• Home
  • »
  • News
  • »
  • state
  • »
  • Sira By Election: ರಂಗೇರುತ್ತಿದೆ ಶಿರಾ ಉಪಚುನಾವಣೆ: ಬಿಜೆಪಿಯಿಂದ ಸುರೇಶ್​ಗೌಡ ಕಣಕ್ಕೆ?

Sira By Election: ರಂಗೇರುತ್ತಿದೆ ಶಿರಾ ಉಪಚುನಾವಣೆ: ಬಿಜೆಪಿಯಿಂದ ಸುರೇಶ್​ಗೌಡ ಕಣಕ್ಕೆ?

ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್​ ಗೌಡ

ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್​ ಗೌಡ

ಕಾಂಗ್ರೆಸ್ ಜೆಡಿಎಸ್ ಪಕ್ಷಗಳಿಗೆ ಕೊಕ್ ನೀಡುವ ನಿಟ್ಟಿನಲ್ಲಿ ಬಿಜೆಪಿ ಪಕ್ಷ ಬೂತ್ ಕಾರ್ಯಕರ್ತರ ಸಭೆ ಹೆಸರಲ್ಲಿ ಪ್ರಚಾರಕ್ಕಿಳಿದಿದೆ. ಈಗಾಗಲೇ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಬೂತ್ ಗಳಲ್ಲಿ ಸಭೆ ನಡೆಸಿದ್ದು ಪಕ್ಷ ಕಟ್ಟುವ ಹೆಸರಲ್ಲಿ ಪ್ರಚಾರ ಶುರು ಮಾಡಿಕೊಂಡಿದೆ.

ಮುಂದೆ ಓದಿ ...
  • Share this:

ತುಮಕೂರು(ಸೆ.10): ಜೆಡಿಎಸ್ ಶಾಸಕ ಸತ್ಯನಾರಾಯಣ್ ನಿಧನದಿಂದ ತೆರವಾಗಿರುವ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಗೂ ಮುನ್ನವೇ ಬೂತ್ ಮಟ್ಟದ ಕಾರ್ಯಕರ್ತರ ಸಭೆ ನೆಪದಲ್ಲಿ ಶಿರಾ ಉಪಚುನಾವಣೆಗೆ ಸಿದ್ದವಾಗ್ತಿದೆ ಬಿಜೆಪಿ. ತುಮಕೂರು ಜಿಲ್ಲೆ ಶಿರಾ ಶಾಸಕ ಸತ್ಯನಾರಾಯಣ್ ಅಕಾಲಿಕ ನಿಧನದಿಂದಾಗಿ ತೆರವಾಗಿರುವ ಶಿರಾ ವಿಧಾನಸಭಾ ಚುನಾವಣಾ ಕಾವು ಘೋಷಣೆಗೂ ಮುನ್ನ ಜೋರಾಗಿದೆ. ಇತ್ತ ಕಾಂಗ್ರೆಸ್ ಜೆಡಿಎಸ್ ಪಕ್ಷಗಳಿಗೆ ಕೊಕ್ ನೀಡುವ ನಿಟ್ಟಿನಲ್ಲಿ ಬಿಜೆಪಿ ಪಕ್ಷ ಬೂತ್ ಕಾರ್ಯಕರ್ತರ ಸಭೆ ಹೆಸರಲ್ಲಿ ಪ್ರಚಾರಕ್ಕಿಳಿದಿದೆ. ಈಗಾಗಲೇ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ಗೌಡ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಬೂತ್ ಗಳಲ್ಲಿ ಸಭೆ ನಡೆಸಿದ್ದು ಪಕ್ಷ ಕಟ್ಟುವ ಹೆಸರಲ್ಲಿ ಪ್ರಚಾರ ಶುರು ಮಾಡಿಕೊಂಡಿದೆ. ಬಿಜೆಪಿ ಪಕ್ಷದ ಹಿರಿಯೂರು ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಶಿರಾ ತಾಲೂಕಿನ ಮುದ್ದೇನಹಳ್ಳಿ ಚಿತ್ರಲಿಂಗೇಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸುವ ಮೂಲಕ ನಾನು ಶಿರಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದಿದ್ದಾರೆ.


ಅಲ್ಲದೇ ತುಮಕೂರು ಜಿಲ್ಲೆಯಲ್ಲಿ ಹಲವು ಬಾರಿ ಗೊಲ್ಲ ಸಮುದಾಯದ ಸಮಾವೇಶಗಳನ್ನು ಮಾಡಿ ಬಿಜೆಪಿ ಪಕ್ಷ ಕಟ್ಟುವ ಕೆಲಸ ಮಾಡಿದ್ದೇನೆ. ಪಾರ್ಲಿಮೆಂಟ್ ಚುನಾವಣೆ ವೇಳೆ ಸಂಸದ ಬಸವರಾಜು ಅವರಿಗೆ ನಮ್ಮ ಸಮಾಜ ಆಶೀರ್ವಾದ ಮಾಡಿದೆ. ಪೂರ್ಣಿಮ ಗೆದ್ದಮೇಲೆ  ನನಗೆ ಎಂ ಎಲ್ ಸಿ ಅವಕಾಶ ಕೊಡುವುದಾಗಿ ಹೇಳಿದ್ದರು. ಆದರೆ ಶಿರಾದ ಕುಂಚಿಟಿಗ ಸಮುದಾಯದ ಚಿದಾನಂದಗೌಡ ಅವರಿಗೆ ಅವಕಾಶ ಮಾಡಿಕೊಟ್ಟಿದೆ. ಹಿಂದುಳಿದ ವರ್ಗಗಳಿಗೆ ಶಕ್ತಿ ನೀಡಲು ನನಗೆ ಅವಕಾಶ ಮಾಡಿಕೊಟ್ಟರೆ ಹಿರಿಯೂರಿನಲ್ಲಿ ಬಿಜೆಪಿ ಬಾವುಟ ಹಾರಿಸಿದಂತೆ ಶಿರಾದಲ್ಲಿ ಬಿಜೆಪಿ ಬಾವುಟ ಹಾರಿಸಲು ಸಿದ್ದರಿದ್ದೇವೆ.  ನನಗೆ ಶಿರಾ ವಿಧಾನಸಭಾ ಟಿಕೆಟ್ ನೀಡಿ ಅವಕಾಶ ಮಾಡಿಕೊಡುತ್ತಾರೆ ಎಂದು ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿದೆ. ಅವಕಾಶ ಮಾಡಿಕೊಟ್ಟರೆ ಹಿರಿಯೂರು ಫಲಿತಾಂಶವನ್ನು ಶಿರಾದಲ್ಲಿ ಮರುಕಳಿಸುತ್ತೇವೆ ಎಂದು ಹೇಳಿದರು.


ಕೊರೋನಾ ನಡುವೆ ಶೂಟಿಂಗ್​ಗೆ ಸಜ್ಜಾದ ಮದಗಜ!


ಇನ್ನು ಬಿಜೆಪಿ ಪಕ್ಷದಲ್ಲಿ 2008, 2013 ರಲ್ಲಿ ಶಿರಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಬೇವಿನಹಳ್ಳಿ ಮಂಜುನಾಥ್ ಸಹ ನಾನು ಈ ಕ್ಷೇತ್ರದ ಆಕಾಂಕ್ಷಿಯಾಗಿದ್ದೇನೆ ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ನೀರಿನ ವಿಚಾರದಲ್ಲಿ ಕ್ಷೇತ್ರದ ಜನತೆಗೆ ಮೋಸ ಮಾಡಿವೆ. ನಾನು ಹಳ್ಳಿಗಳಿಗೆ ಹೋದಾಗ ನೀವು ಹಾಗೆಯೇ ಮಾಡ್ತೀರಾ ಅಂತಾ ಕೇಳ್ತಾರೆ. ಹಾಗಾಗಿ ನಮ್ಮ ಜಿಲ್ಲಾಧ್ಯಕ್ಷರು ಈಗಾಗಲೇ ಯಡಿಯೂರಪ್ಪನವರೊಂದಿಗೆ ಮಾತನಾಡಿದ್ದು ಮದಲೂರು ಕೆರೆ ನೀರು ಹರಿಸುವ ಭರವಸೆ ನೀಡಿದ್ದಾರೆ ಎಂದರು.


ಕಾಂಗ್ರೆಸ್ ಶಾಸಕ ಟಿ.ಬಿ.ಜಯಚಂದ್ರ ಭದ್ರಾ ಮೇಲ್ದಂಡೆ ಯೋಜನೆ ನೀರು ಶಿರಾಗೆ ಬರೋದು ಭ್ರಮೆ ಎಂದಿದ್ದರು. ಆದ್ರೆ ಇಂದು ಅದು ನನ್ನದೇ ಯೋಜನೆ ಅಂತಾ ಪ್ರಚಾರ ಮಾಡ್ತಾರೆ. ಪ್ರಮಾಣ ಮಾಡಿ ಹೇಳ್ತೇನೆ, ಅದು ಯಡಿಯೂರಪ್ಪನವರು ಹಿಂದಿನ ಸರ್ಕಾರದಲ್ಲಿ ಮಂಜೂರು ಮಾಡಿದ್ದು ಎಂದು ಹೇಳಿದರು.


ಒಟ್ಟಾರೆ ಶಿರಾ ಉಪಚುನಾವಣಾ ಅಖಾಡದಲ್ಲಿ ಬಿಜೆಪಿಯಿಂದಲೂ ಅನೇಕ ಟಿಕೆಟ್ ಆಕಾಂಕ್ಷಿಗಳ ಹೆಸರು ಕೇಳಿಬಂದಿದ್ದು, ಚುನಾವಣಾ ಅಭ್ಯರ್ಥಿ ಹೆಸರೇಳದೇ ಜಿಲ್ಲಾಧ್ಯಕ್ಷ ಸುರೇಶ್ ಗೌಡ ಶಿರಾ ಕ್ಷೇತ್ರದ ಉಪಚುನಾವಣಾ ಅಖಾಡದಲ್ಲಿ ಪ್ರಚಾರಕ್ಕಿಳಿದಿರುವುದು, ಸುರೇಶ್​​ಗೌಡ ಅವರೇ ಚುನಾವಣಾ ಅಭ್ಯರ್ಥಿ ಆಗ್ತಾರೆ ಎಂಬ ಅನುಮಾನಗಳು ಸಹ ಮೂಡಿವೆ.

Published by:Latha CG
First published: