HR RameshHR Ramesh
|
news18-kannada Updated:March 4, 2020, 9:23 PM IST
ಶಿರಸಿ ಮಾರಿಕಾಂಬ ದೇವಿ ಜಾತ್ರೆಯ ರಥೋತ್ಸವ.
ಶಿರಸಿ: ರಾಜ್ಯದಲ್ಲೇ ಅತಿದೊಡ್ಡ ಜಾತ್ರೆ ಎಂದು ಪ್ರಸಿದ್ದಿ ಪಡೆದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ ದೇವಿಯ ಜಾತ್ರೆ ಇಂದು ಲಕ್ಷಾಂತರ ಭಕ್ತ ಸಮೂಹದ ಉಘೇ ಉಘೇ ಘೋಷಣೆಯೊಂದಿಗೆ ಪ್ರಾರಂಭಗೊಂಡಿದೆ. ಮಾರಿ ದೇವಿಯಯನ್ನು ಜಾತ್ರಾ ಚಪ್ಪರಕ್ಕೆ ಕರೆತರಲು ಲಕ್ಷಾಂತರ ಭಕ್ತ ಸಮೂಹ ಸಾಕ್ಷಿಯಾಯಿತು. ಮೆರವಣಿಗೆಯುದ್ದಕ್ಕೂ ಭಕ್ತರಿಂದ ಮಾರಿಕಾಂಬೆಯ ಉದ್ಘಾರ ಘೋಷಣೆ ಮೊಳಗಿತು.
ಉತ್ತರ ಕನ್ನಡ ಜಿಲ್ಲೆಯ ಜಾಗೃತ ದೇವತೆಗಳಲ್ಲೊಂದಾದ ಶಕ್ತಿ ದೇವತೆ ಶಿರಸಿಯ ಮಾರಿಕಾಂಭ ದೇವಿಯ ಜಾತ್ರೆ ನೂರಾರು ವರ್ಷದ ಇತಿಹಾಸ ಹೊಂದಿದ್ದು, ಇಂದು ಲಕ್ಷಾಂತರ ಭಕ್ತ ಸಮೂಹದೊಂದಿಗೆ ಜಾತ್ರಾ ಗದ್ದುಗೆಗೆ ಮಾರಿಕಾಂಬಾ ದೇವಿ ವಿರಾಜಮಾನಳಾದಳು. ದೇವಾಲಯದಿಂದ ಜಾತ್ರಾ ಗದ್ದುಗೆಗೆ ರಥ ಎಳೆಯುವ ಸಂದರ್ಭದಲ್ಲಿ ಭಕ್ತಾದಿಗಳ ಉದ್ಘಾರ ಘೋಷ ಮುಗಿಲು ಮುಟ್ಟಿತ್ತು. ಎರಡು ವರ್ಷಕ್ಕೊಮ್ಮೆ 9 ದಿನಗಳ ಕಾಲ ನಡೆಯುವ ಕರ್ನಾಟಕದಲ್ಲೇ ಅತಿದೊಡ್ಡ ಜಾತ್ರೆ ಎಂದು ಶಿರಸಿ ಮಾರಿಕಾಂಬ ದೇವಿ ಜಾತ್ರೆ ಹೆಗ್ಗಳಿಕೆ ಪಡೆದಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರ ದಂಡು ಆಗಮಿಸಿತ್ತು.
ಇನ್ನೂ ಎರಡು ವರ್ಷಕ್ಕೊಮ್ಮೆ ನಡೆಯುವ ಮಾರಿ ಜಾತ್ರೆಗೆ ಶಿರಸಿಯ ಜನತೆ ಫುಲ್ ಖುಷ್ ಆಗಿದ್ದಾರೆ. ಜಾತ್ರೆಗೆ ವಿವಿಧ ಜಿಲ್ಲೆಯಲ್ಲಿ ನೆಲೆಸಿರುವ ಸಂಬಂಧಿಗಳು, ಜಾತ್ರೆಗೆ ಆಗಮಿಸಿ ಮಾರಿಕಾಂಭೆಯ ದರ್ಶನ ಪಡೆಯುತ್ತಿದ್ದಾರೆ. ಶಕ್ತಿದೇವತೆ ಮಾರಿಕಾಂಭೆಯ ಪ್ರಭಾವ ರಾಜ್ಯವಷ್ಟೆ ಅಲ್ಲ ಹೊರ ರಾಜ್ಯದಲ್ಲೂ ಹಬ್ಬಿದ್ದು, ಕಷ್ಟ ಕಾಲದಲ್ಲಿ ಸಮಸ್ಯೆಗೆ ನೆರವಾಗುತ್ತಾಳೆ ಎಂಬುದು ಭಕ್ತರ ನಂಬಿಕೆ. ಅಷ್ಟೆ ಅಲ್ಲದೆ ಇಂದು ನಡೆದ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ರಥಕ್ಕೆ ಕೋಳಿ, ಬಾಳೆ ಹಣ್ಣು ಎಸೆದು ಕೃಥಾರ್ತರಾದರು.
ಇದನ್ನು ಓದಿ: 19ರ ಯುವತಿಯೊಂದಿಗೆ ಪರಾರಿಯಾಗಿದ್ದ ಕೋಲಾರದ ಅವಧೂತ ಸ್ವಾಮೀಜಿ ಹೊಸ ಲುಕ್ನಲ್ಲಿ ಪ್ರತ್ಯಕ್ಷ
ಒಟ್ಟಾರೆ ಎರಡು ವರ್ಷಕ್ಕೊಮ್ಮೆ ನಡೆಯುವ ಶಿರಸಿ ಮಾರಿಕಾಂಬ ಜಾತ್ರೆ ಒಟ್ಟು 9 ದಿನಗಳ ಕಾಲ ನಡೆಯಲಿದೆ. ಹುಟ್ಟಿದ ಮೇಲೆ ಒಮ್ಮೆಯಾದರೂ ಘಟ್ಟ ಹತ್ತಿ ಶಿರಸಿ ಮಾರಿಕಾಂಬೆ ಜಾತ್ರೆ ನೋಡಬೇಕು ಎಂಬ ಹಂಬಲದೊಂದಿಗೆ ಲಕ್ಷಾಂತರ ಭಕ್ತರ ದಂಡು ಶಿರಸಿಯತ್ತ ಹರಿದು ಬರುತ್ತಿದೆ.
- ವಿಶೇಷ ವರದಿ: ದರ್ಶನ್ ನಾಯ್ಕ್
First published:
March 4, 2020, 9:23 PM IST