Sira By Election Result 2020: ಶಿರಾದಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆ ಮತಗಟ್ಟೆ ಖಾಲಿ ಮಾಡುತ್ತಿರುವ ಕಾಂಗ್ರೆಸ್​ ಕಾರ್ಯಕರ್ತರು

ಶಿರಾ ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್​ ಅಭ್ಯರ್ಥಿಗೆ ಹಿನ್ನಡೆಯಾಗುತ್ತಿದ್ದಂತೆ ಸ್ಥಳವನ್ನು ಒಬ್ಬೊಬ್ಬರಾಗಿ ಕಾರ್ಯಕರ್ತರು ಖಾಲಿ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತುಮಕೂರು (ನ.10): ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್​ ಗೌಡ ಮುನ್ನಡೆ ಸಾಧಿಸಿದ್ದು, ಮೊದಲ ಚುನಾವಣೆಯಲ್ಲಿಯೇ ಅವರು ಗೆಲುವಿನ ನಗೆ ಬೀರಲಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಟಿಬಿ ಜಯಚಂದ್ರ ವಿರುದ್ಧ 15 ಸಾವಿರ ಮುನ್ನಡೆ ಸಾಧಿಸಿದ್ದಾರೆ. 17ನೇ ಸುತ್ತಿನ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಕಾರ್ಯಕರ್ತರಲ್ಲಿ ಸಂಭ್ರಮ ಮೂಡಿದೆ. ಇತ್ತ ಟಿಬಿ ಜಯಚಂದ್ರ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್​ ಅಭ್ಯರ್ಥಿಗಳು ಕಡೆ ಕ್ಷಣದಲ್ಲಿ ನಿರಾಸೆಗೆ ಒಳಗಾಗುತ್ತಿದ್ದು, ಮತ ಎಣಿಕೆ ಕ್ಷೇತ್ರದಿಂದ ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡುತ್ತಿದ್ದಾರೆ. ಮಧ್ಯಾಹ್ನದ ವರೆಗೂ ಹುರುಪಿನಿಂದ ಮತ ಎಣಿಕೆ ಕೇಂದ್ರದ ಸುತ್ತ ಜಮಾಯಿಸಿದ್ದ ಕಾರ್ಯಕರ್ತರು ಮತದಾನ ಮುಕ್ತಾಯ ಹಂತ ತಲುಪುತ್ತಿದ್ದಂತೆ ಮೌನಕ್ಕೆ ಜಾರಿದ್ದಾರೆ. ತಮ್ಮ ಅಭ್ಯರ್ಥಿಗೆ ಹಿನ್ನಡೆಯಾಗುತ್ತಿದ್ದಂತೆ ಸ್ಥಳವನ್ನು ಒಬ್ಬೊಬ್ಬರಾಗಿ ಖಾಲಿ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿದೆ.ಶಿರಾದಲ್ಲಿ ಬಿಜೆಪಿ ಖಾತೆ ತೆರೆಯುತ್ತಿರುವುದು ಕಾರ್ಯರ್ತರಲ್ಲಿ ಹರ್ಷ ಮೂಡಿದೆ. ಕ್ಷೇತ್ರದಲ್ಲು ದುರ್ಬಲವಾಗಿದ್ದ ಬಿಜೆಪಿ ಇದೀಗ ಗೆಲ್ಲುತ್ತಿರುವುದು ಕಾರ್ಯಕರ್ತರಲ್ಲಿ ಸಂಭ್ರಮ ಮೂಡಿಸಿದೆ. ಶಿರಾದಲ್ಲಿ ಅಭ್ಯರ್ಥಿ ಗೆಲುವಿಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಮಗ ವಿಜಯೇಂದ್ರ ಪಣತೊಟ್ಟಿದ್ದರು. ಕೆಆರ್​ಪೇಟೆ ಗೆಲುವಿನಂತೆ ಜೆಡಿಎಸ್​ ಭದ್ರಕೋಟೆಯಾದ ಶಿರಾದಲ್ಲಿ ಕೂಡ ಕಮಲ ಅರಳಿಸಲು ವಿಜಯೇಂದ್ರ ಕಾರ್ಯ ನಡೆಸಿದ್ದರು. ಇನ್ನು ಚುನಾವಣಾ ಪ್ರಚಾರದ ವೇಳೆ ಕೂಡ ಮುಖ್ಯಮಂತ್ರಿಗಳು ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಭರವಸೆ ನೀಡುವುದರ ಜೊತೆಗೆ ಈ ಭಾಗದ ನೀರಿನ ಸಮಸ್ಯೆ ನೀಗಿಸುವ ಭರವಸೆ ನೀಡಿದ್ದರು. ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಲ್ಲಿ ಕ್ಷೇತ್ರವನ್ನು ತಮ್ಮ ತವರು ಕ್ಷೇತ್ರ ಶಿಕಾರಿಪುರದಂತೆ ಮಾದರಿ ತಾಲೂಕಾಗಿ ಅಭಿವೃದ್ಧಿ ಮಾಡುವುದಾಗಿ ಜನರಿಗೆ ಭರವಸೆ ನೀಡಿದ್ದರು. ಇದರ ಪರಿಣಾಮ ಎಂಬಂತೆ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಇದನ್ನು ಓದಿ: ಡಿಕೆಶಿ ಸಿಎಂ ಆಗಬಾರದು ಎಂದು ಸಿದ್ದರಾಮಯ್ಯ ಉಪಚುನಾವಣಾ ಸೋಲು ಬಯಸಿದ್ದಾರೆ; ಸಂಸದ ಪ್ರತಾಪ್​ ಸಿಂಹ

ಕ್ಷೇತ್ರದಲ್ಲಿ ರಾಜೇಶ್​ ಗೌಡ ಗೆಲುವು ಸಮೀಪಿಸುತ್ತಿದ್ದಂತೆ ಸಂಭ್ರಮ ಆಚರಿಸಲು ಬಿಜೆಪಿ ನಾಯಕರು ಮತಗಟ್ಟೆ ಬಳಿ ಆಗಮಿಸುತ್ತಿದ್ದಾರೆ. ವಿಜಯೇಂದ್ರ ಸೇರಿದಂತೆ ಹಲವು ಕಾರ್ಯಕರ್ತರು ಈ ಸಂಭ್ರಮ ಆಚರಿಸಲು ಸಜ್ಜಾಗಿದ್ದಾರೆ.

ಶಿರಾ  ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ ಕುರಿತು ಹರ್ಷ ವ್ಯಕ್ತಪಡಿಸಿ ಮಾತನಾಡಿದ ವಿಜಯೇಂದ್ರ, ಉಪಚುನಾವಣೆ ಬಳಿಕ ಸಿಎಂ ಬದಲಾಗುತ್ತಾರೆ ಎಂದು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದೆ. ಮುಂದಿನ ದಿನದಲ್ಲೂ ಯಡಿಯೂರಪ್ಪ ಅವರೇ  ಮುಖ್ಯಮಂತ್ರಿಗಳಾಗಿ  ಮುಂದುವರೆಯುತ್ತಾರೆ. ಆರ್ ಆರ್ ನಗರ ಚುನಾಣವಣೆಯಲದಲಿ ನಮ್ಮ ಅಭ್ಯರ್ಥಿ ಗೆದ್ದಿದ್ದಾರೆ. ಬಹುಮತದಿಂದ ಗೆಲವು ಸಾಧಿಸಿದ್ದಾರೆ. ಕೆರ್ ಪೇಟೆ ಶಿರಾ ಬೈ ಎಲೆಕ್ಷನ್ ನಲ್ಲಿ ನನಗೆ ನೇತೃತ್ವ ನೀಡಿದ್ದು, ರಾಜ್ಯಧ್ಯಕ್ಷರು ಮತ್ತು ಪಕ್ಷದ ನಾಯಕರಿಗೆ ಬಿಟ್ಟ ವಿಚಾರ. ನಾನು ನನ್ನ ಕೆಲಸ ನಿರ್ವಹಿಸಿದ್ದೇನೆ. ನನಗೆ ಸ್ಥಾನ ನೀಡುವ ಕುರಿತು ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಯಾವೂದೇ ಚರ್ಚೆಯಾಗಿಲ್ಲ. ಶಿರಾ ಗೆಲವು ವಿಜೇಯಂದ್ರ ಗೆಲುವು ಅಲ್ಲವೋ ಎಂಬುದು ಮತ ಎಣಿಕೆ ಮುಕ್ತಾಯದ ಬಳಿಕ ತಿಳಿಸುತ್ತೇನೆ ಎಂದಿದ್ದಾರೆ.
Published by:Seema R
First published: