• Home
  • »
  • News
  • »
  • state
  • »
  • Sira Bypoll 2020: ನ. 3ರಂದು ನಡೆಯಲಿರುವ ಶಿರಾ ಉಪಚುನಾವಣೆಗೆ ಆಂಧ್ರ ಪೊಲೀಸರ ಬಂದೋಬಸ್ತ್​

Sira Bypoll 2020: ನ. 3ರಂದು ನಡೆಯಲಿರುವ ಶಿರಾ ಉಪಚುನಾವಣೆಗೆ ಆಂಧ್ರ ಪೊಲೀಸರ ಬಂದೋಬಸ್ತ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಭೆಯಲ್ಲಿ ಚರ್ಚಿಸಿದಂತೆ ಮಡಕಶಿರಾದಲ್ಲಿ ಆಂಧ್ರಪ್ರದೇಶದ ಪೊಲೀಸರು ಚೆಕ್ ಪೋಸ್ಟ್ ತೆರೆದು ಬಂದೋಬಸ್ತ್ ಒದಗಿಸಲಿದ್ದಾರೆ . ಇಲ್ಲಿ ಅಂತರರಾಜ್ಯ ವಾಹನ ಸಂಚಾರದ ಮೇಲೆ ನಿಗಾ ವಹಿಸಲಿದ್ದು, ವ್ಯಾಪಕ ಕಟ್ಟೆಚ್ಚರವನ್ನು ಕೈಗೊಳ್ಳಲಿದ್ದಾರೆ.

  • Share this:

ತುಮಕೂರು(ನ.02): ನವೆಂಬರ್ 3 ರಂದು ನಡೆಯಲಿರುವ ರಾಜ್ಯದ ಶಿರಾ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಪಕ್ಕದ ರಾಜ್ಯವಾದ ಆಂಧ್ರಪ್ರದೇಶದ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಹೌದು , ಕರ್ನಾಟಕದಲ್ಲಿ ನಡೆಯುವ ಚುನಾವಣೆಗೆ ಆಂಧ್ರಪ್ರದೇಶ ರಾಜ್ಯದ ಪೊಲೀಸರಿಗೆ ಬಂದೋಬಸ್ತ್ ಬಿಸಿ ತಟ್ಟಿದೆ . ತುಮಕೂರು ಜಿಲ್ಲಾಧಿಕಾರಿಗಳು ಹಾಗೂ ಎಸ್ಪಿಯವರ ಮನವಿ ಮೇರೆಗೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪೊಲೀಸರು ಶಿರಾ ಉಪಚುನಾವಣೆಗಾಗಿ ಸಹಕಾರ ನೀಡುತ್ತಿದ್ದಾರೆ. ಶಿರಾ ವಿಧಾನಸಭಾ ಕ್ಷೇತ್ರವು ಆಂಧ್ರಪ್ರದೇಶದ 34 ಕಿ.ಮೀ. ಗಡಿಯನ್ನು ಹಂಚಿಕೊಂಡಿದ್ದು, ಚುನಾವಣಾ ಅಕ್ರಮಗಳು ಹೆಚ್ಚಾಗುವ ಸಾಧ್ಯತೆ ಇದೆ. ಅವುಗಳನ್ನು ತಡೆಯುವ ಸಂಬಂಧ ಅನಂತಪುರ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ತುಮಕೂರು ಜಿಲ್ಲಾಧಿಕಾರಿ ಡಾ.ಕೆ ರಾಕೇಶ್ ಕುಮಾರ್ ಹಾಗೂ ಎಸ್ಪಿ ಡಾ.ಕೆ ವಂಶಿಕೃಷ್ಣ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಿದ್ದಾರೆ .


ಸಭೆಯಲ್ಲಿ ಚರ್ಚಿಸಿದಂತೆ ಮಡಕಶಿರಾದಲ್ಲಿ ಆಂಧ್ರಪ್ರದೇಶದ ಪೊಲೀಸರು ಚೆಕ್ ಪೋಸ್ಟ್ ತೆರೆದು ಬಂದೋಬಸ್ತ್ ಒದಗಿಸಲಿದ್ದಾರೆ . ಇಲ್ಲಿ ಅಂತರರಾಜ್ಯ ವಾಹನ ಸಂಚಾರದ ಮೇಲೆ ನಿಗಾ ವಹಿಸಲಿದ್ದು, ವ್ಯಾಪಕ ಕಟ್ಟೆಚ್ಚರವನ್ನು ಕೈಗೊಳ್ಳಲಿದ್ದಾರೆ.


Drug Mafia: ಅಮೆರಿಕಾದಿಂದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಗಾಂಜಾ ಆಮದು


ಶಿರಾದಲ್ಲಿ ಸೂಕ್ತ ಭದ್ರತೆ 


ತುಮಕೂರು ಜಿಲ್ಲಾ ಪೊಲೀಸರು ಕೂಡ ಶಾಂತಿಯುತ ಮತದಾನಕ್ಕೆ ಅಗತ್ಯವಾದ ಕ್ರಮ ಕೈಗೊಂಡಿದ್ದಾರೆ. 2 ಡಿವೈಎಸ್‌ಪಿ, 5 ಮಂದಿ ಇನ್ಸ್‌ಪೆಕ್ಟರ್‌, 21 ಪಿಎಸ್‌ಐ, 19 ಎಎಸ್‌ಐ ಸೇರಿದಂತೆ 900 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.


ಕೇಂದ್ರದ 3 ಭದ್ರತಾ ಸಿಬ್ಬಂದಿಗಳ ಕಂಪನಿಗಳು ಭದ್ರತೆಗೆ ಆಗಮಿಸಿದ್ದು, ಹೋಬಳಿವಾರು 5 ಇನ್ಸ್ಪೆಕ್ಟರ್ ಗಳ ತಂಡ ರೌಂಡ್ಸ್ ನಲ್ಲಿರಲಿದೆ. ಈಗಾಗಲೇ ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

Published by:Latha CG
First published: