ಕಾಂಗ್ರೆಸ್ ಮೌನಕ್ಕೆ ಶರಣಾಗಿರೋದು ನೋಡಿದ್ರೆ ಸರ್ಕಾರ ಇದೆಯೋ ಇಲ್ವಾ ಗೊತ್ತಿಲ್ಲ : ಅಶೋಕ್

ಮಾನ್ಯ ಮುಖ್ಯಮಂತ್ರಿಯನ್ನು ನೇಮಕ ಮಾಡಿರೋದು, ಪ್ರಮಾಣ ವಚನ ಬೋಧನೆ ಮಾಡಿದ್ದು ರಾಜ್ಯಪಾಲರು. ಅವರ ಮುಂದೆ ಬಹುಮತ ಸಾಬೀತು ಮಾಡಿ ಸುಮ್ಮನೆ ಸಂತೆಯಲ್ಲಿ ನಿಂತು ಭಾಷಣ ಮಾಡುವಂತೆ ಮಾಡುತ್ತಿದ್ದಾರೆ. ಸರ್ಕಾರದಲ್ಲಿ ಸ್ಪೀಕರ್ ನಡೆ ತಿಳಿಯುತ್ತಿಲ್ಲ. ಯಾಕೆ ಮೌನಕ್ಕೆ ಜಾರಿದ್ದಾರೆ ಗೊತ್ತಿಲ್ಲ

G Hareeshkumar | news18
Updated:July 19, 2019, 5:22 PM IST
ಕಾಂಗ್ರೆಸ್ ಮೌನಕ್ಕೆ ಶರಣಾಗಿರೋದು ನೋಡಿದ್ರೆ ಸರ್ಕಾರ ಇದೆಯೋ ಇಲ್ವಾ ಗೊತ್ತಿಲ್ಲ : ಅಶೋಕ್
ಆರ್​ ಅಶೋಕ್​​.
  • News18
  • Last Updated: July 19, 2019, 5:22 PM IST
  • Share this:
ಬೆಂಗಳೂರು (ಜುಲೈ 19) : ಜೆಡಿಎಸ್ ರಾಷ್ಟ್ರೀಯ ಪಕ್ಷ ಕನಿಷ್ಠ ಅವರಾದರೂ ರಾಜ್ಯಪಾಲರ ಗೌರವವನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕಿತ್ತು. ಜೆಡಿಎಸ್ ಗೆ ತಳ-ಬುಡ ಇಲ್ಲ. ಕಾಂಗ್ರೆಸ್ ಕೂಡಾ ಮೌನ ಕ್ಕೆ ಶರಣಾಗಿರೋದು ನೋಡಿದ್ರೆ ಸರ್ಕಾರ ಇದೆಯೋ ಇಲ್ವಾ ಗೊತ್ತಿಲ್ಲ ಎಂದು ಶಾಸಕ ಆರ್​ ಅಶೋಕ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮಾನ್ಯ ಮುಖ್ಯಮಂತ್ರಿಯನ್ನು ನೇಮಕ ಮಾಡಿರೋದು, ಪ್ರಮಾಣ ವಚನ ಬೋಧನೆ ಮಾಡಿದ್ದು ರಾಜ್ಯಪಾಲರು. ಅವರ ಮುಂದೆ ಬಹುಮತ ಸಾಬೀತು ಮಾಡಿ ಸುಮ್ಮನೆ ಸಂತೆಯಲ್ಲಿ ನಿಂತು ಭಾಷಣ ಮಾಡುವಂತೆ ಮಾಡುತ್ತಿದ್ದಾರೆ. ಸರ್ಕಾರದಲ್ಲಿ ಸ್ಪೀಕರ್ ನಡೆ ತಿಳಿಯುತ್ತಿಲ್ಲ. ಯಾಕೆ ಮೌನಕ್ಕೆ ಜಾರಿದ್ದಾರೆ ಗೊತ್ತಿಲ್ಲ. ಇನ್ನಾದರೂ ಗೌರವ ಉಳಿಸಿಕೊಳ್ಳೋ ಕೆಲಸ ಮಾಡುತ್ತಾರೋ ಅನ್ನೋ ಭರವಸೆ ಇದೆ ಎಂದು ಹೇಳಿದರು.

ಆಫೀಸ್ ಗೆ ಹೋಗುತ್ತಿರಲಿಲ್ಲ, ಕದ್ದು ಮುಚ್ಚಿ ಮೂರು ತಿಂಗಳು ಓಡಾಡುತ್ತಿದ್ದರು, ಎಸಿಬಿ ರೆಕಾರ್ಡ್ ತೆಗೆದ್ರೆ ಗೊತ್ತಾಗುತ್ತಿತ್ತು. ಸಚಿವ ಜಮೀರ್ ಅಹಮ್ಮದ್, ಮಾಜಿ ಶಾಸಕ ಚೆಲುವರಾಯಸ್ವಾಮಿ, ಶಾಸಕ ಅಖಂಡ ಶ್ರೀನಿವಾಸ್ ಇವರೆಲ್ಲ ರಾಜ್ಯಸಭೆಗೆ ಓಟ್ ಹಾಕಿದ್ರಲ್ಲಾ ಆಗ ಉಚಿತವಾಗಿ ಓಟ್ ಹಾಕಿದ್ರಾ? ಯಾವ ಕಾರಲ್ಲಿ ಓಡಾಡಿದ್ರು, ಹೇಗೆ ಹೋದ್ರು? ಎಲ್ಲವು ನಮಗೆ ಗೊತ್ತಿದೆ ಎಂದರು.

ಕೆಂಗಲ್ ಗೇಟ್ ಬಳಿ ಆರ್ ಅಶೋಕ್ ಮಾತನಾಡುವ ವೇಳೆ ಸಚಿವ ಜಮೀರ್ ಮಧ್ಯಪ್ರವೇಶಿಸಿದರು. ಈ ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಶಾಸಕ ಅಶೋಕ್ ಹೇಳಿದರು. ಇದೇ ವೇಳೆ ವಿಧಾನಸೌಧಕ್ಕೆ ಬಂದ ಸಚಿವ ಜಮೀರ್ ಸರ್ಕಾರ ಇದೆ ಅಣ್ಣಾ ಎಂದು ನಗುತ್ತಾ ಹೇಳಿ ಒಳಹೋದರು.

ಬಿಜೆಪಿಯವರನ್ನು ಕೆಣಕಿದ ಕಾಂಗ್ರೆಸ್  ಶಾಸಕರು

ಮುಖ್ಯಮಂತ್ರಿಗಳು ಸುದೀರ್ಘವಾಗಿ ಮಾತನಾಡುವ ಸಂದರ್ಭದಲ್ಲಿ ಬಿಜೆಪಿಯವರಿಂದ ಶಾಸಕರು ಖರೀದಿಯಾಗುತ್ತಿರುವುದನ್ನು ಪ್ರಸ್ತಾಪಿಸಿದರು. ಶಾಸಕರಿಗೆ 30-40 ಕೋಟಿ ಆಫರ್ ಕೊಡುತ್ತಾರೆ ಎಂದು ಸಿಎಂ ಟೀಕಿಸುತ್ತಿದ್ದ ವೇಳೆ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಅವರು ಮಧ್ಯಪ್ರವೇಸಿದರು. ತಮಗೂ 5 ಕೋಟಿ ರೂ ಕೊಡಲು ಮುಂದೆ ಬಂದಿದ್ದರು ಎಂದು ಹೇಳಿದರು.

ಇದನ್ನೂ ಓದಿ : ರಾಜ್ಯಪಾಲರ ಡೆಡ್​ಲೈನ್ ಅಂತ್ಯ; ವಿಶ್ವಾಸ ಮತಕ್ಕೆ ಬರದ ಮೈತ್ರಿ ಪಾಳಯ; ವಜಾಗೊಳ್ಳುತ್ತಾ ಸರ್ಕಾರ?ಕೋಲಾರ ಶಾಸಕರ ಶ್ರೀನಿವಾಸಗೌಡರ ಈ ಹೇಳಿಕೆಯ ಬಳಿಕ ಕಾಂಗ್ರೆಸ್ ಶಾಸಕರು ಬಿಜೆಪಿಯವನ್ನು ಕೆಣಕಿದರು. ಇದು ಬಿಜೆಪಿಯವರಿಗೆ ಕೋಪ ತರಿಸಿತು. ಇದೆಲ್ಲವೂ ದಾಖಲೆಗಳ ಮೇಲೆ ಹೋಗಲಿ. ನಾವು ಕಾನೂನಿಗೆ ಹೋಗುತ್ತೇವೆ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಆಕ್ಷೇಪಿಸಿದರು. ಆ ಬಳಿಕ ಶ್ರೀನಿವಾಸಗೌಡ ಅವರು ಎದ್ದು ನಿಂತು ತಮಗೆ ಆಮಿಷ ಒಡ್ಡಿದವರ ಹೆಸರು ಮತ್ತು ಘಟನೆಯನ್ನು ವಿವರಿಸಿದರು.

First published:July 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ