• Home
  • »
  • News
  • »
  • state
  • »
  • ಶಿರಾ ಉಪಚುನಾವಣೆ: ಶಿರಾಗೆ ಇಂದು ಮಾಜಿ ಪ್ರಧಾನಿ ದೇವೇಗೌಡ ಮತ್ತು ಎಚ್​ಡಿ ಕುಮಾರಸ್ವಾಮಿ ಭೇಟಿ

ಶಿರಾ ಉಪಚುನಾವಣೆ: ಶಿರಾಗೆ ಇಂದು ಮಾಜಿ ಪ್ರಧಾನಿ ದೇವೇಗೌಡ ಮತ್ತು ಎಚ್​ಡಿ ಕುಮಾರಸ್ವಾಮಿ ಭೇಟಿ

ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ

ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ

2014ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಬಿ.ಕೆ ಮಂಜುನಾಥ್ ಹಾಗೂ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಎಸ್ ಆರ್ ಗೌಡ ಇವರಿಬ್ಬರಿಗೂ ಕ್ಷೇತ್ರದಲ್ಲಿ ಸಾಕಷ್ಟು ಹೆಸರಿದೆ.

  • Share this:

ತುಮಕೂರು(ಸೆ.30): ಶಾಸಕ ಸತ್ಯನಾರಾಯಣರವರ ಅಕಾಲಿಕ ಸಾವಿನಿಂದ ತೆರವಾಗಿರುವ ಸ್ಥಾನಕ್ಕೆ ಸದ್ಯಕ್ಕೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಂದ ತೀವ್ರ ಪೈಪೋಟಿ ಶುರುವಾಗಿದೆ. ದಿನಾಂಕ ಘೋಷಣೆಯಾದ ಮೇಲಂತೂ ಮೂರು ಪಕ್ಷದ ಮುಖಂಡರಲ್ಲಿ ಕಂಡು ಕೇಳರಿಯದ ಚಟುವಟಿಕೆಗಳು ಪ್ರಾರಂಭವಾಗಿವೆ. ಈ ನಡುವೆ ಇಂದು ಜೆಡಿಎಸ್ ಅಭ್ಯರ್ಥಿಯ ಹೆಸರು ಬಹುತೇಕ ಘೋಷಣೆಯಾಗುವ ಸಾಧ್ಯತೆ ತುಂಬಾ ಇದೆ.  ಹೌದು, ಇಂದು ಶಿರಾ ಕ್ಷೇತ್ರಕ್ಕೆ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣರವರು ಬರುತ್ತಿದ್ದಾರೆ. ಶಿರಾದ ಜೆಡಿಎಸ್ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಸುವ ವರಿಷ್ಠರಿಗೆ ಅಭ್ಯರ್ಥಿ ಆಯ್ಕೆಯೇ ದೊಡ್ಡ ತಲೇನೋವಾಗುವ ಸಾಧ್ಯತೆ ಇದೆ. ಯಾಕೆಂದರೆ ಹಾಲಿ ಜಿಲ್ಲಾ ಪಂಚಾಯತ್ ಜೆಡಿಎಸ್ ಅಧ್ಯಕ್ಷೆ ಲತಾರವರ ಪತಿ ರವಿಕುಮಾರ್ ಕ್ಷೇತ್ರದ ತುಂಬೆಲ್ಲಾ ಓಡಾಡಿದ್ದಾರೆ. ಕಲ್ಕೆರೆ ರವಿ ಅಂತಾನೆ ಕ್ಷೇತ್ರದ ತುಂಬಾ ಜನ ಕರಿತಾರೆ. ಗ್ರಾಮ ಗ್ರಾಮದಲ್ಲೂ ರವಿ ಬಗ್ಗೆ ಗೊತ್ತು. ಹೀಗಾಗಿ ನಾನೂ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದೇ ಗೆಲ್ಲುತ್ತೇನೆ. ನನಗೂ ಟಿಕೆಟ್ ನೀಡಿ ಅಂತ ಜೆಡಿಎಸ್ ವರಿಷ್ಠರ ಮನೆ ಬಾಗಿಲಿಗೆ ಹೋಗಿ ಬಂದಿದ್ದಾರೆ.ಹೀಗಾಗಿ ಅವರು ಕೂಡ ಜೆಡಿಎಸ್ ನಲ್ಲಿ ಪ್ರಬಲ ಆಕಾಂಕ್ಷಿ ಅಂತ ಬಿಂಬಿಸಿಕೊಂಡಿದ್ದಾರೆ.


ಇನ್ನು ದಿವಂಗತ ಸತ್ಯನಾರಾಯಣ ಪುತ್ರ ಸತ್ಯ ಪ್ರಕಾಶ್ ಅಥವಾ ಸತ್ಯನಾರಾಯಣ ಪತ್ನಿ ಅಮ್ಮಾಜಮ್ಮರಿಗೆ ಟೆಕೆಟ್ ಕೊಡಬೇಕು ಎಂಬುದು ಸದ್ಯ ಕುಮಾರಸ್ವಾಮಿಯವರ ಇಂಗಿತ. ಮೊದಲು ಅವರ ಕುಟುಂಬದವರಿಗೇ ಆದ್ಯತೆ ಅಂತ ಸ್ವತಃ ಕುಮಾರಸ್ವಾಮಿಯವರೇ ಇಂಗಿತ ವ್ಯಕ್ತಪಡಿಸಿದ್ದರು. ಆದ್ರೆ ಕೇವಲ ಅನುಕಂಪದ ಆಧಾರದ ಮೇಲೆ ಇನ್ನಷ್ಟು ಮತಗಳು ಬೀಳಬಹುದು ಎಂಬುದು ಪಕ್ಷದ ಹಿರಿಯ ಹಾಗೂ ಕೆಲ ಕಾರ್ಯಕರ್ತರ ಅಭಿಪ್ರಾಯ.


ಇನ್ನು ಬಿಜೆಪಿಯಲ್ಲಂತೂ ಟಿಕೆಟ್​​​ಗಾಗಿ ಒಳಗೊಳಗೇ ರಣಾರಂಗವೇ ನಡೆಯುತ್ತಿದೆ. ಹೌದು ಸದ್ಯಕ್ಕೆ ಬಿಜೆಪಿಯಲ್ಲಿನ ಟಿಕೆಟ್ ಆಕಾಂಕ್ಷಿತರ ಪಟ್ಟಿ ನೋಡಿದ್ರು ಡಜನ್ ಗಟ್ಟಲೇ ಕಾಣಿಸುತ್ತವೆ. ಈಗಾಗಲೇ 2014ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಬಿ.ಕೆ ಮಂಜುನಾಥ್ ಹಾಗೂ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಎಸ್ ಆರ್ ಗೌಡ ಇವರಿಬ್ಬರಿಗೂ ಕ್ಷೇತ್ರದಲ್ಲಿ ಸಾಕಷ್ಟು ಹೆಸರಿದೆ. ಮೂಲ ಕುರುಬ ಸಮುದಾಯದವರಾದ ಬಿ.ಕೆ ಮಂಜುನಾಥ್​ ಅವರಿಗೆ ಟಿಕೆಟ್ ಸಿಕ್ಕರೆ ನಮ್ಮ ಸಮುದಾಯದ ಎಲ್ಲಾ ಮತಗಳು ನನಗೆ. ಹೀಗಾಗಿ ನನಗೇ ಟಿಕೆಟ್ ಕೊಡಬೇಕು ಅಂತ ಬಿ.ಕೆ ಮಂಜುನಾಥ್ ವರಿಷ್ಠರ ಕಾಲು ಹಿಡಿದಿದ್ದಾರೆ. ಹೀಗಾಗಿ ನಾನೂ ಕೂಡಾ ಪ್ರಬಲ ಆಕಾಂಕ್ಷಿಯೇ ಅಂತ ಮಂಜುನಾಥ್ ತೋರಿಸಿದ್ದಾರೆ. 


Bangalore Rain: ಬೆಂಗಳೂರಿನಲ್ಲಿ ಧಾರಾಕಾರ ಮಳೆ : ರಸ್ತೆಗಳು ಜಲಾವೃತ, ಜನಜೀವನ ಅಸ್ತವ್ಯಸ್ತ


ಇನ್ನೂ ಕುಂಚಿಟಿಗ ವಕ್ಕಲಿಗರಾಗಿರೋ ಎಸ್.ಆರ್ ಗೌಡ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿಯೇ ಸ್ಪರ್ಧಿಸಿ ಸೋತಿದ್ದಾರೆ. ಆದ್ರೂ ಈ ಬಾರಿ ಜನ ನನ್ನ ಕೈ ಹಿಡಿಯುತ್ತಾರೆ. ನನಗೇ ಟಿಕೆಟ್ ಕೊಟ್ಟದ್ದೇ ಆದ್ರೆ ಒಕ್ಕಲಿಗ ಮತಗಳೆಲ್ಲಾ ನನಗೇ ಬೀಳುತ್ತವೆ ಅಂತ ಬಿಜೆಪಿ ನಾಯಕರಿಗೆ ವಿಶ್ವಾಸ ಮೂಡಿಸಿದ್ದಾರೆ. ಆದ್ರೆ ಈ ಬಾರಿ ಬಿ.ಕೆ ಮಂಜುನಾಥ್ ಹಾಗೂ ಎಸ್ ಆರ್ ಗೌಡ ಇವರಿಬ್ಬರಿಗೂ ಹೊಸ ಅಭ್ಯರ್ಥಿಯೊಬ್ಬರು ತಲೆ ನೋವಾಗಿದ್ದಾರೆ.


ಹೌದು‌ ಮೂಲತಃ ವೈದ್ಯರಾಗಿರೋ ಡಾ.ರಾಜೇಶ್ ಗೌಡ ಬಹುತೇಕ ಬಿಜೆಪಿ ಹೈ ಕಮಾಂಡ್ ಮಟ್ಟದಲ್ಲೇ ಟಿಕೆಟ್ ಖಾತರಿ ಪಡಿಸಿಕೊಂಡಂತಿದೆ. ಹಣಕಾಸಿನ ವಿಚಾರದಲ್ಲಿ ಇವರಿಗೆ ತೊಂದರೆ ಇಲ್ಲ. ಪಕ್ಷದಿಂದ ಟಿಕೆಟ್ ಕೊಟ್ರೆ ನಾನೇ ಪಕ್ಷದವರಿಗೆ ಹಣ ಕೊಟ್ಟು ಚುನಾವಣೆಯಲ್ಲಿ ನನ್ನ ಸ್ವಂತ ಬಲದಲ್ಲೇ ಗೆಲ್ಲುತ್ತೇನೆ ಅಂತಿದ್ಧಾರೆ. ಸಾಲದ್ದಕ್ಕೆ ಇವರಿಗೆ ಕ್ಷೇತ್ರದ ತುಂಬೆಲ್ಲಾ ಒಳ್ಳೆಯ ಹೆಸರಿದೆ ವೈದ್ಯರಾಗಿರುವುದರಿಂದ ಬಹುಬೇಗ ಜನರ ನಡುವೆ ಬೆರೆಯುತ್ತಾರೆ ಅಂತ ಜನ ಮಾತನಾಡಿಕೊಳ್ತಿದ್ದಾರೆ. ‌‌ಹಾಗೆ ನೋಡಿದರೆ ಇವರಿಗೆ ರಾಜಕೀಯ ಹೊಸತಾದರೂ ಇವರ ಕುಟುಂಬಕ್ಕೆ ರಾಜಕೀಯ ತುಂಬಾ ಹಳೆಯದೇ.


ರಾಜೇಶ್ ಗೌಡರ ತಂದೆ ಮೂಡಲಗಿರಿಯಪ್ಪ ಚಿತ್ರದುರ್ಗ ಕ್ಷೇತ್ರಕ್ಕೆ ಮೂರು ಬಾರಿ ಸಂಸದರಾಗಿ ಶಿರಾ ಕ್ಷೇತ್ರಕ್ಕೆ ಎರಡು ಬಾರಿ ಶಾಸಕರೂ ಆಗಿದ್ದರು. ರಾಜಕೀಯದಿಂದ ದೂರಾನೇ ಉಳಿದಿದ್ದ ರಾಜೇಶ್ ಗೌಡ ಜನೋಪಕಾರಿ ಕಾರ್ಯವನ್ನ ಮಾತ್ರ ಬಿಟ್ಟಿರಲಿಲ್ಲ. ಕಷ್ಟ ಅಂತ ಬಂದವರಿಗೆ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಹೀಗಾಗಿ ಮೂಲಗಳ ಪ್ರಕಾರ ಬಿಜೆಪಿ ಹೈ ಕಮಾಂಡೇ ರಾಜೇಶ್​​ಗೌಡರಿಗೆ ಟಿಕೆಟ್ ಕೊಡುವುದರ ಬಗ್ಗೆ ಒಲವು ತೋರಿದೆ ಎಂಬ ಮಾತಿದೆ.


ಒಂದು ವೇಳೆ ರಾಜೇಶ್ ಗೌಡರಿಗೆ ಟಿಕೆಟ್ ದೊರೆತಿದ್ದೇ ಆದ್ರೆ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಟಿ.ಬಿ ಜಯಚಂದ್ರಗೆ ಈ ಬಾರಿಯೂ ಗೆಲುವು ಅಷ್ಟೊಂದು ಸುಲಭವಾಗಿ ಬರುವುದು ಕಷ್ಟ. ಯಾಕೆಂದರೆ ಬಹುತೇಕ ಕುಂಚಿಟಿಗ ಒಕ್ಕಲಿಗರೇ. ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿಯಲ್ಲೂ ಒಕ್ಕಲಿಗರನ್ನೇ ನಿಲ್ಲಿಸಿದ್ರೆ ಜಯಚಂದ್ರ ಕೂಡಾ ಒಕ್ಕಲಿಗರೇ ಆಗಿರೋದ್ರಿಂದ ಬಹುತೇಕ ಒಕ್ಕಲಿಗ ಮತಗಳು ಮೂರೂ ಪಕ್ಷಕ್ಕೆ ಸಮುದಾಯದ ಮತಗಳು ಹಂಚಿಕೆಯಾಗುತ್ತವೆ. ಇನ್ನು ಜಯಚಂದ್ರಗೆ ಮುಸ್ಲಿಂ ಮತಗಳು ಬೀಳುವುದರಿಂದ ಸೋಲಿನ ದವಡೆಯಿಂದ ತಪ್ಪಿಸಿಕೊಳ್ಳಬಹುದು.

Published by:Latha CG
First published: