ಕೆಎಸ್​ಆರ್​ಟಿಸಿ ಬಸ್​ನಲ್ಲಿ 15 ಲಕ್ಷ ರೂ. ಮೌಲ್ಯದ ಬೆಳ್ಳಿ ದೀಪಗಳು ಪತ್ತೆ; ಚಾಲಕ ಮತ್ತು ಕಂಡಕ್ಟರ್​ ಅಮಾನತು

ತಮಗೆ ಬಂದ ಮಾಹಿತಿಯನ್ನು ಆಧರಿಸಿ ಬೆಂಗಳೂರು ಕೇಂದ್ರ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಭಾಕರ್ ರೆಡ್ಡಿ ನೇತೃತ್ವದಲ್ಲಿಹೊಸಕೋಟೆ ಟೋಲ್ ಬಳಿ ಬಸ್​ಗೆ ತಡೆಯೊಡ್ಡಿ ಪರಿಶೀಲನೆ ನಡೆಸಲಾಗಿದೆ. ಆಗ ಬೆಳ್ಳಿ ಸಾಮಗ್ರಿಗಳನ್ನು ಸಾಗಿಸುತ್ತಿದ್ದುದು ದೃಢಪಟ್ಟಿದೆ.

sushma chakre | news18
Updated:January 12, 2019, 1:22 PM IST
ಕೆಎಸ್​ಆರ್​ಟಿಸಿ ಬಸ್​ನಲ್ಲಿ 15 ಲಕ್ಷ ರೂ. ಮೌಲ್ಯದ ಬೆಳ್ಳಿ ದೀಪಗಳು ಪತ್ತೆ; ಚಾಲಕ ಮತ್ತು ಕಂಡಕ್ಟರ್​ ಅಮಾನತು
ವಶಪಡಿಸಿಕೊಳ್ಳಲಾದ ಬೆಳ್ಳಿ ದೀಪಗಳು
sushma chakre | news18
Updated: January 12, 2019, 1:22 PM IST
ಬೆಂಗಳೂರು (ಜ. 12): ಕೆಎಸ್​ಆರ್​ಟಿಸಿ ಐರಾವತ ಕ್ಲಬ್ ​ಕ್ಲಾಸ್​ ಬಸ್​ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ರೂ. 15 ಲಕ್ಷ ಮೌಲ್ಯದ ಬೆಳ್ಳಿ ದೀಪಗಳನ್ನು ಹೊಸಕೋಟೆ ಟೋಲ್ ಬಳಿ ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು- ವಿಜಯವಾಡ ಮಾರ್ಗದಲ್ಲಿ ಸಾಗುತ್ತಿದ್ದ ಕೆಎ 57 ಎಫ್​ 2844 ಬಸ್​ನಲ್ಲಿ ಬೆಳ್ಳಿ ವಸ್ತುಗಳನ್ನು ಸಾಗಿಸಲಾಗುತ್ತಿತ್ತು. ತಮಗೆ ಬಂದ ಮಾಹಿತಿಯನ್ನು ಆಧರಿಸಿ ಬೆಂಗಳೂರು ಕೇಂದ್ರ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಭಾಕರ್ ರೆಡ್ಡಿ ನೇತೃತ್ವದಲ್ಲಿ ಬಸ್​ಗೆ ತಡೆಯೊಡ್ಡಿ ಪರಿಶೀಲನೆ ನಡೆಸಿದಾಗ ಬೆಳ್ಳಿ ಸಾಮಗ್ರಿಗಳನ್ನು ಸಾಗಿಸುತ್ತಿದ್ದುದು ದೃಢಪಟ್ಟಿದೆ. ಬಸ್​ನ ಲಗೇಜ್​ ಬಾಕ್ಸ್​ನಲ್ಲಿಟ್ಟುಕೊಂಡು ಸಾಗಾಟ ಮಾಡುತ್ತಿದ್ದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಅಕ್ರಮದಲ್ಲಿ ಶಾಮೀಲಾಗಿದ್ದ ಬಸ್ ಚಾಲಕ, ನಿರ್ವಾಹಕನನ್ನು ಅಮಾನತುಗೊಳಿಸಲಾಗಿದೆ.

ಇದನ್ನೂ ಓದಿ: ಇನ್ನೂ ಪತ್ತೆಯಾಗದ ಕರಾವಳಿ ಮೀನುಗಾರರು; ಇಸ್ರೋ ನೆರವು ಪಡೆಯಲು ರಾಜ್ಯ ಗೃಹ ಸಚಿವರ ನಿರ್ಧಾರ

ಯಾವುದೇ ದಾಖಲೆಗಳಿಲ್ಲದೆ ಐರಾವತ ಕ್ಲಬ್​ ಕ್ಲಾಸ್​ ಬಸ್​ನಲ್ಲಿ 4 ಬ್ಯಾಗ್​ಗಳಲ್ಲಿ ಸಾಗಾಟ ಮಾಡುತ್ತಿದ್ದ ಬೆಳ್ಳಿ ದೀಪ ಇನ್ನಿತರೆ ಬೆಳ್ಳಿ ವಸ್ತುಗಳ ಮೌಲ್ಯ 15 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ. ಜಪ್ತಿಯಾಗಿರುವ ಬೆಳ್ಳಿ ಸಾಮಗ್ರಿಗಳನ್ನು ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ. ಈ ಬೆಳ್ಳಿ ವಸ್ತುಗಳನ್ನು ಆಂಧ್ರಪ್ರದೇಶಕ್ಕೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.


First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...