HOME » NEWS » State » SILT PROBLEM TO FIHSERMEN IN HONNAVARA FOR FISHING LG

ಹೊನ್ನಾವರ ಮೀನುಗಾರರಿಗೆ ಹೂಳಿನ ಸಮಸ್ಯೆ; ಮನವಿ ಮಾಡಿದರೂ ಕ್ಯಾರೆ ಎನ್ನದ ಅಧಿಕಾರಿಗಳು

ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿರುವುದರಿಂದ ಸಮುದ್ರಕ್ಕೆ ತೆರಳುವ ಯಾಂತ್ರಿಕ ಬೋಟುಗಳು ಸಮುದ್ರದ ಏರಿಳಿತಗಳನ್ನು ಅನುಸರಿಸಿ ಸಾಹಸ ಮಾಡಿ ಬೋಟುಗಳನ್ನ ಕೊಂಡೊಯ್ಯಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಮೀನುಗಾರರ ಅಳಲಾಗಿದೆ. 

news18-kannada
Updated:September 12, 2020, 12:53 PM IST
ಹೊನ್ನಾವರ ಮೀನುಗಾರರಿಗೆ ಹೂಳಿನ ಸಮಸ್ಯೆ; ಮನವಿ ಮಾಡಿದರೂ ಕ್ಯಾರೆ ಎನ್ನದ ಅಧಿಕಾರಿಗಳು
ಸಮುದ್ರದಲ್ಲಿ ನಿಂತಿರುವ ಮೀನುಗಾರಿಕಾ ಬೋಟ್​​ಗಳು
  • Share this:
ಕಾರವಾರ (ಸೆ.12): ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮೀನುಗಾರರ ಸಮಸ್ಯೆಗಳಿಗೆ ಮುಕ್ತಿ ಮರೀಚಿಕೆ ಆಗಿದೆ. ಕಳೆದ ಮೂರು ವರ್ಷದಿಂದ ಇಲ್ಲಿನ ಅಳಿವೆಯಲ್ಲಿ ತುಂಬಿಕೊಂಡು ಹೂಳು ತೆಗೆಯಲು ಹತ್ತಾರು ಇಲಾಖೆ ಸುತ್ತಿ ಸಂಬಂಧಿಸಿದ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದರೂ ಈವರೆಗೆ ಸಮಸ್ಯೆ ಬಗೆಹರಿದಿಲ್ಲ, ಈ ಹಿನ್ನಲೆಯಲ್ಲಿ ಕಳೆದ ಮೂರು ವರ್ಷದಲ್ಲಿ ಹೂಳಿಗೆ ಸಿಲುಕಿ ಐದಾರು ಬೋಟ್ ಮುಳುಗಡೆ ದುರಂತಗಳು ಸಂಭವಿಸಿವೆ. ರಾಜ್ಯದ ಕರಾವಳಿ ಬಂದರುಗಳ ಅವ್ಯವಸ್ಥೆಯಿಂದಾಗಿ ಮೀನುಗಾರರ ಸಮಸ್ಯೆ ಮುಂದುವರೆದಿದೆ. ಬಂದರು ಪ್ರವೇಶಿಸುವ ಸಮುದ್ರದ ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿರುವುದು ಮೀನುಗಾರರ ಬದುಕಿಗೆ ಕಂಟಕವಾಗಿ ಪರಿಣಮಿಸಿದೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಬಂದರಿನಲ್ಲಿ ವ್ಯಾಪಕವಾಗಿ ಹೂಳು ತುಂಬಿಕೊಂಡಿದ್ದು, ಮೀನುಗಾರರು ಜೀವ ಕಳೆದುಕೊಳ್ಳುತ್ತಿದ್ದಾರಲ್ಲದೇ, ಜೀವನಕ್ಕಾಗಿ ಮಾಡಿಕೊಂಡ ಯಾಂತ್ರಿಕ ದೋಣಿಗಳು ಹಾನಿಗೊಳಗಾಗುತ್ತಿವೆ. 

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕಾ ಬಂದರು ಪ್ರದೇಶಗಳು ಮೀನುಗಾರರಿಗೆ ಸುರಕ್ಷಿತವಾಗಿಲ್ಲ. ಬಂದರಿನ ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿಕೊಂಡಿರುವುದು ಮೀನುಗಾರರ ಬದುಕಿಗೆ ಮಾರಕವಾಗಿದೆ. ಹೊನ್ನಾವರ ಬಂದರಿನ ಅಳಿವೆ ತೀರದಲ್ಲಿ ವ್ಯಾಪಕ ಪ್ರಮಾಣದ ಹೂಳು ತುಂಬಿಕೊಂಡಿರುವುದರಿಂದ ಯಾಂತ್ರಿಕ ಬೋಟುಗಳಿಗೆ ಸಂಚರಿಸಲು ತೊಂದರೆಯಾಗಿದೆ. ಶರಾವತಿ ನದಿ ಹಾಗೂ ಅರಬ್ಬೀ ಸಮುದ್ರ ಸೇರುವ ಅಳಿವೆ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಕಡಲ ಅಬ್ಬರ ಹೆಚ್ಚಾಗುತ್ತದೆ. ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿರುವುದರಿಂದ ಸಮುದ್ರಕ್ಕೆ ತೆರಳುವ ಯಾಂತ್ರಿಕ ಬೋಟುಗಳು ಸಮುದ್ರದ ಏರಿಳಿತಗಳನ್ನು ಅನುಸರಿಸಿ ಸಾಹಸ ಮಾಡಿ ಬೋಟುಗಳನ್ನ ಕೊಂಡೊಯ್ಯಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಮೀನುಗಾರರ ಅಳಲಾಗಿದೆ.  ಪ್ರತಿ ವರ್ಷ ಇಲ್ಲಿ ಯಾಂತ್ರಿಕ ಬೋಟುಗಳು ಅಪಾಯಕ್ಕೆ ಸಿಲುಕುತ್ತವೆ. ವರ್ಷಕ್ಕೆ ನಾಲ್ಕರಿಂದ ಐದು ಬೋಟುಗಳು ಹೂಳಿಗೆ ಸಿಲುಕುವುದರಿಂದ ಬೋಟುಗಳ ಮಾಲೀಕರು ಮತ್ತು ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ. ಇಲ್ಲಿನ ಸಮಸ್ಯೆ ಬಗ್ಗೆ ಮೀನುಗಾರರು ಹಲವು ಬಾರೀ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಕೂಡ ಯಾರೂ ಗಮನಹರಿಸಿಲ್ಲ.

Rafale Jets: ಮುಂದಿನ ತಿಂಗಳು 2ನೇ ಹಂತದಲ್ಲಿ ರಫೇಲ್ ಯುದ್ದ ವಿಮಾನಗಳ ಆಗಮನ

ಹೊನ್ನಾವರ ಬಂದರಿನಲ್ಲಿ ನೂರಕ್ಕೂ ಹೆಚ್ಚು ಪರ್ಶಿಯನ್ ಬೋಟುಗಳು ಮತ್ತು 200 ರಷ್ಟು ಫಿಶಿಂಗ್ ಬೋಟುಗಳಿವೆ. ಆದರೆ ನೀರಿನ ಹರಿವನ್ನು ನೋಡಿಕೊಂಡೆ ಸಮುದ್ರಕ್ಕೆ ಹೋಗಿ ಬರಬೇಕು. ಎಚ್ಚರ ತಪ್ಪಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಮೀನುಗಾರಿಕೆ ನಡೆಸುವ ಬೋಟುಗಳು ಹೂಳಿಗೆ ಸಿಕ್ಕಿ ಪಲ್ಟಿ ಹೊಡೆಯುತ್ತವೆ. ಪಲ್ಟಿ ಹೊಡೆದ ಸಂದರ್ಭದಲ್ಲಿ ಮೀನುಗಾರರನ್ನ ಬದುಕಿಸಲು ಹರಸಾಹಸ ಪಡಬೇಕು. ಅದೃಷ್ಟ ಚೆನ್ನಾಗಿದ್ದರೆ ಮಾತ್ರ ಜೀವ ಉಳಿಯುತ್ತದೆ. ಹೂಳಿಗೆ ಸಿಕ್ಕ ಬೋಟುಗಳ ಮಾಲೀಕರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಾರೆ.  ಶರಾವತಿ ನದಿಗೆ ಅಡ್ಡಲಾಗಿ ಅಣೆಕಟ್ಟುಗಳು ಹಾಗೂ ಸೇತುವೆಗಳು ನಿರ್ಮಾಣವಾಗಿರುವುದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಹೀಗಾಗಿ ನದಿಯ ನೀರಿನೊಂದಿಗೆ ಮಣ್ಣುಕೂಡ ಅಳಿವೆ ತೀರದಲ್ಲಿ ಸಂಗ್ರಹವಾಗುತ್ತಿದೆ.

ಅಳಿವೆ ತೀರದಲ್ಲಿ ತುಂಬಿದ ಹೂಳನ್ನ ತೆಗೆದು ತಡೆಗೋಡೆ ನಿರ್ಮಾಣಗೊಂಡಲ್ಲಿ ಮೀನುಗಾರರಿಗೆ ಶಾಶ್ವತ ಪರಿಹಾರ ದೊರಕಲಿದೆ. ಪ್ರತಿ ವರ್ಷ ಇಲ್ಲಿ ಯಾಂತ್ರಿಕ ಬೋಟುಗಳ ಅನಾಹುತ ನಡೆದರೂ ಕೂಡ ಯಾರೊಬ್ಬರು ಗಮನ ಹರಿಸಿಲ್ಲ ಎಂಬುದು ಮೀನುಗಾರರು ಆರೋಪ. ಪ್ರತಿ ವರ್ಷ ಹೊನ್ನಾವರ ಅಳಿವೆ ತೀರದಲ್ಲಿ ಜೀವಹಾನಿ, ಆಸ್ತಿಪಾಸ್ತಿ ಹಾನಿಯಾದರೂ ಕೂಡ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಕಡಲ ಅಬ್ಬರ ನಡುವೆ ಸಾಹಸದಿಂದ ವೃತ್ತಿ ನಡೆಸುವ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನಾದರೂ ಸರ್ಕಾರ ಅಳಿವೆ ತೀರದಲ್ಲಿ ತುಂಬಿದ ಹೂಳನ್ನ ತೆಗೆದು ಮೀನುಗಾರರ ಪ್ರಾಣ ರಕ್ಷಿಸುವ ಕೆಲಸ ಮಾಡಬೇಕಾಗಿದೆ.
Published by: Latha CG
First published: September 12, 2020, 12:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories