ಸೀತೆ ಜಿಂಕೆ, ಹಸು ಮಾಂಸ ತಿಂದಿದ್ದಳು; ಪೆರಿಯಾರ್​ವಾದಿ ಚಿಂತಕಿ ಕಲೈಸೆಲ್ವಿ ವಿವಾದಾತ್ಮಕ ಹೇಳಿಕೆ

ಸೀತೆ ಜಿಂಕೆ, ಹಂದಿ, ದನದ ಮಾಂಸ ತಿಂದಿರುವ ಕುರಿತು ಸೀತೆ ಅರಣ್ಯ ಕಾಂಡದಲ್ಲಿ ಉಲ್ಲೇಖವಿದೆ. ಆಕೆ ದನದ ಮಾಂಸವನ್ನು ತುಪ್ಪದಲ್ಲಿ ಹುರಿದು ತಿಂದ ಬಗ್ಗೆ ಇಲ್ಲಿ ತಿಳಿಸಲಾಗಿದೆ.

Seema.R | news18
Updated:January 12, 2019, 3:22 PM IST
ಸೀತೆ ಜಿಂಕೆ, ಹಸು ಮಾಂಸ ತಿಂದಿದ್ದಳು; ಪೆರಿಯಾರ್​ವಾದಿ ಚಿಂತಕಿ ಕಲೈಸೆಲ್ವಿ ವಿವಾದಾತ್ಮಕ ಹೇಳಿಕೆ
ಕಲೈಸೆಲ್ವಿ
Seema.R | news18
Updated: January 12, 2019, 3:22 PM IST
ಮೈಸೂರು (ಜ.12): ರಾಮನ ಕುರಿತ ವಿವಾದಿತ ಹೇಳಿಕೆಗಳ ಬೆನ್ನಲ್ಲೇ ಇದೀಗ ಸೀತೆ  ಆಹಾರ ಕ್ರಮದ ಬಗ್ಗೆ ಪೆರಿಯಾರ್​ವಾದಿ ಚಿಂತಕಿ ಕಲೈಸೆಲ್ವಿ ವಿವಾದಾತ್ಮಕ ಹೇಳಿಕೆ ನೀಡಿ ಸದ್ದು ಮಾಡಿದ್ದಾರೆ.

ಸೀತೆ ಜಿಂಕೆ, ಹಂದಿ, ದನದ ಮಾಂಸ ತಿಂದಿರುವ ಕುರಿತು ಸೀತೆ ಅರಣ್ಯ ಕಾಂಡದಲ್ಲಿ ಉಲ್ಲೇಖವಿದೆ. ಆಕೆ ದನದ ಮಾಂಸವನ್ನು ತುಪ್ಪದಲ್ಲಿ ಹುರಿದು ತಿಂದ ಬಗ್ಗೆ ಉಲ್ಲೇಖವಿದೆ. ಅದೇ ನಾವು ಈಗಿನ ಕಾಲದಲ್ಲಿ ಜಿಂಕೆ ಮಾಂಸ ತಿಂದಿದ್ದರೆ ಅರಣ್ಯ ಕಾಯ್ದೆ ಅಡಿ ಬಂಧನವಾಗುತ್ತಿತ್ತು ಎಂದು ಹೇಳುವ ಮೂಲಕ ಹೊಸ ಕಿಡಿ ಹಬ್ಬಿಸಿದ್ದಾರೆ.

ವೇದಗಳ ಕಾಲದಲ್ಲಿ ಮಹಿಳೆಯರಿಗೆ ಹೆಚ್ಚಿನ ಮಹತ್ವ ಇತ್ತು ಅಂತಾರೆ. ಆದರೆ, ಮಹಿಳೆಯರಿಗೆ ಯಾವುದೇ ರೀತಿಯ ಸ್ವಾತಂತ್ರವಿರಲಿಲ್ಲ. ಧರ್ಮವನ್ನು‌ ಪ್ರತಿಪಾದಿಸಲು ಮಹಿಳೆಯರ ಮೇಲೆ ಈ ರೀತಿ ಹೇರಿಕೆ ಮಾಡಲು ಇವರು ಯಾರು ಎಂದು ಪ್ರಶ್ನಿಸಿದರು.

ವರ್ಣಾಶ್ರಮ ಧರ್ಮವನ್ನು ಒಪ್ಪಿಕೊಂಡು ವರ್ಣಾಶ್ರಮ‌ ಶ್ರೇಷ್ಟ, ಬ್ರಾಹ್ಮಣರು ಶ್ರೇಷ್ಟ ಎಂದು ಒಪ್ಪಿಕೊಳ್ಳಬೇಕು. ಇಲ್ಲವಾದರೆ ಅವರನ್ನು ಕೀಳಾಗಿ ನೋಡುತ್ತಿದ್ದರು.

ಇದನ್ನು ಓದಿ: ರಾಜಕೀಯ ಉತ್ತರಾಧಿಕಾರಿ ಪಟ್ಟಿ ಸೇರಿದ ಗೌಡರ ಮೊಮ್ಮಕ್ಕಳು; ಲೋಕಸಭಾ ಚುನಾವಣೆಯಲ್ಲಿ ಇಬ್ಬರ ಸ್ಪರ್ಧೆ ಬಹುತೇಕ ಖಚಿತ

ವಿಷ್ಟು ಅಷ್ಟೊಂದು ಅವತಾರ ಎತ್ತಿದ್ದಾನೆ ಆದರೆ ಶಿವ ಯಾಕೆ ಎತ್ತಿಲ್ಲ. ವಿಷ್ಟು ದೇವಾಲಾಯಗಳು ವಿಜೃಂಭಣೆಯಿಂದ ಕೂಡಿರುತ್ತವೆ. ಶಿವನ ದೇವಾಲಯ ಬೋಗಿಯಂತೆ ಸಾಧಾರಣವಾಗಿ ತೋರಿಸಲು ಕಾರಣ ಏನು. ಇದು ಮೌಡ್ಯವನ್ನ ಹೆಚ್ಚಿಸುವ ಕೆಲಸ ಎಂದು ಸ್ಥಳಿಯ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
Loading...

First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...