ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ (Karnataka Election) 135 ಕ್ಷೇತ್ರಗಳನ್ನು ಗೆದ್ದು ಅಧಿಕಾರ ಹಿಡಿದಿರುವ ಕಾಂಗ್ರೆಸ್ಗೆ (Congress) ಇಂದು ಐತಿಹಾಸಿಕ ಪಾಲಿನ ದಿನವಾಗಿದೆ. ಇಂದು ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಉಭಯ ನಾಯಕರ ಜೊತೆಯಲ್ಲಿ 25 ರಿಂದ 27 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ ತಡರಾತ್ರಿವರೆಗೂ ನಡೆದ ಸಭೆಯಲ್ಲಿ ಒಮ್ಮತ ಮೂಡದ ಕಾರಣ ಆರರಿಂದ ಎಂಟು ಶಾಸಕರು ಮಾತ್ರ ಸಂಪುಟ ಸೇರಲಿದ್ದಾರೆ ಎಂಬ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ. ಸದ್ಯ ದೆಹಲಿಯಲ್ಲಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬೆಳಗ್ಗೆ 10 ಗಂಟೆ ವೇಳೆಗೆ ಬೆಂಗಳೂರು ತಲುಪಲಿದ್ದಾರೆ.
ಮೊದಲ ಸಚಿವ ಸಂಪುಟದಲ್ಲಿ ಆರು ಸಮುದಾಯಕ್ಕೆ ಅವಕಾಶ ನೀಡಲಾಗುತ್ತಿದೆ. ದಲಿತ ಸಮುದಾಯಕ್ಕೆ ಮೂರು, ಅದರಲ್ಲಿ ದಲಿತ ಬಲ ಸಮುದಾಯಕ್ಕೆ ಎರಡು, ದಲಿತ ಎಡ ಸಮುದಾಯಕ್ಕೆ ಒಂದು ಸಚಿವ ಸ್ಥಾನ ನೀಡಲಾಗುತ್ತದೆ.
ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ಸಂಭಾವ್ಯ ನಾಯಕರು.
1.ಎಂ ಬಿ ಪಾಟೀಲ್: ಲಿಂಗಾಯತ
2.ಡಾ. ಜಿ ಪರಮೇಶ್ವರ್: ದಲಿತ ಬಲ
3.ಪ್ರಿಯಾಂಕ್ ಖರ್ಗೆ: ದಲಿತ ಬಲ
4.ಕೆ ಎಚ್ ಮುನಿಯಪ್ಪ: ದಲಿತ ಎಡ
5.ಕೆ ಜೆ ಜಾರ್ಜ್: ಕ್ರಿಶ್ಚಿಯನ್
6.ಸತೀಶ್ ಜಾರಕಿಹೊಳಿ: ಎಸ್ ಟಿ (ವಾಲ್ಮೀಕಿ)
7.ಜಮೀರ್ ಅಹಮದ್ ಖಾನ್: ಮುಸ್ಲಿಂ
8.ರಾಮಲಿಂಗಾ ರೆಡ್ಡಿ: ರೆಡ್ಡಿ ಸಮುದಾಯ
ಇದನ್ನೂ ಓದಿ: Karnataka Cabinet Formation: ಇಂದು ‘ಶಿವ-ರಾಮಯ್ಯ’ ಪದಗ್ರಹಣ; ಕೈ ಕೋಟೆಯಲ್ಲಿ ಸಂಭ್ರಮ
ಕಂಠೀರವದಲ್ಲಿ ಬಿಗಿ ಭದ್ರತೆ
ಕ್ರೀಡಾಂಗಣದ ಎರಡು ಗೇಟ್ಗಳಲ್ಲಿ ವಿವಿಐಪಿಗಳಿಗೆ ಮಾತ್ರ ಪ್ರವೇಶ ಸಿಗಲಿದ್ದು, ಭದ್ರತೆಗೆ 1500 ಪೊಲೀಸರ ನಿಯೋಜನೆ ಮಾಡಲಾಗಿದೆ.
ಪೊಲೀಸ್ ಕಮಿಷನರ್, ಟ್ರಾಫಿಕ್ ಸ್ಪೆಷಲ್ ಕಮಿಷನರ್, ಇಬ್ಬರು ಜಂಟಿ ಪೊಲೀಸ್ ಆಯುಕ್ತರು, 8 ಮಂದಿ ಡಿಸಿಪಿ, 10 ಮಂದಿ ಎಸಿಪಿ ಅಧಿಕಾರಿಗಳು ಸೇರಿದಂತೆ 28 ಮಂದಿ ಪೊಲೀಸ್ ಇನ್ಸ್ಪೆಕ್ಟರ್ಗಳು ಹಾಗೂ 500 ಸಂಚಾರಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ