Bengaluru Vehicles: ವಾಹನಗಳ ವೇಗ ಚಾಲನೆಯಲ್ಲಿ ಬೆಂಗಳೂರಿಗೆ 2ನೇ ಸ್ಥಾನ: ಅಪಘಾತ ಪ್ರಕರಣಗಳೂ ಇಲ್ಲೇ ಹೆಚ್ಚು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಹನ ಸವಾರರು ಎಗ್ಗಿಲ್ಲದೇ ವಾಹನ ಚಲಾಯಿಸುತ್ತಿದ್ದಾರೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ರಸ್ತೆ ಸಾರಿಗೆ ಹೆದ್ದಾರಿ ಸಚಿವಾಲಯದ ಇತ್ತೀಚಿನ ವರದಿಯ ಪ್ರಕಾರ ಬೆಂಗಳೂರು ವೇಗದ ಚಾಲನೆಯಲ್ಲಿ ರಾಷ್ಟ್ರದ ಎರಡನೇ ಸ್ಥಾನದಲ್ಲಿದೆ ಮತ್ತು ದೇಶದಲ್ಲೂ ಎರಡನೇ ಸ್ಥಾನದಲ್ಲಿದೆ.

 ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬೆಂಗಳೂರು (Bengaluru) ಹೇಳಿ ಕೇಳಿ ಅತಿ ಹೆಚ್ಚು ಜನಸಂಖ್ಯೆ (Population) ಇರುವ ನಗರ. ಇನ್ನೂ ವಾಹನಗಳಂತೂ (Vehicle) ಕೇಳೋದೆ ಬೇಡ, ಒಬ್ಬರಿಗೊಂದು ಎನ್ನುವಷ್ಟು ವಾಹನಗಳಿವೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಹನ ಸವಾರರು (Motorists) ಎಗ್ಗಿಲ್ಲದೇ ವಾಹನ ಚಲಾಯಿಸುತ್ತಿದ್ದಾರೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ರಸ್ತೆ ಸಾರಿಗೆ ಹೆದ್ದಾರಿ ಸಚಿವಾಲಯದ ಇತ್ತೀಚಿನ ವರದಿಯ ಪ್ರಕಾರ ಬೆಂಗಳೂರು ವೇಗದ (Speed) ಚಾಲನೆಯಲ್ಲಿ ರಾಷ್ಟ್ರದ ಎರಡನೇ ಸ್ಥಾನದಲ್ಲಿದೆ ಮತ್ತು ದೇಶದಲ್ಲೂ ಎರಡನೇ ಸ್ಥಾನದಲ್ಲಿದೆ.  ಮೆಟ್ರೋ (Metro) ನಗರಗಳಲ್ಲಿ ಮೊದಲ ಸ್ಥಾನದಲ್ಲಿದೆ. ದತ್ತಾಂಶದ ಪ್ರಕಾರ ಅತಿವೇಗವು ನಗರದಲ್ಲಿ ಹೆಚ್ಚಿನ ಗಾಯಗಳು ಮತ್ತು ಸಾವುಗಳಿಗೆ ಕಾರಣವಾಗುತ್ತಿದೆ ಎನ್ನಲಾಗಿದೆ.

ಮೊದಲ ಸ್ಥಾನದಲ್ಲಿರುವುದು ಯಾವುದು

2020ರಲ್ಲಿ ಅತಿವೇಗದ ಚಾಲನೆಯಿಂದ ನಗರದಲ್ಲಿ 2,993 ಅಪಘಾತಗಳು ಸಂಭವಿಸಿದ್ದು, 596 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಂದೋರ್ 3,032 ಪ್ರಕರಣಗಳೊಂದಿಗೆ ಬೆಂಗಳೂರಿಗಿಂತ ಸ್ವಲ್ಪ ಮುಂದಿದೆ.

ಕೋವಿಡ್ ಮತ್ತು ಲಾಕ್‌ಡೌನ್‌ ಗಳಿಂದಾಗಿ 2020ರಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿತ್ತು. ಆದಾಗ್ಯೂ, ಅಂಕಿಅಂಶಗಳು ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ಭೀಕರವಾಗಿವೆ.

2020 ರಲ್ಲಿ ಬೆಂಗಳೂರು ಮೂರನೇ ಸ್ಥಾನ

2016 ರಲ್ಲಿ ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳಲ್ಲಿ 835 ಜನರು ಸಾವನ್ನಪ್ಪಿದ್ದಾರೆ. ಈ ಸಂಖ್ಯೆ 2017ರಲ್ಲಿ 653, 2018ರಲ್ಲಿ 686 ಆಗಿತ್ತು. 2019ರಲ್ಲಿ 768ರ ಇದ್ದರೆ 2020 ರಲ್ಲಿ 646ಕ್ಕೆ ಇಳಿದಿದೆ. 2016ಕ್ಕೆ ಹೋಲಿಸಿದರೆ, ನಗರದಲ್ಲಿ ಅಪಘಾತಗಳಲ್ಲಿ ಶೇಕಡಾ 15.9 ರಷ್ಟು ಕಡಿಮೆಯಾಗಿದೆ.

ಇನ್ನೂ, ಲಾಕ್‌ಡೌನ್‌ಗಳ ಹೊರತಾಗಿಯೂ, 2020 ರಲ್ಲಿ ದೇಶದ ಅಪಘಾತ ಸಾವುಗಳಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. 1,196 ಸಾವುಗಳೊಂದಿಗೆ ದೆಹಲಿ ಅಗ್ರಸ್ಥಾನದಲ್ಲಿದ್ದು, 872 ರೊಂದಿಗೆ ಚೆನ್ನೈ ನಂತರದ ಸ್ಥಾನದಲ್ಲಿದೆ.

ಅಪಘಾತಗಳ ಅಂಕಿ ಅಂಶಗಳ

MORTH ವರದಿಯು ಹೇಳುವ ಪ್ರಕಾರ, “ಕಳೆದ ಐದು ವರ್ಷಗಳಲ್ಲಿ (2016 - 2020), ಟಾಪ್ 10 ಮಿಲಿಯನ್-ಪ್ಲಸ್ ನಗರಗಳು ಭಾರತದಲ್ಲಿನ ಒಟ್ಟು ರಸ್ತೆ ಅಪಘಾತಗಳ ಸಾವುಗಳಲ್ಲಿ 40 ಪ್ರತಿಶತಕ್ಕಿಂತ ಹೆಚ್ಚಿನದನ್ನು ಹಂಚಿಕೊಳ್ಳುತ್ತಿವೆ ಎಂದಿದೆ.

ಟಾಪ್ 10 ಮಿಲಿಯನ್ ಪ್ಲಸ್ ನಗರಗಳ ಸೂಕ್ಷ್ಮ ವಿಶ್ಲೇಷಣೆಯು 2018 ರಿಂದ ದೆಹಲಿ, ಚೆನ್ನೈ, ಕಾನ್ಪುರ್, ಅಲಹಾಬಾದ್, ಬೆಂಗಳೂರು ಮತ್ತು ಆಗ್ರಾದಂತಹ ನಗರಗಳಲ್ಲಿ ಅಪಘಾತ ಸಾವಿನ ಪ್ರಕರಣಗಳಲ್ಲಿ ಇಳಿಕೆಯನ್ನು ತೋರಿಸಿದರೆ ಇಂದೋರ್ ಮಾತ್ರ ಗಮನಾರ್ಹ ಏರಿಕೆಯನ್ನು ದಾಖಲಿಸಿದೆ.

ಅಪಘಾತ ಪ್ರಕರಣದ ಸಾವುನೋವುಗಳಲ್ಲಿ, 2019 ಕ್ಕಿಂತ 2020ರಲ್ಲಿ 39.9 ಪ್ರತಿಶತ ಹೆಚ್ಚಾಗಿದೆ, ಇದು ವಾಹನ ಸವಾರರ ಅತಿ ವೇಗವನ್ನು ತೋರಿಸುತ್ತದೆ.

ಇದನ್ನೂ ಓದಿ: Belagavi: ಮತ್ತೆ ಎಂಇಎಸ್ ಪುಂಡಾಟ; ಕನ್ನಡ ಹಾಡು ಹಾಕಿದ್ದಕ್ಕೆ ಬೈಕ್​ಗೆ ಬೆಂಕಿ ಹಚ್ಚಿ ಹಲ್ಲೆ

ಅಪಘಾತಗಳನ್ನು ಪರಿಗಣಿಸುವುದಾದರೆ, 2019ರಲ್ಲಿ ನಾಲ್ಕನೇ ಸ್ಥಾನದಿಂದ ಬೆಂಗಳೂರು ಮೂರನೇ ಸ್ಥಾನದಲ್ಲಿದೆ (ಏಕಮಾತ್ರ ಬದಲಾವಣೆಯೆಂದರೆ ಚೆನ್ನೈ ಮೊದಲ ಸ್ಥಾನ ಮತ್ತು ದೆಹಲಿ ಎರಡನೇ ಸ್ಥಾನ ಪಡೆದಿದೆ).

2018ರಿಂದ ಬೆಂಗಳೂರು, ಹೈದರಾಬಾದ್, ಜೈಪುರ ಮತ್ತು ಗ್ವಾಲಿಯರ್ ಹೊರತುಪಡಿಸಿ ನಗರಗಳು ಅಪಘಾತ ಪ್ರಕರಣಗಳಲ್ಲಿ ಇಳಿಕೆ ಕಂಡಿವೆ. "ಭೋಪಾಲ್ ಮತ್ತು ಚೆನ್ನೈನಲ್ಲಿ, ಅಪಘಾತಗಳ ಘಟನೆಗಳು 2018ರಲ್ಲಿ ಕ್ರಮವಾಗಿ 3.4 ಶೇಕಡಾ ಮತ್ತು 4.5 ಶೇಕಡಾ ಹೆಚ್ಚಳವನ್ನು ಹೊರತುಪಡಿಸಿ ಇಳಿಮುಖವಾಗಿವೆ.

2019ಕ್ಕೆ ಹೋಲಿಸಿದರೆ 2020 ರಲ್ಲಿ ಲಾಕ್ ಡೌನ್ ಕಾರಣದಿಂದ ಎಲ್ಲರೂ ಮನೆಯಲ್ಲಿದ್ದ ಸಲುವಾಗಿ ಅಪಘಾತಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

ರಾಷ್ಟ್ರವ್ಯಾಪಿ ಚಿತ್ರಣ

ದಟ್ಟವಾದ ಜನಸಂಖ್ಯೆ ಮತ್ತು ಸಂಚಾರ ದಟ್ಟಣೆಯಿಂದಾಗಿ ರಸ್ತೆ ಅಪಘಾತಗಳು ನಗರ ಪ್ರದೇಶಗಳಲ್ಲಿ ಹೆಚ್ಚಾಗಿವೆ. 2020ರಲ್ಲಿ ನಗರಗಳಲ್ಲಿ ಒಟ್ಟು 58,736 ರಸ್ತೆ ಅಪಘಾತಗಳು ದಾಖಲಾಗಿವೆ ಮತ್ತು 13,542 ಸಾವು ಪ್ರಕರಣಗಳು ಮತ್ತು 50,515 ಜನರಿಗೆ ಗಾಯಗಳಾಗಿವೆ.

ಇದನ್ನೂ ಓದಿ: Tsunami Warning: ಹಿಂದೂ ಮಹಾಸಾಗರದಲ್ಲಿ ಸುನಾಮಿ ಏಳಲಿದೆಯೇ? ಬಂದಿದೆ ಎಚ್ಚರಿಕೆಯ ಸಂದೇಶ

2020 ರಲ್ಲಿ, ಈ 50 ನಗರಗಳು ದೇಶದ ಒಟ್ಟು ಅಪಘಾತಗಳಲ್ಲಿ 16.04 ಪ್ರತಿಶತ ಮತ್ತು ಒಟ್ಟು ಸಾವುಗಳಲ್ಲಿ 10.3 ಪ್ರತಿಶತವನ್ನು ಹೊಂದಿವೆ. MORTH ವರದಿಯ ಪ್ರಕಾರ 2020ರಲ್ಲಿ ಮಧ್ಯಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ಹೆಚ್ಚಿನ ಅಪಘಾತಗಳು ಮತ್ತು ಸಾವುಗಳ ಸಂಖ್ಯೆ ದಾಖಲಾಗಿದೆ.
Published by:Ashwini Prabhu
First published: