ನಟ ದರ್ಶನ್​ರ 'ಯಜಮಾನ' ಚಿತ್ರದ ಮಾದರಿಯಂತಿದೆ ಈ ಸಂಸ್ಥೆ; ತಮ್ಮದೇ ಉತ್ಪನ್ನದ ಬ್ರಾಂಡ್​ ಹುಟ್ಟುಹಾಕಿದ್ದಾರೆ ಈ ರೈತರು

ವಿಶೇಷ ಎಂದರೆ ಈ ಮಿಲ್ ಗಳ ಮಾಲೀಕರು ಒಬ್ಬಿಬ್ಬರು ಅಲ್ಲ.  ಇಲ್ಲಿರುವುದು ಒಟ್ಟು 1100 ಜನರ. ಈ  ಸಾವಿರಾರು  ರೈತರು ಕೂಡ ಇಲ್ಲಿ ಮಾಲೀಕರೇ. 

ರೈತರು ಹುಟ್ಟುಹಾಕಿರುವ ಸಂಸ್ಥೆ

ರೈತರು ಹುಟ್ಟುಹಾಕಿರುವ ಸಂಸ್ಥೆ

  • Share this:
ರಾಯಚೂರು (ಜ. 22): ನಟ ದರ್ಶನ್​ ಅಭಿನಯದ ಯಜಮಾನ ಚಿತ್ರದಲ್ಲಿ ರೈತರೇ ತಮ್ಮ ಬೆಳೆಗಳಿಗೆ ಬ್ರಾಂಡ್​ ಸೃಷ್ಟಿಸಿ ಮಾಲೀಕರಾಗುವ ಸಂದೇಶವನ್ನು ಕಾಣುತ್ತೇವೆ. ಅದೇ ರೀತಿಯಲ್ಲಿ ಜಿಲ್ಲೆಯ ಸಿಂಧನೂರಿನ ರೈತರು ತಮ್ಮದೇ ಬ್ರಾಂಡ್​ ನಿರ್ಮಿಸಿ ಮಾರುಕಟ್ಟೆ  ಸೃಷ್ಟಿಸಿ ಮಾದರಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಸಿಂಧನೂರಿನಲ್ಲಿ ಸ್ವಾಸ್ಥ್ಯ ರೈತರ ಉತ್ಪಾದಕ ಕಂಪನಿ  ರೈತರಿಂದ ರೈತರಿಗಾಗಿಯೇ ಆರಂಭವಾಗಿವ ಕಂಪನಿಯಾಗಿದೆ.ರೈತರು ಬೆಳೆದ ಬೆಳೆಗೆ ತಮ್ಮದೆ ಬ್ರಾಂಡ್ ಮಾಡಿ ಮಾರಾಟ ಮಾಡುತ್ತಿದ್ದಾರೆ.  ರೈತರಲ್ಲಿ ಸಾವಯವ ಕಲ್ಪನೆ, ರೈತರಿಗೆ ಲಾಭವಾಗುವಂತಹ ಮಾರುಕಟ್ಟೆಗಾಗಿ ರೈತರಿಂದ ಈ  ಕಂಪನಿ ಆರಂಭಿಸಲಾಗಿದೆ. ಈ ಕಂಪನಿಯಲ್ಲಿ 1,100 ರೈತರು ಮಾಲೀಕರು. ಅಲ್ಪ ಬಂಡವಾಳದಿಂದ ಆರಂಭವಾದ ಕಂಪನಿ ಈಗ ಲಕ್ಷಾಂತರ ರೂಪಾಯಿ ವ್ಯವಹಾರ ಮಾಡುತ್ತಿದೆ. ಯಂತ್ರಗಳ ಮುಖಾಂತರ ಗಾಣವನ್ನು ತಿರುಗಿಸಿ ಅಡುಗೆ ಎಣ್ಣೆ, ಆರೋಗ್ಯಕ್ಕೆ ಉತ್ತಮವಾದ ಔಷಧಿ ಗುಣಹೊಂದಿರುವ ತೈಲ ಗಳನ್ನು ಇಲ್ಲಿ ತಯಾರಿಸಲಾಗುತ್ತದೆ.  ವಿಶೇಷ ಎಂದರೆ ಈ ಮಿಲ್ ಗಳ ಮಾಲೀಕರು ಒಬ್ಬಿಬ್ಬರು ಅಲ್ಲ.  ಇಲ್ಲಿರುವುದು ಒಟ್ಟು 1100 ಜನರ. ಈ  ಸಾವಿರಾರು  ರೈತರು ಕೂಡ ಇಲ್ಲಿ ಮಾಲೀಕರೇ. 

ರೈತರೇ ಒಗ್ಗೂಡಿ ಕಂಪನಿ ಆರಂಭಿಸುವಂತೆ ಸಲಹೆ ನೀಡಿದ ನಬಾರ್ಡ್​ ಮಾರ್ಗಸೂಚಿಯಂತೆ ಈ ಕಂಪನಿಯನ್ನು ಹುಟ್ಟು ಹಾಕಲಾಗಿದೆ. 2019ರಲ್ಲಿ 10 ಜನ ರೈತರು ಕೂಡಿ ಆರಂಭಿಸಲು ಚಿಂತನೆ ನಡೆಸಲಾಯಿತು. ಬಳಿಕ  ಪ್ರತಿಯೊಬ್ಬರು ಸಾವಿರ ರೂಪಾಯಿಯನ್ನು ಸದಸ್ಯತ್ವಕ್ಕಾಗಿ ಬಂಡವಾಳ ಹಾಕಿದ್ದಾರೆ.  ಪ್ರತಿ ಸದಸ್ಯರು ನೂರು ನೂರು ಜನರಂತೆ ಒಟ್ಟು 1000 ಜನರನ್ನು ಕಂಪನಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಆರಂಭದಲ್ಲಿ ರೈತರು ಬೆಳೆದ ಎಣ್ಣೆ ಕಾಳು, ಮನೆಯಲ್ಲಿ ಬಳಕೆ ಮಾಡುವ ಕೊಬ್ಬರಿ, ಕುಸಬಿ, ಶೇಂಗಾ ಕಾಳುಗಳನ್ನು ಎಣ್ಣೆಯನ್ನ ತಯಾರಿಸುತ್ತಿದ್ದರು, ಸಣ್ಣ ಮಿಲ್ ಆಗಿ ಆರಂಭವಾದ ಕಂಪನಿಯು ಈಗ ಸಿಂಧನೂರು ತಾಲೂಕಿನಲ್ಲಿ ಮೂರು ಕಡೆ ಮಿಲ್ ಗಳನ್ನು ಆರಂಭಿಸಿದೆ. ಇಲ್ಲಿ ತಯಾರಾಗುವ ಅಡುಗೆ ಎಣ್ಣೆ ಉತ್ತಮ ಗುಣಮಟ್ಟ ಹಾಗೂ ಸಾವಯವ ರೀತಿಯಲ್ಲಿ ತಯಾರಾಗುವುದರಿಂದ  ರಾಜ್ಯದ ವಿವಿಧಡೆಯಿಂದ ಜನರು ಇಲ್ಲಿಗೆ ಬಂದು ಎಣ್ಣೆಯನ್ನು ಖರೀದಿಸುತ್ತಿದ್ದಾರೆ.  ಈಗ ಆನ್ ಲೈನ್​ ಮುಖಾಂತರ ಆರ್ಡರ್ ಮಾಡಿದರೆ ಅವರಿಗೆ ನೇರವಾಗಿ ಎಣ್ಣೆಯನ್ನು ರೈತರ ಕಂಪನಿಯ ಹೆಸರಿನ ಬ್ರಾಂಡಿನಲ್ಲಿ ಕಳುಹಿಸಲಾಗುವುದು. ಒಟ್ಟು 15 ಲಕ್ಷ ರೂಪಾಯಿ ವಹಿವಾಟನ್ನು ಈ ಸಂಸ್ಥೆ ನಡೆಸಯತ್ತಿದೆ. ಜನರಿಂದ ತಮ್ಮ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ಇದೆ ಎನ್ನುತ್ತಾರೆ, ಕಂಪನಿಯ ನಿರ್ದೇಶಕರ ಮಲ್ಲಿಕಾರ್ಜುನ ವಲ್ಕಂದಿನ್ನಿ.

ಇದನ್ನು ಓದಿ: ಬಾಗಲಕೋಟೆ ಜಿಪಂ ಸಭಾಂಗಣ ಉದ್ಘಾಟನೆ ವೇಳೆ ಡಿಸಿಎಂ ಗೋವಿಂದ ಕಾರಜೋಳ ವಿರುದ್ಧ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಗರಂ

ಈ ಕಂಪನಿಯಿಂದ 18 ಗಿರ್ ತಳಿಯ ಆಕಳುಗಳನ್ನು ಸಾಕಿದ್ದು ಆಕಳು ಹಾಲು, ಮೂತ್ರ, ಗಂಜಲದಿಂದ ಗೋ ಆಧಾರಿತ ಉತ್ಪನ್ನವನ್ನು ತಯಾರಿಸುತ್ತಿದ್ದಾರೆ.  ಮುಖ್ಯವಾಗಿ ಗೋ ಆರ್ಕಾ, ವಿಭೂತಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಅವುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇನ್ನೂ ಕಂಪನಿಯಿಂದ ರೈತರಿಂದ ಬೇರೆ ಬೇರೆ ಉದ್ಯಮಿಗಳಿಗೆ, ಕಂಪನಿಗಳಿಗೆ ಭತ್ತ. ಶೇಂಗಾ ಸೇರಿದಂತೆ ಬೆಳೆದ ಬೆಳೆಯನ್ನು ಸ್ವಾಸ್ಥ್ಯ ಕಂಪನಿಯಿಂದಲೇ ಮಾರಾಟ ಮಾಡಿ ರೈತರಿಗೆ ಲಾಭ ಮಾಡಿಕೊಡಲಾಗುತ್ತಿದೆ.

ಇನ್ನೂ ಇಲ್ಲಿ ಅಡುಗೆ ಎಣ್ಣೆ ತಯಾರಿಸಲು ರೈತರಿಂದ ಕಚ್ಚಾ ವಸ್ತುಗಳ ಖರೀದಿ ಒಂದು ಕಡೆಯಾದರೆ ಕಂಪನಿಯ ರೈತರು ನೇರವಾಗಿ ಬಂದು ತಮ್ಮ ಮಿಲ್ ಗಳನ್ನು ತಾವು ಬೆಳೆದ ಎಣ್ಣೆ ಕಾಳುಗಳಿಂದ ಎಣ್ಣೆಯನ್ನು ಹಾಕಿಸಿಕೊಂಡು ಹೋಗಬಹುದಾಗಿದೆ. ಇಲ್ಲಿ ಒಂದು ಕೆಜಿ ಅಡುಗೆ ಎಣ್ಣೆಯನ್ನು ತಯಾರಿಸಿ ಕೊಟ್ಟರೆ 5 ರೂಪಾಯಿ ದರ ನಿಗದಿ ಮಾಡಲಾಗುತ್ತಿದೆ. ಇದು ರೈತರು ತುಂಬಾ ಅನುಕೂಲವಾಗಿದೆ. ನಬಾರ್ಡಿನಿಂದ ಈಗ ಈ ಕಂಪನಿಗೆ ಒಬ್ಬ ಸಿಇಒ ನೇಮಿಸಿದ್ದು ಅವರ ವೇತನವನ್ನು ಅವರೇ ಭರಿಸುತ್ತಿದ್ದಾರೆ.  ನಬಾರ್ಡ ಈ ಕಂಪನಿಗೆ 15 ಲಕ್ಷ ಸಹಾಯ ಧನ ನೀಡಲಿದೆ. ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ, ರೈತರಿಂದ ಕೃಷಿ ಆಧಾರ ಕೈಗಾರಿಕೆ ಆರಂಭಿಸುವ ಈ ರೈತರ ಕಂಪನಿ ಇತರ ರೈತರಿಗೆ ಮಾದರಿಯಾಗಿದೆ.
Published by:Seema R
First published: