Siddramotsava: ಮೈಸೂರು ಪಾಕ್, ಲಾಡು, ರುಚಿ ರುಚಿ ಊಟ; ಸಿದ್ದರಾಮೋತ್ಸವದಲ್ಲಿ ಭರ್ಜರಿ ಭೋಜನ

ಸಿದ್ದರಾಮೋತ್ಸವ (Siddramotsava) ಹೆಸರಿನಲ್ಲಿ ಭಾರೀ ಸಂಭ್ರಮೋತ್ಸವ ನಡೆಯುತ್ತಿದ್ದು, ದಾವಣಗೆರೆಯ (Davanagere) ಶಾಮನೂರು ಪ್ಯಾಲೇಸ್‌ನಲ್ಲಿ (Shamanur Palace) ಭರ್ಜರಿ ಕಾರ್ಯಕ್ರಮ ನಡೆಯುತ್ತಿದೆ. ಇದೀಗ ಬಂದ ಜನರಿಗೆಲ್ಲ ಊಟ ತಿಂಡಿಗೆ ಭರ್ಜರಿ ಭೋಜನ ನೀಡಲಾಗುತ್ತಿದೆ.

ಸಿದ್ದರಾಮೋತ್ಸವ

ಸಿದ್ದರಾಮೋತ್ಸವ

  • Share this:
ದಾವಣಗೆರೆ: ಮಾಜಿ ಮುಖ್ಯಮಂತ್ರಿ (Ex CM), ಹಾಲಿ ವಿಪಕ್ಷ ನಾಯಕ (Opposition Party Leader) ಹಾಗೂ ರಾಜ್ಯದ ಹಿರಿಯ ರಾಜಕೀಯ ನಾಯಕರಲ್ಲಿ (Senior Political Leader) ಒಬ್ಬರಾಗಿರುವ ಸಿದ್ದರಾಮಯ್ಯ (Siddaramaiah) ಅವರ 75ನೇ ಹುಟ್ಟುಹಬ್ಬದ (Birthday) ಸಂಭ್ರಮಾಚರಣೆ ನಡೆಯುತ್ತಿದೆ. ಸಿದ್ದರಾಮೋತ್ಸವ (Siddramotsava) ಹೆಸರಿನಲ್ಲಿ ಭಾರೀ ಸಂಭ್ರಮೋತ್ಸವ ನಡೆಯುತ್ತಿದ್ದು, ದಾವಣಗೆರೆಯ (Davanagere) ಶಾಮನೂರು ಪ್ಯಾಲೇಸ್‌ನಲ್ಲಿ (Shamanur Palace) ಭರ್ಜರಿ ಕಾರ್ಯಕ್ರಮ ನಡೆಯುತ್ತಿದೆ. ಭಾರೀ ಮಳೆ, ಪ್ರವಾಹ ಭೀತಿಯ ನಡುವೆಯೂ ಸಿದ್ದರಾಮಯ್ಯ ಅಭಿಮಾನಿಗಳು (Fans), ಕಾಂಗ್ರೆಸ್ ಕಾರ್ಯಕರ್ತರು (Congress Workers) ಸಿದ್ದರಾಮೋತ್ಸವಕ್ಕೆ ಬಂದಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಿದ್ದರಾಮಯ್ಯ ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದು, ಒಟ್ಟು 6 ಲಕ್ಷ ಜನ ಭಾಗಿಯಾಗಿರುವ ನಿರೀಕ್ಷೆ ಇದೆ. ಇದೀಗ ಬಂದ ಜನರಿಗೆಲ್ಲ ಊಟ ತಿಂಡಿಗೆ ಭರ್ಜರಿ ಭೋಜನ ನೀಡಲಾಗುತ್ತಿದೆ.

ಸಿದ್ದು ಅಭಿಮಾನಿಗಳಿಗೆ ಭರ್ಜರಿ ಭೋಜನ

ಸಿದ್ದರಾಮೋತ್ಸವಕ್ಕೆ ಬಂದಿರುವ ಜನರಿಗೆ ನೀಡಲು ಭರ್ಜರಿ ಊಟ, ತಿಂಡಿ ರೆಡಿ ಮಾಡಲಾಗಿದೆ. ಬಿಸಿಬೇಳೆ ಬಾತ್, ಸಿಹಿಯಾದ ಮೈಸೂರು ಪಾಕ್, ಇಡ್ಲಿ, ಪೊಂಗಲ್, ಚಿತ್ರಾನ್ನ, ಬಿಸಿ ಬಿಸಿ ಕಾಫಿ, ಟೀ, ಹಾಲು, ನೀರಿನ ವ್ಯವಸ್ಥೆ ಮಾಡಲಾಗಿದೆ. ಕಳೆದ ಒಂದು ವಾರದಿಂದ ಹಾಲು ತುಪ್ಪ ಎಣ್ಣೆಯಿಂದ 5 ಲಕ್ಷ ಗರಿಗರಿ ಮೈಸೂರು ಪಾಕ್ ತಯಾರಿಸಲಾಗಿದೆ. ಒಂದೇ ಬಾರಿ 10 ಸಾವಿರ ಕಾರ್ಯಕರ್ತರಿಗೆ ಉಣಬಡಿಸುವುದಕ್ಕೆ ಕೌಂಟರ್ ಗಳು ಸಜ್ಜಾಗಿವೆ. ಸುಮಾರು 2, 500 ಅಡುಗೆ ಸಿಬ್ಬಂದಿಗಳು ಭರ್ಜರಿ ಊಟ ತಯಾರಿಸಿದ್ದಾರೆ. ಸಿದ್ದರಾಮೋತ್ಸವ ನಡೆಯುವ ಸ್ಥಳದಲ್ಲಿ 4.5 ಲಕ್ಷ ಕುರ್ಚಿಗಳನ್ನು ಹಾಕಲಾಗಿದ್ದು 6 ಲಕ್ಷಕ್ಕೂ ಅಧಿಕ ಮಂದಿ ಇಂದು ಭಾಗಿಯಾಗಿರುವ ನಿರೀಕ್ಷೆಯಿದೆ.ಬಿಗಿ ಭದ್ರತೆಯಲ್ಲಿ ಕಾರ್ಯಕ್ರಮ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಘಟಾನುಘಟಿ ನಾಯಕರು ಸಿದ್ದರಾಮೋತ್ಸವದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಬಿಗಿ ಭದ್ರತೆಗಾಗಿ 16 ಡಿವೈಎಸ್ಪಿಗಳು, 118 ಪೊಲೀಸ್ ಇನ್ಸ್‌ಪೆಕ್ಟರ್‌ಗಳು, 360 ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗಳು, 354 ಎಎಸ್‌ಐಗಳು, 2,796 ಪೊಲೀಸ್ ಪೇದೆಗಳು, ಕೆಎಸ್‌ಆರ್‌ಪಿ, ಡಿಎಆರ್ ಪೊಲೀಸರು, ಹೋಂ ಗಾರ್ಡ್‌ಗಳು ಮತ್ತು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಸ್ಥಳದಲ್ಲಿ ಭದ್ರತೆ ಕೈಗೊಂಡಿರುವ ಪೊಲೀಸರು ಜನರ ಚಲನವಲನದ ಮೇಲೆ ನಿಗಾ ಇಡಲು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿದ್ದಾರೆ. ಸಮಾರಂಭದಲ್ಲಿ ದಾವಣಗೆರೆ, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಿಂದ ಡ್ರೋನ್ ಕ್ಯಾಮೆರಾಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: Siddaramotsava: 8 ಲಕ್ಷ ವೆಚ್ಚದಲ್ಲಿ 3 ಕಿಲೋ ಮೀಟರ್ ಉದ್ದದ ಸಿದ್ದರಾಮಯ್ಯ ಫೋಟೋ

ಜನರಿಗಾಗಿ ಪಾರ್ಕಿಂಗ್‌ ವ್ಯವಸ್ಥೆ

ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ದಾವಣಗೆರೆಗೆ ಬರುವವರಿಗಾಗಿ ಪ್ರತ್ಯೇಕ ಮಾರ್ಗ ಮತ್ತು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರವಹಿಸಲಾಗಿದೆ.

ರಾಜ್ಯದ ಮೂಲೆ ಮೂಲೆಯಿಂದ ಜನರ ಆಗಮನ

ಸಿದ್ದರಾಮೋತ್ಸವಕ್ಕೆ ಬೀದರ್, ಔರದ್, ಬಾಗಲಕೋಟೆ, ಗುಲ್ಬರ್ಗ, ಯಾದಗಿರಿ,ಚುಂಚನ ಸೂರು, ಗುರುಮಟ್ಕಲ್, ಸುರಪುರ, ಬಾದಾಮಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದಾರೆ. ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ಪಟ್ಟಣದಿಂದ 70 ಕೂಸರ್ ವಾಹನಗಳಲ್ಲಿ ಅಭಿಮಾನಿಗಳು ನಿನ್ನೆ ತಡರಾತ್ರಿ 12ಕ್ಕೆ ದಾವಣಗೆರೆಗೆ ಬಂದಿದ್ದಾರೆ. ಬಾಗಲಕೋಟೆ ಜಿಲ್ಲೆಯಿಂದ 132 ಸಾರಿಗೆ ನಿಗಮದ ಬಸ್​ಗಳು, ಸಾವಿರಕ್ಕೂ ಅಧಿಕ ಕ್ರೂಸರ್ ಹಾಗೂ ವೈಯಕ್ತಿಕ ಕಾರುಗಳಲ್ಲಿ ಅಭಿಮಾನಿಗಳು ದಾವಣಗೆರೆ ಬಂದು ಸೇರಿದ್ದಾರೆ.

ಇದನ್ನೂ ಓದಿ: Siddaramotsava: ಸಿದ್ದರಾಮೋತ್ಸವ ಹೊರಗೆ ಸಿಹಿ ಒಳಗೆ ಕಹಿ; ಕಾಂಗ್ರೆಸ್​ನಲ್ಲಿ ಬೇಗುದಿ

ಸಿದ್ದರಾಮಯ್ಯ ಅವರ ಬಾದಾಮಿ ಕ್ಷೇತ್ರದಿಂದ 50 ಬಸ್, ಟೆಂಪೊ, ಕ್ರೂಸರ್ ಸೇರಿ 600 ವಾಹನಗಳಲ್ಲಿ ಅಭಿಮಾನಿಗಳು ದಾವಣಗೆರೆ ತಲುಪಿದ್ದಾರೆ. ಬಾಗಲಕೋಟೆಯಿಂದ ಸುಮಾರು 30 ಸಾವಿರ ಮಂದಿ, ಬಾದಾಮಿ ಕ್ಷೇತ್ರದಿಂದ ಸುಮಾರು 10 ಸಾವಿರ ಮಂದಿ ಬಂದಿದ್ದಾರೆ.
Published by:Annappa Achari
First published: