• Home
  • »
  • News
  • »
  • state
  • »
  • ಶಿರಾ ಉಪಚುನಾವಣೆ: ಮತಯಂತ್ರಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್

ಶಿರಾ ಉಪಚುನಾವಣೆ: ಮತಯಂತ್ರಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್

ಬಿಗಿ ಭದ್ರತೆ

ಬಿಗಿ ಭದ್ರತೆ

ಈ ಭದ್ರತಾ ಕಾರ್ಯಕ್ಕಾಗಿ ಕೇಂದ್ರದ ಸಿಎಸ್‌ಎಫ್ ತುಕಡಿ, ಪ್ಯಾರಾ ಮಿಲಿಟರಿ ಪಡೆ, ಸಿಎಸ್‌ಎಫ್‌ನ 1 ಇನ್ಸ್ಪೆಕ್ಟರ್, 1 ಸಬ್‌ಇನ್ಸ್‌ಪೆಕ್ಟರ್, 31 ಮಂದಿ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ.

  • Share this:

ತುಮಕೂರು(ನ.04): ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿದ್ದ 15 ಅಭ್ಯರ್ಥಿಗಳ ಭವಿಷ್ಯ ಅಡಕವಾಗಿರುವ ಮತಯಂತ್ರಗಳನ್ನು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿದ್ದಪಡಿಸಲಾಗಿರುವ 2 ಭದ್ರತಾ ಕೊಠಡಿಗೆ ಸ್ಥಳಾಂತರಿಸಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಶಿರಾ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಮತದಾನ ನ.3ರಂದು ಸಂಜೆ 6ಗಂಟೆವರೆಗೆ ನಡೆದ ನಂತರ 330 ಮತಗಟ್ಟೆಗಳ ಇವಿಎಂ ಯಂತ್ರಗಳು ಶಿರಾ ಜ್ಯೋತಿನಗರದಲ್ಲಿರುವ ಮಸ್ಟರಿಂಗ್ ಕೇಂದ್ರಕ್ಕೆ ಬಂದು ಸೇರಿದ್ದವು. ಬಳಿಕ ನಿನ್ನೆ  ಬೆಳಗಿನ ಜಾವ ತುಮಕೂರಿನ ಬಿ.ಹೆಚ್. ರಸ್ತೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ತಂದು 2 ಭದ್ರತಾ ಕೊಠಡಿಗಳಲ್ಲಿ ಇಡಲಾಗಿದೆ. ಮತ ಯಂತ್ರಗಳಿರುವ 2 ಭದ್ರತಾ ಕೊಠಡಿಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್​​ನೊಂದಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ ವಂಶಿಕೃಷ್ಣ, ಚುನಾವಣಾ ಸಾಮಾನ್ಯ ವೀಕ್ಷಕರಾದ ಬಿ. ಮಹೇಶ್ವರಿ, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಚುನಾವಣಾಧಿಕಾರಿ ಡಾ. ಕೆ. ನಂದಿನಿ ದೇವಿ. ಸಹಾಯಕ ಚುನಾವಣಾಧಿಕಾರಿ ಮಮತಾ, ಡಿವೈಎಸ್ಪಿಗಳಾದ ತಿಪ್ಪೇಸ್ವಾಮಿ, ಪ್ರವೀಣ್ ಅವರ ಸಮ್ಮುಖದಲ್ಲಿ ಬೆಳಿಗ್ಗೆ 9 ಗಂಟೆಯಲ್ಲಿ ಸೀಲ್ ಮಾಡಲಾಯಿತು.


Vegetables Price: ದೀಪಾವಳಿ‌ ಸಂಭ್ರಮಕ್ಕೆ ಬೆಲೆ ಏರಿಕೆಯ ಬರೆ; ಗಗನಮುಖಿಯಾದ ದಿನಬಳಕೆ ವಸ್ತುಗಳು


ಈ ಭದ್ರತಾ ಕಾರ್ಯಕ್ಕಾಗಿ ಕೇಂದ್ರದ ಸಿಎಸ್‌ಎಫ್ ತುಕಡಿ, ಪ್ಯಾರಾ ಮಿಲಿಟರಿ ಪಡೆ, ಸಿಎಸ್‌ಎಫ್‌ನ 1 ಇನ್ಸ್ಪೆಕ್ಟರ್, 1 ಸಬ್‌ಇನ್ಸ್‌ಪೆಕ್ಟರ್, 31 ಮಂದಿ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ. ಮತ ಎಣಿಕೆ ಕಾರ್ಯ ನಡೆಯುವ ನವೆಂಬರ್ 10 ರವರೆಗೆ ಈ ಭದ್ರತಾ ಸಿಬ್ಬಂದಿಗಳು ದಿನದ 24ಗಂಟೆಯೂ ಪಾಳಿ ವ್ಯವಸ್ಥೆ ಮೇಲೆ ಕಾರ್ಯನಿರ್ವಹಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ನಿನ್ನೆ ಬೆಳಿಗ್ಗೆ 9 ಗಂಟೆಗೆ ಸೀಲ್ ಮಾಡಲಾಗಿದೆ. ಕೇಂದ್ರದ ಪೊಲೀಸರ ತಂಡ, ರಾಜ್ಯ ಪೊಲೀಸರು ಹಾಗೂ ಹಿರಿಯ ನೋಡಲ್ ಅಧಿಕಾರಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.


ನ. 10 ರಂದು ಈ ಭದ್ರತಾ ಕೊಠಡಿಯನ್ನು ತೆರೆಯಲಾಗುವುದು. ಒಂದು ವೇಳೆ ಅನಿವಾರ್ಯ ಪರಿಸ್ಥಿತಿ ಎದುರಾದರೆ ಆಗ ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಗಮನಕ್ಕೆ ತಂದು ಭದ್ರತಾ ಕೊಠಡಿಯನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು‌ ತುಮಕೂರು ಜಿಲ್ಲಾಧಿಕಾರಿ ರಾಕೇಶ್‌ಕುಮಾರ್‌‌ ತಿಳಿಸಿದ್ದಾರೆ.


ಶಿರಾ ವಿಧಾನಸಭಾ ಉಪಚುನಾವಣೆಗೆ ಶೇ. 84.54 ರಷ್ಟು ಮತದಾನ ನಡೆಯುವ ಮೂಲಕ ಅತಿ ಹೆಚ್ಚು ಮತದಾನ ನಡೆದಿದೆ. ಕಳೆದ 2018 ರಲ್ಲಿ ಸಿರಾ ವಿಧಾನಸಭಾ ಕ್ಷೇತ್ರದಲ್ಲಿ ಶೇ. 84 ರಷ್ಟು ಮತದಾನ ನಡೆದಿತ್ತು. ಹಾಗೆಯೇ ಲೋಕಸಭಾ ಚುನಾವಣೆಯಲ್ಲೂ ಶೇ. 74 ಮತದಾನ ನಡೆದಿತ್ತು.

Published by:Latha CG
First published: