• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Accident: ಪ್ರತ್ಯೇಕ ಅಪಘಾತ, ಆರು ಸಾವು; ನಾಯಿ ಅಡ್ಡ ಬಂದಿದ್ದಕ್ಕೆ ಲಾರಿಗೆ ಬೈಕ್ ಡಿಕ್ಕಿ

Accident: ಪ್ರತ್ಯೇಕ ಅಪಘಾತ, ಆರು ಸಾವು; ನಾಯಿ ಅಡ್ಡ ಬಂದಿದ್ದಕ್ಕೆ ಲಾರಿಗೆ ಬೈಕ್ ಡಿಕ್ಕಿ

ಪ್ರತ್ಯೇಕ ಅಪಘಾತ ಆರು ಸಾವು

ಪ್ರತ್ಯೇಕ ಅಪಘಾತ ಆರು ಸಾವು

Accident Death: ಟಿಟಿ ವಾಹನದಲ್ಲಿ ಒಟ್ಟು 11 ಮಂದಿ ಪ್ರಯಾಣಿಸುತಿದ್ದರು. ಘಟನೆ ಬಗ್ಗೆ ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Share this:

ವಿಜಯಪುರ: ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದು (Vijayapura Accident) ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿದ್ದು, ಇಬ್ಬರಿಗೆ ಗಾಯವಾಗಿದೆ. ಈ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ (Muddebihala, Vijayapura) ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಅತಿ ವೇಗದಿಂದ ವಾಹನ ಚಲಾಯಿಸುವ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ಮುದ್ದೇಬಿಹಾಳ‌ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ, ಚಿತ್ರದುರ್ಗದ ದೊಡ್ಡಸಿದ್ದವ್ವನಹಳ್ಳಿ ಬಳಿ ಖಾಸಗಿ ಬಸ್, ಲಾರಿ ನಡುವೆ (Bus Lorry Accident) ಡಿಕ್ಕಿಯಾಗಿದ್ದು, ಖಾಸಗಿ ಬಸ್‌ನಲ್ಲಿದ್ದ 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಗಾಯಾಳುಗಳನ್ನ ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.


ಲಾರಿ, ಬೈಕ್ ಡಿಕ್ಕಿ-ದಂಪತಿ ಸಾವು


ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಆಗಿದ್ದು, ದಂಪತಿ ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ್ದಾರೆ.. ಈ ಘಟನೆ ಹಾಸನದ ಸಂಕೇನಹಳ್ಳಿ ಗ್ರಾಮದ ಬಳಿ ನಡೆದಿದ್ದು, 65 ವರ್ಷದ ಪುಟ್ಟರಾಜು, 54 ವರ್ಷದ ಭಾರತಿ ಮೃತ ದಂಪತಿಯಾಗಿದ್ದಾರೆ.


ಬೈಕ್‌ನಲ್ಲಿ ತೆರಳುವಾಗ ನಾಯಿ ಅಡ್ಡ ಬಂದು, ಆಯತಪ್ಪಿ ಲಾರಿಗೆ  ಬೈಕ್ ಡಿಕ್ಕಿ ಹೊಡೆದಿದೆ. ಇನ್ನು ಘಟನೆ ಸಂಬಂಧ KA-18 C-0153 ನಂಬರ್‌ನ ಲಾರಿ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಹಾಡಹಗಲೇ ಸರಗಳ್ಳರ ಕೈಚಳಕ


ಹಾಡಹಗಲೇ ಸರಗಳ್ಳರು ಮಹಿಳೆ ಸರ ಕಿತ್ತು ಪರಾರಿಯಾಗಿರುವ ಘಟನೆ ಕನಕಪುರದ ವಿವೇಕಾನಂದ ನಗರದಲ್ಲಿ ನಡೆದಿದೆ. ಸರೋಜಮ್ಮ ಎಂಬವರು ರಸ್ತೆಯಲ್ಲಿ ಹೋಗ್ತಿದ್ದಾಗ ಖದೀಮರು ದ್ವಿಚಕ್ರ ವಾಹನದಲ್ಲಿ ಬಂದು ಸರ ಕಸಿದು ಎಸ್ಕೇಪ್ ಆಗಿದ್ದಾರೆ.




ನಿಂತಿದ್ದ ಬಸ್​ಗೆ ಡಿಕ್ಕಿ, ಇಬ್ಬರ ಸಾವು


ನಿಂತಿದ್ದ ಬಸ್​ಗೆ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದ ಡಿ.ಹೊಸಹಳ್ಳಿ ಬಳಿ ನಡೆದಿದೆ. ವೀರೇಶ್  ಶಶಿಕಲಾ ಸಾವನ್ನಪ್ಪಿದ ದುರ್ದೈವಿಗಳು. ಮೃತರು ರಾಯಚೂರು ಜಿಲ್ಲೆಯ ಸಿಂಧನೂರು ಮೂಲದವರು ಎಂದು ತಿಳಿದು ಬಂದಿದೆ.


ಇದನ್ನೂ ಓದಿ:  Crime News: ಧಾರವಾಡದಲ್ಲಿ ಡಬಲ್ ಮರ್ಡರ್, ಇತ್ತ ಬೆಂಗ್ಳೂರು, ಮಂಡ್ಯದಲ್ಲಿ ಕ್ಷುಲ್ಲಕ ಕಾರಣಕ್ಕೆ ಬಿತ್ತು ಹೆಣ!


ಸಿಂಧನೂರಿನಿಂದ ಮೈಸೂರಿಗೆ ಪ್ರವಾಸಕ್ಕೆ ಹೊರಟಿದ್ದ ಶಶಿಕಲಾ ಕುಟುಂಬ ಮಾರ್ಗ ಮಧ್ಯೆ ಡಿ.ಹೊಸಹಳ್ಳಿ ಬಳಿ ನಿಂತಿದ್ದ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದೆ. ಟಿಟಿ ವಾಹನದಲ್ಲಿ ಒಟ್ಟು 11 ಮಂದಿ ಪ್ರಯಾಣಿಸುತಿದ್ದರು. ಘಟನೆ ಬಗ್ಗೆ ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

First published: