HOME » NEWS » State » SIT SEND NOTICE TO EX MINISTER D SUDHAKAR TO PROVIDE BANK TRANSACTION DETAILS SNVS

ಜಾರಕಿಹೊಳಿ ಸಿಡಿ ಪ್ರಕರಣ: ಮಾಜಿ ಸಚಿವ ಡಿ. ಸುಧಾಕರ್​ಗೆ ಎಸ್ಐಟಿ ನೋಟೀಸ್

ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಜೊತೆ ಮಾಜಿ ಸಚಿವ ಡಿ ಸುಧಾಕರ್ ಅವರಿಗೆ ನಂಟು ಇರುವ ಶಂಕೆ ಹಿನ್ನೆಲೆಯಲ್ಲಿ ಬ್ಯಾಂಕ್ ವಹಿವಾಟಿನ ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ.

news18-kannada
Updated:April 4, 2021, 1:56 PM IST
ಜಾರಕಿಹೊಳಿ ಸಿಡಿ ಪ್ರಕರಣ: ಮಾಜಿ ಸಚಿವ ಡಿ. ಸುಧಾಕರ್​ಗೆ ಎಸ್ಐಟಿ ನೋಟೀಸ್
ಮಾಜಿ ಸಚಿವ ಡಿ. ಸುಧಾಕರ್
  • Share this:
ಬೆಂಗಳೂರು(ಏ. 04): ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದೆ. ತನಿಖೆ ನಡೆಸುತ್ತಿರುವ ಎಸ್​ಐಟಿ ತಂಡ ಈ ಪ್ರಕರಣ ಸಂಬಂಧ ಮಾಜಿ ಸಚಿವ ಡಿ ಸುಧಾಕರ್ ಅವರಿಗೆ ನೋಟೀಸ್ ನೀಡಿದೆ. ಈ ಪ್ರಕರಣದ ಸಂತ್ರಸ್ತ ಯುವತಿಗೆ ಡಿ ಸುಧಾಕರ್ ಅವರು ಹಣ ಟ್ರಾನ್ಸ್​ಫರ್ ಮಾಡಿರುವ ಮಾಹಿತಿ ತನಿಖಾಧಿಕಾರಿಗಳಿಗೆ ಸಿಕ್ಕಿದೆ. ಅದಕ್ಕಾಗಿ ಬ್ಯಾಂಕ್ ಅಕೌಂಟ್ ವಿವರಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ಅಧಿಕಾರಿಗಳು ಡಿ ಸುಧಾಕರ್ ಅವರಿಗೆ ನೀಡಿರುವ ನೋಟೀಸ್​ನಲ್ಲಿ ಸೂಚಿಸಿದ್ದಾರೆನ್ನಲಾಗಿದೆ. ಕಳೆದ 6 ತಿಂಗಳಿಂದ ಮಾಜಿ ಶಾಸಕರೂ ಆದ ಸುಧಾಕರ್ ಅವರು ಸಂತ್ರಸ್ತ ಯುವತಿ ಜೊತೆ ಸಂಪರ್ಕದಲ್ಲಿದ್ದರೆನ್ನಲಾಗುತ್ತಿದೆ. ಯುವತಿಗೆ ಇವರಿಂದ ಅತಿ ಹೆಚ್ಚು ಮೊಬೈಲ್ ಕರೆಗಳು ಹೋಗಿವೆ. ಯುವತಿಯಿಂದ ಸುಧಾಕರ್​ಗೆ 30ಕ್ಕೂ ಹೆಚ್ಚು ಬಾರಿ ಕರೆಗಳು ಹೋಗಿವೆ. ಆರ್​ಟಿ ನಗರದಲ್ಲಿರುವ ಯುವತಿಯ ಬ್ಯಾಂಕ್ ಖಾತೆಗೆ ಡಿ ಸುಧಾಕರ್ ಅವರ ಅಕೌಂಟ್​ನಿಂದ ಹಣ ವರ್ಗಾವಣೆ ಆಗಿರುವ ಮಾಹಿತಿ ತನಿಖಾಧಿಕಾರಿಗಳಿಗೆ ಲಭಿಸಿರುವ ಹಿನ್ನೆಲೆಯಲ್ಲಿ ನೋಟೀಸ್ ಕೊಟ್ಟಿದ್ದಾರೆ. ಬುಧವಾರದ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಸಂತ್ರಸ್ತ ಯುವತಿಗೆ ಡಿ ಸುಧಾಕರ್ ಕಡೆಯಿಂದ ಹಣ ವರ್ಗಾವಣೆ ಆಗಿರುವ ಬಗ್ಗೆ ನಿನ್ನೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಈ ವೇಳೆ, ಮಾಜಿ ಸಚಿವರು ಈ ಸುದ್ದಿಯನ್ನ ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ತನಗೂ ಸಂತ್ರಸ್ತೆಗೂ ಯಾವುದೇ ಸಂಬಂಧ ಇಲ್ಲ. ತಾನು ಯುವತಿಯ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿರುವುದೆಲ್ಲಾ ಸುಳ್ಳು ಎಂದು ಹೇಳಿದ್ಧಾರೆ. ಯುವತಿ ಜೊತೆ ಫೋನ್​ನಲ್ಲಿ ಮಾತನಾಡುತ್ತಿದ್ದ ವಿಚಾರವನ್ನ ತಳ್ಳಿಹಾಕದ ಸುಧಾಕರ್, ಯುವತಿಯ ಕಾಲ್ ಲಿಸ್ಟ್​ನಲ್ಲಿ ನನ್ನ ಹೆಸರು ಇರಬಹುದು. ಆದರೆ, ಆಕೆಗೆ ನಾನು ಹಣ ನೀಡಿದ್ದೇನೆನ್ನುವುದೆಲ್ಲಾ ಸುಳ್ಳು. ತನಗೆ ನೋಟೀಸ್ ಬಂದ ಬಳಿಕ ಅದಕ್ಕೆ ಉತ್ತರ ನೀಡುತ್ತೇನೆ ಎಂದು ಹೇಳಿದ್ದರು. ಅದರಂತೆ ಇದೀಗ ಎಸ್​ಐಟಿ ಅಧಿಕಾರಿಗಳು ಸುಧಾಕರ್ ಅವರಿಗೆ ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್ ಮಾಹಿತಿ ಸಮೇತ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಕೊಟ್ಟಿರುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ನಾಲಗೆ ಮೇಲೆ ಹಿಡಿತವೇ ಇಲ್ಲ: ಎಸ್ ಆರ್ ವಿಶ್ವನಾಥ್

ಚಿತ್ರದುರ್ಗ ಮೂಲದ ಡಿ. ಸುಧಾಕರ್ ಅವರು ಮೂರು ಬಾರಿ ಪಕ್ಷೇತರ ಶಾಸಕರಾಗಿದ್ದಾರೆ. 2004ರಲ್ಲಿ ಚಳ್ಳಕೆರೆಯಿಂದ ಹಾಗೂ 2008 ಮತ್ತು 2013ರಲ್ಲಿ ಹಿರಿಯೂರು ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 2008ರಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಬೆಂಬಲಿಸಿದ ಅವರು ಸಮಾಜ ಕಲ್ಯಾಣ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ವರದಿ: ಮುನಿರಾಜು ಹೊಸಕೋಟೆ
Published by: Vijayasarthy SN
First published: April 4, 2021, 1:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories