• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Kolara: ಮಕ್ಕಳನ್ನು ಬಿಟ್ಟು ಹೋದ ಪೋಷಕರು! ತಮ್ಮನ ಓದಿಸಲು ಈ ಬಾಲಕಿ ಪಡುತ್ತಿರೋ ಕಷ್ಟ ನೋಡಿ

Kolara: ಮಕ್ಕಳನ್ನು ಬಿಟ್ಟು ಹೋದ ಪೋಷಕರು! ತಮ್ಮನ ಓದಿಸಲು ಈ ಬಾಲಕಿ ಪಡುತ್ತಿರೋ ಕಷ್ಟ ನೋಡಿ

ತಮ್ಮನೊಂದಿಗೆ ಸೋರುವ ಮನೆಯಲ್ಲಿ ಅಕ್ಕ

ತಮ್ಮನೊಂದಿಗೆ ಸೋರುವ ಮನೆಯಲ್ಲಿ ಅಕ್ಕ

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬಗಳಹಳ್ಳಿ ಗ್ರಾಮದಲ್ಲಿ ಇಂದೊ, ನಾಳೆಯೊ ಕುಸಿಯುವ ಭೀತಿಯಲ್ಲಿರೊ ಮನೆಯಲ್ಲೆ ಶಸಿಕಲಾ ಹಾಗು ಶ್ರೀಕಾಂತ್ ಇಬ್ಬರು ವಾಸಿವಿದ್ದು, ತಮ್ಮನ ಓದಿಗಾಗಿ, ಜೀವನ ನಿರ್ವಹಣೆಗಾಗಿ ಕೂಲಿ ಕೆಲಸ ಮಾಡುತ್ತಿರುವುದನ್ನ ಗಮನಿಸಿದ ಗ್ರಾಮಸ್ತರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ.

ಮುಂದೆ ಓದಿ ...
  • Share this:

ಕೋಲಾರ(ಜೂ.26): ಕಿತ್ತು ತಿನ್ನುವ ಬಡತನದ ಮಧ್ಯೆ ತಮ್ಮನಿಗೆ ವಿದ್ಯಾಬ್ಯಾಸ ಕೊಡಿಸಲು, 15 ವರ್ಷದ ಬಾಲಕಿ ಕೂಲಿ (Coolie) ಕೆಲಸ ಮಾಡಿ ಜೀವನ ನಡೆಸ್ತಿರುವ ದಾರುಣ ಘಟನೆ ಕೋಲಾರ (Kolara) ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬಗಳಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ಚಿನ್ನಪ್ಪ, ಭಾಗ್ಯಮ್ಮ ದಂಪತಿಯ ಮಕ್ಕಳಾದ 15 ವರ್ಷದ ಶಶಿಕಲಾ, ಹಾಗು 11 ವರ್ಷದ ಶ್ರೀಕಾಂತ್ ಕಳೆದ ಎರಡು ತಿಂಗಳಿಂದ, ತಂದೆ ತಾಯಿ ಇಲ್ಲದೆ, ಇಂದೊ, ನಾಳೆಯೊ ಕುಸಿದ ಬೀಳುವ ಮನೆಯಲ್ಲಿ ಇಬ್ಬರೇ ಜೀವನ ನಡೆಸುತ್ತಿದ್ದಾರೆ. ತಂದೆ ಮದ್ಯವ್ಯಸನಿ (Alcoholic), ತಾಯಿಗೆ ಮಾನಸಿಕ ಖಿನ್ನತೆ ಕಾಡುತ್ತಿದ್ದು, ಎರಡು ತಿಂಗಳ ಹಿಂದೆ ಬೈಕ್ ಅಪಘಾತದಲ್ಲಿ (Bike Accident) ತಮ್ಮನಾದ ಶ್ರೀಕಾಂತ್ ಬಲಗಾಲು ಮುರಿತವಾಗಿ, ಸೊಂಟಕ್ಕು ಪೆಟ್ಟಾಗಿದೆ. ಹೀಗಾಗಿ ಶ್ರೀಕಾಂತ್ ಎದ್ದು ಓಡಾಡಲು ಕಷ್ಟವಾಗುತ್ತಿದೆ.


ಈ ಮಧ್ಯೆ ಮಕ್ಕಳಿಬ್ಬರನ್ನ ಗ್ರಾಮದಲ್ಲಿಯೇ ಬಿಟ್ಟಿರುವ ದಂಪತಿಗಳು (Couple) ಕಳೆದೆರಡು ತಿಂಗಳಿಂದ ಹೊಸಕೋಟೆ ಬಳಿಯ ಎಚ್ ಕ್ರಾಸ್ ನಲ್ಲಿ ವಾಸವಿದ್ದಾರೆ.  ಗ್ರಾಮದ ಸರ್ಕಾರಿ ಶಾಲೆಯಲ್ಲೆ (Govt School)  5 ನೇ ತರಗತಿ ಓದುತ್ತಿರುವ  ತಮ್ಮನ ವಿಧ್ಯಾಬ್ಯಾಸಕ್ಕೆ (Education) ಅಡ್ಡಿ ಆಗಬಾರದೆಂದು ನಿತ್ಯ ಶಾಲೆಗೆ, ಕೈ ಯಲ್ಲಿ ತಮ್ಮನನ್ನ ಎತ್ತಿಕೊಂಡು ಹೊಗುವ ಶಶಿಕಲಾ, ಸಂಜೆ ಶಾಲೆಯಿಂದ ಮನೆಗೆ ಕರೆದುಕೊಂಡು ಬರುವ ಕೆಲಸ ಮಾಡುತ್ತಿದ್ದಾರೆ.


ತಮ್ಮನ ವಿಧ್ಯಾಭ್ಯಾಸಕ್ಕಾಗಿ, ಶಾಲೆ ಬಿಟ್ಟು ಕೂಲಿ ಕೆಲಸ


ಇನ್ನು ತಮ್ಮನ ವಿದ್ಯಾಬ್ಯಾಸ, ಜೀವನ ನಿರ್ವಹಣೆಗಾಗಿ, ಹೊಸಕೋಟೆಯ ಶಾಲೆಯೊಂದರಲ್ಲಿ 9 ನೇ ತರಗತಿ ಓದುತ್ತಿದ್ದ ಬಾಲಕಿ ಶಶಕಲಾ, ತನ್ನ ವಿದ್ಯಾಬ್ಯಾಸಕ್ಕೆ ಬ್ರೇಕ್ ಹಾಕಿ, 250 ರೂಪಾಯಿ ಕೂಲಿ (Coolie) ಸಿಗುವ ಕೆಲಸಕ್ಕೆ ಹೋಗುವಂತಾಗಿದೆ.


ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಶಶಿಕಲಾ


ಗ್ರಾಮದಲ್ಲೆ ಜಮೀನು ಕೆಲಸ, ಕೃಷಿಗೆ ಸಂಬಂದಿಸಿದ ಕೂಲಿ ಕೆಲಸಕ್ಕೆ ಹೋಗಿ ಜೀವನ ನಡೆಸುತ್ತಿದ್ದಾರೆ.  ಸಣ್ಣ ವಯಸ್ಸಿನಲ್ಲೆ ಶಶಿಕಲಾ ಕೂಲಿ ಮಾಡುವುದನ್ನ ಗಮನಿಸಿದ ಸ್ಥಳೀಯರು (Locals) ಹಾಗು ಶಿಕ್ಷಕರು, ಕೆಲಸಕ್ಕೆ ಹೋಗದಂತೆ ಸೂಚನೆ ನೀಡಿದ್ದು, ತಮ್ಮ ಕೈಲಾದ ಸಹಾಯ ಮಾಡೊದಾಗಿ ಹೇಳಿದ್ದಾರೆ.


ಇದನ್ನೂ ಓದಿ: ಮಳೆಗಾಲದಲ್ಲಿ ಕೊಡಗಿಗೆ ತಪ್ಪದ ಕಂಟಕ; ಜನರಲ್ಲಿ ಇದೀಗ ಭೂಕಂಪದ ಆತಂಕ


15 ಅಡಿ ಉದ್ದ, 10 ಅಡಿ ಅಗಲ ವಿಸ್ತೀರ್ಣದ ಮನೆಯಲ್ಲೆ ವಾಸವಿರುವ ಮನೆಯ ಮೇಲ್ಚಾವಣಿ ಸಂಫೂರ್ಣವಾಗಿ ಕಿತ್ತು ಹೊಗಿದ್ದು, ಮಳೆಯಾದರೆ ಮನೆಯೆಲ್ಲ ಸೋರುತ್ತಿದ್ದು, ಜಡಿ ಮಳೆಯಾದರೆ ಮನೆಯೇ ಕುಸಿತವಾಗುವ ಭೀತಿಯು ಎದುರಾಗಿದೆ.


ಬಾಲ್ಯವನ್ನ ಖುಷಿ ಖುಷಿಯಾಗಿ ಕಳೆಯಬೇಕಿದ್ದ ಮಕ್ಕಳು, ಮಳೆ, ಬಿಸಿಲು, ಗಾಳಿ ತಡೆಯದ ಮನೆಯಲ್ಲಿ, ಅಕ್ಕ ತಮ್ಮನ ಸಂಕಷ್ಟ ಹೇಳತೀರದ್ದಾಗಿದೆ.  ಮನೆಯ ಹಿಂಭಾಗದಲ್ಲೆ ಚರಂಡಿಯಿದ್ದು (Drainage) ನೀರು ನಿಂತು ಸ್ಥಳದಲ್ಲಿ ಕೊಳೆತು ಗಬ್ಬು  ನಾರುತ್ತಿದೆ.  ಇಬ್ಬರಿಗು ಗ್ರಾಮಸ್ಥರು ತಮ್ಮ ಕೈಲಾದ ಸಹಾಯವನ್ನ (Help) ಮಾಡುತ್ತಾ ಮಾನವೀಯತೆ ಮೆರೆಯುತ್ತಿದ್ದಾರೆ.


ಇದನ್ನೂ ಓದಿ: Sister Kidnap: ತವರು ಮನೆಗೆ ಹೋದವಳು ನಾಪತ್ತೆ, ರಿಸೆಪ್ಷನ್​ಗೂ ಮುನ್ನ ತಂಗಿಯನ್ನೇ ಕಿಡ್ನ್ಯಾಪ್ ಮಾಡಿದ್ನಾ ಸಹೋದರ?


ಈ ಕುರಿತು ಮಾತನಾಡಿರುವ ಬಾಲಕಿ ಶಶಿಕಲಾ, ನಮಗೆ ವಿಧ್ಯಾಬ್ಯಾಸ ಮಾಡುವ ಆಸೆಯಿದ್ದು ಈ ಬಗ್ಗೆ ಯಾರಾದರು ನಮಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ. ದಾನಿಗಳು ಇಬ್ಬರಿಗೆ ನೆರವಿನ ಹಸ್ತ ಚಾಚುವಂತೆಯು ಗ್ರಾಮಸ್ತರು ಮನವಿ ಮಾಡಿದ್ದು, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇಲಾಖೆಯ ಯೋಜನೆಯಡಿ ಸಂಕಷ್ಟಕ್ಕೆ ಸಿಲುಕಿರುವ ಅಕ್ಕ.ತಮ್ಮನ ರಕ್ಷಣೆ ಮಾಡಬೇಕಿದೆ.

top videos
    First published: