• Home
  • »
  • News
  • »
  • state
  • »
  • ಶಿರಾ ಉಪಚುನಾವಣೆ: ಗೊಲ್ಲ ಸಮುದಾಯದ ಮತ ಬೇಟೆಗೆ ಮೂರೂ ಪಕ್ಷದವರು ಸಂಚು

ಶಿರಾ ಉಪಚುನಾವಣೆ: ಗೊಲ್ಲ ಸಮುದಾಯದ ಮತ ಬೇಟೆಗೆ ಮೂರೂ ಪಕ್ಷದವರು ಸಂಚು

ಕಾಂಗ್ರೆಸ್

ಕಾಂಗ್ರೆಸ್

ಗೊಲ್ಲ ಸಮುದಾಯ ಜಯಚಂದ್ರರ ಕೈ ಹಿಡಿಬೇಕು ಎಂದು ಜಯಚಂದ್ರರ ಪರ ಬ್ಯಾಟಿಂಗ್ ಮಾಡಿದ್ದಾರೆ. ಮಾಜಿ ಡಿಸಿಎಂ ಜಿ.ಪರಮೇಶ್ವರ ಭಾವನಾತ್ಮಕವಾಗಿ ಮಾತನಾಡುವ ಮೂಲಕ ಯಾದವರ ಮತ ಸೆಳೆಯುವಲ್ಲಿ ನಿರತರಾದರು.

  • Share this:

ತುಮಕೂರು(ಅ.14): ಶಿರಾ ಉಪಚುನಾವಣೆಯಲ್ಲಿ ಗೊಲ್ಲ ಸಮುದಾಯದ ಮತಗಳು ಪ್ರಬಲವಾಗಿವೆ. ಕುಂಚಿಟಿಗರನ್ನು ಹೊರತುಪಡಿಸಿದರೆ ಗೊಲ್ಲ ಸಮುದಾಯದ ಮತಗಳು ಹೆಚ್ಚಿವೆ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಈ ಸಮುದಾಯದ ಮೇಲೆ ಕಣ್ಣಿಟ್ಟಿದ್ದು ನಾ ಮುಂದು.. ನೀ ಮುಂದು ಎಂದು ಓಲೈಕೆ ಮಾಡುತ್ತಿವೆ. ಗೊಲ್ಲರನ್ನು ಮೊನ್ನೆ ಬಿಜೆಪಿ ಓಲೈಸಿದರೆ, ಇಂದು ಕಾಂಗ್ರೆಸ್ ಮತ ಭಿಕ್ಷೆ ಕೇಳಿದೆ. ಶಿರಾ ಉಪಕದನದಲ್ಲಿ ಜಾತಿ ರಾಜಕಾರಣವೇ ಮೇಲುಗೈ ಸಾಧಿಸಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ. ಇದನ್ನರಿತ ರಾಜಕೀಯ ಪಕ್ಷಗಳು ಜಾತಿ ಓಲೈಕೆ ಆರಂಭಿಸಿವೆ  ಎರಡನೇ ದೊಡ್ಡ ಸಮುದಾಯವಾಗಿ ಹೊರಹೊಮ್ಮಿದ ಗೊಲ್ಲರ ಮತಗಳನ್ನು ಸೆಳೆಯುವಲ್ಲಿ ಕಾಂಗ್ರೆಸ್ ಮುಂದಾಗಿದೆ. ಇಂದು ಪ್ರತ್ಯೇಕವಾಗಿ ಶಿರಾ ಪಟ್ಟಣದಲ್ಲಿ ಗೊಲ್ಲ ಸಮುದಾಯದವರ ಸಮಾವೇಶ ನಡೆಸಿದ ಕಾಂಗ್ರೆಸ್ ಹಲವು ಆಶ್ವಾಸನೆಗಳನ್ನು ನೀಡಿತು. ಗೊಲ್ಲ ಸಮುದಾಯದ ಅಭಿವೃದ್ಧಿಗೆ ನಾವು ಬದ್ಧ ಎಂದು ಮತ ಸೆಳೆಯುವ ಪ್ರಯತ್ನ ಮಾಡಿದೆ. ಜೊತೆಗೆ ಜೆ.ಡಿ.ಎಸ್ ಮತ್ತು   ಬಿಜೆಪಿಯಲ್ಲಿನ ಹಲವು ಗೊಲ್ಲ ಸಮುದಾಯದ ಮುಖಂಡರು ಕಾಂಗ್ರೆಸ್​​ಗೆ ಸೇರ್ಪಡೆಯಾಗಿದ್ದಾರೆ.


ಈ ವೇಳೆ ಮಾತನಾಡಿದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕಾಡುಗೊಲ್ಲರಿಗೆ ರಾಜಕೀಯ ಪ್ರಾತಿನಿಧ್ಯ ಕಡಿಮೆ ಇದೆ ಅನ್ನೋದನ್ನು ಒಪ್ಪುತ್ತೇನೆ. ಕಳೆದ ಬಾರಿ ಟಿ.ಬಿ.ಜಯಚಂದ್ರರು ಕಾಡುಗೊಲ್ಲರಿಗೆ ಪ್ರಾಮುಖ್ಯತೆ ಕೊಟ್ಟಿಲ್ಲ ಅನ್ನುವ ಆರೋಪ ಇತ್ತು. ಆ ಎಲ್ಲಾ ತಪ್ಪುಗಳು ಇಂದು ಜಯಚಂದ್ರರಿಗೆ ಅರಿವಾಗಿದೆ. ಗೊಲ್ಲ ಸಮುದಾಯ ಜಯಚಂದ್ರರ ಕೈ ಹಿಡಿಬೇಕು ಎಂದು ಜಯಚಂದ್ರರ ಪರ ಬ್ಯಾಟಿಂಗ್ ಮಾಡಿದ್ದಾರೆ. ಮಾಜಿ ಡಿಸಿಎಂ ಜಿ.ಪರಮೇಶ್ವರ ಭಾವನಾತ್ಮಕವಾಗಿ ಮಾತನಾಡುವ ಮೂಲಕ ಯಾದವರ ಮತ ಸೆಳೆಯುವಲ್ಲಿ ನಿರತರಾದರು.


ಉತ್ತರ ಕರ್ನಾಟಕದಲ್ಲಿ ರೆಡ್ ಅಲರ್ಟ್​ ಘೋಷಣೆ; ಕರಾವಳಿ, ಮಲೆನಾಡಿನಲ್ಲಿ ಇನ್ನೆರಡು ದಿನ ಭಾರೀ ಮಳೆ


ನನಗೆ ಮಧುಗಿರಿಯಲ್ಲಿ ರಾಜಕೀಯ ಜೀವನ ಕೊಟ್ಟಿದ್ದೇ ಗೊಲ್ಲರು. ಅವರ ಸಹಾಯವನ್ನು ಸ್ಮರಿಸದೇ ಇರಲು ಸಾಧ್ಯವಿಲ್ಲ. ರಾಜಕೀಯವಾಗಿ ನಿಮಗೆ ಶಕ್ತಿ ತುಂಬುವ ಕೆಲಸ ನಾವು ಮಾಡುತ್ತೇವೆ ಎಂದು ವಾಗ್ದಾನ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಬಿಜೆಪಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ರಚಿಸುವುದರ ಮೂಲಕ ಓಲೈಕೆ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಕಾಂಗ್ರೆಸ್ ಕೂಡ ಇಂದು ಕಾಡುಗೊಲ್ಲರ ಸಮಾವೇಶ ನಡೆಸಿದೆ.


ಜೊತೆಗೆ ಪರಸ್ಪರ ಉತ್ತರ-ದಕ್ಷಿಣದಂತಿದ್ದ ಕಾಂಗ್ರೆಸ್ ನಾಯಕರುಗಳಾದ ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಹಾಗೂ ಅಭ್ಯರ್ಥಿ ಜಯಚಂದ್ರ ಮುಕ್ತ ಮನಸ್ಸಿನಿಂದ ಒಂದಾಗಿ‌ ಗೊಲ್ಲರ ಬಳಿ ಮತಕ್ಕಾಗಿ‌ ಗೋಗರೆದದ್ದು ವಿಶೇಷವಾಗಿತ್ತು.

Published by:Latha CG
First published: