ಇಂದಿನಿಂದ ಪ್ಲಾಸ್ಟಿಕ್ ನಿಷೇಧಿಸುವ ಪಣತೊಟ್ಟ ಶಿರಸಿ ನಗರಸಭೆ
news18
Updated:June 5, 2018, 7:05 PM IST
news18
Updated: June 5, 2018, 7:05 PM IST
- ರಾಜೇಂದ್ರ ಸಿಂಗನಮನೆ, ನ್ಯೂಸ್ 18 ಕನ್ನಡ
ಶಿರಸಿ(ಜೂನ್ 05) : ವಿಶ್ವವೇ ಪರಿಸರ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪರಿಸರದಿನಾಚರಣೆ ಆಚರಿಸಲಾಯಿತು. ಇಲ್ಲಿನ ನಗರಸಭೆ ಇಂದಿನಿಂದ ನಗರದಲ್ಲಿ ಪ್ಲಾಸ್ಟಿಕ್ ವ್ಯಾಪಾರವನ್ನು ಸಂಪೂರ್ಣ ನಿಷೇಧಿಸುವ ಮೂಲಕ ಪರಿಸರ ರಕ್ಷಣೆಗೆ ಪಣತೊಟ್ಟಿದೆ.
ಜಾಗತಿಕ ತಾಪಮಾನವನ್ನು ವಿಶ್ವವೇ ಎದುರಿಸುತ್ತಿದ್ದು, ಇದರ ನಿಯಂತ್ರಣದ ಬಗ್ಗೆ ಎಲ್ಲ ರಾಷ್ಟ್ರಗಳೂ ತಲೆಕೆಡಿಸಿಕೊಳ್ಳುತ್ತಿವೆ. ಗಿಡ ಮರಗಳ ಅಭಿವೃದ್ಧಿ, ಸ್ವಚ್ಛ ಪರಿಸರವೇ ಎಲ್ಲ ಸಮಸ್ಯೆಗಳ ನಿವಾರಣೆಯಾಗಿರುವ ಮಾರ್ಗ. ಈ ಹಿನ್ನೆಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಎಲ್ಲಿಲ್ಲದ ಮಹತ್ವ ಒಡೆದುಕೊಂಡಿದೆ. ಅದರಲ್ಲೂ ಪಶ್ಚಿಮ ಘಟ್ಟದ ಮಲೆನಾಡಿನ ಪರಿಸರ ಹೊಂದಿರುವ ಶಿರಸಿಯಂಥ ನಗರಗಳಲ್ಲಿ ಪರಿಸರದ ಕಾರ್ಯಕ್ರಮಗಳು ತೀರಾ ಮಹತ್ವ ಪಡೆದುಕೊಳ್ಳುತ್ತವೆ.
ಶಿರಸಿ ನಾಗರಿಕರು ಇಂದು ಗಿಡ ನೆಟ್ಟು ಪರಿಸರ ದಿನ ಆಚರಿಸಿದರು. ಅರಣ್ಯ ಇಲಾಖೆ, ಅರಣ್ಯ ಮಹಾವಿದ್ಯಾಲಯ ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳ ನೇತೃತ್ವದಲ್ಲಿ ಪರಿಸರ ಜಾಗೃತಿ ಜಾಥಾ ನಡೆಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪರಿಸರ ಸಂಬಂಧಿ ಘೋಷಣೆಗಳನ್ನು ಕೂಗಿದರು. ನಂತರ ನಡೆದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸತ್ರ ಸಿವಿಲ್ ನ್ಯಾಯಾಧೀಶರಾದ ಶಾಂತವೀರಶಿವಪ್ಪ ಪ್ಲಾಸ್ಟಿಕ್ನ್ನು ಜವಾಬ್ಧಾರಿಯುತವಾಗಿ ಬಳಸಬೇಕು. ತ್ಯಾಜ್ಯ ನಿರ್ವಹಣೆಯಲ್ಲಿ ಹೊಣೆಗಾರಿಕೆ ತೋರಬೇಕು. ಪ್ಲಾಸ್ಟಿಕ್ನಿಂದ ಪ್ರಾಣಿಗಳು ಸಂಕಷ್ಟಕ್ಕೆ ತುತ್ತಾಗುವುದನ್ನ ತಪ್ಪಿಸಬೇಕು. ಇದಕ್ಕೆ ಎಲ್ಲರ ಸಹಾಯ ಸಹಕಾರ ಅಗತ್ಯ ಎಂದರು.
ಈ ವರ್ಷ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಘೋಷ ವಾಕ್ಯದಡಿ ಪರಿಸರ ದಿನಾಚರಣೆ ನಡೆಸಲು ಕರೆ ನೀಡಲಾಗಿದ್ದು, ಹಿನ್ನೆಯಲ್ಲಿ ಶಿರಸಿ ನಗರಸಭೆ ಅಧಿಕಾರಿಗಳು ನಗರದ ಪ್ರಮುಖ ಅಂಗಡಿಗಳ ಮೇಲೆ ದಾಳಿ ನಡೆಸಿ ಮಾರಾಟಕ್ಕೆ ಇಟ್ಟಿದ್ದ ಪ್ಲಾಸ್ಟಿಕ್ಗಳನ್ನು ವಶಪಡಿಸಿಕೊಂಡರು. ಅಲ್ಲದೇ ಇನ್ನು ಮುಂದೆ ನಗರದಲ್ಲಿ ಒಂದೇ ಒಂದು ಪೀಸ್ ಪ್ಲಾಸ್ಟಿಕ್ ಮಾರಾಟಕ್ಕೆ ಅವಕಾಶ ಇಲ್ಲ. ನಿಯಮ ಮೀರಿ ನಡೆದು ಕೊಂಡವರಿಗೆ ದಂಡ ವಿಧಿಸುವುದಾಗಿ ಎಚ್ಚರಿಸಿದರು.
ಶಿರಸಿ ಜೀವಜಲ ಕಾರ್ಯಪಡೆ ನೇತೃತ್ವದಲ್ಲಿ ಕೆರೆ ಅಭಿವೃದ್ಧಿ ಹಾಗೂ ಸ್ವಚ್ಛತೆ ಕುರಿತು ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಒಟ್ಟಿನಲ್ಲಿ ವಿಶ್ವ ಪರಿಸರ ದಿನದಂದು ಪ್ರಜ್ಞಾವಂತ ಜನ ಸಮುದಾಯ ಎಚ್ಚೆತ್ತು ಪರಿಸರ ರಕ್ಷಣೆಗೆ ಮುಂದಾಗಿರುವುದು ಸಂತೋಷದ ಸಂಗತಿ.

Loading...
Loading...