• Home
  • »
  • News
  • »
  • state
  • »
  • ಶಿರಾ ಉಪಚುನಾವಣೆ: ಕ್ಷೇತ್ರದಲ್ಲಿ ಹೆಚ್ಚಾಗಿದೆ ಸೋಲು-ಗೆಲುವಿನ ಲೆಕ್ಕಾಚಾರ

ಶಿರಾ ಉಪಚುನಾವಣೆ: ಕ್ಷೇತ್ರದಲ್ಲಿ ಹೆಚ್ಚಾಗಿದೆ ಸೋಲು-ಗೆಲುವಿನ ಲೆಕ್ಕಾಚಾರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶಿರಾ ನಗರ ಹಾಗೂ ತಾಲೂಕಿನ ಪ್ರತಿ ಹೋಬಳಿ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪೈಪೋಟಿ ನೀಡಿದ್ದಾರೆ. ಕಾಂಗ್ರೆಸ್​​​ನ ಟಿಬಿ ಜಯಚಂದ್ರ ಸಹ ಅಷ್ಟೇ ಪ್ರಮಾಣದಲ್ಲಿ ಸ್ಪರ್ಧೆ ಒಡ್ಡಿದ್ದಾರೆ. ಜೆಡಿಎಸ್​​​ನ ಅಮ್ಮಾಜಮ್ಮ ಎಲ್ಲಾ ಭಾಗದಲ್ಲೂ ಸ್ಪರ್ಧೆ ನೀಡಲು ಸಾಧ್ಯವಾಗಿಲ್ಲ. ಹಾಗಾಗಿ ಜೆಡಿಎಸ್ ನ ಮತಗಳೂ ಬಂದು ಬಿಜೆಪಿಗೆ ಗೆಲುವು ತಂದುಕೊಡುತ್ತದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ‌‌.

ಮುಂದೆ ಓದಿ ...
  • Share this:

ತುಮಕೂರು(ನ.06): ಜಿದ್ದಾಜಿದ್ದಿನ ಕಣವಾಗಿದ್ದ ಶಿರಾ ಉಪಚುನಾವಣೆಯ ಮತದಾನ ಮುಗಿದು ಹೋಗಿದೆ. ಆದರೀಗ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಮೂರೂ ರಾಜಕೀಯ ಪಕ್ಷಗಳು ತಮ್ಮದೇ ರೀತಿಯಲ್ಲಿ ವಿಶ್ಲೇಷಣೆ ಮಾಡಿಕೊಂಡು ತಾವು ಗೆಲ್ಲುತ್ತೇವೆ ಎನ್ನುತಿದ್ದಾರೆ. ಇನ್ನೊಂದು ಕಡೆ ಶೇ. 82ರಷ್ಟು ಮತದಾನ ಆಗಿರೋದು ಯಾರಿಗೆ ಲಾಭ-ಯಾರಿಗೆ ನಷ್ಟ ಎಂಬ ಲೆಕ್ಕಾಚಾರವೂ ಆರಂಭವಾಗಿದೆ. ಹೌದು,  ಕುತೂಹಲಕ್ಕೆ ಕಾರಣವಾಗಿದ್ದ ಶಿರಾ ವಿಧಾನಸಭೆ ಉಪಚುನಾವಣೆ ಮತದಾನ ಪೂರ್ಣಗೊಂಡಿದ್ದು ಈಗ ಗೆಲುವು ಸೋಲಿನ ಲೆಕ್ಕಾಚಾರಗಳು ನಡೆದಿವೆ. ಬಿಜೆಪಿ-ಕಾಂಗ್ರೆಸ್ ನಡುವೆ ಯಾರು ಗೆಲ್ಲುತ್ತಾರೆ ಎಂಬ ಚರ್ಚೆಗಳು ಬಿರುಸು ಪಡೆದುಕೊಂಡಿವೆ. ದಾಖಲೆಯ ಶೇ. 82ರಷ್ಟು ಅಧಿಕ ಪ್ರಮಾಣದಲ್ಲಿ ಮತದಾನವಾಗಿದ್ದು ತಮ್ಮದೇ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ವಾದ ಮಂಡನೆಗೆ ಪುಷ್ಟಿ ನೀಡಿದೆ. ಮತದಾನದ ಪ್ರಮಾಣದಲ್ಲಿ ಏರಿಕೆ ಆಗಿರುವುದು ಯಾವ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ ಎಂಬ ಚರ್ಚೆಗೆ ನಾಂದಿ ಹಾಡಿದೆ. ಇದನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ತಮ್ಮದೇ ಗೆಲುವು ಎಂಬ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ.


ಮತದಾನ ಪ್ರಮಾಣ ಕಡಿಮೆ ಇದ್ದಾಗ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾ ಬಂದಿದ್ದಾರೆ. ಮತದಾನ ಪ್ರಮಾಣ ಹೆಚ್ಚಾದ ಸಂದರ್ಭಗಳಲ್ಲಿ ಇತರೆ ಪಕ್ಷದವರು ಆಯ್ಕೆಯಾಗಿದ್ದು ಕಾಂಗ್ರೆಸ್ಗೆ ಗೆಲ್ಲುವ ಅವಕಾಶಗಳು ಕಡಿಮೆ ಎಂಬ ವಿಶ್ಲೇಷಣೆ ನಡೆಯುತ್ತಿದೆ. ಶಿರಾದಲ್ಲಿ ತ್ರಿಕೋನ ಸ್ಪರ್ಧೆ ಇದ್ದರೂ ಬಿಜೆಪಿ-ಕಾಂಗ್ರೆಸ್ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಶೇಕಡಾ 60 ಕಿಂತ ಮೇಲ್ಪಟ್ಟು ಚಲಾವಣೆಯಾಗುವ ಮತಗಳಲ್ಲಿ ಬಹುತೇಕ ಬಿಜೆಪಿಗೆ ಬಂದಿವೆ. ಕಾಂಗ್ರೆಸ್ ಜೆಡಿಎಸ್ ಗೆ ಮತ ನೀಡುತ್ತಿದ್ದವರು ಈ ಸಲ ಬಿಜೆಪಿಗೆ ಬೆಂಬಲಿಸಿದ್ದಾರೆ. ಇಲ್ಲಿ ಅಧಿಕಾರಮ ಹಣ ಬಲ ಹೆಚ್ಚು ಕೆಲಸ ಮಾಡಿದೆ. ಈ ಲೆಕ್ಕಾಚಾರ ಗಮನಿಸಿದರೆ ಬಿಜೆಪಿ ಗೆಲ್ಲುವ ಅವಕಾಶಗಳು ಹೆಚ್ಚು ಎಂದು ಹೇಳಲಾಗುತ್ತಿದೆ.


ವಿದೇಶಿ ಹೂಡಿಕೆದಾರರಿಗೆ ಭಾರತದಲ್ಲಿ ಪ್ರಜಾಪ್ರಭುತ್ವದ ಮೌಲ್ಯದ ಜೊತೆಗೆ ವ್ಯಾಪಾರದ ಲಾಭವೂ ಇದೆ; ಪ್ರಧಾನಿ ಮೋದಿ


ಶಿರಾ ನಗರ ಹಾಗೂ ತಾಲೂಕಿನ ಪ್ರತಿ ಹೋಬಳಿ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪೈಪೋಟಿ ನೀಡಿದ್ದಾರೆ. ಕಾಂಗ್ರೆಸ್​​​ನ ಟಿಬಿ ಜಯಚಂದ್ರ ಸಹ ಅಷ್ಟೇ ಪ್ರಮಾಣದಲ್ಲಿ ಸ್ಪರ್ಧೆ ಒಡ್ಡಿದ್ದಾರೆ. ಜೆಡಿಎಸ್​​​ನ ಅಮ್ಮಾಜಮ್ಮ ಎಲ್ಲಾ ಭಾಗದಲ್ಲೂ ಸ್ಪರ್ಧೆ ನೀಡಲು ಸಾಧ್ಯವಾಗಿಲ್ಲ. ಹಾಗಾಗಿ ಜೆಡಿಎಸ್ ನ ಮತಗಳೂ ಬಂದು ಬಿಜೆಪಿಗೆ ಗೆಲುವು ತಂದುಕೊಡುತ್ತದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ‌‌.


ಆದರೆ ಈ ವಾದವನ್ನು ಕಾಂಗ್ರೆಸ್ ಮೂಲಗಳು ಒಪ್ಪುತ್ತಿಲ್ಲ. ಕಾಂಗ್ರೆಸ್​ನ ಸಾಂಪ್ರದಾಯಿಕ ಮತಗಳು ಚದುರಿಲ್ಲ. ತಮ್ಮ ಮತದಾರರನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯಲು ಬಿಜೆಪಿಗೆ ಸಾಧ್ಯವಾಗಿಲ್ಲ. ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆ ಇರಲಿಲ್ಲ, ಏನೇ ಇದ್ದರೂ ಜೆಡಿಎಸ್​​​ನ ಮತಗಳನ್ನು ಸೆಳೆದಿವೆ ಎಂದು ಹೇಳುತ್ತಿದೆ. ಇನ್ನು, ಚುನಾವಣೆ ಹತ್ತಿರ ಬಂದಂತೆ ಜೆಡಿಎಸ್ ಪಕ್ಷ ಸಹ ಚೇತರಿಕೆ ಕಂಡಿದ್ದು, ಅಭ್ಯರ್ಥಿಗೆ ಸಾಕಷ್ಟು ಮತಗಳು ಬಿದ್ದಿವೆ. ಇದನ್ನು ಗಮನಿಸಿದರೆ ಬಿಜೆಪಿ ಗೆಲುವು ಸುಲಭವಲ್ಲ. ಕ್ಷೇತ್ರದಲ್ಲಿ ಬಿಜೆಪಿ ಅಬ್ಬರ ಕಂಡುಬಂದಿದ್ದರೂ ಮತದಾರರನ್ನು ಸೆಳೆಯಲು ಸಾಧ್ಯವಾಗಿಲ್ಲ ಎಂಬ ತರ್ಕವನ್ನು ಕಾಂಗ್ರೆಸ್ಸಿಗರು ಮುಂದಿಡುತ್ತಿದ್ದಾರೆ.


ಶಿರಾ ಕ್ಷೇತ್ರದಲ್ಲಿ ಚುನಾವಣೆ ಸಂದರ್ಭದಲ್ಲಿ ಯಾರಿಗೆ ಮತ ಹಾಕಬೇಕು ಎಂಬ ಚರ್ಚೆ ನಡೆದಿತ್ತು. ಈಗ ಯಾರು ಗೆಲ್ತಾರೆ? ಯಾರು ಸೋಲ್ತಾರೆ? ಎಷ್ಟು ಅಂತರದಲ್ಲಿ ಗೆಲ್ತಾರೆ ಎಂಬ ಬಿಸಿಬಿಸಿ ಚೆರ್ಚೆ ನಡೆಯುತ್ತಿದೆ. ರಾಜಕೀಯ ಆಸಕ್ತರು ತಮ್ಮ ತಮ್ಮದೇ ರೀತಿಯಲ್ಲಿ ವಿಶ್ಲೆಷಣೆ ಮಾಡುತಿದ್ದಾರೆ.

Published by:Latha CG
First published: