HOME » NEWS » State » SIRA ASSEMBLY BYPOLLS MODEL CODE OF CONDUCT IMPLEMENTED IN SIRA KARNATAKA BY ELECTIONS SCT

Sira Assembly Bypolls: ಶಿರಾ ವಿಧಾನಸಭೆ ಉಪಚುನಾವಣೆ; ತುಮಕೂರಿನಲ್ಲಿ ಮಾದರಿ ನೀತಿಸಂಹಿತೆ ಜಾರಿ

Karnataka Assembly Bypolls: ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಒಟ್ಟು 330 ಮತಗಟ್ಟೆಗಳಲ್ಲಿ 2.15 ಲಕ್ಷ ಜನರು ಅಭ್ಯರ್ಥಿಯ ಭವಿಷ್ಯ ಬರೆಯಲಿದ್ದಾರೆ. ಈಗಾಗಲೇ ತುಮಕೂರಿನಾದ್ಯಂತ ಮಾದರಿ ನೀತಿಸಂಹಿತೆ ಘೋಷಣೆಯಾಗಿದ್ದು, 10 ಚೆಕ್​ಪೋಸ್ಟ್​ಗಳನ್ನು ತೆರೆಯಲಾಗಿದೆ.

news18-kannada
Updated:October 2, 2020, 8:12 AM IST
Sira Assembly Bypolls: ಶಿರಾ ವಿಧಾನಸಭೆ ಉಪಚುನಾವಣೆ; ತುಮಕೂರಿನಲ್ಲಿ ಮಾದರಿ ನೀತಿಸಂಹಿತೆ ಜಾರಿ
ಸಾಂದರ್ಭಿಕ ಚಿತ್ರ.
  • Share this:
ತುಮಕೂರು (ಅ. 2): ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ದಿನಗಣನೆ ಶುರುವಾಗಿದ್ದು ಜಿಲ್ಲಾಡಳಿತ ಭರ್ಜರಿ ತಯಾರಿ ನಡೆಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಭಾರೀ ಮುಂಜಾಗ್ರತೆಯನ್ನು ವಹಿಸಲಾಗಿದ್ದು, ಬಹಳ ಮಹತ್ವ ಪಡೆದಿರುವ ರಾಜಕೀಯ ಜಿದ್ದಾಜಿದ್ದಿಗೆ ಜಿಲ್ಲಾಡಳಿತ ಚುನಾವಣೆ ಸಂಬಂಧ ಆಡಳಿತಾತ್ಮಕವಾಗಿ ಸಿದ್ಧಗೊಂಡಿದೆ. ನವೆಂಬರ್ 3ರಂದು ನಡೆಯಲಿರುವ ಮತದಾನದಲ್ಲಿ 2.15 ಲಕ್ಷ ಜನರು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಚುನಾವಣೆಗೆ ಜಿಲ್ಲಾಡಳಿತ ಚುನಾವಣೆ ನಡೆಸಲು ಹೇಗೆ ಸಿದ್ಧವಾಗಿದೆ? ಶಿರಾ ವಿಧಾನಸಭಾ ಉಪಚುನಾವಣೆ ಇಡೀ ರಾಜ್ಯದ ಗಮನ ಸೆಳೆದಿದೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಮೂರು ಪಕ್ಷದವರಿಗೆ ಪ್ರತಿಷ್ಠೆಯ ಕಣವಾದ ಈ ಚುನಾವಣೆಗೆ ಜಿಲ್ಲಾಡಳಿತ ಭರ್ಜರಿ ತಾಲೀಮು ನಡೆಸುತ್ತಿದೆ. ಒಟ್ಟು 330 ಮತಗಟ್ಟೆಗಳಲ್ಲಿ 2.15 ಲಕ್ಷ ಜನರು ಅಭ್ಯರ್ಥಿಯ ಭವಿಷ್ಯ ಬರೆಯಲಿದ್ದಾರೆ. ಈ ಕುರಿತು ಮಾಹಿತಿ ನೀಡಿದ ತುಮಕೂರು ಜಿಲ್ಲಾಧಿಕಾರಿ ಕೆ. ರಾಕೇಶ್ ಕುಮಾರ್, ಈಗಾಗಲೇ ತುಮಕೂರಿನಾದ್ಯಂತ ಮಾದರಿ ನೀತಿಸಂಹಿತೆ ಘೋಷಣೆಯಾಗಿದ್ದು, 10 ಚೆಕ್​ಪೋಸ್ಟ್​ಗಳನ್ನು ತೆರೆಯಲಾಗಿದೆ. 80 ವರ್ಷ ಮೇಲ್ಪಟ್ಟ ಮತದಾರರು, ವಿಕಲಚೇತನರು ಹಾಗೂ ಕೋವಿಡ್ ಸೋಂಕಿತರು ಹಾಗೂ ಶಂಕಿತರಿಗೆ ಫಾರಂ ನಂ.12 ಅರ್ಜಿ ಮುಖೇನ ಪೋಸ್ಟಲ್ ಬ್ಯಾಲೆಟ್ ಮುಖಾಂತರ ಅವಕಾಶ ಮಾಡಿಕೊಡಲಾಗಿದೆ ಎಂದರು.

ಇದನ್ನೂ ಓದಿ: ಉಪ ಚುನಾವಣೆಯಲ್ಲಿ ಮೈತ್ರಿಯ ಪ್ರಶ್ನೆಯೇ ಇಲ್ಲ; ಹೆಚ್​.ಡಿ. ಕುಮಾರಸ್ವಾಮಿ ಸ್ಪಷ್ಟನೆ

ಮತದಾರರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಮತಗಟ್ಟೆಯ ಅಧಿಕಾರಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಹ್ಯಾಂಡ್ ಗ್ಲೌಸ್ ಫೇಸ್ ಶೀಲ್ಡ್ ಒದಗಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರತಿ ಸಾವಿರ ಮತದಾರರಿಗೆ ಒಂದು ಮತಗಟ್ಟೆ ಸ್ಥಾಪಿಸಲಾಗಿದೆ. ಸಾವಿರಕ್ಕಿಂತ ಮೇಲ್ಪಟ್ಟವರಿಗೆ ಮತ್ತೊಂದು ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಇನ್ನು, ರಾಜಕೀಯ ಪಕ್ಷಗಳಿಗೆ ಬಹಿರಂಗ ಸಭೆ ನಡೆಸಲು ಅವಕಾಶ ನೀಡಲಾಗಿದ್ದು ಒಳಾಂಗಣ ಆವರಣದಲ್ಲಿ ಸಭೆ ನಡೆಸಲು ಕೇವಲ 200 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅಕ್ಟೋಬರ್ 16ರಂದು ನಡೆಯುವ ನಾಮಪತ್ರ ಸಲ್ಲಿಕೆ ವೇಳೆ ಇಬ್ಬರು ವ್ಯಕ್ತಿ ಹಾಗೂ ಎರಡು ವಾಹನಗಳಿಗೆ ಅವಕಾಶ ನೀಡಲಾಗಿದೆ. ಮನೆ ಮನೆ ಪ್ರಚಾರಕ್ಕೂ ನಿಬಂಧನೆ ವಿಧಿಸಿದ್ದು, ಕೇವಲ 5 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಒಟ್ಟಾರೆ ಮೂರು ಪಕ್ಷಗಳು ಮತದಾರರನ್ನು ಸೆಳೆಯುವಲ್ಲಿ ಒಂದೆಡೆ ರಣತಂತ್ರ ರೂಪಿಸುತ್ತಿದ್ದರೆ ಇನ್ನೊಂದಡೆ ಜಿಲ್ಲಾಡಳಿತ ಚುನಾವಣಾ ಅಕ್ರಮಗಳಿಗೆ ಪಕ್ಷಗಳು ಮುಂದಾಗದಂತೆ ತಡೆಯಲು ಪ್ರತಿತಂತ್ರ ರೂಪಿಸಲು ಸಜ್ಜಾಗುತ್ತಿವೆ. ಕೋವಿಡ್ ಹಿನ್ನಲೆಯಲ್ಲಿ ನಿಯಮಗಳನ್ನ ಗಾಳಿಗೆ ತೂರದಂತೆ ಚುನಾವಣೆ ನಡೆದರೆ ಸಾಕು ಎಂಬುದು ಸಾರ್ವಜನಿಕರು ಮಾತಾಗಿದೆ. ಇನ್ನು, ಮತ ಎಣಿಕೆ  ಶಿರಾ ನಗರದಲ್ಲೇ ನಡೆಯಲಿದ್ದು. ಸರ್ಕಾರಿ ಪ್ರಥಮದರ್ಜೆ ಕಾಲೇಜನ್ನು ಮತ ಎಣಿಕೆ ಕಾರ್ಯಕ್ಕೆ ಗುರುತಿಸಲಾಗಿದೆ.

ನವೆಂಬರ್‌ 3ರಂದು ಶಿರಾ ಹಾಗೂ ಆರ್‌. ಆರ್‌ ನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಅಕ್ಟೋಬರ್‌ 9ರಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಬಳಿಕ 17ನೇ ತಾರೀಕಿನಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಇದಾದ ನಂತರ ನವೆಂಬರ್ 10ರಂದು ಎರಡು ಕ್ಷೇತ್ರದ ಫಲಿತಾಂಶ ಪ್ರಕಟಗೊಳ್ಳಲಿದೆ
Published by: Sushma Chakre
First published: October 2, 2020, 8:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories