• Home
  • »
  • News
  • »
  • state
  • »
  • Sira By Election: ಶಿರಾ ಉಪಚುನಾವಣೆ: ಮದಲೂರು ಕೆರೆಯೇ ಬಿಜೆಪಿಗೆ ಆಧಾರ

Sira By Election: ಶಿರಾ ಉಪಚುನಾವಣೆ: ಮದಲೂರು ಕೆರೆಯೇ ಬಿಜೆಪಿಗೆ ಆಧಾರ

ಬಿಜೆಪಿ

ಬಿಜೆಪಿ

Sira By poll: ಮದಲೂರು ಕೆರೆ ಮುಕ್ಕಾಲು ಭಾಗ ಶಿರಾ ಜನರ ಜೀವನಾಡಿ ಈ ನೀರನ್ನ ನಂಬಿಕೊಂಡು ಜನ ಕುಳಿತಿದ್ದಾರೆ.ಹೇಮಾವತಿ ಪಾತ್ರದಲ್ಲಿ ಬರುವ ಈ ಕೆರೆಗೆ ನೀರು ಹರಿಸಿದ್ರೆ ನಾವೇ ಹಣವನ್ನ ರಾಜಕಾರಣಿಗಳಿಗೆ ಕೊಡ್ತಿವಿ ಎಂತಿದ್ದಾರೆ ರೈತರು

  • Share this:

ತುಮಕೂರು(ಸೆ.16): ಯಾವುದಾದ್ರು ಒಂದು ಕೆರೆ ಇಡೀ ಒಂದು ಕ್ಷೇತ್ರದ ರಾಜಕೀಯ ಗೆಲುವಿನ ಇಚ್ಛಾ ಶಕ್ತಿಯಾಗಿ ಖಾತೆಯೇ ಇಲ್ಲದ ಒಂದು ಪಕ್ಷವನ್ನೇ ಗೆಲ್ಲಿಸುವ ಮಟ್ಟಿಗೆ ಪ್ರಭಾವಿ ಸ್ಥಾನ ಪಡೆಯುತ್ತೆ ಎಂದ್ರೆ ನಿಮಗೆ ಆಶ್ಚರ್ಯವಾಗಬಹುದು. ಅಂತಹ ಒಂದು ಕೆರೆ ಶಿರಾ ಉಪಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. 520 ಎಕರೆ ಇರುವ ಈ ಕೆರೆಗೆ ಯಾರು ನೀರು ತರುತ್ತಾರೋ ಅವರನ್ನೇ ಗೆಲ್ಲಿಸ್ತೀವಿ ಅಂತಿದ್ದಾರೆ ಶಿರಾ ರೈತರು. ಶಿರಾ ಜೆಡಿಎಸ್ ಶಾಸಕ ಸತ್ಯನಾರಾಯಣ್ ನಿಧನದಿಂದ ಶಿರಾಕ್ಷೇತ್ರ ಉಪಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಭಾರೀ ಚರ್ಚೆಗೆ ಕಾರಣವಾಗಿದೆ. ಹಾಲಿ ಜೆಡಿಎಸ್ ಗೆ ಕ್ಷೇತ್ರ ಉಳಿಸಿಕೊಳ್ಳುವ ಅನಿವಾರ್ಯತೆ. ಕೆಪಿಸಿಸಿ ಅಧ್ಯಕ್ಷ ಗಾದಿಗೆ ಏರಿರುವ ಡಿ.ಕೆ.ಶಿವಕುಮಾರ್ ಗೆ ತಮ್ಮ ಸಾಮರ್ಥ್ಯ ತೋರಿಸುವ ಪರೀಕ್ಷೆಯಾ ವೇದಿಕೆಯಾಗಿ ಬದಲಾಗಿದೆ. ಇನ್ನು ಹಾಲಿ ಸರ್ಕಾರವಿರುವ ಬಿಜೆಪಿಗಂತೂ ಈ ಕ್ಷೇತ್ರವನ್ನು ಗೆದ್ದು ಸರ್ಕಾರದ ಬಗ್ಗೆ ಜನಾಭಿಪ್ರಾಯ ಪರೀಕ್ಷಿಸುವ ಅನಿವಾರ್ಯತೆ ಎದುರಾಗಿದೆ. ಪರಿಸ್ಥಿತಿ ಈಗಿರುವಾಗ ಕ್ಷೇತ್ರ ಗೆಲ್ಲಲು ಸಮರ್ಥ ಅಭ್ಯರ್ಥಿಗಳನ್ನ ಹಾಕಲು ಮೂರು ಪಕ್ಷದವರು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಶಿರಾ ರೈತರ ವಿಚಾರವಂತಿಕೆಯೇ ಬೇರೆ ಇದೆ.


ಹೌದು, ಶಿರಾ ಕ್ಷೇತ್ರದ ಜನರ ಮತಾಭಿಪ್ರಾಯ ಮೂಡಿಸಲು ಒಂದು ಮಾನದಂಡ ಎದುರಾಗಿ ನಿಂತಿದೆ. ಅದು ಮೂರು ಪಕ್ಷಗಳ ಕ್ಷೇತ್ರಗೆಲುವಿನ ಕೀಲಿಕೈ ಆಗಿ ಪರಿವರ್ತನೆಯಾಗಿದೆ. ಕೊರೋನಾದಿಂದ ನಗರ ಬಿಟ್ಟು ಹಳ್ಳಿಗೆ ಬಂದು ಇಲ್ಲಿನ ರೈತರಂತೋ ಆ ಒಂದು ಕೆಲಸ ಯಾರು ಮಾಡ್ತಾರೋ ಅವರಿಗೆ ನಮ್ ಓಟು ಅಂತಿದ್ದಾರೆ. ಅದ್ಯಾವುದು ಅಂದರೆ ಅದು ಮದಲೂರು ಕೆರೆ.  ಸುಮಾರು 520 ಎಕರೆ ಪ್ರದೇಶದಲ್ಲಿರುವ ಕೇವಲ 250 ಎಂಟಿಎಫ್ ನೀರು ಪಡೆಯುವ ಈ ಕೆರೆ ಇಡೀ ಶಿರಾ ಉಪಚುನಾವಣೆಯ ಕೇಂದ್ರಬಿಂದು.


Covid 19 Prevention: ಮಾಸ್ಕ್​ ಧರಿಸಿ, ಜೀವ ಉಳಿಸಿ, ಕೊರೋನಾ ನಿಯಂತ್ರಿಸಿ; ಡೂಡಲ್ ಮೂಲಕ ಗೂಗಲ್ ಮನವಿ


ಮದಲೂರು ಕೆರೆ ಮುಕ್ಕಾಲು ಭಾಗ ಶಿರಾ ಜನರ ಜೀವನಾಡಿ ಈ ನೀರನ್ನ ನಂಬಿಕೊಂಡು ಜನ ಕುಳಿತಿದ್ದಾರೆ.ಹೇಮಾವತಿ ಪಾತ್ರದಲ್ಲಿ ಬರುವ ಈ ಕೆರೆಗೆ ನೀರು ಹರಿಸಿದ್ರೆ ನಾವೇ ಹಣವನ್ನ ರಾಜಕಾರಣಿಗಳಿಗೆ ಕೊಡ್ತಿವಿ ಎಂತಿದ್ದಾರೆ ರೈತರು. ಹಾಗಾಗಿ ಈ ಕೆರೆಗೆ ನೀರು ತರಿಸುವ ಕ್ರೆಡಿಟ್ ಪಡೆದುಕೊಂಡು ಶಿರಾ ಕ್ಷೇತ್ರಗೆಲ್ಲಲು ಬಿಜೆಪಿ ನೀರುಹರಿಸಲು ಮುಂದಾಗಿದೆ. ಶಿರಾಗೆ 0.9 ಟಿಎಂಸಿ ಒಟ್ಟೂ ನೀರಿನ ಅಲೋಕೇಷನ್ ಇದ್ದು ನೀರುಹರಿಸಲು ಮುಂದಾಗಿದೆ. ಆದ್ರೆ ಈಗಾಗಲೇ ಈ ಹಿಂದೆ ಕ್ಷೇತ್ರದ ಶಾಸಕರಾಗಿದ್ದ ಜಯಚಂದ್ರ ಸರ್ಕಾರದಿಂದ 68 ಕೋಟಿ ಅನುದಾನ ಪಡೆದು 38 ಕಿ.ಮೀ ನಾಲೆ ನಿರ್ಮಾಣ ಮಾಡಿದ್ರು.


ಪ್ರಾಯೋಗಿಕವಾಗಿ 2016 ರಲ್ಲಿ ಮದಲೂರಿಗೆ ನೀರು ಹರಿಸಿದ್ರು. ಆದ್ರೆ ಕೇವಲ 10 ದಿನವಷ್ಟೇ ಹರಿದ ನೀರು ಅಂದಿನಿಂದ ಇಂದಿನವರೆಗೂ ಕೆರೆ ಖಾಲಿಯಾಗಿಯೇ ಇದೆ.. ಈ ಅಸಮಾಧಾನ ಹಾಗೂ ಸಿಂಪತಿ ಮೇಲೆ ಜೆಡಿಎಸ್ ನಿಂದ ಸತ್ಯನಾರಾಯಣ್ ಗೆಲ್ಲುವಂತೆ ಮಾಡಿತ್ತು. ಬಿಜೆಪಿ ಈ ಹಿಂದೆ ಕ್ಷೇತ್ರವನ್ನ ಗೆದ್ದಿಲ್ಲ. ಹಾಗಾಗಿ ಕೆರೆಗೆ ನೀರು ಹರಿಸುವ ಮೂಲಕ ಜನಮನ್ನಣೆಗಳಿಸುವ ಉತ್ಸಾಹದಲ್ಲಿರುವ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ಯಡಿಯೂರಪ್ಪನವರನ್ನ ಭೇಟಿ ಮಾಡಿ ನೀರು ಹರಿಸಲು ಆದೇಶ ನೀಡುವಂತೆ ಮನವಿ ಮಾಡಿದ್ದಾರೆ. ಆದ್ರೆ ಅಲೋಕೇಷನ್ ಇಲ್ಲದ ಕೆರೆಗೆ ನೀರು ಹರಿಸುವುದು ಹೇಗೆ ಎನ್ನುವ ಯಕ್ಷ ಪ್ರಶ್ನೆ ಬಿಜೆಪಿ ಸರ್ಕಾರದಲ್ಲಿದೆ. ವಿಶೇಷ ಆದೇಶದ ಅಡಿಯಲ್ಲಿ ನೀರು ಹರಿಸಿದ್ರೆ ಅನುಕೂಲವಾಗುತ್ತೆ ಎನ್ನೋದು ಬಿಜೆಪಿ ಜಿಲ್ಲಾಮುಖಂಡರ ಆಪೇಕ್ಷೆಯಾಗಿದೆ.


ಒಟ್ಟಾರೆ ಜಾತಿಬಲ ಹಣಬಲ ಯಾವುದೇ ಇರಲಿ ಎಷ್ಟೇ ಇರಲಿ ಮತದಾರ ಪ್ರಭು ಮಾತ್ರ ತನ್ನ ಮತಾದೇಶಕ್ಕೆ ಒಂದು ಕೆರೆಗೆ ನೀರು ಬಿಡುವುದನ್ನ ಎದುರು ನೋಡ್ತಿದ್ದಾನೆ.

Published by:Latha CG
First published: