'ಒಂದೇ ದಿನ ನಾಲ್ವರು ಅಧರ್ಮೀಯರ ವಿನಾಶ!': ಅಮೋಲ್​ ಕಾಳೆ ಡೈರಿಯಲ್ಲಿತ್ತು ದೊಡ್ಡ ಸಂಚು

news18
Updated:September 5, 2018, 8:40 AM IST
'ಒಂದೇ ದಿನ ನಾಲ್ವರು ಅಧರ್ಮೀಯರ ವಿನಾಶ!': ಅಮೋಲ್​ ಕಾಳೆ ಡೈರಿಯಲ್ಲಿತ್ತು ದೊಡ್ಡ ಸಂಚು
news18
Updated: September 5, 2018, 8:40 AM IST
ಗಂಗಾಧರ್​, ನ್ಯೂಸ್​18 ಕನ್ನಡ

ಬೆಂಗಳೂರು (ಸೆ. 5):  'ಏಕೀ ದಿವಸ್ ಚಾರ್ ಅಧರ್ಮಿಯೋಂಕಾ ವಿನಾಶ್​' (ಒಂದೇ ದಿನ ನಾಲ್ವರು ಅಧರ್ಮೀಯರ ವಿನಾಶ) ಎಂಬ ಹೆಸರಿನಲ್ಲಿ ನಾಲ್ವರು ವಿಚಾರವಾದಿಗಳ ಹತ್ಯೆ ನಡೆಸಲು ಗೌರಿ ಹತ್ಯೆಯ ಆರೋಪಿ ಅಮೋಲ್ ಕಾಳೆ ಸಂಚು ರೂಪಿಸಿತ್ತು. ಗೌರಿ ಹತ್ಯೆ ನಡೆಸಿದ ನಂತರ ಆ ನಾಲ್ವರನ್ನು ಕೊಲ್ಲಲು ಹಂತಕರು ಹೊಂಚು ಹಾಕಿದ್ದರು.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಾ ಹೋದ ಎಸ್​ಐಟಿ ಅಧಿಕಾರಿಗಳು ಅಮೋಲ್ ಕಾಳೆ ಡೈರಿಯಲ್ಲಿದ್ದ ಮಾಹಿತಿ ನೋಡಿ ದಂಗಾಗಿ ಹೋಗಿದ್ದರು. ಹಾಗಾದರೆ ಆ ಸಂಚು ಯಾವುದು? ಹಂತಕರು ಮತ್ತೆ ಯಾರ ಬೆನ್ನತ್ತಿ ಹೊರಟಿದ್ದರು? ಇಲ್ಲಿದೆ ಸಂಪೂರ್ಣ ಮಾಹಿತಿ...

ಹಂತಕರು ಅಲರ್ಟ್​ ಆಗಿದ್ದೇಕೆ?

 

ಅಮೋಲ್​ ಕಾಳೆಯ ಬಳಿಯಿದ್ದ ಡೈರಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಹತ್ಯೆಯ ಮಾಹಿತಿಯಿದೆಯೇ ಹೊರತು ದಿನಾಂಕವನ್ನು ನಿಗದಿ ಮಾಡಿರಲಿಲ್ಲ. ಯಾವಾಗ ಡೈರಿಯಲ್ಲಿದ್ದ ಚೀಟಿಗಳು ಪೊಲೀಸರ ಕೈ ಸೇರಿತೋ ಆಗ ಹಂತಕರು ಅಲರ್ಟ್​ ಆದರು. ಹತ್ಯೆಯ ಸಂಚಿನ ವಿಷಯ ತಿಳಿಯುತ್ತಿದ್ದಂತೆ ನಾಲ್ವರು ವಿಚಾರವಾದಿಗಳ ಮನೆಗೆ ಎಸ್​ಐಟಿ ಅಧಿಕಾರಿಗಳು ಹೆಚ್ಚಿನ ಭದ್ರತೆ ಒದಗಿಸಿ, ನಿಗಾ ವಹಿಸಿದ್ದರು.
Loading...

ಯಾರು ಆ ನಾಲ್ವರು?

ಗೌರಿ ಲಂಕೇಶ್​ ನಂತರ ಹಂತಕರ ಟಾರ್ಗೆಟ್​ ಆಗಿದ್ದ ಸಾಹಿತಿ ಗಿರೀಶ್ ಕಾರ್ನಾಡ್, ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ , ಚಿಂತಕ ಕೆ.ಎಸ್​. ಭಗವಾನ್ ಮತ್ತು ನರೇಂದ್ರ ನಾಯಕ್​ ಅವರನ್ನು ಒಂದೇ ದಿನ ಕೊಲ್ಲಲು ಸಂಚು ರೂಪಿಸಲಾಗಿತ್ತು. ಡೈರಿಯಲ್ಲಿ ಬರೆದಿದ್ದ ಅವರ ಹೆಸರುಗಳ ಮುಂದೆ ಆರೋಪಿಗಳು ಕೋಡ್ ವರ್ಡ್​ಗಳನ್ನು ಬರೆದಿದ್ದರು.

ಒಬ್ಬೊಬ್ಬರಿಗೆ ಒಂದೊಂದು ಕೋಡ್​ವರ್ಡ್​

ನಾಲ್ವರು ವಿಚಾರವಾದಿಗಳ ಕೊಲೆಗೆ ಶೂಟರ್ ಗಳ ಹೆಸರನ್ನು ಅಮೋಲ್​ ಕಾಳೆ ಕೋಡ್ ವರ್ಡ್​ನಲ್ಲಿ ಬರೆದಿಟ್ಟುಕೊಂಡಿದ್ದ. ಗೌರಿ ಲಂಕೇಶ್​ ಅವರನ್ನು ಕೊಂದ ಪರಶುರಾಮ್​ ವಾಗ್ಮೋರೆಯೇ ನರೇಂದ್ರ ನಾಯಕ್​ ಅವರನ್ನು ಕೂಡ ಕೊಲ್ಲುವವನಿದ್ದ. ಕಾಳೆ ಬಳಿಯಿದ್ದ ಡೈರಿಯಲ್ಲಿ ವಾಗ್ಮೋರೆಗೆ 'ಬಿಲ್ಡರ್' ಎಂಬ ಕೋರ್ಡ್ ವರ್ಡ್ ನೀಡಲಾಗಿತ್ತು.

ಗಿರೀಶ್​ ಕಾರ್ನಾಡ್ ಅವರಿಗೆ 'ಕಾಕಾ', ನಿಡುಮಾಮಿಡಿ ಸ್ವಾಮಿಜಿಗೆ 'ಸ್ವಾಮಿ' ಕೋರ್ಡ್ ವರ್ಡ್ ನೀಡಲಾಗಿತ್ತು. ಗೌರಿ ಲಂಕೇಶ್​ಗೆ 'ಅಮ್ಮ', ಅವರ ಮನೆಗೆ 'ಗೋಶಾಲೆ' ಎಂದು ಕೋಡ್​ವರ್ಡ್​ ಇಟ್ಟುಕೊಳ್ಳಲಾಗಿತ್ತು. ಡೈರಿಯಲ್ಲಿ ಮರಾಠಿ ಮತ್ತು ಇಂಗ್ಲಿಷ್​ ಭಾಷೆಯಲ್ಲಿ ಬರೆದಿದ್ದ ಕಾಳೆ ನಾಲ್ವರು ವಿಚಾರವಾದಿಗಳ ಹತ್ಯೆಗೆ ನಾಲ್ವರು ಶೂಟರ್ ಗಳನ್ನು ಕೂಡ ಫಿಕ್ಸ್ ಮಾಡಿದ್ದ. ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಕಾಳೆ ಕೈಬರಹವನ್ನು ಹೋಲಿಕೆ ಮಾಡಲಾಗಿದ್ದು, ಡೈರಿಯ ಬರಹಕ್ಕೆ ಅದು ತಾಳೆಯಾಗಿದೆ. ಹತ್ಯೆಗೆ ವಿಚಾರವಾದಿಗಳು ಅಷ್ಟೇ ಅಲ್ಲದೆ, ಕುಟುಂಬಸ್ಥರು , ಎಸ್ ಐಟಿ ತನಿಖಾಧಿಕಾರಿಗಳ ಹಿಟ್ ಲಿಸ್ಟ್ ಅನ್ನು ಆರೋಪಿಗಳು ಸಿದ್ದಪಡಿಸಿದ್ದರು.

ತಲೆಕೂದಲಿನಿಂದ ಸಿಕ್ಕಿತು ಸುಳಿವು!

ಹೌದು, ತನಿಖೆಯ ಬೆನ್ನತ್ತಿ ಹೊರಟ ಎಸ್​ಐಟಿ ಅಧಿಕಾರಿಗಳಿಗೆ ಅಮೋಲ್​ ಕಾಳೆಯ ಸಂಚಿನ ಬಗ್ಗೆ ಸುಳಿವು ಕೊಟ್ಟಿದ್ದು ತಲೆಕೂದಲು!. ಅಮೋಲ್​ ಕಾಳೆ ವಿಚಾರವಾದಿಗಳ ಹತ್ಯೆಗೆ ಸಂಚು ರೂಪಿಸಿದ್ದ ಎಂಬುದಕ್ಕೆ ತಲೆಕೂದಲೇ ಎಸ್​ಐಟಿಗೆ ಪ್ರಮುಖ ಸಾಕ್ಷಿಯಾಗಿ ಪರಿಣಮಿಸಿತು. ಕುಣಿಗಲ್ ಸುರೇಶ್  ಅವರ ಮನೆಯಲ್ಲಿ ಕಾರ್ಯಾಚರಣೆ ನಡೆಸಿದ ವೇಳೆ ಸಿಕ್ಕ ತಲೆಕೂದಲು ಕಾಳೆಯದ್ದೇ ಎಂದು ಎಫ್​ಎಸ್​ಎಲ್​ ನೀಡಿದ್ದ ವರದಿಯಿಂದ ಅಧಿಕಾರಿಗಳ ಅನುಮಾನ ಖಾತರಿಯಾಗಿತ್ತು. ಕೃತ್ಯಕ್ಕೆ ಬಳಸಲಾಗಿದ್ದ ಪಿಸ್ತೂಲು ಸಿಗದಿದ್ದರೂ ಎಸ್​ಐಟಿ ಅಧಿಕಾರಿಗಳು ವೈಜ್ಞಾನಿಕ ಸಾಕ್ಷಿಗಳನ್ನು ಕಲೆ ಹಾಕಿದ್ದರು ಎಂಬ ಮಾಹಿತಿ ನ್ಯೂಸ್​18 ಕನ್ನಡಕ್ಕೆ ಉನ್ನತ ಮೂಲಗಳಿಂದ ಲಭಿಸಿದೆ.

 
First published:September 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626