ಹಾವೇರಿ: ನಟ ಪುನೀತ್ ರಾಜ್ಕುಮಾರ್ (Puneeth Rajkumar) ರೀತಿಯಲ್ಲೇ ಸಮಾಜ ಸೇವೆ (Social Causes) ಮಾಡುತ್ತಿದ್ದ, ಸಿಂದಗಿ ಸಿಪಿಐ (Sindagi CPI) ರವಿ ಉಕ್ಕುಂದ ಭೀಕರ ರಸ್ತೆ ಅಪಘಾತದಲ್ಲಿ (Road accident) ನಿಧನರಾಗಿದ್ದಾರೆ. ಕಳೆದ ಡಿಸೆಂಬರ್ 7ರಂದು ಜೇವರ್ಗಿ (Jevargi) ತಾಲೂಕಿನ ಸೊನ್ನ ಬಳಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಸಿಪಿಐ ರವಿ ಮತ್ತು ಪತ್ನಿ ಮಧು ಇಬ್ಬರು ಸಾವನ್ನಪ್ಪಿದ್ದರು. ಇಬ್ಬರು ಮುದ್ದಾದ ಮಕ್ಕಳನ್ನು ಬಿಟ್ಟು ದಂಪತಿ ಅಗಲಿದ್ದರು. ರವಿ ಅವರ ಹುಟ್ಟೂರು ಅರಳಿಕಟ್ಟಿಯಲ್ಲಿ ದಂಪತಿಯ ಅಂತ್ಯಕ್ರಿಯೆ ನಡೆದಿದ್ದು, ಈ ವೇಳೆ ನೆರೆದಿದ್ದ ಸ್ಥಳೀಯರು ಕಂಬನಿ ಮಿಡಿದಿದ್ದಾರೆ. ಪತಿ-ಪತ್ನಿ ಸಾವನ್ನಪ್ಪಿದರೂ, ಅವರು ಮಾಡಿರುವ ಸಮಾಜಸೇವೆ ಮೂಲಕ ನಮ್ಮೊಂದಿಗಿರುತ್ತಾರೆ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಸರ್ಕಾರಿ ಶಾಲೆ ನಿರ್ಮಾಣಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯದ ಜಮೀನು ದಾನ
ಸಿಪಿಐ ರವಿ ಕುಟುಂಬಸ್ಥರು ಸಮಾಜಕ್ಕೆ ಮಾದರಿಯಾಗಿ ಬದುಕುತ್ತಿದ್ದಾರೆ. ಮಕ್ಕಳಿಗಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಭೂಮಿ ದಾನ ಮಾಡಿದ್ದ ರವಿ, ಶಿಕ್ಷಣ ದಾತ ಎಂದೇ ಖ್ಯಾತಿ ಪಡೆದಿದ್ದರು. ತಾನು ಹುಟ್ಟು ಬೆಳೆದಿದ್ದ ಊರಿಗೆ ಎಲ್ಲಾ ಸೌಲಭ್ಯಗಳು ಸಿಗಬೇಕು, ನನ್ನೂರು ಅಭಿವೃದ್ಧಿಯಾಗಿ, ಇಡೀ ರಾಜ್ಯಕ್ಕೆ ಮಾದರಿಯಾಗಬೇಕು ಎಂದು ಕನಸು ಕಂಡಿದ್ದ ರವಿ ಅವರು, ಹಿರೆಕೇರೂರು ತಾಲೂಕಿನ ಅರಳೀಕಟ್ಟಿ ಗ್ರಾಮದಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಇದನ್ನೂ ಓದಿ: Udupi: 'ಕುರುಪ್' ಸಿನಿಮಾ ಸ್ಟೈಲ್ನಲ್ಲಿ ಕೊಲೆಗೈದಿದ್ದ ಆರೋಪಿ ಜೈಲಿನಲ್ಲೇ ನೇಣಿಗೆ ಶರಣು
ಸಮಾಜಕ್ಕೆ ಮಾದರಿಯಾಗಿ ಬದುಕುತ್ತಿದೆ ಸಿಪಿಐ ರವಿ ಉಕ್ಕುಂದ ಕುಟುಂಬ
ಆಧುನಿಕ ಜಗತ್ತಿನಲ್ಲಿ ಒಟ್ಟಾಗಿ ಬಾಳುವುದು ಕಷ್ಟ ಎಂದು ಹಲವರು ಹೇಳುತ್ತಿರೋದನ್ನು ನಾವು ಕೇಳಿರುತ್ತೇವೆ. ಆದರೆ ಇಂದಿಗೂ ರವಿ ಅವರ ಕುಟುಂಬಸ್ಥರು ಸಮಾಜಕ್ಕೆ ಮಾದರಿಯಾಗಿ ಬದುಕುತ್ತಿದ್ದಾರೆ. ಬರೋಬ್ಬರಿ 55 ರಿಂದ 60 ಜನ ಒಂದೇ ಮನೆಯಲ್ಲಿ, ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದಾರೆ.
ಖಾಕಿಯೊಳಗಿತ್ತು ಮಗುವಿನಂತ ಮನಸ್ಸು!
ನೋಡಲು ಖಡಕ್ ಪೊಲೀಸ್ ಆಫೀಸರ್ ಆಗಿದ್ದ ರವಿ ಅವರು ಕಷ್ಟಗಳಿಗೆ ಮಿಡಿಯುವ ಹೃದಯವನ್ನು ಹೊಂದಿದ್ದರು. ನಮ್ಮೂರಿಗೆ ಸರ್ಕಾರಿ ಶಾಲೆ ಬೇಕು ಅಂತ 30 ಲಕ್ಷ ರೂಪಾಯಿ ಬೆಲೆಬಾಳುವ 1 ಎಕರೆ ಜಮೀನನ್ನು ದಾನವಾಗಿ ನೀಡಿದ್ದರು.
ಇದನ್ನೂ ಓದಿ: Lions In Gadag: ಗದಗದಲ್ಲಿ ಸಿಂಹ ಘರ್ಜನೆ! 1,070 ಕಿ ಮೀ ದೂರದಿಂದ ಶಿವ-ಗಂಗಾ ಆಗಮನ!
ರಾಜ್ಯಪಾಲರ ಹೆಸರಿಗೆ ಉಚಿತವಾಗಿ ಜಮೀನು ವರ್ಗಾವಣೆ
ರವಿ ಅವರಿನಲ್ಲಿದ್ದ ಜಮೀನನ್ನು ರಾಜ್ಯಪಾಲರ ಹೆಸರಿಗೆ ವರ್ಗಾವಣೆ ಮಾಡಿದ್ದರು. ತಮ್ಮ ಗ್ರಾಮದಲ್ಲಿ ಅಂಗನವಾಡಿ ನಿರ್ಮಾಣಕ್ಕೆ 4 ಗುಂಟೆ, ಪಶು ಆಸ್ಪತ್ರೆಗೆ 2 ಗುಂಟೆ ಸೇರಿದಂತೆ ಶಾಲೆ ನಿರ್ಮಾಣಕ್ಕೆ ಉಚಿತವಾಗಿ ಜಮೀನು ದಾನ ಮಾಡಿದ್ದರು.
ಇಷ್ಟೇ ಅಲ್ಲದೇ ದುರ್ಗಾದೇವಿ ದೇವಸ್ಥಾನಕ್ಕೂ ಗೋಪುರ ನಿರ್ಮಾಣ ಮಾಡಿದ್ದರು. ಆ ಮೂಲಕ ಪೊಲೀಸ್ ಆಫೀಸ್ಗೂ ಹೃದಯವೈಶಾಲ್ಯತೆ ಇದೆ ಎಂದು ತೋರಿಸಿಕೊಟ್ಟಿದ್ದರು. ರವಿ ಅವರ ಸೇವೆಯನ್ನು ಕಂಡ ಹಿರೆಕೇರೂರು ತಾಲೂಕಿನ ಜನರು ಅವರನ್ನು ಮಾದರಿಯನ್ನಾಗಿ ಕಾಣುತ್ತಿದ್ದರು.
ಸಿಪಿಐ ರವಿ ಮಾನವೀಯ ಕಾರ್ಯಗಳ ಬಗ್ಗೆ ನ್ಯೂಸ್ 18 ಕನ್ನಡದೊಂದಿಗೆ ಮಾತನಾಡಿರೋ ರವಿ ಕುಟುಂಸ್ಥರು, ನಮ್ಮ ಊರಿನ ಮಕ್ಕಳು ಓದುವುದಕ್ಕೆ ಕಷ್ಟ ಪಡುತ್ತಿದ್ದನ್ನು ರವಿ ನೋಡಿದ್ದರು. ಹೀಗಾಗಿ ಜಾಗವಿಲ್ಲದ ಕಾರಣ ಶಾಲೆಯೇ ಇರಲಿಲ್ಲಾ, ಸಹಾಯ ಮಾಡುವ ಮನಸ್ಸು ಇತ್ತು. ನಾನೇ ನನ್ನ ಹೆಸರಿನ ಜಾಗ ಕೊಡುತ್ತೇನೆಂದು, ಲಕ್ಷಾಂತರ ರೂಪಾಯಿ ಬೆಲೆಬಾಳುವಂತದ್ದು ಎಂದು ನೋಡದೆ ಮಕ್ಕಳಿಗಾಗಿ ಜಮೀನು ಕೊಟ್ಟಿದ್ದಾರೆ ಅಂತ ಶ್ಲಾಘಿಸಿದ್ದಾರೆ.
ಎಲ್ಲಾ ಕಡೆ ಸಹಾಯ ಅವರು ತಮ್ಮ ಸಮಾಜಸೇವಾ ಕಾರ್ಯಗಳನ್ನು ಮಾಡಿದ್ದಾರೆ. ಹುಟ್ಟೂರಿನಲ್ಲಿ ಮಾತ್ರವಲ್ಲದೇ ಕೊಪ್ಪಳ, ಸಿಂಧಗಿ, ಬಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲೂ ರವಿ ಸಹಾಯ ಮಾಡಿದ್ದಾರೆ. ಇರುವವರೆಗೂ ಅವರು ಮಾಡಿದ್ದ ಹಲವು ಕಾರ್ಯಗಳು ನಮಗೆ ಗೊತ್ತಿರಲಿಲ್ಲ, ಜನಗಳು ಹೇಳಿದ ಮೇಲೆಯೇ ಗೊತ್ತಾಗಿದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ