• Home
  • »
  • News
  • »
  • state
  • »
  • Sirsi Marikamba Jatre: ಶಿರಸಿ ಮಾರಿಕಾಂಬಾ ದೇವಿ‌ಯ ಆಶೀರ್ವಾದ ಪಡೆಯಿರಿ! ಜಾತ್ರೆ ಮುಗಿಯೋಕೆ ಇನ್ನೊಂದೇ ದಿನ ಬಾಕಿ!

Sirsi Marikamba Jatre: ಶಿರಸಿ ಮಾರಿಕಾಂಬಾ ದೇವಿ‌ಯ ಆಶೀರ್ವಾದ ಪಡೆಯಿರಿ! ಜಾತ್ರೆ ಮುಗಿಯೋಕೆ ಇನ್ನೊಂದೇ ದಿನ ಬಾಕಿ!

ಶ್ರೀ ಮಾರಿಕಾಂಬಾ ದೇವಿ

ಶ್ರೀ ಮಾರಿಕಾಂಬಾ ದೇವಿ

ದೇವಿಯ ದರ್ಶನ‌ ಜತೆಗೆ ವಿವಿಧ ಹರಕೆ‌ ಸೇವೆಗಳಿಗೂ ಭಕ್ತರಿಗೆ ಅವಕಾಶ ನೀಡಲಾಗಿತ್ತು. ಅಂದಿನಿಂದ ಇಂದಿನವರೆಗೆ ಮಾರಿಕಾಂಬೆ ದರ್ಶನ‌ ಪಡೆದವರ ಸಂಖ್ಯೆ ಅಂದಾಜು ಆರು ಲಕ್ಷ ಅಂತೆ.

  • Share this:

ಕಾರವಾರ: ಆದಿ‌ದೇವತೆ ಶಿರಸಿ ಮಾರಿಕಾಂಬಾ ದೇವಿ‌ ಜಾತ್ರೆಗೆ  (Sirsi Marikamba Jatre) ಇವತ್ತು ಎಂಟನೆ ದಿನ. ಶಿರಸಿ‌ ಮಾರಿಕಾಂಬೆ ದೇವಿಯನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ‌ಮೂಲೆ ಗಳಿಂದ ಲಕ್ಷಾಂತರ (Sri Marikamba Devotees) ಭಕ್ತರ ದಂಡೆ ಹರಿದು‌ಬರುತ್ತಿದೆ. ದೇವಿ‌ ದರ್ಶನಕ್ಕೆ ನೂಕುನುಗ್ಗಲು ಆಗಿದ್ದು ಭಕ್ತರ ಸಂಖ್ಯೆ ದಿನದಿನಕ್ಕೂ ಅಧಿಕವಾಗುತ್ತಿದ್ದು ಪೋಲಿಸ್ ಇಲಾಖೆ (Police Department)ಸಿಬ್ಬಂದಿ ಭಕ್ತರ ನೂಕುನುಗ್ಗಲು ಸರಿಪಡಿಸಲು‌ ಹೈರಾಣಾಗಿದ್ದಾರೆ. ಮಾರ್ಚ್ 15ರಿಂದ ಆರಂಭವಾದ ಉತ್ತರ ಕನ್ನಡ ಜಿಲ್ಲೆಯ (Uttara Kannada) ಮಲೆನಾಡಿದ ಆದಿ‌ ದೇವತೆ ಶಿರಸಿ ಮಾರಿಕಾಂಬಾ ದೇವಿ‌ಜಾತ್ರೆ ನಾಳೆ ತೆರೆ ಕಾಣಲಿದೆ. ಮಾರ್ಚ್ 16 ಬುಧವಾರದಂದು ಶಿರಸಿಯ ಬಿಡ್ಕಿ ಬೈಲಿನಲ್ಲಿ ವಿರಾಜಮಾನಳಾದ ಮಾರಿಕಾಂಬೆಯ‌ ದರ್ಶನಕ್ಕೆ (Sirsi Shri Marikamba Devi Darshan) ಮಾರ್ಚ್ 17ರಿಂದ ಅವಕಾಶ ನೀಡಲಾಗಿತ್ತು. 


ದೇವಿಯ ದರ್ಶನ‌ ಜತೆಗೆ ವಿವಿಧ ಹರಕೆ‌ ಸೇವೆಗಳಿಗೂ ಭಕ್ತರಿಗೆ ಅವಕಾಶ ನೀಡಲಾಗಿತ್ತು. ಅಂದಿನಿಂದ ಇಂದಿನವರೆಗೆ ಮಾರಿಕಾಂಬೆ ದರ್ಶನ‌ಪಡೆದವರ ಸಂಖ್ಯೆ ಅಂದಾಜು ಆರು ಲಕ್ಷ ಅಂತೆ. ಮಾರ್ಚ್ 15ರಂದು‌ ದೇವಿಯ ಕಲ್ಯಾಣೋತ್ಸವ ಸಮಾರಂಭ ನಡೆದಿತ್ತು ಬಳಿಕ ಮಾರ್ಚ್ 16ರಂದು ದೇವಿಯನ್ನ ರಥದಲ್ಲಿ ಮೆರವಣಿಗೆ ಮೂಲಕ ಜಾತ್ರಾ ಗದ್ದುಗೆಯಲ್ಲಿ ಕುರಿಸಲಾಗಿತ್ತು. ಅಂದಿನಿಂದ ಇಂದಿನ ವರೆಗೆ ಜಾತ್ರೆ ಲಕ್ಷಾಂತರ ಭಕ್ತ ಸಮೂಹದ ನಡುವೆ ಶ್ರದ್ಧಾ ಭಕ್ತಿ ಪೂರ್ವಕವಾಗಿ‌ ನಡೆಯುತ್ತಿದೆ.


ದೇವಿ ದರ್ಶನ ಮಾಡಿ..ಲೈವ್ ಜಾತ್ರೆ ನೋಡಿ!
ರಾಜ್ಯದ ಮೂಲೆ ಮೂಲೆ ಗಳಿಂದ‌ ಬರುವ ಭಕ್ತರು...ಅಪಾರ ನಂಬಿಕೆ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ..


ನಾಡಿನ ಶಕ್ತಿಪೀಠಗಳಲ್ಲಿ ಒಂದಾಗಿರುವ ಶಿರಸಿ ಮಾರಿಕಾಂಬೆ ದೇವಿ ಭಕ್ತರ ಪಾಲಿನ ಆರಾಧ್ಯ ದೇವರು. ಸುಮಾರು ಐನೂರು ವರ್ಷಗಳ ಹಿಂದೆ ಮಾರಿಕಾಂಬಾ ದೇವಿಯನ್ನ ಸೋದೆ ಅರಸರು ಪ್ರತಿಷ್ಠಾಪಿಸಿದರು. ಐವತ್ತು ವರ್ಷಗಳ ಹಿಂದೆ ಶಿರಸಿ ಗ್ರಾಮವಾಗಿತ್ತು. ಇದೀಗ ಶಿರಸಿ ನಗರವಾಗಿ ಲಕ್ಷಾಂತರ ಜನಸಂಖ್ಯೆಯನ್ನ ಹೊಂದಿದೆ. ಅಲ್ಲದೇ ಕಾಲಕಳೆದಂತೆ ದೇವಿಯ ಭಕ್ತರ ಸಂಖ್ಯೆ ಕೂಡ ಜಾಸ್ತಿಯಾಗಿದೆ. ಬೇಡಿದವರಿಗೆ ವರವನ್ನ ನೀಡುತ್ತಿರುವ ಶ್ರೀ ಮಾರಿಕಾಂಬಾ ದೇವಿ ಭಕ್ತರ ಪಾಲಿನ ಅಧೀದೇವತೆಯಾಗಿದ್ದಾಳೆ.


ಇದನ್ನೂ ಓದಿ: Sirsi Marikamba Jatra 2022: ಶಿರಸಿ ಮಾರಿಕಾಂಬೆಯ ಪ್ರೀತ್ಯರ್ಥ ರಕ್ತದಾನ ಸೇವೆ! ಪೂಜೆ, ಹರಕೆಯ ಜೊತೆಗೆ ರಕ್ತದಾನ ಮಾಡಿ


ವಿವಿಧ ಹರಕೆ ಸಲ್ಲಿಕೆ
ಭಕ್ತರು ತಮಗಾದ ಕಷ್ಟವನ್ನ ನಿವಾರಿಸುವಂತೆ ತಾಯಿ ಮಾರಿಕಾಂಬೆಯನ್ನ ಬೇಡಿಕೊಳ್ತಾರೆ. ಅನಾರೋಗ್ಯ, ವಿವಾಹ ಭಾಗ್ಯ, ಸಂತಾನ ಹೀಗೆ ನಾನಾ ಕಾರಣಕ್ಕಾಗಿ ದೇವಿಯಲ್ಲಿ ಪ್ರಾರ್ಥಿಸಿಕೊಳ್ತಾರೆ. ಕಷ್ಟ ಪರಿಹಾರವಾಗಿ, ಬೇಡಿಕೆ ಈಡೇರಿದ ಮೇಲೆ ಜಾತ್ರೆಯ ಸಂದರ್ಭದಲ್ಲಿ ಬಂದು ದೇವರಿಗೆ ಬೆಳ್ಳಿ, ಬಂಗಾರದ ಕಣ್ಣು, ಕಾಣಿಕೆ ಅರ್ಪಿಸ್ತಾರೆ.  ಮಹಿಳೆಯರು ಉಡಿ ಸಲ್ಲಿಸ್ತಾರೆ.


ದೇವಿಯ ದರ್ಶನ  ಪಡೆದ ಗಣ್ಯರು
ಭಕ್ತರ ಪ್ರಾರ್ಥನೆಗನುಸಾರವಾಗಿ ದೇವಿ ಅಭಯ ನೀಡುತ್ತಾ ರಕ್ಷಿಸುತ್ತಿದ್ದಾಳೆ. ಹೀಗಾಗಿ ದೇವಿಯ ಜಾತ್ರೆಯಲ್ಲಿ ಭಕ್ತರು ಉತ್ಸಾಹದಿಂದ ಭಾಗವಹಿಸ್ತಾರೆ. ಭಕ್ತರು ಯಾವುದೇ ಕೆಲಸ ಕಾರ್ಯಗಳಿದ್ದರೂ ಕೂಡ ಜಾತ್ರೆಯಲ್ಲಿ ಹಾಜರಿರ್ತಾರೆ. ಈಗಾಗಲೆ ದೇವಿಯ ದರ್ಶನಕ್ಕೆ ಗಣ್ಯಾತಿ ಗಣ್ಯರು, ರಾಜಕೀಯ ನಾಯಕರು, ಜನಪ್ರತಿನಿಧಿಗಳು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ.


ಇದನ್ನೂ ಓದಿ: Viral Photos: ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿ ಪುನೀತ್ ರಾಜ್‌ಕುಮಾರ್ ಪ್ರತ್ಯಕ್ಷ! ನೀವೇ ಫೋಟೋ ನೋಡಿ


ಮಾರ್ಚ್ 23ರವರೆಗೆ ಜಾತ್ರೆ ನಡೆಯಲಿದ್ದು, ಅಂದು ಸಂಜೆ ಬೈಹತ್ ಮೆರವಣಿಗೆ ಮೂಲಕ ತನ್ನ ಮೂಲ ಸ್ಥಾನಕ್ಕೆ ಮರಳುತ್ತದೆ. ಯುಗಾದಿಯ ದಿನ ತಾಯಿ ಮಾರಿಕಾಂಬೆಯನ್ನ ದೇವಾಲಯದಲ್ಲಿ ಪುನಃ ಪ್ರತಿಷ್ಠಾಪನೆ ಮಾಡಲಾಗುತ್ತದೆ.

Published by:ಗುರುಗಣೇಶ ಡಬ್ಗುಳಿ
First published: