ಬೆಂಗಳೂರು: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಬೆಳ್ಳಿ (Silver) ಆಭರಣಗಳನ್ನು (Jewelry) ಜಪ್ತಿ ಮಾಡಲಾಗಿದೆ. ಮಹಾರಾಷ್ಟ್ರ (Maharashtra) ಹಾಗೂ ಬೀದರ್ (Bidar) ಗಡಿ ಚೆಕ್ ಪೊಸ್ಟ್ನಲ್ಲಿ ತಪಾಸಣೆ ವೇಳೆ 142 ಕೆಜಿ ಬೆಳ್ಳಿಯ ಕಾಲು ಚೈನುಗಳು ಸೇರಿ 1 ಕೋಟಿ 5 ಲಕ್ಷ ಬೆಲೆ ಬಾಳುವ ಬೆಳ್ಳಿಯ ಆಭರಣಗಳ ಜೊತೆಗೆ ಕಾರು (Car) ಕೂಡ ಜಪ್ತಿ ಮಾಡಲಾಗಿದೆ. 8 ಬ್ಯಾಗ್ಗಳಲ್ಲಿ 142 ಕೆಜಿ ಬೆಳ್ಳಿಯ ಆಭರಣಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಗಜಾನನ ಎಂಬವರಿಗೆ ಸೇರಿದ ಕಾರಿನಲ್ಲಿ ಅಪಾರ ಪ್ರಮಾಣದ ಬೆಳ್ಳಿಯ ಕಾಲು ಚೈನುಗಳು ಪತ್ತೆಯಾಗಿವೆ.
ಒಂದು ಲೋಡ್ ಬಿಯರ್ ವಶಕ್ಕೆ
ಕಳೆದ ರಾತ್ರಿ ಕಾಫಿನಾಡ ಪೊಲೀಸರ ಭರ್ಜರಿ ಭೇಟೆಯಾಡಿದ್ದಾರೆ. ಚಿಕ್ಕಮಗಳೂರು ತಾಲೂಕಿನ ದೇವರಹಳ್ಳಿ ಬಳಿ ಒಂದು ಲೋಡ್ ಬಿಯರ್ ವಶಕ್ಕೆ ಪಡೆದಿದ್ದಾರೆ. ಹೌದು 9 ಲಕ್ಷ 10 ಸಾವಿರ ಮೌಲ್ಯದ 6 ಸಾವಿರದ 250 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ದಾಖಲೆ ಇಲ್ಲದ 2 ಲಕ್ಷ 50 ಸಾವಿರ ಮೌಲ್ಯದ ಜೀನ್ಸ್ ಪ್ಯಾಂಟ್ಸ್ಗಳನ್ನ ವಶಕ್ಕೆ ಪಡೆಯಲಾಗಿದೆ.
ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸೊನ್ನ ಚೆಕ್ಪೋಸ್ಟ್ನಲ್ಲಿ ದಾಖಲೆಯಿಲ್ಲದ 3 ಲಕ್ಷ 2 ಸಾವಿರ ರೂ ನಗದು ಹಣ ವಶ ಪಡಿಸಿಕೊಳ್ಳಲಾಗಿದೆ. ಬೈಕ್ ಮೇಲೆ 3 ಲಕ್ಷದ 2 ಸಾವಿರ ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ಸಂಬಂಧ ಅಫಜಲಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಎಟಿಎಂಗೆ ಹಣ ತುಂಬುವ 3 ವಾಹನಗಳನ್ನ ಹೆಬ್ಬಗೋಡಿ ಪೊಲೀಸರು ಸೀಜ್ ಮಾಡಲಾಗಿದೆ. ತಪಾಸಣೆ ವೇಳೆ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಮೂರು ವಾಹನದ ಪೈಕಿ ಒಂದು ವಾಹನದಲ್ಲಿ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಸಿಬ್ಬಂದಿ ಹೇಳಿದ ಲೆಕ್ಕಕ್ಕೂ ಹಣಕ್ಕೂ ವ್ಯತ್ಯಾಸವಿತ್ತು. ದಾಖಲೆ ಇಲ್ಲದೆ 10 ಲಕ್ಷ ಹಣ ಸಾಗಿಸಲಾಗ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ