ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿಗೆ ಗೆಲುವು?; ದೇವಿಯ ಶುಭ ಸೂಚನೆಯಿಂದ ಖುಷಿಯಾದ ಕೈ ನಾಯಕರು

ಈ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​​ ಅವರಿಗೂ ಸಹ ಇದೇ ರೀತಿ ಗೆಲುವಿನ ಆಶೀರ್ವಾದ ನೀಡಿತ್ತು ಎನ್ನಲಾಗಿದೆ. ಆಗ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಜೆಡಿಎಸ್​ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭಾರೀ ಜಯಭೇರಿ ಬಾರಿಸಿದ್ದರು.

ಶಿರಾ ಕಾಂಗ್ರೆಸ್​ ಅಭ್ಯರ್ಥಿ ಟಿ.ಬಿ.ಜಯಚಂದ್ರ

ಶಿರಾ ಕಾಂಗ್ರೆಸ್​ ಅಭ್ಯರ್ಥಿ ಟಿ.ಬಿ.ಜಯಚಂದ್ರ

 • Share this:
  ಶಿರಾ(ನ.10): ಶಿರಾ ಹಾಗೂ ಆರ್​ಆರ್​ ನಗರ ಉಪಚುನಾವಣೆಯ ಮತಎಣಿಕೆ ಪ್ರಾರಂಭವಾಗಿದ್ದು, ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಮತದಾರ ಯಾರ ಕೈ ಹಿಡಿಯುತ್ತಾನೆಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಜೊತೆಗೆ ಇಂದು ಫಲಿತಾಂಶ ಹಿನ್ನೆಲೆ ಶಿರಾ ಹಾಗೂ ಆರ್​ ಆರ್​​ ನಗರ ಅಭ್ಯರ್ಥಿಗಳು ಟೆಂಪಲ್ ರನ್​ ಕೂಡ ನಡೆಸಿದ್ದಾರೆ. ಈ ನಡುವೆಯೇ ಶಿರಾದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಗೆಲುವಿನ ಬಗ್ಗೆ ದೇವಿ ಹೊನ್ನಾದೇವಿ ಶುಭಸೂಚನೆ ನೀಡಿದ್ದಾಳೆ. ತುಮಕೂರಿನ ಹೆಬ್ಬೂರಿನಲ್ಲಿ ಇರುವ ಹೊನ್ನಾದೇವಿ ಬಲಗಡೆ ಹೂ ಕೊಟ್ಟು ಶಿರಾದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಟಿ.ಬಿ.ಜಯಚಂದ್ರ ಗೆಲ್ಲುವ ಸೂಚನೆಯನ್ನು ನೀಡಿದ್ದಾಳೆ ಎನ್ನಲಾಗುತ್ತಿದೆ. 

  ಈ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​​ ಅವರಿಗೂ ಸಹ ಇದೇ ರೀತಿ ಗೆಲುವಿನ ಆಶೀರ್ವಾದ ನೀಡಿತ್ತು ಎನ್ನಲಾಗಿದೆ. ಆಗ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಜೆಡಿಎಸ್​ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭಾರೀ ಜಯಭೇರಿ ಬಾರಿಸಿದ್ದರು. ಇದೀಗ ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಗೆಲುವಿನ ಬಗ್ಗೆ ಆಶೀರ್ವಾದ ನೀಡಿದ್ದು, ಕ್ಷೇತ್ರದಲ್ಲಿ ಬಹುತೇಕ ಕಾಂಗ್ರೆಸ್​ ಅಭ್ಯರ್ಥಿಯೇ ಮೇಲುಗೈ ಸಾಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

  ಶಿರಾ ಉಪಚುನಾವಣೆ ಫಲಿತಾಂಶ: ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭ, ಬಿಗಿ ಪೊಲೀಸ್ ಬಂದೋಬಸ್ತ್

  ದೇವಿ ಹೊನ್ನಾದೇವಿ ಬಲಗಡೆ ಹೂ ಕೊಟ್ಟು ಟಿ.ಬಿ.ಜಯಚಂದ್ರ ಅವರಿಗೆ ಆಶೀರ್ವದಿಸಿರುವ ಹಿನ್ನೆಲೆ, ದೇವಿಯ ಆಶೀರ್ವಾದದಿಂದ ಉಳಿದ ಪಕ್ಷದವರಿಗೆ ಭಯ ಶುರುವಾಗಿದೆ. ಈ ಸೂಚನೆಯಿಂದಾಗಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಖುಷಿಯಾದ್ರೆ, ಬಿಜೆಪಿ ಮತ್ತು ಜೆಡಿಎಸ್ ನಾಯಕರಲ್ಲಿ ಆತಂಕ ಮನೆ ಮಾಡಿಸಿದೆ. ದೇವಿಯ ಆಶೀರ್ವಾದದಂತೆ ಫಲಿತಾಂಶ ಬಂದರೆ  ಏನಾಗಬಹುದು ಎಂಬ ಭಯ ಹುಟ್ಟಿದೆ.

  ಇದೀಗ  ಸಿಎಂ ಬಿ.ಎಸ್​.ಯಡಿಯೂರಪ್ಪನವರ ಮಗ ಬಿ ವೈ ವಿಜಯೇಂದ್ರ ಅವರಿಗೆ ಟೆನ್ಶನ್ ಶುರುವಾಗಿದೆ. ಮತದಾನದ ಮೇಲೆ ಸಾಕಷ್ಟು ಲೆಕ್ಕಾಚಾರ ಹಾಕಿದ್ದರೂ ಕೂಡಾ, ಇಂದಿನ ಫಲಿತಾಂಶದಿಂದ ಬಹಳಷ್ಟು ಚಿಂತೆ ಮಾಡುತ್ತಿದ್ದಾರೆ.  ಅತ್ತ ದಳಪತಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಎಲ್ಲದರ ನಡುವೆ ಕ್ಷೇತ್ರದ ಜನರು ಯಾರಿಗೆ ವಿಜಯದ ಮಾಲೆ ಹಾಕಿದ್ದಾರೆ ಎಂಬುದು ಇನ್ನು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.
  Published by:Latha CG
  First published: