Jana Spandana: ಬಿಜೆಪಿಯ ಜನಸ್ಪಂದನ ಕಾರ್ಯಕ್ರಮಕ್ಕೆ ಆರು ಸಚಿವರ ಗೈರು; ಸ್ಮೃತಿ ಇರಾನಿ ಅವರಿಂದ ಚಾಲನೆ

ಸಮಾವೇಶದಲ್ಲಿ 3 ಲಕ್ಷ ಜನ‌ ಬರುವ ನಿರೀಕ್ಷೆಗಳಿದ್ದು, ಎಲ್ಲರನ್ನು ಕರೆ ತರಲು 5 ಸಾವಿರ ಬಸ್​​ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಸಮಾವೇಶದಲ್ಲಿ ಜನರಿಗೆ ಕುಳಿತುಕೊಳ್ಳಲು 1.5 ಲಕ್ಷಕ್ಕೂ ಅಧಿಕ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಜನ ಸ್ಪಂದನ

ಜನ ಸ್ಪಂದನ

  • Share this:
ಪಕ್ಷದ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ (Praveen Nettaru Murder) ಮತ್ತು ಮಾಜಿ ಸಚಿವ ಉಮೇಶ್ ಕತ್ತಿ ನಿಧನದ (Umesh Katti Death) ಹಿನ್ನೆಲೆ ಮುಂದೂಡಿಕೆಯಾಗಿದ್ದ ಬಿಜೆಪಿಯ ಜನೋತ್ಸವ (Janotsava) ಈಗ ಜನಸ್ಪಂದನ (Jana spandana) ಹೆಸರಿನಲ್ಲಿ  ನಡೆಯುತ್ತಿದೆ. ದೊಡ್ಡಬಳ್ಳಾಪುರದಲ್ಲಿ (Doddaballapur) ನಡೆಯುತ್ತಿರುವ ಜನಸ್ಪಂದನ ಕಾರ್ಯಕ್ರಮವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ (Union Minister Smriti Irani) ಅವರು ಉದ್ಘಾಟನೆ ಮಾಡಲಿದ್ದಾರೆ. ದಾವಣೆಗೆರೆಯಲ್ಲಿ (Davanagere) ನಡೆದ ಸಿದ್ದರಾಮೋತ್ಸವಕ್ಕೆ (Siddaramotsava) ಟಕ್ಕರ್ ನೀಡಲು ಬಿಜೆಪಿ ಈ ಕಾರ್ಯಕ್ರಮ ಆಯೋಜಿಸಿದೆ ಎಂಬ ಚರ್ಚೆಗಳು ರಾಜಕೀಯ ಅಂಗಳದಲ್ಲಿ ಕೇಳಿ ಬಂದಿವೆ. ಸಿದ್ದರಾಮೋತ್ಸವ ಕಾರ್ಯಕ್ರಮದಂತೆ ಇಲ್ಲಿಯೂ ಬೃಹತ್  ಕಟೌಟ್​​ಗಳನ್ನು ಹಾಕಲಾಗಿದೆ. 40 ಎಕರೆ ಪ್ರದೇಶದಲ್ಲಿ ಜನಸ್ಪಂದನ ಸಮಾವೇಶ ಆಯೋಜನೆ ಮಾಡಲಾಗಿದ್ದು, ಬೃಹತ್ ಜರ್ಮನ್ ಪೆಂಡಾಲ್​ಗಳ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ವೇದಿಕೆ 100*80 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿದ್ದು, ಸಂಪೂರ್ಣ ಕೇಸರಿಮಯವಾಗಿದೆ. ಒಟ್ಟು ಸಮಾವೇಶದ ಪೆಂಡಾಲ್ 1200*400 ಚದರ ಅಡಿ ವಿಸ್ತೀರ್ಣದಲ್ಲಿದೆ.

ವೇದಿಕೆಯಲ್ಲಿ ಮೂರು ಬೃಹತ್ ಎಲ್‌ಇಡಿ ಸ್ಕ್ರೀನ್​​ಗಳ ಅಳವಡಿಕೆ ಮಾಡಲಾಗಿದ್ದು, ಸುಮಾರು 80 ಗಣ್ಯರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ವೇದಿಕೆ ಪಕ್ಕ ದಿವಂಗತ ಉಮೇಶ್ ಕತ್ತಿ, ಪ್ರವೀಣ್ ನೆಟ್ಟಾರು ಭಾವಚಿತ್ರಗಳನ್ನು ಹಾಕಲಾಗಿದೆ.

ವೇದಿಕೆಯ ಮತ್ತೊಂದು ಭಾಗದಲ್ಲಿ ಸಾಂಪ್ರದಾಯಿಕ ಕೈಮಗ್ಗ ಇರಿಸಲಾಗಿದೆ. ಮಗ್ಗಕ್ಕೆ ಚಾಲನೆ ನೀಡುವ ಮೂಲಕ ಕಾರ್ಯಕ್ರಮವನ್ನು ಸ್ಮೃತಿ ಇರಾನಿ ಉದ್ಘಾಟಿಸಲಿದ್ದಾರೆ. ಇದರ ಜೊತೆಗೆ ಗಾಯಕ ವಿಜಯ್ ಪ್ರಕಾಶ್ ನೇತೃತ್ವದ ತಂಡದಿಂದ ಸಂಗೀತ ಕಾರ್ಯಕ್ರಮ ಸಹ ಆಯೋಜನೆ ಮಾಡಲಾಗಿದೆ.

ಮೂರು ಲಕ್ಷ ಜನ ಸೇರುವ ಸಾಧ್ಯತೆ

ಸಮಾವೇಶದಲ್ಲಿ 3 ಲಕ್ಷ ಜನ‌ ಬರುವ ನಿರೀಕ್ಷೆಗಳಿದ್ದು, ಎಲ್ಲರನ್ನು ಕರೆ ತರಲು 5 ಸಾವಿರ ಬಸ್​​ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಸಮಾವೇಶದಲ್ಲಿ ಜನರಿಗೆ ಕುಳಿತುಕೊಳ್ಳಲು 1.5 ಲಕ್ಷಕ್ಕೂ ಅಧಿಕ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ. ವೇದಿಕೆ ಕಾಣದವರಿಗಾಗಿ 15 ಅಡಿ ಎತ್ತರ, 90 ಅಡಿ‌ ಅಗಲದ ಬೃಹತ್ ಎಲ್ಇಡಿ ಸ್ಕ್ರೀನ್​ಗಳ ಅಳವಡಿಕೆ ಮಾಡಲಾಗಿದೆ.

ಸುಸಜ್ಜಿತ ಊಟೋಪಚಾರದ ವ್ಯವಸ್ಥೆ

ತಿಂಡಿ, ಊಟಕ್ಕೆ ತರಕಾರಿ ಪಲಾವ್, ಮೊಸರನ್ನ, ಬಾದುಷಾ, ನೀರಿನ ಬಾಟಲ್ ವಿತರಣೆ ಮಾಡಲಾಗುತ್ತಿದೆ. ಬೆಳಗ್ಗೆ 10 ಗಂಟೆಯಿಂದಲೇ ಊಟದ ಕೌಂಟರ್​​ಗಳು ತೆರೆದಿವೆ. ಜನರ ಸಂಖ್ಯೆ ಹೆಚ್ಚಿರುವ ಹಿನ್ನೆಲೆ 203 ಊಟದ ಕೌಂಟರ್​ಗಳನ್ನು ತೆರೆಯಲಾಗಿದೆ. ಕಾರ್ಯಕ್ರಮ ಮುಗಿಯುವರೆಗೂ ಊಟದ ವ್ಯವಸ್ಥೆ ಇರಲಿದೆ.

Six minister not attending jana spandane program mrq
ಜನ ಸ್ಪಂದನ


ಇದನ್ನೂ ಓದಿ:  ACBಗೆ ಬಾಗಿಲು ಎಳೆದ ರಾಜ್ಯ ಸರ್ಕಾರ; ಬಾಕಿ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆ

ಪುರುಷರಿಗೆ 160, ಮಹಿಳೆಯರಿಗೆ 40, ವಿಕಲಚೇತನರಿಗೆ 03 ಕೌಂಟರ್ ಆರಂಭಿಸಲಾಗಿದೆ. ಬಿಗಿ ಭದ್ರತೆಗಾಗಿ 2 ಸಾವಿರ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. 200 ಎಕರೆ ಪ್ರದೇಶದಲ್ಲಿ 12 ಕಡೆ ಪಾರ್ಕಿಂಗ್​​ಗೆ ವ್ಯವಸ್ಥೆ ಮಾಡಲಾಗಿದೆ.

ಜನಸ್ಪಂದನ ಕಾರ್ಯಕ್ರಮಕ್ಕೆ ಆರು ಸಚಿವರ ಗೈರು

ಇಂದು ಜನಸ್ಪಂದನ ಸಮಾವೇಶಕ್ಕೆ ಆರು ಸಚಿವರು ಗೈರಾಗಲಿದ್ದಾರೆ. ಸಚಿವರಾದ ವಿ. ಸೋಮಣ್ಣ, ಮುರುಗೇಶ್ ನಿರಾಣಿ, ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಹಾಲಪ್ಪ ಆಚಾರ್ ಮತ್ತು ಶಂಕರ ಪಾಟೀಲ್ ಮುನೇನಕೊಪ್ಪ ಗೈರು ಆಗಲಿದ್ದಾರೆ ಎಂಬ  ಮಾಹಿತಿ ಲಭ್ಯವಾಗಿದೆ.

ಸಚಿವ ವಿ ಸೋಮಣ್ಣ ಚಾಮರಾಜನಗರ ಪ್ರವಾಸದಲ್ಲಿದ್ರೆ, ಮುರುಗೇಶ್ ನಿರಾಣಿ ಅಮೆರಿಕಾ ಜಿಮ್ ರೋಡ್​​ ಶೋನಲ್ಲಿ ಬ್ಯುಸಿಯಾಗಲಿದ್ದಾರೆ. ಸುನೀಲ್ ಕುಮಾರ್ ಮತ್ತು ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳೂರಿನಲ್ಲಿ ನಡೆಯುತ್ತಿರುಚ ನಾರಾಯಣ ಗುರು ಜಯಂತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇದನ್ನೂ ಓದಿ:  Kodimutt Swamiji: ನೀಚಂಗೆ ದೊರೆತನುವು, ಹೇಡಿಂಗೆ ಹಿರಿತನವೂ, ಮೂಡಂಗೆ ಗುರುತನ; ವಿಷಜಂತುಗಳ ಆಗಮನ: ಮತ್ತೆ ಭವಿಷ್ಯ ನುಡಿದ ಶ್ರೀ

ಹಾಲಪ್ಪ ಆಚಾರ್ ಅವರು ಹೈದರಾಬಾದ್​​ನಲ್ಲಿ ರಾಷ್ಟ್ರೀಯ ಗಣಿ ಸಚಿವರ ಸಮ್ಮೇಳನದಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ಶಂಕರ ಪಾಟೀಲ್ ಮುನೇನಕೊಪ್ಪ ಪೂರ್ವ ನಿಗಧಿತ ಕಾರ್ಯಕ್ರಮದ ಹಿನ್ನೆಲೆ ಗೈರಾಗುತ್ತಿದ್ದಾರೆ.
Published by:Mahmadrafik K
First published: