• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Ramesh Jarkiholi: ಗೋಕಾಕ್ ಆಸ್ಪತ್ರೆಗೆ ಭೇಟಿ ನೀಡಿದ ಎಸ್.ಐ.ಟಿ ತಂಡ; ರಮೇಶ್ ಜಾರಕಿಹೊಳಿ ಆರೋಗ್ಯದ ಕುರಿತು ಮಾಹಿತಿ ಕಲೆ

Ramesh Jarkiholi: ಗೋಕಾಕ್ ಆಸ್ಪತ್ರೆಗೆ ಭೇಟಿ ನೀಡಿದ ಎಸ್.ಐ.ಟಿ ತಂಡ; ರಮೇಶ್ ಜಾರಕಿಹೊಳಿ ಆರೋಗ್ಯದ ಕುರಿತು ಮಾಹಿತಿ ಕಲೆ

ಗೋಕಾಕ್​ ಆಸ್ಪತ್ರೆ

ಗೋಕಾಕ್​ ಆಸ್ಪತ್ರೆ

ಮಾಜಿ ಸಚಿವರು ಆಸ್ಪತ್ರೆಯಿಂದ ಬಿಡುಗಡೆಗೂ ಮುನ್ನ ಎಸ್​ಐಟಿ ತಂಡಕ್ಕೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ

  • Share this:

ಗೋಕಾಕ್​ (ಏ. 6):  ಕೊರೋನಾ ಹಿನ್ನಲೆ ಉಸಿರಾಟದ ಸಮಸ್ಯೆಯಿಂದಾಗಿ ಐಸಿಯುನಲ್ಲಿ ದಾಖಲಾಗಿರುವ  ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೂರನೇ ದಿನದ ಚಿಕಿತ್ಸೆ ಮುಂದುವರೆದಿದೆ. ಆಸ್ಪತ್ರೆಗೆ ದಾಖಲಾದ ಹಿನ್ನಲೆ ಎಸ್​ಐಟಿ ವಿಚಾರಣೆಗೆ ರಮೇಶ್​ ಜಾರಕಿಹೊಳಿ ಗೈರಾಗಿದ್ದರು. ಈ ಹಿನ್ನಲೆ ಇಂದು ಎಸ್​ಐಟಿ ತಂಡ ಆಸ್ಪತ್ರೆಗೆ ಭೇಟಿ ನೀಡಿ ರಮೇಶ್​ ಜಾರಕಿಹೊಳಿ ಆರೋಗ್ಯದ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ರಮೇಶ್​ ಜಾರಕಿಹೊಳಿ ಅವರು ಎಸ್​ಐಟಿ ತನಿಖೆಯಿಂದ ತಪ್ಪಿಸಿಕೊಳ್ಳಲು ಕೊರೋನಾ ಸುಳ್ಳು ನೆಪ ಹೇಳುತ್ತಿದ್ದಾರೆ ಎಂದು ಸಿಡಿ ಪ್ರಕರಣದ ಸಂತ್ರಸ್ತೆ ಪರ ವಕೀಲರು ಆರೋಪಿಸಿದ್ದರು. ಈ ಬೆನ್ನಲ್ಲೆ ಮಾಜಿ ಸಚಿವರು ಗೋಕಾಕ್​ ತಾಲೂಕು ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಈ ಬೆಳವಣಿಗೆ ಕುರಿತು ಮಾಹಿತಿ ಕಲೆ ಹಾಕಲು ಎಸ್​ಐಟಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದರು.  


ಬೆಂಗಳೂರಿನಿಂದ ಆಗಮಿಸಿದ್ದ ಇಬ್ಬರು ಅಧಿಕಾರಿಗಳು ಗೋಕಾಕ್ ನ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ  ಜೊತೆಗೆ ಸುಮಾರು ಒಂದು ಗಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಚರ್ಚೆ ವೇಳೆ ಚಿಕಿತ್ಸೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ಪಡೆದರು. ಈ ವೇಳೆ ಮಾಜಿ ಸಚಿವರು ಕೊವೀಡ್​ ವರದಿಯನ್ನು ಪರಿಶೀಲಿಸಲಾಗಿದ್ದು, ಕೆಲವು ಚಿಕಿತ್ಸೆ ದಾಖಲೆಗಳನ್ನು ಪಡೆದುಕೊಂಡರು.


ಅಧಿಕಾರಿಗಳ ಭೇಟಿ ಬಳಿಕ ಮಾತಾನಾಡಿದ ಡಾ, ರವೀಂದ್ರ, ಮಾಜಿ ಸಚಿವರು ಆಸ್ಪತ್ರೆಯಿಂದ ಬಿಡುಗಡೆಗೂ ಮುನ್ನ ಎಸ್​ಐಟಿ ತಂಡಕ್ಕೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿಸಿದರು.


ಮುಂದುವರೆದ ಚಿಕಿತ್ಸೆ:


ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಮೇಶ್​ ಜಾರಕಿಹೊಳಿ ಇನ್ನೂ ಎರಡೂ ವಾರ ಎಸ್.ಐ.ಟಿ ಮುಂದೆ ಹಾಜರಾಗುವುದು ಅನುಮಾನ ಎನ್ನಲಾಗುತ್ತಿದೆ. ರಮೇಶ್  ಸಂಪೂರ್ಣ ಚೇತರಿಸಿಕೊಂಡಿಲ್ಲ.  ಆಸ್ಪತ್ರೆಯಿಂದ ಡಿಸ್ಟಾರ್ಜ್ ಆದರೂ ಎರಡು ವಾರಗಳ ವರೆಗೂ ಕ್ವಾರಂಟೈನ ನಲ್ಲಿ ಅವರು ಇರಬೇಕಾಗುತ್ತದೆ.  ರಮೇಶ್​ ಜಾರಕಿಹೊಳಿ ಅವರಿಗೆ ಇನ್ನು ಬಿಪಿ, ಶುಗರ್ ಕಂಟ್ರೋಲ್ ಗೆ ಬಂದಿಲ್ಲ, ಈಗಲೂ ಸ್ವಲ್ಪ ಉಸಿರಾಟದ ತೊಂದರೆಯನ್ನು ಅವರು ಅನುಭವಿಸುತ್ತಿದ್ದಾರೆ. ಐದು ದಿನಗಳ ಬಳಿಕ ಟ್ರೀಟ್ ಮೆಂಟ್ ಸಂಪೂರ್ಣ ಆಗಲಿದೆ. ಎರಡು ವಾರಗಳ ಬಳಿಕ ಮತ್ತೆ ಕೊರೋನಾ ಪರೀಕ್ಷೆಗೆ ಅವರನ್ನು ಒಳಪಡಿಸಲಾಗುವುದು. ಆ ವರದಿಯಲ್ಲಿ ನೆಗಟಿವ್​ ಬಂದ ಬಳಿಕವೇ ಅವರು ಹೊರಗಡೆ ಓಡಾಡಲು ಸಾಧ್ಯ ಎಂದು ಡಾ. ರವೀಂದ್ರ ಹೇಳಿದ್ದಾರೆ.

Published by:Seema R
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು