ಆಂಗ್ಲ ಮಾಧ್ಯಮ ಶಾಲೆ ವಿರೋಧಿಸಿದ್ದ ಸಿದ್ದರಾಮಯ್ಯ ತವರಲ್ಲೇ ಇಂಗ್ಲಿಷ್ ಮೀಡಿಯಂಗೆ ಭಾರೀ ಬೇಡಿಕೆ, ಕನ್ನಡಕ್ಕೆ ಶೂನ್ಯ ದಾಖಲಾತಿ!

ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿರೋಧ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ತವರೂರಿನಲ್ಲಿ ಜನರು ಕನ್ನಡ ಕಲಿಕೆಗಿಂತ ಇಂಗ್ಲಿಷ್​ ಕಲಿಕೆಗೆ ಆಸಕ್ತಿ ತೋರುತ್ತಿದ್ದಾರೆ. ವಿಪರ್ಯಾಸ ಎಂದರೆ ಸಿದ್ದರಾಮನಹುಂಡಿಯಲ್ಲಿ ಈ ವರ್ಷ ಕನ್ನಡ ಮಾಧ್ಯಮ ಶಾಲೆಗೆ ಒಬ್ಬ ವಿದ್ಯಾರ್ಥಿ ಕೂಡ ದಾಖಲಾಗಿಲ್ಲ

Seema.R | news18
Updated:June 6, 2019, 12:00 PM IST
ಆಂಗ್ಲ ಮಾಧ್ಯಮ ಶಾಲೆ ವಿರೋಧಿಸಿದ್ದ ಸಿದ್ದರಾಮಯ್ಯ ತವರಲ್ಲೇ ಇಂಗ್ಲಿಷ್ ಮೀಡಿಯಂಗೆ ಭಾರೀ ಬೇಡಿಕೆ, ಕನ್ನಡಕ್ಕೆ ಶೂನ್ಯ ದಾಖಲಾತಿ!
ಸಾಂದರ್ಭಿಕ ಚಿತ್ರ
  • News18
  • Last Updated: June 6, 2019, 12:00 PM IST
  • Share this:
ಬೆಂಗಳೂರು (ಜೂ.06): ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಅವರ ಕನಸಿನ ಕೂಸಾದ ಇಂಗ್ಲಿಷ್​ ಮಾಧ್ಯಮ ಶಾಲೆ ವಿರೋಧದ ನಡುವೆಯೇ ಪ್ರಸಕ್ತ ವರ್ಷದಿಂದ  ಆರಂಭಗೊಂಡಿದೆ. ಈ ಯೋಜನೆ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ತವರೂರಿನಲ್ಲಿ ಜನರು ಕನ್ನಡ ಕಲಿಕೆಗಿಂತ ಇಂಗ್ಲಿಷ್​ ಕಲಿಕೆಗೆ ಹೆಚ್ಚಿನ ಆಸಕ್ತಿ ತೋರಿದ್ದಾರೆ.

ರಾಜ್ಯದ 1000 ಶಾಲೆಗಳಲ್ಲಿ ಈ ವರ್ಷದಿಂದ ಆಂಗ್ಲಮಾಧ್ಯಮ ಆರಂಭಿಸಿದ್ದು ಜನರಿಂದ ಕೂಡ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇಂಗ್ಲಿಷ್​ ಕಲಿಕೆ ಅವಶ್ಯಕತೆ ಇದ್ದು, ಒಂದು ಮಾಧ್ಯಮವಾಗಿ ಅದನ್ನು ಕಲಿವುದು ತಪ್ಪಿಲ್ಲ ಎಂಬುದು ಕುಮಾರಸ್ವಾಮಿ ವಾದ. ಆದರೆ, ಈ ವಾದವನ್ನು ಸಾಹಿತಿಗಳು, ಕನ್ನಡ ಹೋರಾಟಗಾರರು ಸೇರಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧಿಸಿದ್ದರು. ಅಲ್ಲದೇ ಮಾತೃಭಾಷೆಯ ಕಲಿಕೆ ಅಗತ್ಯ ಒತ್ತಿ ಹೇಳಿದ್ದರು.

ಮೈತ್ರಿ ಸರ್ಕಾರದ ನಾಯಕರ ಭಿನ್ನಾಭಿಪ್ರಾಯದ ನಡುವೆಯೇ ಈ ಯೋಜನೆಗೆ ಚಾಲನೆಯನ್ನು ನೀಡಲಾಗಿದೆ. ಈಗಾಗಲೇ ಒಂದನೇ ತರಗತಿಯಿಂದ ಮಕ್ಕಳು ಆಂಗ್ಲ ಮಾಧ್ಯಮ ಕಲಿಕೆಗೆ ಉತ್ಸಾಹ ಕೂಡ ತೋರಿದ್ದಾರೆ. ಇನ್ನು ಸಿದ್ದರಾಮಯ್ಯ ಅವರ ತವರು  ಸಿದ್ದರಾಮನಹುಂಡಿಯಲ್ಲಿ ಪೋಷಕರು ಆಂಗ್ಲ ಮಾಧ್ಯಮ ಶಾಲೆಗೆ ಹೆಚ್ಚಿನ ಒಲವು ತೋರಿದ್ದಾರೆ.

ಮೈಸೂರಿನಲ್ಲಿ ಒಟ್ಟು 46 ಶಾಲೆಗಳಲ್ಲಿ ಪ್ರಸಕ್ತ ವರ್ಷದಿಂದ ಇಂಗ್ಲಿಷ್​ ಮಾಧ್ಯಮ ಆರಂಭಿಸಲಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮಕ್ಕೆ ದಾಖಲಾಗುತ್ತಿದ್ದಾರೆ. ಅಲ್ಲದೇ, ಜಿಲ್ಲೆಯ 29 ಶಾಲೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ದಾಖಲಾತಿಯೇ ನಡೆದಿಲ್ಲ.

ಇನ್ನು ಸಿದ್ದರಾಮನ ಹುಂಡಿಯಲ್ಲಿನ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮಕ್ಕೆ  ಒಂದನೇ ತರಗತಿಗೆ 30 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಒಟ್ಟಾರೆ 210 ಮಕ್ಕಳು ಇಂಗ್ಲಿಷ್​ ಕಲಿಕೆಗೆ ಆಸಕ್ತಿ ತೋರಿದ್ದಾರೆ. ವಿಪರ್ಯಾಸ ಎಂದರೆ ಈ ವರ್ಷ ಒಂದನೇ ತರಗತಿ ಕನ್ನಡ ಮಾಧ್ಯಮಕ್ಕೆ ಒಬ್ಬ ವಿದ್ಯಾರ್ಥಿ ಕೂಡ ದಾಖಲಾಗಿಲ್ಲ.

ಇದನ್ನು ಓದಿ: ಹಾಸನ ಸರ್ಕಾರಿ ಶಾಲೆಗಳಲ್ಲಿ ಆರಂಭವಾಗಲಿದೆಯೇ ಆಂಗ್ಲ ಭಾಷೆ ಸ್ಮಾರ್ಟ್ ಕ್ಲಾಸ್?; ಸಚಿವ ಹೆಚ್​.ಡಿ. ರೇವಣ್ಣ ಯೋಜನೆ!

ಕನ್ನಡ ಪರ ಹೋರಾಡಿದ್ದ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿಯೇ ಪೋಷಕರು ಕನ್ನಡ ಮಾಧ್ಯಮದ ಬಗ್ಗೆ ನಿರಾಸಕ್ತಿ ತೋರುತ್ತಿದ್ದಾರೆ. ಕನ್ನಡ ಮಾಧ್ಯಮಕ್ಕೆ ಮಕ್ಕಳನ್ನು ದಾಖಲು ಮಾಡಿ ಎಂದು ಮನವಿ ಮಾಡಿದರೂ ಪೋಷಕರ ಆಸಕ್ತಿ ಮಾತ್ರ ಇಂಗ್ಲಿಷ್​ ಮಾಧ್ಯಮದ ಕಡೆ ಇದೆ.(ವರದಿ: ಪುಟ್ಟಪ್ಪ)

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್ಚಾಟ್ ನಲ್ಲೂ ಹಿಂಬಾಲಿಸಿ'

First published: June 6, 2019, 11:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading