೇರ ಕಾರಣರಾದ ಮಿತ್ರ ಮಂಡಳಿ ಸದಸ್ಯರಾಗಿದ್ದಾರೆ.

  ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಬಂಡಾಯವೆದ್ದು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರವನ್ನು ಬೀಳಿಸಿದ್ದರು. ಬಳಿಕ ಬಿಜೆಪಿ ಸರ್ಕಾರ ರಚನೆಗೆ ನೆರವಾಗಿ, ಹಾಲಿ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರ ಮುಂದಾಳತ್ವ ವಹಿಸಿದ್ದ ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ರಾಸಲೀಲೆ ಸಿಡಿ ಬಿಡುಗಡೆಗೊಂಡಿತ್ತು. ಆ ಬಳಿಕ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿಡಿ ಬಿಡುಗಡೆಗೆ ಪ್ರಮುಖ ಕಾರಣಕರ್ತರಾದ ದಿನೇಶ್ ಕಲ್ಲಹಳ್ಳಿ ಅವರು ತಮ್ಮ ಬಳಿ ಇನ್ನೂ ಮೂವರು ಸಚಿವರ ಸಿಡಿಗಳಿವೆ ಎಂದು ಹೇಳಿಕೆ ನೀಡುವ ಮೂಲಕ ಮತ್ತಷ್ಟು ಸಂಚಲನ ಮೂಡಿಸಿದ್ದರು.

  ಇದನ್ನು ಓದಿ: Ramesh Jarkiholi: ರಮೇಶ್​ ಜಾರಕಿಹೊಳಿ ರಾಜೀನಾಮೆ; ಸಿಎಂ ಭೇಟಿ ಮಾಡಿದ ಮಿತ್ರಮಂಡಳಿ ಸಚಿವರು

  ಇದೀಗ ಆರು ಸಚಿವರು ತಮ್ಮ ಮಾನಹಾನಿಯಾಗುವಂತಹ ಯಾವುದೇ ಸುದ್ದಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಕೋರ್ಟ್ ಮೆಟ್ಟಿಲೇರಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹಾಗಾದರೆ ಈ ಸಚಿವರ ಸಿಡಿಗಳು ಇವೆಯಾ? ಇದ್ದರೆ ಅವುಗಳ ಯಾರ ಬಳಿ ಇವೆ. ಇವುಗಳನ್ನು ಮಾಡಿಸಿದವರು ಯಾರು? ಇದರ ಹಿಂದೆ ಇರುವವರು ಯಾರು ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

  ಸರ್ಕಾರದಲ್ಲಿ ಮಿತ್ರಮಂಡಳಿಯ ನಾಯಕರಾಗಿದ್ದ ರಮೇಶ್​ ಜಾರಕಿಹೊಳಿ ರಾಜೀನಾಮೆಯಿಂದ ಉಳಿದ ಸಚಿವರ ಸ್ಥಾನಮಾನಕ್ಕೆ ಧಕ್ಕೆ ಬರಬಹುದಾ ಎಂಬ ಆತಂಕ ಕೂಡ ಮೂಡಿದೆ. ಅಲ್ಲದೇ ಈಗಾಗಲೇ ಮೂಲ ಬಿಜೆಪಿಗರು, ವಲಸಿಗರ ಮೇಲೆ ಸಿಟ್ಟಿರುವ ಹಿನ್ನಲೆಯಲ್ಲಿ ತಮ್ಮ ಪ್ರಾಬಲ್ಯ ಕಡಿಮೆಯಾಗುತ್ತದೆ ಎಂಬ ಅನುಮಾನ ವ್ಯಕ್ತವಾಗಿದೆ. ಮಿತ್ರಮಂಡಳಿಯ ಯಾವುದೇ ಸಮಸ್ಯೆಗೂ ಬಗೆಹರಿಸುತ್ತಿದ್ದ ರಮೇಶ್​ ನಾಯಕತ್ವ ಈಗ ಎದ್ದು ಕಾಣುತ್ತಿದ್ದು ಮುಂದೆ ನಮ್ಮ ಅಹವಾಲುಗಳನ್ನು ಯಾರ ಬಳಿ ಚರ್ಚಿಸುವುದು ಎಂಬ ಚಿಂತೆ ನಾಯಕರಲ್ಲಿ ಶುರವಾಗಿದೆ. ಜೊತೆಗೆ ತಮ್ಮ ವಿರುದ್ಧದ ಯಾವುದಾದರೂ ಮಾನಹಾನಿಯಾಗುವಂತಹ ಸುದ್ದಿ ಇರಬಹುದೇ ಎಂಬೆಲ್ಲಾ ವಿಚಾರಗಳ ಕುರಿತು ಮಿತ್ರಮಂಡಳಿ ಸಚಿವರು ಗುರುವಾರ ಸಂಜೆ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ  ಚರ್ಚೆ ನಡೆಸಿದ್ದಾರೆ.
  Published by:HR Ramesh
  First published: