Bengaluru: ಸಿಂಗಲ್ ಯೂಸ್ ಪ್ಲಾಸ್ಟಿಕ್ ಮಾರಾಟ; ನ್ಯೂಸ್ 18 ಕ್ಯಾಮೆರಾದಲ್ಲಿ ಸೆರೆಯಾಯ್ತು ಅಸಲಿ ಕಹಾನಿ

ಮುಂಭಾಗ ಬೋರ್ಡ್ ನಲ್ಲಿ 100 ಮೈಕ್ರಾನ್ ಗಿಂತ ಹೆಚ್ಚಿನ ಹಲವು ಪ್ಲಾಸ್ಟಿಕ್ ಸ್ಯಾಂಪಲ್ ಇದ್ರೆ, ಇದು ಬೇಡ ಬೇರೆ ಕೊಡಿ ಎಂದ್ರೆ ಅದರ ಹಿಂಭಾಗದ ಬೋರ್ಡ್ ನಲ್ಲಿ ನಿಷೇಧಿತ ಪ್ಲಾಸ್ಡಿಕ್ ಮಾದರಿ ತೋರಿಸಿ ಮಾರಾಟ ಮಾಡ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು - ದೇಶಾದ್ಯಂತ ಏಕ ಬಳಕೆಯ ಪ್ಲಾಸ್ಟಿಕ್ ಜುಲೈ 1ರಿಂದ ನಿಷೇಧವಾಗಿದೆ. ಆದ್ರೆ ಬೆಂಗಳೂರಿನಲ್ಲಿ (Bengaluru) ರಾಜಾರೋಷವಾಗಿ ಪ್ಲಾಸ್ಟಿಕ್ ಮಾರಾಟವಾಗ್ತಿದೆ. ನ್ಯೂಸ್ 18 ಕ್ಯಾಮೆರಾದಲ್ಲಿ  ಅಸಲಿ ಪ್ಲಾಸ್ಟಿಕ್ ದಂಧೆ ಸೆರೆಯಾಗಿದೆ. ದೇಶಾದ್ಯಂತ ಜುಲೈ 1ರಿಂದ ಏಕಬಳಕೆ ಪ್ಲಾಸ್ಟಿಕ್ (Single Use Plastic)‌ ಬಳಕೆ ರದ್ದುಪಡಿಸಲಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿಯಿಂದ (Karnataka State Pollution Control Board And BBMP) ಅರಿವು ಪ್ರಯತ್ನ ಮಾಡುತ್ತಿದೆ. ತಯಾರಕರು ಹಾಗೂ ಬಳಕೆದಾರರಿಗೆ ಈಗಾಗಲೇ ಅರಿವು ಮೂಡಿಸಲಾಗುತ್ತಿದೆ. ಇದರ ನಡುವೆಯೇ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿ ಪ್ರತ್ಯೇಕ ದಾಳಿ ಮಾಡಿ ನಗರದ ಹಲವೆಡೆ ದಾಳಿ ನಡೆಸಿ ಪ್ಲಾಸ್ಟಿಕ್ ದಾಸ್ತಾನು ಮಾಡಿಟ್ಟುಕೊಂಡವರ ವಿರುದ್ಧ ಕ್ರಮ ಕೈಗೊಳ್ತಿದೆ.

ತಯಾರಕರು, ದಾಸ್ತಾನು ಮಾಡಿಟ್ಟುಕೊಂಡವರು, ವಿತರಕರು ಸೇರಿದಂತೆ ಹಲವರಿಗೆ ಸೂಚನೆ ನೀಡಿದೆ. ಇಷ್ಟೆಲ್ಲಾ ಆದ ಮೇಲೂ ಪ್ಲಾಸ್ಟಿಕ್ ಉಪಯೋಗಿಸುತ್ತಿರೋರಿಗೆ ದಂಡ ಹಾಕಿದ ಇಲಾಖೆಗಳು ಮಾರ್ಷಲ್‌ಗಳು ಹಾಗು ಕೆಲ ಸಿಬ್ಬಂದಿಯಿಂದ ಸ್ಪಾಟ್ ಫೈನ್ ಹಾಕಿ ಎಚ್ಚರಿಕೆ ನೀಡಲಾಗ್ತಿದೆ. ಆದ್ರೆ ಈ ಮಾರ್ಷಲ್ ಹಾಗು ಸಿಬ್ಬಂದಿ ಮೇಲೆ ದೌರ್ಜನ್ಯವೆಸಗಿ ದರ್ಪ ತೋರ್ಪಡಿಕೆಯಾಗಿದೆ.

Single use plastic sold in bengaluru shtv mrq
ಸಾಂದರ್ಭಿಕ ಚಿತ್ರ


ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತೆ

ಬ್ಯಾನ್ ಅನುಷ್ಠಾನಗೊಳಿಸಲು ಬಂದ ಸಿಬ್ಬಂದಿ ಹಾಗೂ ಮಾರ್ಷಲ್‌ಗಳಿಗೆ ಬೆದರಿಕೆ, ಅವರ ಮುಂದೆಯೇ ಪ್ಲಾಸ್ಟಿಕ್ ಘಾಸಿಗೊಳಿಸಿ ಪ್ಲಾಸ್ಟಿಕ್ ಸಂಗ್ರಹವಾಗಿಲ್ಲ ಎಂದು ನಾಟಕ, ಈ ರೀತಿ ಮಾಡದರೇ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತೆ ಎಂದು ಎಚ್ಚರಿಕೆ ನೀಡುತ್ತಿದೆ. ಆದರೆ ಇದಾವುದಕ್ಕೆ ತಲೆಕೆಡಿಸಿಕೊಳ್ಳದೇ ರಾಜಾರೋಷವಾಗಿ ನಿಷೇಧಿತ ಪ್ಲಾಸ್ಟಿಕ್ ಸೇಲ್ ಆಗ್ತಿದೆ.

ಇದನ್ನೂ ಓದಿ:  Praveen Murder: ಮಧ್ಯರಾತ್ರಿ 12.15ಕ್ಕೆ ಸಿಎಂ ಸುದ್ದಿಗೋಷ್ಠಿ; PFI ಬ್ಯಾನ್ ಆಗುತ್ತಾ?

ನ್ಯೂಸ್ 18 ಸ್ಟಿಂಗ್ ನಲ್ಲಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ಸೇಲ್ ಕರಾಳಮುಖ ಬಯಲಾಗಿದೆ. ನಿಷೇಧವಿದ್ರೂ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಮಾರಾಟವಾಗ್ತಿದೆ‌.‌ ಚಿಕ್ಕಪೇಟೆಯ ಶೇ.80ರಷ್ಟು ಶಾಪ್ ಗಳಲ್ಲಿ  ನಿಷೇಧಿತ ಪ್ಲಾಸ್ಟಿಕ್ ಸಿಗುತ್ತದೆ.

ಅಂಗಡಿಗಳಲ್ಲಿ ಸಿಂಗಲ್ ಯೂಸ್ ಪ್ಲಾಸ್ಟಿಕ್

ಯಾರಿಗೂ ಹೆದರದೇ ಅಂಗಡಿಗಳಲ್ಲಿಯೇ ಇರಿಸಿಕೊಂಡು ಮಾರಾಟ ಮಾಡುತ್ತಿರುವ ಮಾಲೀಕರು, ಕೆಲವೆಡೆ ನಿಷೇಧಿತ ಪ್ಲಾಸ್ಟಿಕ್ ಗೋಡೌನ್, ಬೇರೆಡೆ ಇರಿಸಿ ಮಾರಾಟ ಮಾಡ್ತಿದಾರೆ. ಈ ಪುಟ್ಟ ಪ್ಲಾಸ್ಟಿಕ್ ಶಾಪ್ ನಲ್ಲಿಯೇ ಇದೆ ಸಿಂಗಲ್ ಯೂಸ್ ಪ್ಲಾಸ್ಟಿಕ್. ನಿಷೇಧಿತ ಪ್ಲಾಸ್ಟಿಕ್‌ ತೋರಿಸಿ ಅಂದ್ರೆ ಒಳಗಿಂದ ತೆಗೆದು ತೋರಿಸ್ತಾರೆ. ಎಷ್ಟು ಬೇಕು? ಅಷ್ಟು ಪ್ಲಾಸ್ಟಿಕ್‌ ನಮ್ಮ ಬಳಿ ಇದೆ ಅಂತಾರೆ.

ಬೇರೆ ಕಡೆ ಇಂಥ ಪ್ಲಾಸ್ಟಿಕ್ ಸಿಗುತ್ತಾ ಅಂದ್ರೆ ಸಿಗುತ್ತೆ ನೋಡಿ ಅಂತಾರೆ. ನಿಷೇಧಿತ ಹಾಗೂ ಈಗಿನ ಹೊಸ ಪ್ಲಾಸ್ಟಿಕ್ ಒಂದೇ ರೇಟು ಅಂತಾರೆ ಮಾಲೀಕರು. ಬಿಬಿಎಂಪಿ ಯಾಮಾರಿಸಲು ಎರಡೆರಡು ಬೋರ್ಡ್ ಮಾಡಿಸಿರುವ ಶಾಪ್ ಮಾಲೀಕರು, ಪ್ಲಾಸ್ಟಿಕ್ ಮಾರಾಟಕ್ಕೆ ವಿವಿಧ ಮೈಕ್ರಾನ್ ಪ್ಲಾಸ್ಟಿಕ್ ಸ್ಯಾಂಪಲ್ ತೋರಿಸ್ತಾರೆ.

Single use plastic sold in bengaluru shtv mrq
ಸಾಂದರ್ಭಿಕ ಚಿತ್ರ


ನಿಷೇಧಿತ ಪ್ಲಾಸ್ಡಿಕ್ ಮಾದರಿ

ಮುಂಭಾಗ ಬೋರ್ಡ್ ನಲ್ಲಿ 100 ಮೈಕ್ರಾನ್ ಗಿಂತ ಹೆಚ್ಚಿನ ಹಲವು ಪ್ಲಾಸ್ಟಿಕ್ ಸ್ಯಾಂಪಲ್ ಇದ್ರೆ, ಇದು ಬೇಡ ಬೇರೆ ಕೊಡಿ ಎಂದ್ರೆ ಅದರ ಹಿಂಭಾಗದ ಬೋರ್ಡ್ ನಲ್ಲಿ ನಿಷೇಧಿತ ಪ್ಲಾಸ್ಡಿಕ್ ಮಾದರಿ ತೋರಿಸಿ ಮಾರಾಟ ಮಾಡ್ತಾರೆ. ಇನ್ನೂರು ರೂಪಾಯಿ ಕೆ.ಜಿಗೆ ಸೇಲ್ ಮಾಡುತ್ತಿರುವ ಅಂಗಡಿಯವರು. ಹೊರಗಡೆ ಎಲ್ಲ ತೋರಿಸುವಂತಿಲ್ಲ, ರೇಡ್ ಮಾಡ್ತಾರೆ. ನಿಮಗೆಷ್ಟು ಬೇಕು ಅಷ್ಟು ಸಿಂಗಲ್ ಪ್ಲಾಸ್ಟಿಕ್ ಕೊಡ್ತೇವೆ ಅಂತಾರೆ.

ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್‌ ಕೇಳಿದ್ರೆ ಏಕಬಳಕೆ ಪ್ಲಾಸ್ಟಿಕ್ ಈಗಾಗಲೇ ನಿಷೇಧಿಸಲಾಗಿದೆ. ಚಿಕ್ಕಪೇಟೆಯಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಮಾರಾಟವಾಗ್ತಿರೋದು ಗಮನಕ್ಕೆ ಬಂದಿದೆ. ನಮಗಿರುವ ಸಿಬ್ಬಂದಿಗಳ ವ್ಯಾಪ್ತಿಯಲ್ಲಿ ದಾಳಿ ಮುಂದುವರೆಸುತ್ತೇವೆ.‌ ಅಲ್ಲಿಯೂ ದಾಳಿ ಮಾಡಿ ಕ್ರಮಕೈಗೊಳ್ಳುತ್ತೇವೆ. ಮಾರಾಟಗಾರರು ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡಬಾರದು. ಮಾಡಿದ್ರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ತೇವೆ ಎಂದೇಳ್ತಾರೆ.

ಇದನ್ನೂ ಓದಿ:  Praveen Nettar ಅಂತಿಮಯಾತ್ರೆ ವೇಳೆ ಕಟೀಲ್ ಅವರ ಕಾರು ಉರುಳಿಸಲು ಯತ್ನ, ಲಾಠಿ ಚಾರ್ಜ್

ಪರಿಸರ ಹಾನಿಕಾರಕ ಏಕಬಳಕೆಯ ಪ್ಲಾಸ್ಟಿಕ್ ಮಾರಾಟ ಕೇವಲ ಆದೇಶದಲ್ಲಿ ಮಾತ್ರ ಪಾಲನೆಯಾಗ್ತಿದೆ. ಮಾರುಕಟ್ಟೆಯಲ್ಲಿ ಇನ್ನೂ ಮಾರಾಟವಾಗ್ತಿದ್ದು, ಈ ಬಗ್ಗೆ ಸರ್ಕಾರ ಗಮನ ಹರಿಸಬೇಕಿದೆ.
Published by:Mahmadrafik K
First published: